Asianet Suvarna News Asianet Suvarna News

Solar eclipse 2022 ಇಂದು ಆಹಾರದಲ್ಲಿ ತುಳಸಿ ಹಾಕಿಡುವುದೇಕೆ?

ಸೂತಕದ ಪ್ರಾರಂಭದ ಮುಂಚೆಯೇ ತುಳಸಿ ಎಲೆಗಳನ್ನು ಆಹಾರ ಮತ್ತು ಪಾನೀಯದಲ್ಲಿ ಹಾಕಲಾಗುತ್ತದೆ. ಅಕ್ಕಿಡಬ್ಬಗಳು, ನೀರಿನ ಪಾತ್ರೆ, ಬೆಲ್ಲ ತುಪ್ಪ ಇತ್ಯಾದಿಗೆ ತುಳಸಿ ದಳಗಳನ್ನು ಹಾಕಿಡಲಾಗುತ್ತದೆ. ಏನು ತುಳಸಿಯ ಮಹತ್ವ?

Solar eclipse 2022 significance of putting basil leaves in food skr
Author
First Published Oct 25, 2022, 2:34 PM IST

ಹಿಂದೂ ಧರ್ಮದಲ್ಲಿ, ತುಳಸಿಯನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಜನರು ತಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ತುಳಸಿ ಎಲೆಗಳಿಗೆ ಪ್ರತಿ ಶುಭ ಕಾರ್ಯದಲ್ಲಿ ವಿಶೇಷ ಮಹತ್ವವಿದೆ. ಭಗವಂತನಿಗೆ ಯಾವುದೇ ಖಾದ್ಯವನ್ನು ಅರ್ಪಿಸುವ ಮೊದಲು, ತುಳಸಿ ಎಲೆಗಳನ್ನು ಹಾಕಲಾಗುತ್ತದೆ. ಪ್ರತಿದಿನ ತುಳಸಿ ಗಿಡದ ದರ್ಶನದಿಂದ ಎಲ್ಲಾ ಪಾಪಗಳು ಮತ್ತು ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಳಸಿ ಗಿಡವು ಉತ್ತಮ ಸ್ಥಿತಿಯಲ್ಲಿರುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲು ಪ್ರಾರಂಭಿಸುತ್ತದೆ. ಈ ಬಾರಿಯ ದೀಪಾವಳಿಯಂದು ಸೂರ್ಯಗ್ರಹಣ ಇರುವುದು ನಮಗೆಲ್ಲ ಗೊತ್ತೇ ಇದೆ. ಇಂದು ಆಹಾರ, ನೀರು ಮುಂತಾದ ವಸ್ತುಗಳ ಶುದ್ಧತೆ ಕಾಪಾಡಲು ತುಳಸಿ ಎಲೆಗಳನ್ನು ಹಾಕಬೇಕು. 
ಅಂದ ಹಾಗೆ, ಗ್ರಹಣದಲ್ಲಿ ಆಹಾರ ಪದಾರ್ಥಗಳಿಗೆ ಹಾಕಲು ತುಳಸಿಯನ್ನು ನೀವು ಹಿಂದಿನ ಎರಡು ದಿನಗಳಲ್ಲೇ ಕೊಯ್ದಿಟ್ಟುಕೊಳ್ಳುವಂತಿರಲಿಲ್ಲ. ಹಾಗೆ ಮಾಡಿದ್ದರೆ ಅದು ಪಾಪವಾಗುತ್ತದೆ. ಏಕೆಂದರೆ ಈ ಬಾರಿ ಸೂರ್ಯಗ್ರಹಣಕ್ಕೆ ಎರಡು ದಿನಗಳ ಮೊದಲಿಂದ ತುಳಸಿಯನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. 

ಅಕ್ಟೋಬರ್ 23, 24ರಂದು ತುಳಸಿ ಕೀಳಬಾರದೇಕೆ?
ಅಕ್ಟೋಬರ್ 24ರಂದು ಅಮಾವಾಸ್ಯೆ. ಆ ದಿನ ತುಳಸಿ ಎಲೆಗಳನ್ನು ಕಿತ್ತರೆ ಬ್ರಹ್ಮ ಹತ್ಯೆ ಪಾಪವಾಗುತ್ತದೆ. ಅಕ್ಟೋಬರ್ 23ರಂದು ಭಾನುವಾರ ಮತ್ತು ಆದಿ ತುಳಸಿಯನ್ನು ಸ್ಪರ್ಶಿಸುವುದು ಮತ್ತು ಎಲೆಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ. ಭಾನುವಾರದಂದು ತುಳಸಿಯನ್ನು ಮುರಿಯುವವನು ಮಹಾಪಾಪವನ್ನು ಅನುಭವಿಸುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ, ಕಳೆದೆರಡು ದಿನ ತುಳಸಿ ಕೀಳುವಂತಿರಲಿಲ್ಲ. 

ಖಗ್ರಾಸ ಸೂರ್ಯಗ್ರಹಣ: ನಿಮ್ಮ ಪ್ರಶ್ನೆಗಳಿಗೆ ಬ್ರಹ್ಮಾಂಡ ಗುರೂಜಿ ಉತ್ತರ

ಸೂತಕದ ಮೊದಲು ತುಳಸಿ ಎಲೆಗಳನ್ನು ಆಹಾರ ಮತ್ತು ಪಾನೀಯದಲ್ಲಿ ಹಾಕಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂತಕದ ಆರಂಭದಿಂದ ಗ್ರಹಣದ ಅಂತ್ಯದವರೆಗಿನ ಸಮಯವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದುದರಿಂದ, ಈ ಕಾಲದಲ್ಲಿ ತಿನ್ನುವುದು ಅಥವಾ ಕುಡಿಯುವುದನ್ನು ನಿಷೇಧಿಸಲಾಗಿದೆ. ಸೂತಕ ಆರಂಭವಾದ ಕೂಡಲೇ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಇದಲ್ಲದೆ, ಸೂತಕದ ಪ್ರಾರಂಭದ ಮುಂಚೆಯೇ ತುಳಸಿ ಎಲೆಗಳನ್ನು ಆಹಾರ ಮತ್ತು ಪಾನೀಯದಲ್ಲಿ ಹಾಕಲಾಗುತ್ತದೆ. ಏಕೆಂದರೆ ತುಳಸಿ ಅಶುದ್ಧವಾಗುವುದಿಲ್ಲ. ಅದಕ್ಕೆ ಬ್ಯಾಕ್ಟೀರಿಯಾಗಳ ಬಾಧೆಯಿಲ್ಲ. ಹಾಗಾಗಿ, ತುಳಸಿ ಹಾಕಿಟ್ಟ ಅಕ್ಕಿ, ಬೆಲ್ಲ ಇತ್ಯಾದಿಯನ್ನು ಗ್ರಹಣ ಕಾಲ ಮುಗಿದ ನಂತರ ಮತ್ತೆ ಬಳಸಬಹುದು.

ಜ್ಯೋತಿಷ್ಯದಲ್ಲಿ, ರಾಹು-ಕೇತುಗಳು ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರರನ್ನು ತೊಂದರೆಗೊಳಿಸುತ್ತವೆ ಎಂದು ನಂಬಲಾಗಿದೆ. ಇದರಿಂದಾಗಿ ಅವರು ತುಂಬಾ ದುರ್ಬಲರಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು, ಪ್ರಕೃತಿ ತುಂಬಾ ಸೂಕ್ಷ್ಮವಾಗುತ್ತದೆ. ಪರಿಸರದಲ್ಲಿ ಅನೇಕ ನಕಾರಾತ್ಮಕ ಸಂದರ್ಭಗಳು ಉದ್ಭವಿಸುತ್ತವೆ ಇದನ್ನು ಸೂತಕ ಅವಧಿ ಎಂದು ಕರೆಯಲಾಗುತ್ತದೆ. ಶಾಸ್ತ್ರಗಳಲ್ಲಿ ಸೂತಕದಿಂದ ಗ್ರಹಣದ ಅಂತ್ಯದವರೆಗಿನ ಸಮಯವನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಸಮಯದಲ್ಲಿ ತಿನ್ನುವುದು, ಕುಡಿಯುವುದು, ಪೂಜೆ ಇತ್ಯಾದಿಗಳ ಮೇಲೆ ನಿಷೇಧವಿದೆ. ಆದರೆ, ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳು, ಮಕ್ಕಳು ಮತ್ತು ಗರ್ಭಿಣಿಯರಿಗೆ ಕೆಲವು ನಿಯಮಗಳೊಂದಿಗೆ ವಿನಾಯಿತಿ ನೀಡಲಾಗುತ್ತದೆ.

ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..

ಗ್ರಹಣದ ಸಮಯದಲ್ಲಿ ವಾತಾವರಣದಲ್ಲಿ ಇರುವ ಕಿರಣಗಳು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ವೈಜ್ಞಾನಿಕವಾಗಿ ನಂಬಲಾಗಿದೆ. ಅಂತಹ ಸಮಯದಲ್ಲಿ, ಆಹಾರ ಪದಾರ್ಥಗಳನ್ನು ತೆರೆದಿಟ್ಟಿದ್ದರೆ ಅಥವಾ ಈ ಸಮಯದಲ್ಲಿ ಏನನ್ನಾದರೂ ತಿಂದು ಕುಡಿದರೆ, ಈ ಕಿರಣಗಳ ನಕಾರಾತ್ಮಕ ಪರಿಣಾಮವು ಆ ವಸ್ತುವನ್ನು ತಲುಪುತ್ತದೆ. ಇದರ ಋಣಾತ್ಮಕ ಪರಿಣಾಮ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ತುಳಸಿ ಎಲೆಗಳಲ್ಲಿ ಮರ್ಕ್ಯುರಿ ಇರುತ್ತದೆ. ಪಾದರಸದ ಮೇಲೆ ಯಾವುದೇ ರೀತಿಯ ಕಿರಣಗಳ ಪರಿಣಾಮವಿಲ್ಲ. ಗ್ರಹಣದ ಸಮಯದಲ್ಲಿ ಆಕಾಶದಿಂದ ಮತ್ತು ಬ್ರಹ್ಮಾಂಡದಿಂದ ಬರುವ ನಕಾರಾತ್ಮಕ ಶಕ್ತಿಯು ತುಳಸಿಯ ಬಳಿ ಬಂದ ತಕ್ಷಣ ನಿಷ್ಕ್ರಿಯವಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ತುಳಸಿ ಎಲೆಗಳನ್ನು ಹಾಕುವ ಯಾವುದೇ ವಸ್ತುಗಳು ಪರಿಸರದಲ್ಲಿ ಇರುವ ಕಿರಣಗಳ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸಲ್ಪಡುತ್ತವೆ. ಆದ್ದರಿಂದ ಆ ವಸ್ತುಗಳನ್ನು ಶುದ್ಧವೆಂದು ಪರಿಗಣಿಸಲಾಗುತ್ತದೆ.

Follow Us:
Download App:
  • android
  • ios