ಉಳಿದ ಪೂಜಾ ಸಾಮಗ್ರಿಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ, ಹೀಗೆ ಬಳಸಿ..

ಸಾಮಾನ್ಯವಾಗಿ ಭಯಭಕ್ತಿಯಿಂದ ಪೂಜೆ ಮಾಡಿ ಬಳಿಕೆ ಪ್ರಸಾದವಾಗಿ ಸಿಕ್ಕ ಹೂವು, ಎಲೆ, ಅಕ್ಷತೆಗಳೆಲ್ಲ ಕೆಲ ಕ್ಷಣದಲ್ಲಿ ಕಸದಂತೆ ಬಿದ್ದಿರುತ್ತವೆ. ಮತ್ತು ಹೆಚ್ಚಿನವರು ಅದನ್ನು ಗುಡಿಸಿ ಸಾರಿಸುತ್ತಾರೆ. ಆದರೆ, ಪ್ರಸಾದವನ್ನು ಹೀಗೆ ನಡೆಸಿಕೊಳ್ಳಬಾರದು. 

methods to Dispose Pooja items skr

ಹಿಂದೂ ಧರ್ಮಗ್ರಂಥಗಳಲ್ಲಿ, ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೆ ಹೆಚ್ಚಿನ ಮಹತ್ವವಿದೆ. ಆದರೆ ಆಗಾಗ್ಗೆ ಪೂಜೆಯ ನಂತರ, ಸ್ವಲ್ಪ ವಸ್ತು ಉಳಿಯುತ್ತದೆ. ಅದು ಅಕ್ಷತೆ, ತುಳಸೀ ದಳ, ಹೂವುಗಳು, ಅರಿಶಿನ ಕುಂಕುಮ ಇರಬಹುದು.. ಒಮ್ಮೆ ಧರಿಸಿದಂತೆ ಮಾಡಿ ನಂತರ ಕಸಕ್ಕೆ ಹಾಕುವವರು ಅನೇಕರು. ಇದಲ್ಲದೇ ದೇವರ ಕೋಣೆಯಲ್ಲಿಯೂ ಸಾಕಷ್ಟು ಪೂಜೆಗೆ ಬಳಸಿದ ವಸ್ತುಗಳು ಉಳಿಯಬಹುದು. ಅವನ್ನು ಏ ಏನು ಮಾಡುವುದೆಂಬ ಗೊಂದಲ ಸಾಕಷ್ಟು ಜನರಲ್ಲಿರುತ್ತದೆ. ಕೆಲವರು ಅವನ್ನು ನೀರಿಗೆ ಹಾಕುತ್ತಾರೆ, ಮತ್ತೆ ಕೆಲವರು ಕಸಕ್ಕೆ ಹಾಕುತ್ತಾರೆ. ಖಂಡಿತವಾಗಿ ಇವನ್ನು ಕಸಕ್ಕೆ ಹಾಕಬೇಡಿ. ಏಕೆಂದರೆ ಪೂಜೆಯಲ್ಲಿ ಬಳಸುವ ಎಲ್ಲವೂ ಪವಿತ್ರವಾದವೇ. 

ಜ್ಯೋತಿಷ್ಯದ ತಜ್ಞರ ಪ್ರಕಾರ, ಉಳಿದ ಪೂಜಾ ಸಾಮಗ್ರಿ(worship material)ಗಳನ್ನು ಬಳಸುವುದರಿಂದ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ಹಾಗಾದರೆ ಉಳಿದ ಪೂಜಾ ಸಾಮಗ್ರಿಗಳಿಗೆ ಪರಿಹಾರಗಳನ್ನು ತಿಳಿಯೋಣ...

ಕುಂಕುಮ(Kumkum)
ಧರ್ಮಗ್ರಂಥಗಳ ಪ್ರಕಾರ, ಕುಂಕುಮ ಇಲ್ಲದೆ ದೇವತೆಗಳ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಕುಂಕುಮವನ್ನು ಅರಿಶಿನ ಮತ್ತು ಸ್ವಲ್ಪೇ ಸ್ವಲ್ಪ ಲೈಮ್‌ಸ್ಟೋನ್ ಬಳಸಿ ತಯಾರಿಸಲಾಗುತ್ತದೆ. ಪೂಜೆಯ ಬಳಿಕ ಪ್ರಸಾದವಾಗಿ ಉಳಿದ ಕುಂಕುಮ ಹೆಚ್ಚಾಗಿದ್ದರೆ ಏನು ಮಾಡುವುದೆಂದು ನಿಮಗೆ ಗೊಂದಲವಾಗಬಹುದು. ಸಾಧ್ಯವಾದಷ್ಟು ಮಿತಿಯಲ್ಲೇ ಕುಂಕುಮವನ್ನು ಬಳಸಿ. ಮತ್ತು, ನಂತರ ಉಳಿದ ಪ್ರಸಾದವನ್ನು ಒಂದು ಡಬ್ಬಿಗೆ ಹಾಕಿಡಿ. ಪ್ರತಿ ದಿನ ಮನೆ ಮಂದಿಯೆಲ್ಲ ಸ್ನಾನವಾದ ಬಳಿಕ ಅದನ್ನು ಹಚ್ಚಿಕೊಳ್ಳಬಹುದು. ಇದರಿಂದ ಅಖಂಡ ಸೌಭಾಗ್ಯ ದೊರೆಯುತ್ತದೆ. ಜೊತೆಗೆ, ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಕೆಟ್ಟ ಕನಸುಗಳು ಬೀಳುವುದು ತಪ್ಪುತ್ತದೆ. 

ತುಳಸಿ ಎಲೆಗಳು(basil leaves)
ತುಳಸಿ ಎಲೆಯಲ್ಲಿ ಯಾವುದೇ ತ್ಯಾಜ್ಯವಿಲ್ಲ. ನೀವು ಒಣಗಿದ / ಸತ್ತ ಸಸ್ಯವನ್ನು ವಿಲೇವಾರಿ ಮಾಡಬಹುದು, ಆದರೆ, ಭಗವಂತನಿಗೆ ಅರ್ಪಿಸಿದ ಎಲೆಗಳನ್ನು ಎಸೆವ ಬದಲು ಪ್ರತಿದಿನ ಸೇವಿಸಬಹುದು. ನೈವೇದ್ಯ ಮಾಡಿದ ನಂತರ ತುಳಸಿಯ ಒಣಗಿದ ಎಲೆಯನ್ನು ಕಷಾಯವಾಗಿ ಬಳಸಬಹುದು. ನೀರಿಗೆ ಹಾಕಿಕೊಂಡು ಕುಡಿದರೆ ನೀರೂ ರುಚಿಯಾಗಿರುತ್ತದೆ. 

Samudrik Shastra: ಅಗಲ ಕಿವಿ ಉಳ್ಳವರು ಅದೃಷ್ಟವಂತರು! ನಿಮ್ಮ ಕಿವಿ ಹೇಗಿದೆ?

ಅಕ್ಷತೆ(Akshat)
ಪೂಜೆಯಲ್ಲಿ ಸಂಪತ್ತು ಮತ್ತು ಆಹಾರದ ಸಂಕೇತವೆಂದು ಪರಿಗಣಿಸಲಾದ ಅಕ್ಷತೆಯು ಪೂಜೆಯ ತಟ್ಟೆಯಲ್ಲಿ ಉಳಿದಿದ್ದರೆ, ಅದನ್ನು ನಿಮ್ಮ ಅಡುಗೆಮನೆಯ ಗೋಧಿ, ಅಕ್ಕಿ ಇತ್ಯಾದಿ ಧಾನ್ಯಗಳಲ್ಲಿ ಮಿಶ್ರಣ ಮಾಡಿ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಮನೆಯು ಯಾವಾಗಲೂ ಆಶೀರ್ವಾದದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ.

ಹೂವು(Flower)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪೂಜೆಯ ನಂತರ ಉಳಿದ ಹೂವುಗಳನ್ನು ಅಲ್ಲಿ ಇಲ್ಲಿ ಎಸೆಯಬಾರದು. ಅವುಗಳನ್ನು ಮಾಲೆ ಕಟ್ಟಿ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ನೇತು ಹಾಕಬೇಕು. ನಂತರ ಬಾಗಿಲಿನ ಮೇಲೆ ಹಾಕಿದ ಹೂವುಗಳು ಸಂಪೂರ್ಣವಾಗಿ ಒಣಗಿದಾಗ, ಅವುಗಳನ್ನು ಹೂವಿನ ಗಿಡದ ಬುಡಕ್ಕೆ ಹಾಕಿ. ಇದರಿಂದ ಹೊಸ ಹೂವಿನ ಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ. 

ಗುರು ಪೂರ್ಣಿಮಾ ಜುಲೈ 2022: ಯಾವಾಗ, ಮಹತ್ವವೇನು? ಆಚರಣೆ ಹೇಗೆ?

ವೀಳ್ಯದೆಲೆ(betel leaves)
ಗಣೇಶನ ಪೂಜೆಯಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಪೂಜೆಯ ಸಮಯದಲ್ಲಿ ವೀಳ್ಯದೆಲೆಯ ಮೇಲೆ ಸ್ವಸ್ತಿಕ ಮಾಡಿಸುವುದನ್ನು ನೀವು ನೋಡಿರಬೇಕು. ಆದರೆ ಪೂಜೆ ಮುಗಿದ ನಂತರ ಈ ವೀಳ್ಯದೆಲೆಯನ್ನು ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಒಂದು ವೇಳೆ ನೀವು ವೀಳ್ಯ ಸೇವನೆ ಮಾಡುವುದಿಲ್ಲವೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆಯ ನಂತರ, ವೀಳ್ಯದೆಲೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿಡಿ. ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios