Asianet Suvarna News Asianet Suvarna News

Vastu Tips : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಕ್ಯಾಲೆಂಡರ್ ಹಾಕ್ಬೇಡಿ

ಮನೆಯ ಪ್ರತಿಯೊಂದು ವಸ್ತು, ವಾಸ್ತುವಿನ ಜೊತೆ ಸಂಬಂಧ ಹೊಂದಿದೆ. ಸರಿಯಾದ ಜಾಗದಲ್ಲಿ ವಸ್ತುವನ್ನು ಇಡದೆ ಹೋದ್ರೆ ಮನೆಯ ಶಾಂತಿ, ನೆಮ್ಮದಿ ಹಾಳಾಗುತ್ತದೆ. ಇದ್ರಲ್ಲಿ ಕ್ಯಾಲೆಂಡರ್ ಕೂಡ ಸೇರಿದೆ. ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿರಬೇಕೆಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು. 
 

Calendar Vastu Tips
Author
Bangalore, First Published May 28, 2022, 12:55 PM IST

ಹೊಸ ವರ್ಷ (New Year) ಬರ್ತಿದ್ದಂತೆ ಎಲ್ಲರ ಮನೆ (Home) ಯಲ್ಲಿ ಸಂಭ್ರಮ  ಮನೆ ಮಾಡಿರುತ್ತದೆ. ವಿಶ್ವದಾದ್ಯಂತ ಎಲ್ಲರೂ ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್ ಕಂ ಮಾಡ್ತಾರೆ. ಹೊಸ ವರ್ಷ ಒಂದಿಷ್ಟು ಹೊಸತನದಿಂದ ಕೂಡಿರಲಿ ಎಂದು ಬಯಸ್ತಾರೆ. ಹಾಗೆ ನ್ಯೂ ಇಯರ್ ಬರ್ತಿದ್ದಂತೆ ಅನೇಕ ಹಳೆಯ ವಸ್ತುಗಳನ್ನು ಮನೆಯಿಂದ ಹೊರಹಾಕಲಾಗುತ್ತದೆ. ಜನರು ಹೊಸ ಕ್ಯಾಲೆಂಡರ್‌ (Calendar) ಗಳನ್ನು ಮನೆಗೆ ತರುತ್ತಾರೆ. ಹೊಸ ಕ್ಯಾಲೆಂಡರ್ ಮನೆಯ ಪ್ರಗತಿಯನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದಲ್ಲಿ, ಕ್ಯಾಲೆಂಡರ್  ಹಾಕಲು ಕೆಲವು ನಿಯಮಗಳನ್ನು ನೀಡಲಾಗಿದೆ. ಹೊಸ ವರ್ಷ ಬಂದ ತಕ್ಷಣ ಹಳೆಯ ಕ್ಯಾಲೆಂಡರ್ ಅನ್ನು ಮನೆಯಿಂದ ತೆಗೆದುಹಾಕಬೇಕು. ಅನೇಕ ಜನರು ಹಳೆಯ ಕ್ಯಾಲೆಂಡರ್ ಅನ್ನು ಹಾಗೆಯೇ ಇಡುತ್ತಾರೆ. ಆದರೆ ಮನೆಯಲ್ಲಿ ಹಳೆಯ ಕ್ಯಾಲೆಂಡರ್ ಇಡುವುದರಿಂದ ನಕಾರಾತ್ಮಕ ಶಕ್ತಿ ಬರುತ್ತದೆ. ಇದರೊಂದಿಗೆ ಕುಟುಂಬದ ಸದಸ್ಯರ ಪ್ರಗತಿಗೂ ಅಡ್ಡಿಯಾಗುತ್ತಿದೆ. ಕ್ಯಾಲೆಂಡರ್ ಅನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇರಿಸಿದರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಹಾಕಬೇಕು ಎಂಬುದನ್ನು ನಾವಿಂದು ಹೇಳ್ತೇವೆ. 

ಮನೆಯ ಈ ದಿಕ್ಕಿನಲ್ಲಿರಲಿ ಕ್ಯಾಲೆಂಡರ್ : 

ಪೂರ್ವ ದಿಕ್ಕು : ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದರಿಂದ ಕುಟುಂಬದ ಸದಸ್ಯರ ಜೀವನದಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಪೂರ್ವ ದಿಕ್ಕಿನ ಅಧಿಪತಿಯನ್ನು ಸೂರ್ಯ ದೇವರು ಎಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣದ ಕಾಗದದ ಮೇಲೆ ಸೂರ್ಯ ದೇವರ ಚಿತ್ರವಿರುವ ಕ್ಯಾಲೆಂಡರ್ ಅನ್ನು ಹಾಕುವುದು ತುಂಬಾ ಮಂಗಳಕರವಾಗಿದೆ.

ತಾಂಬೂಲ ಪ್ರಶ್ನೆ- ಹಾಗೆಂದರೇನು? ಹೇಗೆ ನೋಡುತ್ತಾರೆ?

ಪಶ್ಚಿಮ ದಿಕ್ಕು : ನೀವು ಕ್ಯಾಲೆಂಡರ್ ಅನ್ನು ಪಶ್ಚಿಮ ದಿಕ್ಕಿನಲ್ಲಿಯೂ ಇರಿಸಬಹುದು. ಏಕೆಂದರೆ ಈ ದಿಕ್ಕನ್ನು ಹರಿವಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ನೀವು ಈ ದಿಕ್ಕಿನಲ್ಲಿ ಕ್ಯಾಲೆಂಡರ್  ಹಾಕಿದರೆ, ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ. ಇದಲ್ಲದೆ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಸಿಗ್ಬೇಕು ಅಂದ್ರೆ ನೀವು ಮನೆಯಲ್ಲಿರುವ ಕ್ಯಾಲೆಂಡರನ್ನು ಪಶ್ಚಿಮ ದಿಕ್ಕಿನಲ್ಲಿ ಹಾಕಿ.

ಉತ್ತರ ದಿಕ್ಕು : ನೀವು ಕ್ಯಾಲೆಂಡರ್ ಅನ್ನು ಉತ್ತರ ದಿಕ್ಕಿನಲ್ಲಿಯೂ ಇರಿಸಬಹುದು. ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಅನ್ನು ಇಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕುಬೇರನು ಉತ್ತರ ದಿಕ್ಕಿನ ಅಧಿಪತಿ. ಈ ದಿಕ್ಕಿನಲ್ಲಿ ನೀವು ಸಂತೋಷದ ಕ್ಯಾಲೆಂಡರ್ ಅನ್ನು ಹಾಕಬೇಕು. ಈ ದಿಕ್ಕಿನಲ್ಲಿ ನೀವು ಮದುವೆ, ಫಾಲ್ಸ್, ನದಿ, ಸಮುದ್ರ, ಹಸಿರು ಕ್ಯಾಲೆಂಡರ್ ಹಾಕುವುದು ಬಹಳ ಒಳ್ಳೆಯದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 

ಈ ದಿಕ್ಕುಗಳಲ್ಲಿ ಕ್ಯಾಲೆಂಡರ್ ಅಪ್ಪಿಯಪ್ಪಿಯೂ ಹಾಕ್ಬೇಡಿ : 

ಜೂನ್‌ನಲ್ಲಿ ಹುಟ್ಟಿದೋರ ಭವಿಷ್ಯ, ಗುಣ-ಸ್ವಭಾವ ತಿಳಿಯಿರಿ!

ದಕ್ಷಿಣ ದಿಕ್ಕು : ಗಡಿಯಾರದಂತೆ, ಕ್ಯಾಲೆಂಡರ್ ಅನ್ನು ಸಮಯದ ಸೂಚಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಕ್ಯಾಲೆಂಡರ್ ಅನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದು ಕುಟುಂಬ ಸದಸ್ಯರ ಪ್ರಗತಿಯನ್ನು ತಡೆಯುತ್ತದೆ.ಇದಲ್ಲದೇ ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಕ್ಯಾಲಂಡರ್ ಇದ್ದರೆ ಈಗ್ಲೇ ತೆಗೆದುಹಾಕಿ.

ಮುಖ್ಯ ಬಾಗಿಲಿನ ಮುಂದೆ : ಮನೆಯ ಮುಖ್ಯ ಬಾಗಿಲಿನ ಮುಂದೆ ಕ್ಯಾಲೆಂಡರ್ ಅನ್ನು ಎಂದಿಗೂ ಇಡಬಾರದು. ಇದು ನಿಮ್ಮ ಮನೆಗೆ ಬರುವ ಶಕ್ತಿಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಗಾಳಿಯಾಡುವ ಸ್ಥಳ : ನಿಮ್ಮ ಮನೆಯಲ್ಲಿ ಜೋರಾಗಿ ಗಾಳಿ ಬೀಸುವ ಜಾಗದಲ್ಲಿಯೂ ಕ್ಯಾಲೆಂಡರ್ ಹಾಕಬೇಡಿ. ಬಲವಾದ ಗಾಳಿಗೆ ಕ್ಯಾಲೆಂಡರ್  ಅಲುಗಾಡಲು ಶುರುವಾಗುತ್ತದೆ. ಕ್ಯಾಲೆಂಡರ್ ಗಾಳಿಗೆ ಅಲುಗಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
 

Follow Us:
Download App:
  • android
  • ios