Asianet Suvarna News Asianet Suvarna News

coconut astrology: ಸದಾ ಹಣದ ಅಡಚಣೆಯೇ? ತೆಂಗಿನಕಾಯಿಯ ಈ ಪರಿಹಾರ ಮಾಡಿ..

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವವಿದೆ. ಪ್ರತಿ ಶುಭ ಕಾರ್ಯ ಮತ್ತು ಪೂಜೆಯಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತೆಂಗಿನಕಾಯಿಯ ಪರಿಹಾರಗಳು ವ್ಯಕ್ತಿಗೆ ಸಾಕಷ್ಟು ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತವೆ. 

Coconut helps to improve financial conditions know its astrological benefits skr
Author
First Published Sep 12, 2022, 3:22 PM IST

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ, ಅಂದರೆ ಕೇಳಿದ್ದೆಲ್ಲ ಕೊಡುವ ಮರ. ತೆಂಗಿನಕಾಯಿ ಕೂಡಾ ಅಷ್ಟೇ, ಅದು ಬಹುರೂಪದಲ್ಲಿ ಬಳಕೆಯಾಗುತ್ತದೆ. ಅಡುಗೆಯಲ್ಲಿ, ಎಣ್ಣೆಯಾಗಿ, ದೇವರಿಗೆ ಪ್ರಸಾದವಾಗಿ ಹೀಗೆ.. ಅದರಲ್ಲೂ ದೇವರಿಗೆ ನೈವೇದ್ಯವಾಗಿರಿಸುವ ಪ್ರಸಾದದಲ್ಲಿ ತೆಂಗಿನಕಾಯಿಯೇ ಸರ್ವಶ್ರೇಷ್ಠ ಎನ್ನಲಾಗುತ್ತದೆ. ಏಕೆಂದರೆ ಇದು ಮನುಷ್ಯ ತಯಾರಿಸಿದ ಆಹಾರವಲ್ಲ, ಒಡೆವ ಮುನ್ನ ಕೈಲಿ ಮುಟ್ಟಲೂ ಸಾಧ್ಯವಿಲ್ಲ. ಹಾಗಾಗಿ ಅತ್ಯಂತ ಪವಿತ್ರವಾಗಿರುತ್ತದೆ. 

ಹಿಂದೂ ಧರ್ಮದಲ್ಲಿ ತೆಂಗಿನಕಾಯಿ(Coconut)ಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ತೆಂಗಿನಕಾಯಿಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ. ಇದಲ್ಲದೆ ತೆಂಗಿನಕಾಯಿಯಲ್ಲಿ ಲಕ್ಷ್ಮಿ ದೇವಿಯೂ ನೆಲೆಸಿದ್ದಾಳೆ. ಪ್ರತಿಯೊಂದು ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಕೆಯಾಗುತ್ತದೆ. ಇಷ್ಟೇ ಅಲ್ಲ, ಹಿಂದೂ ಧರ್ಮದಲ್ಲಿ ಯಾಗ, ಹವನ ತೆಂಗಿನಕಾಯಿ ಇಲ್ಲದೆ ಅಪೂರ್ಣ ಎಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರ(Astrology)ದ ಪ್ರಕಾರ ತೆಂಗಿನ ಮರ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಮತ್ತು ಆ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ವೈಭವವು ಯಾವಾಗಲೂ ಇರುತ್ತದೆ. ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತೆಂಗಿನಕಾಯಿಗೆ ಸಂಬಂಧಿಸಿದ ಪರಿಹಾರಗಳ(remedies) ಬಗ್ಗೆ ತಿಳಿಯೋಣ, ಇದು ಸಮಸ್ಯೆಗಳನ್ನು ತೊಡೆದು ಹಾಕಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Mahabharat: ಸಾವಿನ ಹಾಸಿಗೆಯಲ್ಲಿ ಮಲಗಿ ಬದುಕಿನ ಪಾಠ ಹೇಳಿದ ಭೀಷ್ಮ

ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು(Financial problems)
ಹಲವು ಬಾರಿ ಹಣ ಎಷ್ಟೇ ದುಡಿದರೂ ಅದು ಕೈಲಿ ಉಳಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಕೆಂಪು ಬಟ್ಟೆಗಳನ್ನು ಧರಿಸಿ ಪೂಜಿಸಬೇಕು. ಇದರ ನಂತರ, ಲಕ್ಷ್ಮಿ ದೇವಿಗೆ ತೆಂಗಿನಕಾಯಿ, ಕಮಲದ ಹೂವು, ಬಿಳಿ ಬಟ್ಟೆ, ಮೊಸರು, ಬಿಳಿ ಸಿಹಿತಿಂಡಿಗಳೊಂದಿಗೆ ಒಂದು ಜೋಡಿ ದಾರವನ್ನು ಅರ್ಪಿಸಿ. ಇದರ ನಂತರ, ತೆಂಗಿನಕಾಯಿಯನ್ನು ಶುದ್ಧವಾದ ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಯಾರಿಗೂ ಕಾಣದ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

ದೃಷ್ಟಿ ತೆಗೆಯಲು
ಕೆಲವೊಮ್ಮೆ ಮಕ್ಕಳಿಗೆ ಕೆಟ್ಟ ದೃಷ್ಟಿ(Evil eye) ಇರುತ್ತದೆ. ಇದರಿಂದ ಮಕ್ಕಳಿಗೆ ಓದಲು ಮತ್ತು ಬರೆಯಲು ಮನಸ್ಸಾಗುವುದಿಲ್ಲ ಮತ್ತು ಮಕ್ಕಳು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ತೆಂಗಿನಕಾಯಿಯನ್ನು ಮಗುವಿನ ತಲೆಯಿಂದ ಪಾದದವರೆಗೆ 11 ಬಾರಿ ಸುತ್ತಿಸಿ ನಂತರ ಯಾರೂ ಬಂದು ಹೋಗದ ಸ್ಥಳದಲ್ಲಿ ಸುಡಬೇಕು. ಹೀಗೆ ಮಾಡುವುದರಿಂದ ಮಗು ಕೆಟ್ಟ ದೋಷ ಮತ್ತು ನಕಾರಾತ್ಮಕ ಶಕ್ತಿ(negative energy)ಯಿಂದ ದೂರವಾಗುತ್ತದೆ.

Money Dreams: ಈ ರೀತಿಯ ಕನಸು ಕೈ ತುಂಬಾ ಹಣ ಬರೋ ಮುನ್ಸೂಚನೆ!

ವ್ಯಾಪಾರ, ಉದ್ಯೋಗದಲ್ಲಿ ಸಮಸ್ಯೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ತೆಂಗಿನ ಮರವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತೆಂಗಿನ ಮರವನ್ನು ನೆಟ್ಟರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಇದರೊಂದಿಗೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಬರುತ್ತಿದ್ದ ಸಂದಿಗ್ಧತೆ ನಿವಾರಣೆಯಾಗುತ್ತದೆ ಮತ್ತು ಯಶಸ್ಸಿನ ಎಲ್ಲಾ ಹಾದಿಗಳು ಸುಲಭವಾಗಿ ತೆರೆದುಕೊಳ್ಳುತ್ತವೆ. ನೀವು ಮನೆಯಲ್ಲಿ ತೆಂಗಿನ ಮರವನ್ನು ಬೆಳೆಸಲು ಬಯಸಿದರೆ, ಗಿಡವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮಾತ್ರ ನೆಡಬೇಕು. ಈ ದಿಕ್ಕಿನಲ್ಲಿ ತೆಂಗಿನ ಮರವನ್ನು ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios