Asianet Suvarna News Asianet Suvarna News

Shukra Ast 2022: ಇನ್ನು ಮೂರು ದಿನದಲ್ಲಿ ಅಸ್ತಮಿಸುತ್ತಿರುವ ಶುಕ್ರ, ಈ ರಾಶಿಗಳು ಸಂತೋಷದಿಂದ ವಂಚಿತ

ಯಾವುದೇ ಗ್ರಹ ಅಸ್ತಮಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಶುಕ್ರ ಅಸ್ತದಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳು ಜಾಗರೂಕರಾಗಿರಬೇಕು.

Shukra Ast 2022 Venus is going to set in Leo know which 4 zodiac signs have to be very cautious skr
Author
First Published Sep 12, 2022, 4:54 PM IST

ಜ್ಯೋತಿಷ್ಯದಲ್ಲಿ ಗ್ರಹಗಳು ಉದಯವಾಗುವುದು, ಅಸ್ತಮಿಸುವುದು, ರಾಶಿ ಬದಲಿಸುವುದು ಎಲ್ಲಕ್ಕೂ ಬಹಳ ಪ್ರಾಮುಖ್ಯತೆ ಇದೆ. ಇದರ ಪರಿಣಾಮಗಳು ಅಗಾಧವಾಗಿದ್ದು, ಸಕಲ ಚರಾಚರಗಳ ಮೇಲೆ ಬೀಳುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್ 2022 ರಲ್ಲಿ, ಸೂರ್ಯ ಸೇರಿದಂತೆ ಅನೇಕ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತಿವೆ. ಅಷ್ಟೇ ಅಲ್ಲದೆ, ಗುರುವಾರ, ಸೆಪ್ಟೆಂಬರ್ 15, ಮಧ್ಯಾಹ್ನ 2:29 ಕ್ಕೆ, ಶುಕ್ರನು ಸಿಂಹ ರಾಶಿಯಲ್ಲಿ ಅಸ್ತಮಿಸುತ್ತಾನೆ. ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಅಸ್ತಮಿಸುವಿಕೆಯನ್ನು ಮಂಗಳವೆಂದು ಪರಿಗಣಿಸಲಾಗುವುದಿಲ್ಲ. ಗ್ರಹ ಅಸ್ತಮಿಸುವ ಸಮಯದಲ್ಲಿ ಸಾಕಷ್ಟು ಅಸಂತೋಷಕ್ಕೆ ಕಾರಣವಾಗುತ್ತದೆ. ಸಧ್ಯ ಶುಕ್ರ ಅಸ್ತದಿಂದಾಗಿ ಬಹಳಷ್ಟು ಸಮಸ್ಯೆಗಳು ಉದ್ಭವವಾಗಲಿವೆ. 

ಏನಿದು ಶುಕ್ರ ಅಸ್ತ?
ಗ್ರಹವೊಂದು ಸೂರ್ಯನಿಗೆ ಸಮೀಪ ಬಂದಾಗ ಅದರ ಹೊಳಪು, ಪ್ರಭಾವ ಕಡಿಮೆಯಾಗುತ್ತದೆ. ಇದನ್ನು ಆ ಗ್ರಹ ಅಸ್ತಮಿಸುವುದು ಎನ್ನಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧಪಟ್ಟ ಗ್ರಹದ ಪ್ರಭಾವವು ಕಡಿಮೆಯಾಗುತ್ತದೆ. ಅವನು ತನ್ನ ಶುಭ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಸಧ್ಯ ವಿವಾಹ, ವೈಭೋಗ, ವೃತ್ತಿ, ವ್ಯಾಪಾರ, ಐಷಾರಾಮಿಗಳಿಗೆ ಕಾರಕನಾದ ಶುಕ್ರ ಗ್ರಹವು ಅಸ್ತಮಿಸುತ್ತಿದೆ(Shukra asta). ಮೊದಲೇ ಬಹಳ ಪ್ರಕಾಶಮಾನವಾದ ಗ್ರಹ ಶುಕ್ರ. ಆತನ ಅಸ್ತಮಿಸುವಿಕೆಯಿಂದ ಕಳಾಹೀನನಾಗುತ್ತಾನೆ. ಹೀಗಾಗಿ, ಕೆಲವು ರಾಶಿಚಕ್ರಗಳು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಶುಕ್ರಅಸ್ತದ ಅವಧಿಯಲ್ಲಿ, ವ್ಯಕ್ತಿಯು ಅನೇಕ ರೀತಿಯ ಸಂತೋಷಗಳಿಂದ ವಂಚಿತನಾಗುತ್ತಾನೆ.

coconut astrology: ಸದಾ ಹಣದ ಅಡಚಣೆಯೇ? ತೆಂಗಿನಕಾಯಿಯ ಈ ಪರಿಹಾರ ಮಾಡಿ..

ಶುಕ್ರ ಗ್ರಹವು ಸಂಪತ್ತಿನ ದೇವತೆ ಮಹಾಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದೆ. ಇದೇ ಕಾರಣಕ್ಕಾಗಿ ಹಿಂದೂ ಧರ್ಮದ ಜನರು ಶುಕ್ರವಾರದಂದು ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ಬಯಸಿ ಉಪವಾಸ(fasting) ಮಾಡುತ್ತಾರೆ. ಅಲ್ಲದೆ, ತಮ್ಮ ಜಾತಕದಲ್ಲಿ ಶುಕ್ರ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ಅವರು ಶುಕ್ರವಾರದಂದು ಉಪವಾಸ ಸೇರಿದಂತೆ ಸಾಕಷ್ಟು ಪರಿಹಾರ ಕೈಗೊಳ್ಳುತ್ತಾರೆ. ಶುಕ್ರ ತುಂಬಾ ಮಂಗಳಕರ ಗ್ರಹವಾಗಿದೆ. ಅನೇಕ ಜನರು ಶುಕ್ರನನ್ನು ಭೂಮಿಯ ಸಹೋದರಿ ಎಂದೂ ಕರೆಯುತ್ತಾರೆ. ಶುಕ್ರ ಗ್ರಹ(Planet Venus)ವು ಸೂರ್ಯೋದಯ ಮತ್ತು ಸೂರ್ಯಾಸ್ತದ ಮೊದಲು ಮತ್ತು ಸೂರ್ಯಾಸ್ತದ ನಂತರ ಸ್ವಲ್ಪ ಸಮಯದವರೆಗೆ ಮಾತ್ರ ಪ್ರಕಾಶಮಾನವಾಗಿ ಹೊಳೆಯುತ್ತದೆ. ಅದಕ್ಕಾಗಿಯೇ ಇದನ್ನು ಬೆಳಗಿನ ನಕ್ಷತ್ರ ಅಥವಾ ಸಂಜೆ ನಕ್ಷತ್ರ ಎಂದೂ ಕರೆಯುತ್ತಾರೆ. ಇದಲ್ಲದೆ, ಪೌರಾಣಿಕ ನಂಬಿಕೆಯ ಪ್ರಕಾರ, ಶುಕ್ರ ಗ್ರಹವು ಅಸುರರ ಗುರು, ಆದ್ದರಿಂದ ಅವರನ್ನು ಶುಕ್ರಾಚಾರ್ಯ ಎಂದೂ ಕರೆಯುತ್ತಾರೆ.

ಈ ರಾಶಿಗಳು ಎಚ್ಚರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿ(Zodiac signs)ಯ ಜನರು ಶುಕ್ರ ಅಸ್ತದಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಾಸ್ತವವಾಗಿ, ಇದು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಇದರೊಂದಿಗೆ ಆರ್ಥಿಕ ನಷ್ಟದ ಮೊತ್ತವೂ ಇದೆ. ಆದಾಗ್ಯೂ, ಮೇಷ, ವೃಷಭ, ಕರ್ಕ, ಸಿಂಹ, ತುಲಾ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ಶುಕ್ರ ಗ್ರಹವು ಅಶುಭ ಪರಿಣಾಮವನ್ನು ಬೀರುವುದಿಲ್ಲ.

Mahabharat: ಸಾವಿನ ಹಾಸಿಗೆಯಲ್ಲಿ ಮಲಗಿ ಬದುಕಿನ ಪಾಠ ಹೇಳಿದ ಭೀಷ್ಮ

ಈ ಕೆಲಸ ಮಾಡಬೇಡಿ
ಜ್ಯೋತಿಷ್ಯದಲ್ಲಿ, ಶುಕ್ರ ಅಸ್ತ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಂದರೆ, ಈ ಸಮಯದಲ್ಲಿ, ಯಾವುದೇ ರೀತಿಯ ಶುಭ ಕಾರ್ಯಗಳನ್ನು ಆಯೋಜಿಸುವುದನ್ನು ಅಥವಾ ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು. ಈ ಅವಧಿಯಲ್ಲಿ ಮದುವೆ, ಮುಂಡನ, ಗೃಹ ಪ್ರವೇಶ ಮುಂತಾದ  ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಶುಕ್ರವು ಮತ್ತೆ ಉದಯಿಸಿದಾಗ ಅಂತಹ ಕೆಲಸವನ್ನು ಮಾಡಬಹುದು. ಶುಕ್ರ ಅಸ್ತಮಿಸುವ ಸಮಯದಲ್ಲಿ 'ಓಂ ದ್ರಂ ದ್ರೌಂ ಸಹ ಶುಕ್ರಾಯ ನಮಃ' ಎಂಬ ಬೀಜ ಮಂತ್ರವನ್ನು ಪಠಿಸುವುದು ಮಂಗಳಕರವಾಗಿರುತ್ತದೆ.
 

Follow Us:
Download App:
  • android
  • ios