Asianet Suvarna News Asianet Suvarna News

ಶನಿ ಸಾಡೇಸಾತಿಯ ದುಷ್ಪರಿಣಾಮ ಕಡಿಮೆ ಮಾಡ್ಬೇಕಂದ್ರೆ ಆಷಾಢದಲ್ಲಿ ಹೀಗ್ಮಾಡಿ..

ಶನಿ ದೇವನನ್ನು ಕರ್ಮದ ದೇವರು ಎಂದು ಪರಿಗಣಿಸಲಾಗುತ್ತದೆ. ಅವನು ಜನರಿಗೆ ಅವರ ಕರ್ಮಕ್ಕೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ ಮತ್ತು ಶಿಕ್ಷಿಸುತ್ತಾನೆ. ಶನಿ ದೇವನನ್ನು ಮೆಚ್ಚಿಸಲು ಆಷಾಢದಲ್ಲಿ ಹೀಗೆ ಮಾಡಿ..

Things To Do In Month of Ashadh To Get Rid of Shani Sade Sati skr
Author
Bangalore, First Published Jul 3, 2022, 12:42 PM IST

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಅಂತೆಯೇ ಆಷಾಢ ಮಾಸ(Ashadh masa) ಕೂಡಾ. ಆಷಾಢ ಮಾಸವು ಜೂನ್ 30ರಿಂದ ಪ್ರಾರಂಭವಾಗಿದೆ ಮತ್ತು ಜುಲೈ 28ರವರೆಗೆ ಮುಂದುವರಿಯುತ್ತದೆ. ಈ ಮಾಸದಲ್ಲಿ ಮದುವೆ, ಮುಂಜಿ ಇತ್ಯಾದಿ ಶುಭ ಕಾರ್ಯಗಳು ನಡೆಯುವುದಿಲ್ಲವಾದರೂ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಷಯದಲ್ಲಿ ಆಷಾಢ ಮಾಸವು ಅತ್ಯಂತ ಮಂಗಳಕರವಾಗಿದೆ. ಈ ಮಾಸದಲ್ಲಿ ದೇವಶಯನಿ ಏಕಾದಶಿಯಂದು ಭಗವಾನ್ ವಿಷ್ಣು(Vishnu)ವು ಪಾತಾಳದಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅವನ ನಿರ್ಗಮನದ ಕಾರಣ ಎಲ್ಲಾ ಶುಭ ಕಾರ್ಯಗಳನ್ನು ಮುಂದೂಡಲಾಗಿದೆ. ಆದ್ದರಿಂದ, ಆಷಾಢ ಮಾಸದಲ್ಲಿ ಈಶ್ವರನನ್ನು ಪೂಜಿಸಲಾಗುತ್ತದೆ. 

ಜ್ಯೋತಿಷಿಗಳ ಪ್ರಕಾರ, ನಿಮ್ಮ ಜಾತಕದಲ್ಲಿ ಶನಿ ದೋಷ, ಸಾಡೇ ಸಾತಿ(Sade Saati) ಮತ್ತು ಧೈಯ್ಯ ಸಮಸ್ಯೆಯಿದ್ದರೆ, ಆಷಾಢ ಮಾಸದಲ್ಲಿ ಕೆಲವು ಕಾರ್ಯಗಳನ್ನು ಮಾಡುವುದರಿಂದ ನೀವು ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ಜೊತೆಗೆ ಶನಿ(Shani)ಯ ಸಾಡೇ ಸಾತಿ ಮತ್ತು ಧೈಯ್ಯದ ಕೆಟ್ಟ ಪರಿಣಾಮಗಳನ್ನು ತಗ್ಗಿಸಬಹುದು. ಇದಕ್ಕಾಗಿ ಆಷಾಢ ಮಾಸದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಇಲ್ಲಿವೆ. 

ಶನಿಯ ಸಾಡೇ ಸತಿ ಮತ್ತು ಶನಿಯ ಧೈಯ್ಯಾ
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಜುಲೈ 2021ರಲ್ಲಿ, ಶನಿ(Saturn) ದೇವನು ಮಕರ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ. ಇದರಿಂದ ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಶನಿಯ ಸಾಡೇ ಸಾತಿಯೂ ಮಿಥುನ ಮತ್ತು ತುಲಾ ರಾಶಿಯವರಿಗೆ ಧೈಯ್ಯವೂ ಇರುತ್ತದೆ. ಈ ಪರಿಣಾಮವನ್ನು ತೊಡೆದುಹಾಕಲು, ಶನಿದೇವನನ್ನು ಶನಿವಾರದಂದು ಸಂಪೂರ್ಣ ಆಚರಣೆಗಳೊಂದಿಗೆ ಪೂಜಿಸಬೇಕು.

ಶುಕ್ರ ಸಂಕ್ರಮಣ 2022: 10 ದಿನದಲ್ಲಿ ಬದಲಾಗಲಿದೆ ಈ ನಾಲ್ಕು ರಾಶಿಗಳ ಜೀವನ!

ಹನುಮಾನ್ ಚಾಲೀಸಾ ಪಠಣ
ಮಂಗಳವಾರ ಮತ್ತು ಶನಿವಾರದಂದು ಹನುಮಂತನನ್ನು ಪೂಜಿಸಿ ಹನುಮಾನ್ ಚಾಲೀಸಾ(hanuman chalisa)ವನ್ನು ಪಠಿಸಬೇಕು. ಹನುಮಾನ್ ಆರತಿ ಮತ್ತು ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರಿಂದ ಶನಿ ದೋಷದ ಪರಿಣಾಮವು ಕಡಿಮೆಯಾಗುತ್ತದೆ.

ಸುಂದರಕಾಂಡ ಪಠಣ
ಶನಿವಾರದಂದು ಸುಂದರಕಾಂಡ(Sundarakanda)ವನ್ನು ಪಠಣ ಮಾಡುವುದರಿಂದ ಶ್ರೀರಾಮನ ವಿಶೇಷ ಭಕ್ತನಾದ ಹನುಮಂತನ ಕೃಪೆಯು ಭಕ್ತನ ಮೇಲಿರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಸುಂದರ ಕಾಂಡವು ವಾಲ್ಮೀಕಿಯ ರಾಮಾಯಣದ ಹೃದಯದಂತಿದೆ. ಸುಂದರಕಾಂಡವು ಭಗವಾನ್ ಹನುಮಾನ್ ಮತ್ತು ರಾಮನ ದಂತಕಥೆಗಳಿಗೆ ಸಂಬಂಧಿಸಿದೆ. ಸುಂದರಕಾಂಡವನ್ನು ಪಠಿಸುವುದರಿಂದ ತಮ್ಮ ಜೀವನದಿಂದ ದುಃಖ ಮತ್ತು ಸಮಸ್ಯೆಗಳು ದೂರವಾಗುತ್ತವೆ. ಶನಿ ದೋಷ ಕಡಿಮೆಯಾಗುತ್ತದೆ. ಇದನ್ನು ಓದುವುದರಿಂದ ಶನಿ ದೇವರ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಆತನನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ.

ಕಪ್ಪು ವಸ್ತುಗಳ ದಾನ
ಬಡವರಿಗೆ ಕಪ್ಪು ಧಾನ್ಯಗಳು, ಬಟ್ಟೆ ಮತ್ತು ಸಾಸಿವೆಗಳನ್ನು ದಾನ ಮಾಡುವವರಿಗೆ ಶನಿ ದೇವರು ತನ್ನ ಅನುಗ್ರಹವನ್ನು ನೀಡುತ್ತಾನೆ. ಕರಿ ಎಳ್ಳು, ಉದ್ದಿನಬೇಳೆ ಮತ್ತು ಬೆಲ್ಲವನ್ನು ಹಿಂದುಳಿದವರಿಗೆ ಮತ್ತು ಅಸಹಾಯಕರಿಗೆ ದಾನ ಮಾಡಬಹುದು. ಬಡವರಿಗೆ ಕಪ್ಪು ಹಸುಗಳನ್ನು ದಾನ ಮಾಡಬಹುದು. ಇದು ಖಂಡಿತವಾಗಿಯೂ ಶನಿ ದೋಷದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಆದರೆ ಯಾವುದೇ ಸ್ವಾರ್ಥ ಚಿಂತನೆಗಳಿಲ್ಲದೆ ಶುದ್ಧ ಮನಸ್ಸಿನಿಂದ ಈ ವಸ್ತುಗಳನ್ನು ದಾನ ಮಾಡಬೇಕು.

ಈ ನಾಲ್ಕು ರಾಶಿಯವರ ಫೋನ್‌ನ ಬ್ರೌಸಿಂಗ್ ಹಿಸ್ಟರಿ ನಿಮ್ಗೆ ಆಘಾತ ತರ್ಬೋದು!

ಎಣ್ಣೆ ಅರ್ಪಣೆ
ಶನಿ ದೇವರಿಗೆ ಎಣ್ಣೆಯೆಂದರೆ ಇಷ್ಟ. ಆದ್ದರಿಂದ, ವಿಶೇಷವಾಗಿ ಶನಿವಾರದಂದು ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸಬೇಕು. ಶನಿದೇವನ ಕ್ರೋಧದಿಂದ ನಿಮ್ಮನ್ನು ರಕ್ಷಿಸುವ ಮತ್ತೊಂದು ಪರಿಹಾರ ಇದು. ಶನಿ ದೇವರನ್ನು ಮೆಚ್ಚಿಸಲು ನೀವು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆಯ ದೀಪ ಬೆಳಗಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios