30 ವರ್ಷಗಳ ಬಳಿಕ ಕುಂಭದಲ್ಲಿ ಶನಿ ಜಯಂತಿ; ಈ ಮೂರು ರಾಶಿಗೆ ಮಂಗಳಕರ

ಶನಿ ಜಯಂತಿಯ ದಿನವು ಶನಿ ದೋಷದಿಂದ ಬಳಲುತ್ತಿರುವ ಜನರಿಗೆ ಪರಿಹಾರ ಕೈಗೊಳ್ಳಲು ವಿಶೇಷವಾಗಿದೆ. ಈ ಬಾರಿ ಶನಿ ಜಯಂತಿಯೊಂದು ಯೋಗವೊಂದು ರೂಪುಗೊಳ್ಳುತ್ತಿದ್ದು, ಎರಡು ರಾಶಿಗಳಿಗೆ ವಿಶೇಷ ಫಲ ಸಿಗಲಿದೆ. 

Shani Jayanti 2022 After 30 years a wonderful coincidence is being made on Shani Jayanti skr

ಶನಿ(Saturn) ಎಂದರೆ ಎಲ್ಲರಿಗೂ ಭಯ ಭಕ್ತಿ. ನವಗ್ರಹಗಳಲ್ಲಿ ಆತನ ಸ್ಥಾನ ವಿಶಿಷ್ಠವಾಗಿದೆ. ಏಕೆಂದರೆ ಆತ ಅತ್ಯಂತ ನ್ಯಾಯ ನಿಷ್ಠುರವಾದಿ. ಕರ್ಮಗಳಿಗನುಗುಣವಾಗಿ ಫಲ ನೀಡುವವನು. ಅವನ ಅಂಜಿಕೆಯಿಂದಲೇ ಸಾಕಷ್ಟು ಜನರು ಸರಿಯಾದ ಮಾರ್ಗದಲ್ಲಿ ನಡೆಯುವುದು ಸಾಧ್ಯವಾಗಿದೆ. 

ಶನಿಯು ಸೂರ್ಯ ಮತ್ತು ಛಾಯಾದೇವಿಯ ಮಗನಾಗಿ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಅಮಾವಾಸ್ಯೆ ತಿಥಿಯಂದು ಜನಿಸಿದನು. ಈ ವರ್ಷ ಶನಿ ಜಯಂತಿ(Shani Jayanti)ಯು ಮೇ 30ರಂದು ಬರುತ್ತಿದೆ. ಜ್ಯೋತಿಷ್ಯದಲ್ಲಿ ಶನಿ ಜಯಂತಿಗೆ ವಿಶೇಷ ಮಹತ್ವವಿದೆ. ಈ ವರ್ಷ ಶನಿ ಜಯಂತಿಯಂದು ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಹಾಗಾಗಿ, ಈ ಬಾರಿಯ ಶನಿ ಜಯಂತಿ ಮತ್ತಷ್ಟು ವಿಶೇಷವಾಗಿದೆ. ಇದರಿಂದ ಈ ದಿನ ಕೈಗೊಂಡ ಕ್ರಮಗಳಿಗೆ ದುಪ್ಪಟ್ಟು ಫಲಿತಾಂಶ ಸಿಗುತ್ತದೆ.  ಶನಿಯ ವಕ್ರದೃಷ್ಟಿಗೆ ಒಳಗಾದವರು ಈ ದಿನ ಶನಿ ದೇವರನ್ನು ಪ್ರಾರ್ಥಿಸಿ, ಕಷ್ಟ ನಿವಾರಿಸೆಂದು ಬೇಡಿಕೊಂಡರೆ, ಸಕಲ ಸಮಸ್ಯೆಗಳು ದೂರವಾಗುತ್ತವೆ. 

ಸರ್ವಾರ್ಥ ಸಿದ್ಧಿ ಯೋಗ(Sarvarta siddhi yoga)ದ ರಚನೆ
ಶನಿ ಜಯಂತಿಯ ದಿನದಂದು ಸರ್ವಾರ್ಥ ಸಿದ್ಧಿ ಯೋಗವು ಮೇ 31ರಂದು ಬೆಳಿಗ್ಗೆ 7.13ರಿಂದ ಪ್ರಾರಂಭವಾಗಿ ಸಂಜೆ 5.27ರವರೆಗೆ ಇರುತ್ತದೆ. ಶನಿ ಜಯಂತಿಯಂದು ಶನಿದೇವನ ಅನುಗ್ರಹವನ್ನು ಪಡೆಯಲು, ಈ ಮುಹೂರ್ತದಲ್ಲಿ ಆತನನ್ನು ಪೂಜಿಸುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ. ಇದಲ್ಲದೇ, ಶನಿದೇವನು ಅಂದು ತನ್ನದೇ ಆದ ಸ್ವಂತ ರಾಶಿ ಕುಂಭ ರಾಶಿಯಲ್ಲಿ ಉಳಿಯುತ್ತಾನೆ, ಸುಮಾರು 30 ವರ್ಷಗಳ ನಂತರ ಈ ಕಾಕತಾಳೀಯ ಸಂಭವಿಸುತ್ತಿದೆ. ಈ ಶುಭ ಕಾಕತಾಳೀಯವು ಮೂರು ರಾಶಿಗಳಿಗೆ ಬಹಳ ಮಂಗಳಕರವಾಗಿರುತ್ತದೆ. 

ಮೇಷ(Aries)
ಶನಿ ಜಯಂತಿಯು ನಿಮಗೆ ಮಂಗಳಕರವಾಗಿರುತ್ತದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಚಕ್ರದ 11ನೇ ಮನೆಯಲ್ಲಿ ಸಂಚಾರ ಮಾಡಿದ್ದಾನೆ. ಇದನ್ನು ಲಾಭ ಮತ್ತು ಆದಾಯದ ಸ್ಥಳ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಹಣದ ಆಗಮನದ ಹಾದಿಗಳು ತೆರೆದುಕೊಳ್ಳುತ್ತವೆ. ಹೀಗಾಗಿ, ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ. ವೃತ್ತಿಯಲ್ಲಿ ಉನ್ನತಿಯನ್ನು ಪಡೆಯಬಹುದು. ಹೊಸ ಉದ್ಯೋಗಾವಕಾಶಗಳು ಬರಬಹುದು. ಸದ್ಬಳಕೆ ಮಾಡಿಕೊಳ್ಳಿ.

Shani Jayanti 2022: ಶನಿ ದೇವನ ಬಳಿ ಇದೆ 8 ವಾಹನಗಳು, ಯಾವುದರಲ್ಲಿ ಬಂದರೆ ಏನರ್ಥ?

ವೃಷಭ(Taurus)
ಶನಿ ಜಯಂತಿಯು ವೃಷಭ ರಾಶಿಯವರಿಗೆ ಲಾಭದಾಯಕವಾಗಲಿದೆ. ಶನಿದೇವನು ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿ ಸಾಗಿದ್ದಾನೆ. ಇದನ್ನು ಕಾರ್ಯಕ್ಷೇತ್ರದ ಮನೆ ಎಂದು ಕರೆಯಲಾಗುತ್ತದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಕಾಣುವಿರಿ. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಬಹು ಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿಯಿಂದ ಹೆಚ್ಚಿನ ಲಾಭ ಪಡೆಯುವಿರಿ. ಹೆಸರು, ಗೌರವವೂ ಹಿಂಬಾಲಿಸುವುವು. 

ಧನು(Sagittarius)
ಶನಿ ಜಯಂತಿ ನಿಮಗೆ ವಿಶೇಷವಾಗಲಿದೆ. ಧನು ರಾಶಿಯ ಜನರು ಶನಿಕಾಟದಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ, ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಗೌರವವನ್ನು ಪಡೆಯಬಹುದು. ಯಾವುದೇ ಹಳೆಯ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಕೆಲವು ಬಾಕಿ ಕೆಲಸಗಳನ್ನು ಪೂರ್ಣಗೊಳಿಸಬಹುದು. ಸಹೋದರ ಸಹೋದರಿಯರಿಗೆ ಸಂಪೂರ್ಣ ಬೆಂಬಲ ಸಿಗಲಿದೆ.

ಸೋಮಾವತಿ ಅಮಾವಾಸ್ಯೆಯಂದು ಈ ಯೋಗಗಳ ಸಂಯೋಗ.. ಈ ಕೆಲಸ ಮಾಡಿ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios