ಮಿಥುನ

ಈ ರಾಶಿಯವ್ರು ಸಖತ್ ಸೋಷಿಯಲ್ ಆಗಿರ್ತೀರಿ. ಫನ್ ಮಾಡ್ತಾ ಎಲ್ಲರ ಜೊತೆಗೆ ಫ್ರೆಂಡ್ಲಿಯಾಗಿರುವ ಈ ರಾಶಿಯವರು ವಿರುದ್ಧ ಲಿಂಗಿಗಳನ್ನು ಪಟಾಯಿಸುವುದರಲ್ಲಿ ಎತ್ತಿದ ಕೈ. ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಹುಡುಕಿ ಪ್ರಶಂಸಿಸೋದು ಈ ರಾಶಿಯವರ ಪಾಸಿಟಿವ್ ನೆಸ್‌. ಆದರೆ ಎದುರಿನಿಂದ ಒಂಥರ ಮಾತನಾಡಿ, ಹಿಂದಿನಿಂದ ದೂರುವ ಗುಣ ಈ ರಾಶಿಯ ಹೆಚ್ಚಿನವರಲ್ಲಿದೆ. ಕೆಲವೊಮ್ಮೆ ಈ ವಿಷಯ ಗೊತ್ತಾಗಿ ಪೇಚಿಗೆ ಸಿಲುಕೋದೂ ಇದೆ, ಹುಡುಗೀರು ಇವರು ಬೇಡ ಅಂದ್ರೂ ಹತ್ರ ಆಗ್ತಾರೆ. ಹೀಗೆ ಹತ್ತಿರ ಬಂದವರನ್ನು ದೂರ ಮಾಡಲೂ ಆಗದೇ ಜೊತೆಯಾಗಿರಲೂ ಸಾಧ್ಯವಾಗದೇ ಯಡವಟ್ಟು ಮಾಡ್ಕೊಳ್ಳೋದು ಹೆಚ್ಚು.

ಮೇಷ

ಸಾಹಸಿ ಪ್ರವೃತ್ತಿ, ಹಿಡಿದ ಕೆಲಸವನ್ನು ಅದ್ಭುತವಾಗಿ ಮಾಡಿ ಮುಗಿಸುವ ಚಾಕಚಕ್ಯತೆ ಇರುವ ಕಾರಣ ಅಪೊಸಿಟ್ ಸೆಕ್ಸ್ ನವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ನಿಮ್ಮ ಜೊತೆಗಿರೋದು ಹಲವರಿಗೆ ಖುಷಿ ಕೊಡುತ್ತದೆ. ನಿಮ್ಮ ಸಂಗಕ್ಕಾಗಿ ಅವರು ಹಪಹಪಿಸುತ್ತಾರೆ. ಆತ್ಮವಿಶ್ವಾಸ, ಲೀಡ್ ಮಾಡುವ ಗುಣ, ತತ್ ಕ್ಷಣ ಕಾರ್ಯಪ್ರವೃತ್ತರಾಗುವ ಸ್ವಭಾವ ಈ ರಾಶಿಯವರ ಪಾಸಿಟಿವ್ ಗುಣಗಳು. ಎದುರಿಗೆ ಹೀಗೆ ಹುಲಿಯಂತಿದ್ದರೂ ಒಳಗೊಳಗೋ ಕೊರಗುವ, ತಾನು ಕಟ್ಟಿದ ಸೌಧ ಎಲ್ಲಿ ಕಣ್ಣೆದುರೇ ಕುಸಿದು ಬೀಳಬಹುದೋ ಅಂತ ಆತಂಕ ಪಡುವ ಒಳಗುಣವೂ ಇದೆ. ಇದೇ ನೆಗೆಟಿವ್. ಆದರೆ ಸನ್ನಿವೇಶದ ಬಗ್ಗೆ ಅತಿಯಾಗಿ ಯೋಚಿಸದೇ ಮುನ್ನುಗ್ಗುವ ಪ್ರವೃತ್ತಿ ಮುಂದುವರಿಸಿ.

ತುಲಾ ರಾಶಿ

ಸೊಗಸಾದ ಮಾತುಗಾರರು. ಎಂಥಾ ಸನ್ನಿವೇಶವನ್ನೂ ನಿಮಗೆ ಬೇಕಾದಂತೆ ತಿರುಗಿಸಬಲ್ಲ ಸಾಮರ್ಥ್ಯ ನಿಮ್ಮ ರಾಶಿಯವರಿಗಿದೆ. ನೋಡಲು ಸ್ಫುರದ್ರೂಪಿಗಳಾಗಿದ್ದು, ಮಾತುಗಾರಿಕೆಯಲ್ಲೂ ಸೊಗಸು ಇರುವ ಕಾರಣ ನಿಮ್ಮಲ್ಲಿ ಫ್ಲರ್ಟಿಂಗ್ ಸ್ವಭಾವ ಸಹಜವಾಗಿಯೇ ಬಂದಿದೆ. ಕೆಲವೊಮ್ಮೆ ನೀವು ಸಹಜವಾಗಿ ಮಾತನಾಡಿದರೂ ಎದುರಿರುವವರು ನಿಮ್ಮನ್ನು ಆ ಭಾವನೆಯಲ್ಲೇ ನೋಡುತ್ತಾರೆ. ಪ್ರತಿಯೊಂದು ಕೆಲಸವನ್ನೂ ಪರ್ಫೆಕ್ಟ್ ಆಗಿ ನಿಭಾಯಿಸುವ ಗುಣ ನಿಮ್ಮಲ್ಲಿದೆ. ಆದರೆ ಈ ಪಾಸಿಟವ್ ಅಂಶವನ್ನು ನೀವು ಸರಿಯಾಗಿ ಬಳಕೆ ಮಾಡಿಕೊಳ್ಳೋದು ಕಡಿಮೆ. ಅತಿಯಾದ ಚಾಲೂತನವೇ ಕೆಲವೊಮ್ಮೆ ನಿಮಗೆ ಉಲ್ಟಾ ಹೊಡೆಯಬಹುದು. ಕೊಂಚ ಹುಷಾರಾಗಿರಿ.

ವೃಶ್ಚಿಕ

ಸೈಲೆಂಟ್, ಡೀಸೆಂಟ್ ವ್ಯಕ್ತಿತ್ವ ಈ ರಾಶಿಯವರದು. ಬಹಳ ಎಚ್ಚರಿಕೆಯಿಂದ ಫ್ಲರ್ಟ್ ಮಾಡ್ತಾರೆ. ಇನ್ನೊಬ್ಬರಲ್ಲಿ ಕನ್‌ಫ್ಯೂಶನ್ಸ್ ಶುರುವಾಗುತ್ತೆ, ಇವರು ನಿಜಕ್ಕೂ ಫ್ಲರ್ಟ್ ಮಾಡ್ತಿದ್ದಾರಾ ಅಥವಾ ತಾನೇ ಹಾಗೆ ಕಲ್ಪಿಸಿಕೊಳ್ಳುತ್ತಿದ್ದೇನಾ ಅಂತ. ಈ ರಾಶಿಯವರು ಫ್ಲರ್ಟ್ ಮಾಡುತ್ತಿದ್ದರೆ ಎದುರಿದ್ದವರಿಗೆ ಎದುರಾಡುವುದೂ ಸಾಧ್ಯವಾಗುವುದಿಲ್ಲ. ಹೆಚ್ಚೇನನ್ನೂ ಹೇಳದೇ ಸ್ಮಾರ್ಟ್ ಆಗಿ ಕೆಲಸ ಮುಗಿಸೋದರಲ್ಲಿ ಎತ್ತಿದ ಕೈ. ಆಕರ್ಷಕ ವ್ಯಕ್ತಿತ್ವ, ಆಳವಾಗಿ ಯೋಚಿಸುವ ಗುಣ. ಈ ರಾಶಿಯವರ ಜೊತೆಗೆ ಉಲ್ಟಾ ಮಾತಾಡಿ ದಕ್ಕಿಸಿಕೊಳ್ಳೋದು ಕಷ್ಟ. ಒಂದು ಬಗೆಯ ಮೊಂಡುತನ ವ್ಯಕ್ತಿತ್ವದಲ್ಲಿರುತ್ತದೆ.

ಬುದ್ಧನ ಜೊತೆ ಹೋದ ಆಮ್ರಪಾಲಿ ಎಂಬ ವೇಶ್ಯೆಯ ಕತೆ 

ಕನ್ಯಾ

ಈ ರಾಶಿಯವರ ಲಾಂಛನವೇ ತಕ್ಕಡಿ. ಅದ್ಭುತವಾದ ಮ್ಯಾನೇಜಿಂಗ್ ಸ್ಕಿಲ್ ಇವರಲ್ಲಿದೆ. ಯಾರನ್ನು ಬೇಕಾದರೂ ಬುಟ್ಟಿಗೆ ಹಾಕಿಕೊಳ್ಳಬಲ್ಲ ಚಾಕಚಕ್ಯತೆ ಇದೆ. ಎಲ್ಲೇ ತಗೊಂಡು ಹೋಗಿ ಹಾಕಿದರೂ ಬದುಕಬಲ್ಲ ಸಾಹಸಿಗಳು. ಎಷ್ಟು ಬೇಕೋ ಅಷ್ಟು ಒಳ್ಳೆಯತನವಿದೆ. ಆದರೆ ಇನ್ನೊಬ್ಬರು ಮಾಡುವ ಮೋಸ, ಅನ್ಯಾಯ ಸಹಿಸೋದಿಲ್ಲ. ಇವರ ಗುಣದಲ್ಲೇ ಒಂದು ಸ್ಮಾರ್ಟ್ ನೆಸ್ ಇದೆ, ಬಹಳ ಬೇಗ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಯಾವುದನ್ನೂ ಅತಿ ಮಾಡದೇ ಔಚಿತ್ಯಪೂರ್ಣವಾಗಿ ಕಾರ್ಯನಿರ್ವಹಿಸುವ ರೀತಿ ಹಲವರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಫರ್ಟಿಂಗ್ ಸ್ವಭಾವಕ್ಕಾಗಿ ಆಗಾಗ ಟೀಕೆಯೂ ಬರಬಹುದು.

ನಿಮ್ಮ ರಾಶಿಯ ಅಧಿಪತಿ ಗ್ರಹ ಪೂಜಿಸಿ ಸುಖ-ಸಮೃದ್ಧಿ ಪಡೆಯಿರಿ! 

ಕಟಕ

ಭಾವನಾ ಜೀವಿಗಳು. ಸದಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುವವರು. ವಾಸ್ತವತೆ ನಿಮಗಷ್ಟು ಇಷ್ಟ ಆಗಲ್ಲ. ನಿಮ್ಮಲ್ಲಿ ಫ್ಲರ್ಟಿಂಗ್ ಗುಣ ಬಹಳ ಇದೆ. ನಿಮಗಿಷ್ಟವಾಗುವವರ ಜೊತೆಗೆ ಬಹಳ ನಾಜೂಕಾಗಿ, ಅವರಿಗೆ ಬೇಕಾದಂತೆ ಮಾತಾಡಿ ಕೆಲಸ ಮಾಡಿಸಿಕೊಳ್ಳುವ ಚತುರತೆ ಇದೆ. ಇಷ್ಟ ಆಗದವರನ್ನು ಗೊತ್ತೇ ಆಗದ ಹಾಗೆ ಮ್ಯಾನೇಜ್ ಮಾಡುವ ಕಲೆಯಲ್ಲೂ ನೀವು ಪಾರಂಗತರು. ಲಲಿತ ಕಲೆಗಳಲ್ಲಿ ಆಸಕ್ತಿ ಇದೆ. ಹೆಚ್ಚು ಜನರ ಜೊತೆಗೆ ಬೆರೆಯೋದಕ್ಕಿಂತಲೂ ಸಮಾನ ಆಸಕ್ತರ ಜೊತೆಗೆ ಬೆರೆಯೋದರಲ್ಲಿ ಮಜಾ. ಹೊಸ ಹೊಸ ಪರಿಚಯ ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತೆ. ಜೊತೆಗೆ ಫ್ಲರ್ಟ್ ಬುದ್ಧಿಯೂ ಈ ಹೊತ್ತಿಗೆ ಜಾಗೃತವಾಗುತ್ತೆ.