64 ದಿನಗಳ ಬಳಿಕ ಮತ್ತೆ ಮಕರಕ್ಕೆ ಶನಿ; ಈ ಎರಡು ರಾಶಿಗಳಿಗೆ ಧೈಯಾ ಶುರು

ಜುಲೈ 12ರಿಂದ ಮಕರ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಮುಂದುವರಿಯುತ್ತದೆ. ಈ ಶನಿ ಸಂಕ್ರಮಣದಿಂದ ಯಾವ ರಾಶಿಯವರಿಗೆ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ತಿಳಿಯಬೇಕಾ?

Shani will enter Capricorn again after 64 days Shani Dhaiya will start soon on two zodiac signs skr

ಜ್ಯೋತಿಷ್ಯದಲ್ಲಿ ಶನಿ ಗ್ರಹ(Saturn Planet)ಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಯಾರ ಜಾತಕ(horoscope)ದಲ್ಲಿ ಈ ಗ್ರಹವು ಪ್ರಬಲ ಸ್ಥಾನದಲ್ಲಿದೆಯೋ ಅವರು ಜೀವನದಲ್ಲಿ ಎಲ್ಲ ಸೌಕರ್ಯಗಳನ್ನು ಪಡೆಯುತ್ತಾರೆ. ಯಾರ ಜಾತಕದಲ್ಲಿ ಈ ಗ್ರಹವು ದುರ್ಬಲವಾಗಿದೆಯೋ ಅವರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶನಿಯು ಸ್ಥಳೀಯರಿಗೆ ಅವರ ಕಾರ್ಯಗಳ ಆಧಾರದ ಮೇಲೆ ಫಲವನ್ನು ನೀಡುತ್ತಾನೆ. ಶನಿಯ ಕೋಪದ ಕಠೋರ ಪರಿಣಾಮಗಳ ಕಾರಣದಿಂದ ಇದನ್ನು ದುಷ್ಟ ಗ್ರಹ ಎಂದು ಕರೆಯಲಾಗುತ್ತದೆ. ಶನಿಯು ಒಂದು ರಾಶಿಯಲ್ಲಿ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಹೀಗೆ 12 ರಾಶಿಗಳನ್ನೂ(zodiac signs) ಸಾಗಲು ಶನಿಗೆ 30 ವರ್ಷ ಕಾಲ ಬೇಕಾಗುತ್ತದೆ.

ಪ್ರಸ್ತುತ, ಶನಿಯು ಹಿಮ್ಮುಖವಾಗಿ ಕುಂಭ ರಾಶಿಯಲ್ಲಿ ಸಾಗುತ್ತಿದೆ. ಜುಲೈ 12 ರಿಂದ, ಇದು ಮಕರದಲ್ಲಿ ಸಾಗಲು ಪ್ರಾರಂಭಿಸುತ್ತದೆ. ಈ ಶನಿ ಸಂಕ್ರಮಣದಿಂದ ಎಲ್ಲರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಎರಡು ರಾಶಿಗಳಿಗೆ ಶನಿ ಧೈಯಾ(Shani Dhaiya) ಆರಂಭವಾಗುತ್ತದೆ. ಧೈಯಾ ಎಂದರೆ ಎರಡೂವರೆ ವರ್ಷದ ಶನಿ ಕಾಟ.

ಶನಿ ಸಾಡೇಸಾತಿಯ ದುಷ್ಪರಿಣಾಮ ಕಡಿಮೆ ಮಾಡ್ಬೇಕಂದ್ರೆ ಆಷಾಢದಲ್ಲಿ ಹೀಗ್ಮಾಡಿ..

ಶನಿಯು 29 ಏಪ್ರಿಲ್ 2022ರಿಂದ ಕುಂಭ ರಾಶಿಯಲ್ಲಿ ಸಾಗುತ್ತಿದೆ ಮತ್ತು ಜುಲೈ 12ರಂದು ಬೆಳಿಗ್ಗೆ 10.28 ರವರೆಗೆ ಇಲ್ಲೇ ಸಾಗಲಿದೆ. ಇದರ ನಂತರ, ಆತ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಸಮಯದ ಬಗ್ಗೆ ಹೇಳುವುದಾದರೆ ಮಕರ, ಕುಂಭ ಮತ್ತು ಮೀನ ರಾಶಿಯ ಜನರ ಮೇಲೆ ಶನಿ ಸಾಡೇಸಾತಿ ನಡೆಯುತ್ತಿದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರ ಮೇಲೆ ಶನಿ ಧೈಯಾ ನಡೆಯುತ್ತಿದೆ.

ಈ ಎರಡು ರಾಶಿಗೆ ಧೈಯಾ ಆರಂಭ
ಶನಿಯು 12 ಜುಲೈ 2022 ರಿಂದ 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಉಳಿಯುತ್ತಾನೆ. ಈ ಸಮಯದಲ್ಲಿ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಶನಿ ಧೈಯಾದಿಂದ ಮುಕ್ತರಾಗಿ ನಿರಾಳರಾಗುತ್ತಾರೆ. ಆದರೆ ಮಿಥುನ(Gemini) ಮತ್ತು ತುಲಾ ರಾಶಿ(Libra)ಯ ಜನರಿಗೆ ಶನಿ ಧೈಯಾ ಆರಂಭವಾಗುತ್ತದೆ. ಇನ್ನು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆಯುತ್ತದೆ. ಆದರೆ, ಧನು ರಾಶಿಯವರು ಮತ್ತೆ ಶನಿ ಸಾಡೇಸಾತಿಯ ಹಿಡಿತಕ್ಕೆ ಸಿಲುಕುತ್ತಾರೆ. ಇದರೊಂದಿಗೆ, ಶನಿಯು ಮಕರ ಮತ್ತು ಕುಂಭ ರಾಶಿಯ ಜನರ ಮೇಲೆ ಹಾಫ್ ಆ್ಯಂಡ್ ಹಾಫ್ ಇರುತ್ತದೆ. ಒಟ್ಟಿನಲ್ಲಿ ಜುಲೈ 12 ರಿಂದ ಜನವರಿ 17, 2023 ರ ವರೆಗೆ ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಶನಿ ಸಾಡೇ ಸಾತಿ(Sade sati) ಇರುತ್ತದೆ. 

ಉಳಿದ ಪೂಜಾ ಸಾಮಗ್ರಿಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ, ಹೀಗೆ ಬಳಸಿ..

ಶನಿ ಬಲಕ್ಕೆ ಪರಿಹಾರಗಳು(remedies)
ಶನಿದೇವನನ್ನು ಮೆಚ್ಚಿಸಲು ಶನಿವಾರದಂದು ಸಾಸಿವೆ ಎಣ್ಣೆ, ಛತ್ರಿ, ಹೊದಿಕೆ, ಕಪ್ಪು ಬಟ್ಟೆ, ಇಡಿ ಉದ್ದಿನಬೇಳೆ, ಕಬ್ಬಿಣ, ಎಳ್ಳು, ಆಹಾರ, ಔಷಧ ಇತ್ಯಾದಿಗಳನ್ನು ದಾನ(donate) ಮಾಡಿ. ಹತ್ತಿರದಲ್ಲಿ ಶನಿದೇವನ ದೇವಸ್ಥಾನ(Shani temple)ವಿದ್ದರೆ ಖಂಡಿತಾ ಅಲ್ಲಿಗೆ ಹೋಗಿ ಶನಿದೇವನ ದರ್ಶನ ಮಾಡಿ. ನೀವು ಶನಿದೇವನ ಕೋಪದಿಂದ ದೂರವಿರಲು ಬಯಸಿದರೆ, ಶನಿವಾರ ಮತ್ತು ಮಂಗಳವಾರ(Tuesday)ದಂದು ಆಂಜನೇಯನನ್ನು ಪೂಜಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios