ವಾಸ್ತು ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಅಂಗವೆಂದೇ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮುಖ್ಯವಾಗಿ ನಕಾರಾತ್ಮಕ ಶಕ್ತಿಯ ಹರಿವನ್ನು ತಡೆದು, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ವಾಸ್ತು ದೋಷವಿದೆ ಎಂದರೆ ಅಲ್ಲಿ ನಕಾರಾತ್ಮಕ ಶಕ್ತಿಯ ಪ್ರಸರಣ ಹೆಚ್ಚಿದೆ ಎಂದರ್ಥ. ಅಂತಹ ಕಡೆಗಳಲ್ಲಿ ದೋಷವನ್ನು ನಿವಾರಿಸಿ ಸಕಾರಾತ್ಮಕ ಶಕ್ತಿಯು ಹೆಚ್ಚುವಂತೆ ಮಾಡಲಾಗುತ್ತದೆ. ಪ್ರಕೃತಿಯಲ್ಲಿ ಈ ಎರಡೂ ಶಕ್ತಿಗಳಿರುತ್ತವೆ. ಅವೆರಡರಲ್ಲಿ ಸಕಾರಾತ್ಮಕ ಶಕ್ತಿಯ ಆಯ್ಕೆ ನಮ್ಮದಾದರೆ, ಆಗ ಜೀವನದಲ್ಲಿ ಒಳಿತನ್ನು ಕಾಣಬಹುದಾಗಿರುತ್ತದೆ. 

ಸಕಾರಾತ್ಮಕ ಶಕ್ತಿಯ ಹರಿವು ಚೆನ್ನಾಗಿ ಇದ್ದಲ್ಲಿ, ಜೀವನದಲ್ಲಿ ಸಮಸ್ಯೆಗಳು ದೂರವಾಗಿ, ನೆಮ್ಮದಿ ಮತ್ತು ಸಂತೋಷ ಹೆಚ್ಚಾಗಿರುತ್ತದೆ. ಮನೆಯಲ್ಲಿ ಮತ್ತು ಮನೆಯ ಸುತ್ತ-ಮುತ್ತ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಿದ್ದಾಗ ಕಠಿಣವಾದ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುತ್ತವೆ. ಜೀವನದಲ್ಲಿ ಯಶಸ್ಸು ಲಭಿಸುತ್ತಾ ಹೋಗುತ್ತದೆ. ಪ್ರಕೃತಿಯಲ್ಲಿ ತಾನಾಗಿಯೇ ಸಿಗುವ ಸಕಾರಾತ್ಮಕ ಶಕ್ತಿಯು ಅತ್ಯಂತ ಅವಶ್ಯಕವಾಗಿರುತ್ತದೆ. ಹಾಗಾದರೆ ತಾನಾಗಿಯೇ ಸಕಾರಾತ್ಮಕ ಶಕ್ತಿ ದೊರೆಯುವುದು ಎಂದರೇನು? ಅದು ದೊರೆಯುವ ಪರಿ ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಸಕಾರಾತ್ಮಕ ಶಕ್ತಿಯನ್ನು ನೀಡುವುದರಲ್ಲಿ ಮರ-ಗಿಡಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೆಲವು ಮರಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದ್ದು, ಅಂತಹ ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ಹೆಚ್ಚೆಚ್ಚು ಸಕಾರಾತ್ಮಕ ಶಕ್ತಿಯನ್ನು ಪಡೆಯಬಹುದೆಂದು ಹೇಳಲಾಗುತ್ತದೆ. ಹಾಗಾದರೆ ಅಂತಹ ಕೆಲವು ಮರಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ: ಈ ರಾಶಿಗೆ ಶನಿ ಸಾಡೇಸಾತ್‌ನಿಂದ ಮುಕ್ತಿ... ಅಂತಿಮ ಚರಣದಲ್ಲಿದ್ದಾನೆ ಶನಿದೇವ...  

ಬಾಳೆ ಗಿಡ
ಬಾಳೆ ಗಿಡವನ್ನು ದೇವ ವೃಕ್ಷವೆಂದು ಕರೆಯಲಾಗುತ್ತದೆ. ಬೃಹಸ್ಪತಿಯನ್ನು ಪ್ರಸನ್ನಗೊಳಿಸಿಕೊಳ್ಳಲು, ಬಾಳೆ ಗಿಡದ ಪೂಜೆ ಮಾಡುವ ಶಾಸ್ತ್ರವಿದೆ. ಬಾಳೆ ವೃಕ್ಷದಡಿಯಲ್ಲಿ ಕುಳಿತುಕೊಳ್ಳವುದರಿಂದ ಸಕಾರಾತ್ಮಕ ಶಕ್ತಿಯು ದೊರೆಯುವುದಲ್ಲದೆ, ಮಕ್ಕಳು ಈ ಮರದ ಕೆಳಗೆ ಕುಳಿತುಕೊಳ್ಳುವುದರಿಂದ ಅತ್ಯಂತ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ವಿದ್ಯಾರ್ಥಿಗಳು ಬಾಳೆ ಗಿಡದ ಕೆಳಗೆ ಕುಳಿತು ಓದುವುದರಿಂದ, ಓದಿದ ವಿಷಯ ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಮನೆಯ ಹತ್ತಿರವು ಈ ಗಿಡವನ್ನು ಬೆಳೆಯಲಾಗುತ್ತದೆ. ಮನೆ ಮುಖ್ಯ ದ್ವಾರದ ಬಳಿ ನೆಡುವುದು ಒಳ್ಳೆಯದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಇದನ್ನು ಓದಿ: ಅಮಾವಾಸ್ಯೆಯಂದು ಹುಟ್ಟಿದರೆ ಹೀಗಂತೆ...! 

ಬೇವಿನ ಮರ
ಕಹಿಬೇವಿನ ಮರವು ಅತ್ಯಂತ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಈ ಮರದಲ್ಲಿ ದುರ್ಗಾ ದೇವಿಯು ನೆಲೆಸಿರುತ್ತಾಳೆಂದು ಹೇಳಲಾಗುತ್ತದೆ. ಪ್ರತಿನಿತ್ಯವು ಕಹಿಬೇವಿನ ಮರಕ್ಕೆ ನೀರುಣಿಸುವುದರಿಂದ ದುರ್ಗಾ ದೇವಿಯ ಕೃಪೆ ಪ್ರಾಪ್ತವಾಗುತ್ತದೆ. ಈ ಮರದ ಕೆಳಗೆ ಕುಳಿತುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಮನೆಯಲ್ಲಿ ಕಹಿಬೇವಿನ ಮರವನ್ನು ಪೋಷಿಸುವುದರಿಂದ  ದೃಷ್ಟಿದೋಷದಿಂದ ಪಾರಾಗಬಹುದಾಗಿದೆ. ಕಹಿಬೇವಿನ ವೃಕ್ಷದಿಂದ  ಹಲವಾರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಇದನ್ನು ಓದಿ: ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..! 

ನೆಲ್ಲಿ ಮರ
ನೆಲ್ಲಿ ಮರವು ಅತ್ಯಂತ ಪ್ರಯೋಜನಕಾರಿ ಗುಣಗಳನ್ನು ಹೊಂದಿರುವ ವೃಕ್ಷವೆಂಬುದು ತಿಳಿದ ವಿಚಾರವಾಗಿದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವೃಕ್ಷ ಇದಾಗಿದೆ. ನೆಲ್ಲಿ ಮರಕ್ಕೆ ಧಾರ್ಮಿಕವಾಗಿಯು ಅತ್ಯಂತ ಪೂಜನೀಯ ವೃಕ್ಷವೆಂದು ಹೇಳಲಾಗುತ್ತದೆ. ಈ ಮರದಲ್ಲಿ ಶ್ರೀಹರಿಯು ನೆಲೆಸಿರುತ್ತಾನೆಂದು ಹೇಳಲಾಗುತ್ತದೆ. ಈ ಮರದಡಿಯಲ್ಲಿ ಕುಳಿತುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೆ, ಶ್ರೀಹರಿ ಮತ್ತು ಲಕ್ಷ್ಮೀದೇವಿಯ ಕೃಪೆ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.  ಜೊತೆಗೆ ಹಣಕಾಸಿನ ಸಮಸ್ಯೆಗಳಿದ್ದಲ್ಲಿ ದೂರವಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಇಷ್ಟೆಲ್ಲ ಉತ್ತಮ ಗುಣವನ್ನು ಹೊಂದಿರುವ ನೆಲ್ಲಿ ಮರದ ಸಂತತಿ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಹಾಗಾಗಿ ಹೆಚ್ಚು ಔಷಧೀಯ ಗುಣಹೊಂದಿರುವ ಈ ವೃಕ್ಷವನ್ನು ಮನೆಯ ಹತ್ತಿರ ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯ ಜೊತೆಗೆ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.