Asianet Suvarna News Asianet Suvarna News

ಶ್ರಾವಣ ಮಾಸದಲ್ಲಿ ಮಾಂಸ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ? ಇಲ್ಲಿದೆ ವೈಜ್ಞಾನಿಕ ಕಾರಣ!

ಶ್ರಾವಣ ಮಾಸದ ಪ್ರತಿ ದಿನವೂ ಹಿಂದೂಗಳಿಗೆ ವಿಶೇಷವಾದುದು. ಶ್ರಾವಣ ಮಾಸದಲ್ಲಿ ಮಾಂಸ ಸೇವನೆ ನಿಷೇಧಿಸಲಾಗಿದೆ. ಕೆಲವರು ಏಕೆ ಸೇವಿಸಬಾರದು ಎಂದೂ ಪ್ರಶ್ನಿಸುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಗದ್ದಲ ಎದ್ದಿದೆ. ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇಲ್ಲಿದೆ.

Shravana Masa 2024 highlights why not eat meat in the month of shravana rav
Author
First Published Aug 10, 2024, 2:05 PM IST | Last Updated Aug 10, 2024, 2:05 PM IST

Shravana Masa 2024: ಶ್ರಾವಣ ಮಾಸದ ಪ್ರತಿ ದಿನವೂ ಹಿಂದೂಗಳಿಗೆ ವಿಶೇಷವಾದುದು. ಒಂದೊಂದು ದಿನವೂ ಪವಿತ್ರ. ಸೋಮವಾರ ಶಿವನಿಗೆ, ಮಂಗಳವಾರ ಮಂಗಳಗೌರಿಗೆ, ಶುಕ್ರವಾರ ವರಲಕ್ಷ್ಮಿ ಅಮ್ಮನ ಪೂಜಿಸಿದರೆ ಶನಿವಾರದಂದು ಮನೆಯ ದೀಪವಾಗಿರುವ ದೇವರಿಗೆ ಪೂಜೆಗಳು ನಡೆಯುತ್ತವೆ. ಶ್ರವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು ಶುರುವಾದಂತೆ. ಶ್ರಾವಣ ಮಾಸದ ಪ್ರತಿ ದಿನವೂ ವಿಶೇಷ ಹೀಗಾಗಿ ಸಮಯದಲ್ಲಿ ಭಕ್ತರು ಅದರಲ್ಲೂ ಸ್ತ್ರೀಯರು ವ್ರತಗಳನ್ನು ಮಾಡುತ್ತಾರೆ.

 ಹೌದು ವ್ರತಗಳನ್ನ ಏಕೆ ಮಾಡುತ್ತಾರೆ? ಮಹಿಳೆಯರಿಗೆ ಈ ಆಚರಣೆಗಳಿಂದ ಏನು ಪ್ರಯೋಜನ? ಪಂಡಿತರು ಹೇಳೋದೇನು?

ಹಿಂದೂಗಳ ಪ್ರಕಾರ ಶ್ರವಣಮಾಸ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಶ್ರಾವಣ ಮಾಸದಲ್ಲಿ ದೇವರ ನಾಮಸ್ಮರಣೆ, ಪೂಜಾ,ವ್ರತಗಳು, ಉಪವಾಸ ಮಾಡಲಾಗುತ್ತದೆ. ಪುರಾಣಗಳು ಹೇಳುವಂತೆ ಶ್ರಾವಣ ಮಾಸ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ ಎಂದರೆ ಶ್ರಾವಣ ಮಾಸ. ಈ ಮಾಸದಲ್ಲಿ ಲೋಕಕಲ್ಯಾಣಕ್ಕಾಗಿ  ಪೂಜೆಯಲ್ಲಿ ತೊಡಗಿರುವಾಗ ಮಹಾವಿಷ್ಣುವು ಈ ಲೋಕಗಳ ಜವಾಬ್ದಾರಿಯನ್ನು ದೇವಿಗೆ ಒಪ್ಪಿಸುತ್ತಾನೆ. ಆದ್ದರಿಂದ ಈ ಶ್ರಾವಣ ಮಾಸದಲ್ಲಿ ದೇವಿಯನ್ನು ಪೂಜಿಸಿದರೆ ಸಕಲ ಐಶ್ವರ್ಯಗಳು ಲಭಿಸುತ್ತವೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ.

ನಾಗದೇವತೆಗೆ ಈ ವಿಧಾನದ ಮೂಲಕ ಪೂಜಿಸಿದ್ರೆ ಸಕಲ ಸಂಕಷ್ಟಗಳಿಂದ ಮುಕ್ತಿ; ಮನೆಯಲ್ಲಿ ಸಂಪತ್ತು!

ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ... ವಾರದ ಏಳು ದಿನವೂ ದೇವಿಗೆ ಯಾವಾಗಲೂ ವಿಶೇಷ ಪೂಜೆಗಳು, ಉಪವಾಸಗಳು ಮತ್ತು ವಿವಿಧ ನೈವೇದ್ಯಗಳು ಇರುತ್ತವೆ. ಅದರಲ್ಲೂ ಮಳೆಗಾಲ ಪ್ರಾರಂಭವಾಗಿ ಅತಿವೃಷ್ಠಿ ಅನಾವೃಷ್ಟಿಯಾಗುವ ಶ್ರಾವಣ ಮಾಸದಲ್ಲಿ ರೋಗಗಳನ್ನು ದೂರವಿಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಮಾಸದಲ್ಲಿ ದೀಕ್ಷೆ ಮತ್ತು ಉಪವಾಸಗಳನ್ನು ಮಾಡಲಾಗುತ್ತದೆ. ಉಪವಾಸ ದೀಕ್ಷೆ ಎಂದರೆ ಸಂಪೂರ್ಣ ಆಹಾರ ತ್ಯಜಿಸುವುದಾಗಿದೆ.

ಉಪಾಹಾರ ಸೇವಿಸುವಾಗ ವರಲಕ್ಷ್ಮೀ ಅಮ್ಮನ ನಾಮವನ್ನು ಜಪಿಸಬೇಕು. ವರ್ಷವಿಡೀ ನಿರ್ದಿಷ್ಟ ದಿನ ಉಪವಾಸ ಮಾಡಲಾಗದವರು ಶ್ರಾವಣ ಮಾಸದಲ್ಲಿ ಉಪವಾಸ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಈ ತಿಂಗಳು ಎಲ್ಲ ದೇವರ ಭಕ್ತರಿಗೂ ಹಬ್ಬ. ಇನ್ನು ಶ್ರಾವಣ ಮಾಸದಲ್ಲಿ ಮಾಂಸ ಸೇವನೆ ನಿಷೇಧಿಸಲಾಗಿದೆ. ಕೆಲವರು ಏಕೆ ಸೇವಿಸಬಾರದು ಎಂದೂ ಪ್ರಶ್ನಿಸುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಗದ್ದಲ ಎದ್ದಿದೆ. ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇಲ್ಲಿದೆ.

Nag Panchami 2024 : ಇದು ನಾಗನ ಆರಾಧನೆಯೂ ಹೌದು, ಅಣ್ಣ-ತಂಗಿ ಬಾಂಧವ್ಯ ಬೆಸೆಯುವ ಹಬ್ಬವೂ ಹೌದು

ಹಿಂದೂಗಳಲ್ಲಿ ಹೆಚ್ಚಿನ ಜನರು ಈ ಮಾಸದಲ್ಲಿ ಮಾಂಸ ಸೇವಿಸುವುದಿಲ್ಲ. ಇಡೀ ತಿಂಗಳು ಮಾಂಸವನ್ನು ತಿನ್ನುವುದಿಲ್ಲ. ತಿಂಗಳು ಪೂರ್ತಿ ಪ್ರತಿದಿನ ಪೂಜೆಯಲ್ಲಿ ಮಗ್ನರಾಗುವುದು ಒಂದು ಕಾರಣವಾದರೆ, ಹವಾಮಾನ ಬದಲಾವಣೆಯಿಂದ ಜೀರ್ಣಾಂಗ ವ್ಯವಸ್ಥೆ ತುಂಬಾ ದುರ್ಬಲವಾಗಿದ್ದು, ಭೂಮಿಯ ಮೇಲೆ ಸೂರ್ಯನ ಕಿರಣಗಳ ತಾಪ ಕಡಿಮೆಯಾಗಿದೆ. ಅತಿವೃಷ್ಟಿಯಿಂದ ಸಾಂಕ್ರಾಮಿಕ ರೋಗಗಳು ಬಹಳ ವೇಗವಾಗಿ ಹರಡುತ್ತವೆ. ಈ ಸಮಯದಲ್ಲಿ ಮಾಂಸವನ್ನು ತಿನ್ನುವುದು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಶ್ರಾವಣದಲ್ಲಿ ಮಾಂಸಾಹಾರ ತ್ಯಜಿಸಲು ಇದೂ ಒಂದು ಕಾರಣವಾಗಿದೆ.

Latest Videos
Follow Us:
Download App:
  • android
  • ios