ಸನಾತನ ಧರ್ಮದಲ್ಲಿ ಪ್ರತ್ಯೇಕ ತಿಥಿ, ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ಕೆಲವು ತಿಥಿ ಮತ್ತು ದಿನಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಅಮಾವಾಸ್ಯೆಯ ದಿನವೂ ಸಹ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಮಾವಾಸ್ಯೆಯ ದಿನವು ಉತ್ತಮ ಕಾರ್ಯಗಳಿಗೆ ಸೂಕ್ತವಲ್ಲವೆಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನದಂದು ಜನಿಸಿದ ವ್ಯಕ್ತಿಗಳು ಜೀವನದಲ್ಲಿ ಸುಖ ಕಾಣುವುದಿಲ್ಲವೆಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಆ ದಿನ ಜನಿಸಿದವರು ಹೆಚ್ಚೆಚ್ಚು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮಾವಾಸ್ಯೆಯ ರಾತ್ರಿಯಲ್ಲಿ ನಕಾರಾತ್ಮಕ  ಶಕ್ತಿಯ ಪ್ರಭಾವ ಅತ್ಯಂತ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನದಂದು ಹುಟ್ಟಿದ ವ್ಯಕ್ತಿಯ ಜಾತಕದಲ್ಲಿ ದೋಷವಿರುತ್ತದೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಂದೇ ಮನೆಯಲ್ಲಿ ಸ್ಥಿತರಾಗಿರುತ್ತಾರೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಪ್ರತಿ ತಿಂಗಳು ಬರುವ ಅಮಾವಾಸ್ಯೆ ತಿಥಿಯಂದು ಚಂದ್ರನು ಕಾಣುವುದಿಲ್ಲ. ಹಾಗಾಗಿ ಅಮಾವಾಸ್ಯೆಯ ರಾತ್ರಿಯನ್ನು ಕರಾಳರಾತ್ರಿ ಎಂದು ಸಹ ಕರೆಯಲಾಗುತ್ತದೆ.

ಇದನ್ನು ಓದಿ: ಗುರುಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಅದೃಷ್ಟ ಶುರು...

ಅಮಾವಾಸ್ಯೆಯಂದು ಹುಟ್ಟಿದ ಮಗುವಿನ ಭವಿಷ್ಯ..?
ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನಿಗೆ ಮನಸ್ಸಿನ ಕಾರಕ ಗ್ರಹವೆಂದು ಮತ್ತು ಸೂರ್ಯನನ್ನು ಆತ್ಮದ ಕಾರಕ ಗ್ರಹವೆಂದು ಹೇಳಲಾಗುತ್ತದೆ. ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಗ್ರಹಗಳು ಒಟ್ಟಿಗೆ ಜಾತಕದ ಒಂದೇ ಮನೆಗೆ ಪ್ರವೇಶಿಸುವುದನ್ನು ಅಶುಭವೆಂದು ಹೇಳಲಾಗುತ್ತದೆ. ಮೊದಲನೇ ಮನೆ
ವ್ಯಕ್ತಿಯ ಜಾತಕದ ಮೊದಲನೇ ಮನೆಯಲ್ಲಿ ಸೂರ್ಯ ಮತ್ತು ಚಂದ್ರ ಸ್ಥಿತರಾಗಿದ್ದರೆ, ಅಂತವರಿಗೆ ಅಷ್ಟಾಗಿ ತಂದೆ-ತಾಯಿಯ ಪ್ರೀತಿ ಸಿಗುವುದಿಲ್ಲವೆಂದು ಹೇಳಲಾಗುತ್ತದೆ.

ನಾಲ್ಕನೇ ಮನೆ
ವ್ಯಕ್ತಿಯ ಜಾತಕದ ನಾಲ್ಕನೇ ಮನೆಯಲ್ಲಿ ಸೂರ್ಯ ಮತ್ತು ಚಂದ್ರ ಸ್ಥಿತರಾಗಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಜೀವನವಿಡೀ ಸುಖದಿಂದ ವಂಚಿತರಾಗಿರುತ್ತಾರೆ. ಅಷ್ಟೇ ಅಲ್ಲದೆ ಆರ್ಥಿಕ ಸಂಕಷ್ಟವನ್ನು ಸಹ ಎದುರಿಸಬೇಕಾಗುತ್ತದೆ  ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಗುರು ಗ್ರಹದ ರಾಶಿ ಪರಿವರ್ತನೆ- ಹೀಗಿದ್ದರೆ ಜಾತಕದಲ್ಲಿ ರಾಜಯೋಗ...

ಏಳನೇ ಮನೆ 
ಅಮಾವಾಸ್ಯೆಯ ದಿನದಂದು ಜನಿಸಿದವರ ಜಾತಕದ ಏಳನೇ ಮನೆಯಲ್ಲಿ ಸೂರ್ಯ ಮತ್ತು ಚಂದ್ರ ಸ್ಥಿತವಾಗಿದ್ದರೆ ಅಂತಹ ಜಾತಕದ ವ್ಯಕ್ತಿಗಳ ಜೀವನದಲ್ಲಿ ಸದಾ ಅವಮಾನವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವೆಂದರೆ ಈ ವ್ಯಕ್ತಿಗಳಿಗೆ ಹಣದ ಕೊರತೆ ಎದುರಾಗುವುದಿಲ್ಲ.

ಹತ್ತನೇ ಮನೆ
ಅಮಾವಾಸ್ಯೆಯ ದಿನದಂದು ಜನಿಸಿದವರ ಜಾತಕದ ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಚಂದ್ರ ಸ್ಥಿತವಾಗಿದ್ದರೆ ಅಂತಹ ಜಾತಕದ ವ್ಯಕ್ತಿಗಳು ಶಕ್ತಿವಂತರು ಮತ್ತು ಬಲಶಾಲಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಶತೃಗಳ ವಿರುದ್ಧ ವಿಜಯ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.

ಈ ಎಲ್ಲ ದೋಷಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವನ್ನು ತಿಳಿಸಲಾಗಿದೆ. ವ್ಯಕ್ತಿಯ ಹುಟ್ಟು ಮತ್ತು ಸಾವು ಭಗವಂತನ ಇಚ್ಛೆ. ಹಾಗಾಗಿ ಅಮಾವಾಸ್ಯೆಯಂದು ಜನಿಸುವುದು ಮಾನವನ ಪೂರ್ವಜನ್ಮದ ಪುಣ್ಯ-ಪಾಪ ಕರ್ಮಗಳ ಫಲವಾಗಿರುತ್ತದೆ. ಹಾಗಾಗಿ ಪ್ರತಿಯೊಂದಕ್ಕೂ ಪರಿಹಾರವಿದ್ದೇ ಇರುತ್ತದೆ. ಹಾಗೆಯೇ ಅಮಾವಾಸ್ಯೆಯಂದು ಜನಿಸಿದ ಮಗುವಿನ ಜಾತಕದಲ್ಲಿ ದೋಷವಿದೆ ಎಂದು ತಿಳಿದರೆ, ಅದಕ್ಕೆ ಜ್ಯೋತಿಷ್ಯದಲ್ಲಿ ತಕ್ಕ ಪರಿಹಾರವನ್ನು ತಿಳಿಸಿಕೊಡಲಾಗಿದೆ. ಆ ಪರಿಹಾರದ ಬಗ್ಗೆ ತಿಳಿಯೋಣ..

ಇದನ್ನು ಓದಿ: ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..! 

ಅಮಾವಾಸ್ಯೆಯಂದು ಹುಟ್ಟಿದವರಿಗೆ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ. ಅಂತಹ ಕಷ್ಟಗಳನ್ನು ನಿವಾರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಸೂರ್ಯ ಮತ್ತು ಚಂದ್ರನಿಗೆ  ಸಂಬಂಧಿಸಿದ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆಯ ದಿನದಂದು ಜನಿಸಿದ ವ್ಯಕ್ತಿಗಳು ಕೈಗೆ ಶ್ವೇತ ವಸ್ತ್ರವನ್ನು ಧರಿಸಿದರೆ ಉತ್ತಮ ಎಂದು ಸಹ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಸೂರ್ಯನ ಕೃಪೆಗೆ ಆದಿತ್ಯ ದೇವರನ್ನು ಆರಾಧಿಸುವುದು ಮತ್ತು ಆದಿತ್ಯ ಹೃದಯ ಪಾರಾಯಣವನ್ನು ಮಾಡುವುದರಿಂದ ದೋಷವಿದ್ದಲ್ಲಿ ತಗ್ಗುತ್ತದೆ. ಚಂದ್ರನಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಹೇಳುವುದರಿಂದ ಚಂದ್ರನ ಕೃಪೆಗೆ ಪಾತ್ರರಾಗುವುದಲ್ಲದೆ, ಮನೋನಿಯಂತ್ರಣ ಸಾಧ್ಯವಾಗುತ್ತದೆ.