ಸೋಮಾವತಿ ಅಮಾವಾಸ್ಯೆಯಂದು ಈ ಯೋಗಗಳ ಸಂಯೋಗ.. ಈ ಕೆಲಸ ಮಾಡಿ
ಈ ಬಾರಿಯ ಸೋಮಾವತಿ ಅಮಾವಾಸ್ಯೆಯು 2022 ರ ಕೊನೆಯ ಸೋಮಾವತಿ ಅಮಾವಾಸ್ಯೆ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಇದು ತುಂಬಾ ವಿಶೇಷವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲಕ್ಕಾಗಿ, ದಿನಾಂಕ, ಸಮಯ, ಸೇರಿದಂತೆ ಎಲ್ಲ ವಿವರಗಳು ಇಲ್ಲಿವೆ.
ಈ ಬಾರಿಯ ಸೋಮಾವತಿ ಅಮಾವಾಸ್ಯೆ(Somvati Amavasya) ಮೇ 30ರಂದು ಬರುತ್ತಿದ್ದು, ಇದೇ ದಿನ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸೋಮವಾರದ ದಿನ ಈ ಅಮಾವಾಸ್ಯೆ ಬಂದಿರುವುದರಿಂದ ಇದನ್ನು ಸೋಮಾವತಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿಯ ಸೋಮಾವತಿ ಅಮವಾಸ್ಯೆ ಮೇ 30 ರಂದು ಬರುತ್ತದೆ.
ಈ ದಿನ ಮಾಡುವ ಉಪವಾಸ, ಪೂಜೆ, ಸ್ನಾನ, ದಾನ ಇತ್ಯಾದಿಗಳ ಫಲಗಳು ಅಕ್ಷಯ. ಅದೂ ಅಲ್ಲದೆ, ಈ ವರ್ಷ ಈ ದಿನಾಂಕವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಬಹಳ ಅಪರೂಪದಲ್ಲಿ, ವಟ ಸಾವಿತ್ರಿ ವ್ರತವು ಸೋಮಾವತಿ ಅಮಾವಾಸ್ಯೆಯಂದೇ ಬಂದಿದೆ. ಈ ದಿನ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. ಈ ಬಾರಿಯ ಸೋಮಾವತಿ ಅಮಾವಾಸ್ಯೆಯು 2022ರ ಕೊನೆಯ ಸೋಮಾವತಿ ಅಮಾವಾಸ್ಯೆಯಾಗಿದೆ. ಹೌದು, ಈ ವರ್ಷದಲ್ಲಿ ಇನ್ನೊಮ್ಮೆ ಸೋಮವಾರ ಅಮಾವಾಸ್ಯೆ ಬರುತ್ತಿಲ್ಲ. ಸೋಮವಾರವು ಚಂದ್ರನ ದಿನ. ಅಮಾವಾಸ್ಯೆ ಕೂಚಾ ಚಂದ್ರನಿಗೆ ಸಂಬಂಧಿಸಿದುದಗಿದೆ. ಹಾಗಾಗಿ ಇದು ಬಹಳ ವಿಶೇಷವಾಗಿದೆ. ಇದರೊಂದಿಗೆ ಸರ್ವಾರ್ಥ ಸಿದ್ಧಿ ಮತ್ತು ಸುಕರ್ಮ ಯೋಗವೂ ಈ ದಿನ ರೂಪುಗೊಳ್ಳುತ್ತಿದೆ.
ಸೋಮಾವತಿ ಅಮಾವಾಸ್ಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಈ ಸಂಬಂಧ ದಿನಾಂಕ, ಸಮಯ, ಶುಭ ಮುಹೂರ್ತ ಮತ್ತು ಪೂಜಾ ವಿಧಿ ಎಲ್ಲ ವಿವರಗಳು ಇಲ್ಲಿವೆ.
ಸೋಮಾವತಿ ಅಮಾವಾಸ್ಯೆ ದಿನಾಂಕ ಮತ್ತು ಶುಭ ಮುಹೂರ್ತ(Shubh Muhurt)
ಸೋಮಾವತಿ ಅಮಾವಾಸ್ಯೆಯ ದಿನಾಂಕ - 30ನೇ ಮೇ 2022, ಸೋಮವಾರ
ಅಮಾವಾಸ್ಯೆ ದಿನಾಂಕ ಪ್ರಾರಂಭ - 29ನೇ ಮೇ 2022 ಮಧ್ಯಾಹ್ನ 02:54 ರಿಂದ
ಅಮಾವಾಸ್ಯೆಯ ದಿನಾಂಕ ಅಂತ್ಯ- 30 ಮೇ 2022 ಸಂಜೆ 04:59 ರವರೆಗೆ
Vastu Tips : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಕ್ಯಾಲೆಂಡರ್ ಹಾಕ್ಬೇಡಿ
ಸೋಮಾವತಿ ಅಮವಾಸ್ಯೆ ಪೂಜಾ ವಿಧಿ(Somvati Amavasya Pooja Vidhi)
ಸೋಮಾವತಿ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಎಲ್ಲ ಕೆಲಸ ಮುಗಿಸಿ ಸ್ನಾನ ಮಾಡಿ.
ಗಂಗೆಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಸ್ನಾನ ಮಾಡುವ ನೀರಿಗೆ ಕೊಂಚ ಗಂಗಾಜಲ ಹಾಕಿಕೊಂಡು ಸ್ನಾನ ಮಾಡಿ.
ಇದರ ನಂತರ, ಭಗವಾನ್ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
ಅಲ್ಲದೆ, ಈ ದಿನ ದಾನ ಮಾಡಬೇಕು. ಬಡವರಿಗೆ ಊಟ ಹಾಕುವುದು, ಕೈಲಾದಷ್ಟು ಧನಸಹಾಯ ಮಾಡುವುದು ಶ್ರೇಯಸ್ಕರವೆನಿಸಿದೆ.
ಪೂರ್ವಜರ ಶಾಂತಿಗಾಗಿ, ಈ ದಿನ ನೀವು ತರ್ಪಣ, ಶ್ರಾದ್ಧ ಇತ್ಯಾದಿಗಳನ್ನು ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಪೂರ್ವಜರ ಆಶೀರ್ವಾದವನ್ನು ನೀವು ಪಡೆಯುತ್ತೀರಿ.
ತಾಂಬೂಲ ಪ್ರಶ್ನೆ- ಹಾಗೆಂದರೇನು? ಹೇಗೆ ನೋಡುತ್ತಾರೆ?
ಸೋಮಾವತಿ ಅಮಾವಾಸ್ಯೆಯ ಮಹತ್ವ(Significance)
ಯಾವುದೇ ತಿಂಗಳ ಅಮಾವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ, ತರ್ಪಣ, ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಇದಲ್ಲದೇ ಈ ದಿನ ಗಂಗಾ ಸ್ನಾನ ಮತ್ತು ದಾನ ಧರ್ಮ ಮಾಡುವುದು ಶ್ರೇಯಸ್ಕರ. ಇದರೊಂದಿಗೆ ಈ ದಿನ ಸೋಮವಾರವೂ ಆಗಿರುವುದರಿಂದ ಶಿವನನ್ನು ಪೂಜಿಸುವುದು ಕೂಡಾ ಉತ್ತಮವಾಗಿದೆ. ಇದರೊಂದಿಗೆ ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸಬೇಕು. ಇಂದು ವಟ ಸಾವಿತ್ರಿ ವ್ರತವೂ ಆಗಿರುವುದರಿಂದ ಈ ಕೆಲಸ ಮತ್ತಷ್ಟು ಫಲ ನೀಡುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.