ನಾಡಿನೆಲ್ಲೆಡೆ ಹೋಳಿ ಹಬ್ಬ (Holi Festival) ದ ಸಂಭ್ರಮ ಮನೆ ಮಾಡಿದೆ. ಆದ್ರೆ ಕೆಲವೊಮ್ಮೆ ಕೆಲವರಿಗೆ ಬೇರೆ ಊರಲ್ಲಿದ್ದಾಗ ರಜೆ ತೆಗೆದು ಹೋಳಿಯಾಟದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಹೀಗಿದ್ದಾಗ ಹೋಳಿಯ ಪ್ರೀತಿಯ ಸಂದೇಶವನ್ನಂತೂ ಮಿಸ್ ಮಾಡಬಾರದಲ್ವಾ ? ನಿಮ್ಮ ಪ್ರೀತಿಪಾತ್ರರ ಜೊತೆ ಹೋಳಿ ಹಬ್ಬದ ಶುಭಾಶಯ (Wishes) ಹಂಚಿಕೊಳ್ಳಿ
ಹೋಳಿ ಹಬ್ಬ (Holi Festival) ಅಂದ್ರೆ ರಂಗು ರಂಗಿನ ಬಣ್ಣದೋಕುಳಿ. ಬಣ್ಣದ ನೀರಿನಲ್ಲಿ ಮಿಂದೆದ್ದು, ಮುಳುಗೆದ್ದು ಆಡೋದು ಎಲ್ಲರಿಗೂ ಖುಷಿ ಕೊಡುವ ವಿಚಾರ. ಪ್ರತಿವರ್ಷದಂತೆ ಮತ್ತೆ ಹೋಳಿ ಹಬ್ಬ ಬಂದಿದೆ. ಬೀದಿ ಬೀದಿಗಳನ್ನು ಬಣ್ಣದಿಂದ ಅಲಂಕರಿಸಿ, ಕುಟುಂಬ, ಸ್ನೇಹಿತರು, ಆತ್ಮೀಯರ ಜತೆ ಸೇರಿ ಬಣ್ಣಗಳನ್ನು ಪರಸ್ಪರ ಎರಚಾಡಿ ಖುಷಿಪಡುವ ಸಮಯ. ನಗರದಲ್ಲಿರುವ ಹೋಳಿ ಹಬ್ಬಕ್ಕೆಂದೇ ತಮ್ಮ ಊರಿಗೆ ಹಿಂದಿರುಗುತ್ತಾರೆ.
ಗಲ್ಲಿ ಗಲ್ಲಿಗಳಲ್ಲಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತುಂಬಿ ರಂಗನ್ನು ಬೆರೆಸಿ ನೀರನ್ನು ಎರಚಿ ಖುಷಿಪಡುತ್ತಾರೆ. ನಂತರ ಸಿಹಿತಿಂಡಿಗಳು, ಭಾಂಗ್‌ನ್ನು ಸೇವಿಸಿ ಡ್ಯಾನ್ಸ್ (Dance) ಮಾಡುತ್ತಾರೆ. ಉತ್ತರಭಾರತದಲ್ಲಿ ಹೆಚ್ಚಾಗಿ ಆಚರಿಸಲಾಗುವ ಹೋಳಿ ಹಬ್ಬವನ್ನು ಇತ್ತೀಚಿಗೆ ದಕ್ಷಿಣಭಾರತದಲ್ಲೂ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಫಾಲ್ಗುಣ(Falgun) ಮಾಸ ಶುರುವಾಗುತ್ತಿದ್ದಂತೆಯೇ ಹೋಳಿ ಆಚರಣೆಗೆ ಸಿದ್ಧತೆಗಳು ಶುರುವಾಗುತ್ತವೆ. ಈಗಾಗ್ಲೇ ಹಲವೆಡೆ ಹೋಳಿ ಹಬ್ಬದ ಸಂಭ್ರಮ ಹೆಚ್ಚಿದೆ. ಇಡೀ ಭಾರತವೇ ಬಣ್ಣಗಳಲ್ಲಿ ಮಿಂದೇಳುವ ಸಂಭ್ರಮದಲ್ಲಿ ಜಾತಿ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಹೋಳಿ(Holi) ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೂ ಅದು ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಸಮನ್ವಯವಾಗುವುತ್ತದೆ. ಪಿಚಕಾರಿ, ಕಲರ್ ನೀರುಗಳು ಬಟ್ಟೆಯನ್ನು ರಂಗು ರಂಗಾಗಿಸುತ್ತದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಕೆಂಪು, ನೀಲಿ, ಹಸಿರು ಮತ್ತು ಹಳದಿ ಬಣ್ಣಗಳನ್ನು ಎರಚಿ ಖುಷಿಪಡುತ್ತದ್ದಾರೆ.
ಹೋಳಿಯಲ್ಲಿ ಎಲ್ಲರ ಮುಂದೆ ಮಿಂಚಬೇಕೆಂದ್ರೆ ಹೀಗಿರಲಿ makeup
ಆದ್ರೆ ಕೆಲವೊಮ್ಮೆ ಕಾರಣಾಂತರಗಳಿಂದ ಪ್ರೀತಿ ಪಾತ್ರರ ಜತೆ ಹೋಳಿಯಾಡಲು ಸಾಧ್ಯವಾಗುವುದಿಲ್ಲ. ಬೇರೆ ಬೇರೆ ಊರಲ್ಲಿರುವವರು ರಜೆ ತೆಗೆದು ಹೋಳಿಯಾಟದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಹೀಗಿದ್ದಾಗ ಹೋಳಿಯ ಪ್ರೀತಿಯ ಸಂದೇಶವನ್ನಂತೂ ಮಿಸ್ ಮಾಡಬಾರದಲ್ವಾ?
ಹಬ್ಬದಂದು ಪ್ರೀತಿ ಪಾತ್ರರಿಗೆ ಶುಭಾಶಯ (Wishes)ಗಳನ್ನು ತಿಳಿಸದಿದ್ದರೆ ಹಬ್ಬದ ಮಜವೆಲ್ಲಿಂದ ಬಂತು. ಹಬ್ಬದ ದಿನ ಪ್ರೀತಿ ಪಾತ್ರರಿಗೆ ಕಳುಹಿಸುವ ಸಂದೇಶ ಅವರ ಮನಸ್ಸಲ್ಲಿ ನಮ್ಮ ಕುರಿತಾಗಿ ಪ್ರೀತಿಯನ್ನು ಹೆಚ್ಚಿಸುತ್ತದೆ. ನೀವು ಸಹ ಹೋಳಿ ಸಂದೇಶವನ್ನು ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ನಿಮ್ಮ ಪ್ರೀತಿಪಾತ್ರರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಲು ಕೆಲವು ಶುಭಾಶಯಗಳು, ಉಲ್ಲೇಖಗಳು ಮತ್ತು ಶುಭಾಶಯಗಳು ಇಲ್ಲಿವೆ. ಇಲ್ಲಿರುವ ಸ್ಪರ್ಶಿಸುವ ಸಂದೇಶವನ್ನು ಪ್ರೀತಿಪಾತ್ರರಿಗೆ ಕಳುಹಿಸುವ ಮೂಲಕ ಈ ಹೋಳಿಯನ್ನು ಮತ್ತಷ್ಟು ಕಲರ್ ಫುಲ್ ಮಾಡಿ.
Holi 2022: ಅಸ್ತಮಾ ರೋಗಿಗಳು ಮೈಮರೆಯಬೇಡಿ, ಹೀಗೆ ಎಚ್ಚರಿಕೆ ವಹಿಸಿ
1) ಗಾಳಿಯಲ್ಲಿ ಬಣ್ಣಗಳನ್ನು ಎಸೆಯೋಣ ಮತ್ತು ಪರಸ್ಪರ ಸುಂದರ ಸಂಬಂಧವನ್ನು ಆಚರಿಸೋಣ. ಹೋಳಿ ಹಬ್ಬದ ಶುಭಾಶಯಗಳು.
2) ದೇವರು ನಿಮ್ಮ ಜೀವನವನ್ನು ಸಂತೋಷ, ನಗು, ಸ್ನೇಹ ಮತ್ತು ಪ್ರೀತಿಯ ಬಣ್ಣಗಳಿಂದ ತುಂಬಲಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೋಳಿ ಹಬ್ಬದ ಶುಭಾಶಯಗಳು.
3) ಈ ಹೋಳಿಯಲ್ಲಿ, ಪ್ರೀತಿ, ಸಂತೋಷ ಮತ್ತು ಸ್ನೇಹದ ಪ್ರಕಾಶಮಾನವಾದ ಬಣ್ಣಗಳು ನಿಮ್ಮ ಜೀವನವನ್ನು ತುಂಬಲಿ ಎಂದು ನಾನು ಬಯಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
4) ಇದು ಒತ್ತಡವನ್ನು ಕಳೆದು ಪ್ರೀತಿಪಾತ್ರರೊಂದಿಗೆ ಹೋಳಿ ಆಚರಿಸುವ ಸಮಯ. ಬಣ್ಣಗಳ ಜೊತೆ ದಿನವನ್ನು ಕಳೆಯಿರಿ. ಒಳ್ಳೆಯ ಆಹಾರವನ್ನು ಆನಂದಿಸಿ. ಹೋಳಿ 2022ರ ಶುಭಾಶಯಗಳು.
5) ನಿಮ್ಮ ಹೃದಯದ ಪ್ರೀತಿಗೆ ಇನ್ನಷ್ಟು ಬಣ್ಣ ತುಂಬಿ. ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಹೋಳಿ ಹಬ್ಬದ ಶುಭಾಶಯಗಳು.
6) ಹೋಳಿ ಹಬ್ಬ ನಿಮಗೆ ಪ್ರೀತಿ, ಸಂತೋಷ ಮತ್ತು ವಿವಿಧ ಬಣ್ಣಗಳನ್ನು ಕಳುಹಿಸುತ್ತಿದೆ. ನಿಮ್ಮ ಜೀವನವು ಈ ಹೋಳಿ ಬಣ್ಣಗಳಂತೆ ಅದ್ಭುತ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತಿರಲಿ ಎಂದು ಭಾವಿಸುತ್ತೇವೆ.
7) ನಮ್ಮ ಜೀವನವು ಬಣ್ಣಗಳಿಲ್ಲದೆ ನೀರಸವಾಗಿರುತ್ತದೆ. ಹೋಳಿ ಹಬ್ಬ ಮಾತ್ರ ನಮಗೆ ಬಣ್ಣಗಳ ಮಹತ್ವವನ್ನು ತಿಳಿಸುತ್ತದೆ. ಹೋಳಿ ಹಬ್ಬದ ಶುಭಾಶಯಗಳು.
8) ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಬಣ್ಣಗಳನ್ನು ಆಡುವುದು ತುಂಬಾ ಸಂತೋಷವನ್ನು ತರುತ್ತದೆ. ನಿಮಗೆ ಹೋಳಿ ಹಬ್ಬದ ಶುಭಾಶಯಗಳು.
9) ನಿಮ್ಮ ಪ್ರೀತಿಪಾತ್ರರ ಜೊತೆ ಮೋಜು ತುಂಬಿದ ಹೋಳಿಯನ್ನು ನೀವು ಹೊಂದಿರಿ. ಬಣ್ಣಗಳೊಂದಿಗೆ ಆಟವಾಡಿ. ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು
