Asianet Suvarna News Asianet Suvarna News

Holi 2022: ಅಸ್ತಮಾ ರೋಗಿಗಳು ಮೈಮರೆಯಬೇಡಿ, ಹೀಗೆ ಎಚ್ಚರಿಕೆ ವಹಿಸಿ

ಎಲ್ಲೆಡೆ ಹೋಳಿ (Holi) ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣ (Colour)ಗಳನ್ನು ಎರಚಿ ಹಬ್ಬ ಆಡೋದೇನೋ ಚಂದ. ಆದ್ರೆ ಆರೋಗ್ಯ (Health)ದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಅಸ್ತಮಾ (Asthma)ದಿಂದ ಬಳಲುತ್ತಿರುವವರು ಹೋಳಿ ಹಬ್ಬದಿಂದ ದೂರವಿದ್ರೆ ಒಳ್ಳೆಯದು. 

Tips For Asthma Patient To Avoid Problems
Author
Bangalore, First Published Mar 18, 2022, 12:41 PM IST | Last Updated Mar 18, 2022, 12:41 PM IST

ದೇಶಾದ್ಯಂತ ಹೋಳಿ (Holi ) ಹಬ್ಬ (Festival) ದ ಸಂಭ್ರಮ ಮನೆ ಮಾಡಿದೆ. ಕೊರೊನಾ (Corona ) ಕಾರಣ ಕಳೆದ ಎರಡು ವರ್ಷಗಳಿಂದ ಜನರು ಹಬ್ಬವನ್ನು ಸರಿಯಾಗಿ ಆಚರಣೆ ಮಾಡಿಲ್ಲ. ಆದ್ರೆ ಈ ಬಾರಿ ಕೊರೊನಾ ಹಾವಳಿ ಸ್ಪಲ್ಪ ಕಡಿಮೆಯಾಗಿರುವ ಕಾರಣ ಜನ್ರುಸಂಭ್ರಮದಿಂದ ಹೋಳಿ ಆಚರಣೆ ಮಾಡ್ತಿದ್ದಾರೆ. ಬಣ್ಣಗಳಲ್ಲಿ ಮಿಂದೇಳುತ್ತಿದ್ದಾರೆ.  ಕೊರೊನಾ ಸೋಂಕಿನ ಅಪಾಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ. ರಕ್ಷಣಾ ಕ್ರಮಗಳನ್ನು ಮರೆಯದಂತೆ ಮನವಿ ಮಾಡಿದ್ದಾರೆ. ಮಾಸ್ಕ್,ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.  

ಹೋಳಿ ಹಬ್ಬದಲ್ಲಿ ಪ್ರತಿಯೊಬ್ಬರೂ ಕೊರೊನಾ ಜೊತೆಗೆ ಅನೇಕ ಆರೋಗ್ಯ (Health) ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಬೇಕು. ಅದರಲ್ಲೂ ಈಗಾಗಲೇ ಅಸ್ತಮಾ, ಸಿಒಪಿಡಿಯಂತಹ ಉಸಿರಾಟ ಸಂಬಂಧಿ ಕಾಯಿಲೆ ಇರುವವರು ಹೋಳಿ ಹಬ್ಬದಂದು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹೋಳಿ ದಿನದಂದು ಬಣ್ಣಗಳು ಗಾಳಿಯಲ್ಲಿ ಬೆರೆಯುವುದ್ರಿಂದ ಉಸಿರಾಟದ ತೊಂದರೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಪರಿಸರದಲ್ಲಿ ಬಣ್ಣ ಹರಡುವುದರಿಂದ  ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.  ಹಾಗಾಗಿ ಈಗಾಗಲೇ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳು ಹೋಳಿ ಆಡುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೋಳಿ ಹಬ್ಬವಾದ ಇಂದು, ಅಸ್ತಮಾ (Asthma) ಸೇರಿದಂತೆ ಉಸಿರಾಟದ ತೊಂದರೆಯಿರುವವರು ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ನಾವು ಹೇಳ್ತೇವೆ.  

ಮಸಾಲೆ ಪದಾರ್ಥ ತಿಂದು ತೂಕ ಇಳಿಸಿಕೊಳ್ಳಬಹುದಾ? ಈ ಐದು ಐಟಂ ವೈಟ್‌ಲಾಸ್‌ಗೆ ಬೆಸ್ಟ್

ಅಸ್ತಮಾ ರೋಗಿಗಳು ಆರೋಗ್ಯದ ಬಗ್ಗೆ ಎಚ್ಚರದಿಂದಿರಿ: ಹೋಳಿ ಹಬ್ಬದ ಸಂಭ್ರಮದಲ್ಲಿ ಅಸ್ತಮಾ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ವಿಶೇಷವಾಗಿ ಒಣ ಬಣ್ಣಗಳಿಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆಯುಂಟಾಗುವ ಸಾಧ್ಯತೆಯಿರುತ್ತದೆ. ಅಸ್ತಮಾ ರೋಗಿಗಳು ಎಂದೂ ಒಣ ಬಣ್ಣಗಳೊಂದಿಗೆ ಹೋಳಿ ಆಡಬಾರದು. ತುರ್ತು ಸಂದರ್ಭಗಳಲ್ಲಿ ಔಷಧಿಗಳು ಮತ್ತು ಇನ್ಹೇಲರ್‌ಗಳನ್ನು ಇರಿಸಿಕೊಂಡಿರಬೇಕು. ಹೋಳಿಯ ದಿನ ಹೆಚ್ಚಿನ ಆಸ್ಪತ್ರೆಗಳು ಮುಚ್ಚಲ್ಪಟ್ಟಿರುವುದರಿಂದ, ಪ್ರಾಥಮಿಕ ಚಿಕಿತ್ಸೆ ಮತ್ತು ಔಷಧಿಗಳ ವ್ಯವಸ್ಥೆಯನ್ನು ಮುಂಚಿತವಾಗಿಯೇ ಮಾಡಿಟ್ಟುಕೊಳ್ಳುವುದು ಒಳ್ಳೆಯದು. 

ಆಹಾರ ಮತ್ತು ನೀರಿನ ಬಗ್ಗೆ ಇರಲಿ ಕಾಳಜಿ: ಹೋಳಿ ಹಬ್ಬದ ಸಂದರ್ಭದಲ್ಲಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದರಿಂದ ಅಸ್ತಮಾ ಸೇರಿದಂತೆ ಉಸಿರಾಟಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಹೋಳಿ ಹಬ್ಬದ ಸಂದರ್ಭದಲ್ಲಿ ಬಗೆ ಬಗೆ ಆಹಾರವನ್ನು ಸೇವನೆ ಮಾಡ್ತೇವೆ. ಆದ್ರೆ ನೀರು ಕುಡಿಯುವುದನ್ನು ಮರೆತುಬಿಡ್ತೇವೆ. ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಹೋಳಿ ಹಬ್ಬದಲ್ಲಿ ನೀರು ಕುಡಿಯೋದನ್ನು ಮರೆಯದಿರಿ.  ಬಣ್ಣ ಹಾಗೂ ಕಡಿಮೆ ನೀರು ಸೇವನೆ ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಿ ಇದು ಉಸಿರಾಟದ ತೊಂದರೆ ಹೆಚ್ಚು ಮಾಡಬಹುದು. ಹೋಳಿ ಸಂದರ್ಭದಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. 

Coffee addiction ಆರೋಗ್ಯಕ್ಕೆ ಒಳ್ಳೇದೋ, ಕೆಟ್ಟದ್ದೋ?

ನೈಸರ್ಗಿಕ ಬಣ್ಣವನ್ನು ಬಳಸಿ: ಅಸ್ತಮಾ ಮತ್ತು ಅಲರ್ಜಿಕ್ ರಿನಿಟಿಸ್ ನಿಂದ ಬಳಲುತ್ತಿರುವವರು ಕೆಲವು ಸರಳ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೋಳಿಯನ್ನು ಆನಂದಿಸಬಹುದು. ಹೋಳಿಯಾಡುವ ಸಂದರ್ಭ ನೈಸರ್ಗಿಕ ಬಣ್ಣವನ್ನು ಬಳಸಿ. ಹೋಳಿಯಲ್ಲಿ ಬಣ್ಣಗಳು ವಾತಾವರಣ ಮಲಿನಗೊಳಿಸುವ ಕಾರಣ ಆದಷ್ಟು ಮನೆಯಲ್ಲಿ ಇರುವುದು ಒಳ್ಳೆಯದು.

ಮನೆಯಿಂದ ಹೊರಗೆ ಹೋಗುವಾಗ ಬಾಯಿ ಮತ್ತು ಮುಖನ್ನು ಮುಚ್ಚಲು ಮರೆಯದಿರಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸುತ್ತಮುತ್ತಲಿನ ಜನರಿಗೆ ನಿಮಗೆ ಅಸ್ತಮಾ ಇದೆ ಎಂಬುದನ್ನು ತಿಳಿಸಿ. ಆಗ ಅವರು ನಿಮ್ಮ ಮೇಲೆ ಬಣ್ಣ ಎರಚುವುದಿಲ್ಲ. ಸಮತೋಲಿತ ಆಹಾರದ ಜೊತೆ ವಿಟಮಿನ್-ಡಿ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವ್ಯಾಯಾಮ ಮತ್ತು ಯೋಗ (Yoga)ದಂತಹ ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡಿ. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಆಸ್ತಮಾ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೋಳಿ ಸಮಯದಲ್ಲಿ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಬೇಡಿ. ಧೂಮಪಾನ-ಮದ್ಯಪಾನದಿಂದ ದೂರವಿರಿ. 

Latest Videos
Follow Us:
Download App:
  • android
  • ios