Shani Jayanti 2022: ಶನಿ ದೇವನ ಬಳಿ ಇದೆ 8 ವಾಹನಗಳು, ಯಾವುದರಲ್ಲಿ ಬಂದರೆ ಏನರ್ಥ?

ಕಾಗೆಯ ಹೊರತಾಗಿ ಶನಿಯು ಇನ್ನೂ ಕೆಲ ಪ್ರಾಣಿಪಕ್ಷಿಗಳ ಮೇಲೆ ಸವಾರಿ ಮಾಡುತ್ತಾನೆ. ಯಾವುವು ಶನಿದೇವನ 8 ವಾಹನಗಳು? ಪ್ರತಿಯೊಂದು ವಾಹನದ ಮೇಲೆ ಶನಿ ಬಂದಾಗಲೂ ಉದ್ದೇಶ ಬೇರೆಯದೇ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Shani Dev comes riding on 8 types of vehicles know the importance skr

ಸಾಮಾನ್ಯವಾಗಿ  ಹೋಲ್‌ಸೇಲಾಗಿ ತರಕಾರಿ, ದಿನಸಿ ಇತ್ಯಾದಿ ವಸ್ತುಗಳನ್ನು ಅಂಗಡಿಗೆ ತರಲು ಮಾರುಕಟ್ಟೆಗೆ ಹೋದಾಗ ಓಮಿನಿಯೋ, ಆಟೋವನ್ನೋ ಬಳಸುತ್ತೇವೆ. ಅದೇ ನೆಂಟರಿಷ್ಟರ ಮನೆಯ ಕಾರ್ಯಕ್ರಮಕ್ಕೆ ಹೋಗಲು ನಮ್ಮ ಬಳಿ ಇರುವ ಐಶಾರಾಮಿ ಕಾರ್ ಬಳಸುತ್ತೇವೆ. ವಿದೇಶ ಪ್ರವಾಸ ಹೋಗುವುದಾದರೆ ವಿಮಾನ ಬಳಸುತ್ತೇವೆ. ನಮ್ಮ ಹಾಗೆಯೇ ಶನಿದೇವ(Lord Shani) ಕೂಡಾ ಒಂದೊಂದು ಉದ್ದೇಶಕ್ಕೆ ಒಂದೊಂದು ವಾಹನ(Vehicle) ಬಳಸುತ್ತಾನೆ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. 

ಹೌದು, ಸಾಮಾನ್ಯವಾಗಿ ಶನಿಯ ವಾಹನ ಕಾಗೆ(Crow) ಎಂಬುದು ಎಲ್ಲರಿಗೂ ಗೊತ್ತು. ಆದರೆ, ಶನಿಯು ಅದರ ಹೊರತಾಗಿ ಇನ್ನೂ ಏಳು ವಾಹನಗಳನ್ನು ತನ್ನ ವಿವಿಧ ಕೆಲಸಗಳಿಗಾಗಿ ಬಳಸುತ್ತಾನೆಂಬುದು ನಿಮಗೆ ಗೊತ್ತೇ? ಈ ಬಗ್ಗೆ ಶಿವ ಚಾಲೀಸಾದಲ್ಲಿ ಹೇಳಲಾಗಿದೆ. ಶನಿದೇವನು 8 ವಾಹನಗಳ ಮೇಲೆ ಬರುತ್ತಾನೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಕೂಡಾ ಬರೆಯಲಾಗಿದೆ. 

ಶನಿ ಜಯಂತಿ(Shani Jayanti)ಯ ವಿಶೇಷ ಮಹತ್ವವನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಈ ಬಾರಿಯ ಶನಿ ಜಯಂತಿ ಮೇ 30 ಸೋಮವಾರ(Monday)ದಂದು ಬರುತ್ತಿದೆ. ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಅಮಾವಾಸ್ಯೆ ತಿಥಿಯಂದು ಜನಿಸಿದನು. ಶನಿಯನ್ನು ನ್ಯಾಯಾಧೀಶ ಎಂದು ಕರೆಯಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಶನಿದೇವನು ಮನುಷ್ಯರ ಕೆಟ್ಟ ಕೆಲಸ, ವರ್ತನೆಗಳಿಗೆ ಶಿಕ್ಷಿಸುತ್ತಾನೆ. ಅಂತೆಯೇ ಒಳ್ಳೆಯ ಕೆಲಸಕ್ಕಾಗಿ ಒಳಿತನ್ನು ನೀಡುತ್ತಾನೆ. ಶನಿ ಬಳಸುವ ಪ್ರತಿಯೊಂದು ವಾಹನ ಅಥವಾ ಸವಾರಿಯು ವಿಶೇಷ ಮಹತ್ವವನ್ನು ಹೊಂದಿದೆ. ಆಯಾ ಫಲ ನೀಡುವುದಕ್ಕೆ ಅನುಸಾರವಾಗಿ ಆತ ಒಂದೊಂದು ವಾಹನವನ್ನು ಬಳಸುತ್ತಾನೆ. ಶನಿದೇವನು ಯಾವುದೇ ರಾಶಿಯಲ್ಲಿ ಸಂಚರಿಸುವ ವಾಹನದ ಪ್ರಕಾರ, ಆ ರಾಶಿಯ ಜನರು ಶುಭ ಮತ್ತು ಅಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ಶನಿ ಜಯಂತಿ 2022: ಈ ದಿನ ಪೂಜೆಯಲ್ಲಿ ಈ ಕೆಲಸ ಮಾಡಬೇಡಿ, 10 ವಿಷಯ ಸದಾ ನೆನಪಿಡಿ

ಶಿವ ಚಾಲೀಸಾ ಶನಿದೇವನ ವಾಹನಗಳ ಬಗ್ಗೆ ಬರೆದಿದೆ. ಇಲ್ಲಿ ಒಂದು ಮಂತ್ರವಿದೆ. ಅದರರ್ಥ ಶನಿದೇವನ 7 ವಾಹನಗಳಿವೆ - ಆನೆ, ಕತ್ತೆ, ಜಿಂಕೆ, ನಾಯಿ, ನರಿ, ಸಿಂಹ ಮತ್ತು ರಣಹದ್ದು. ಇದಲ್ಲದೆ ಕಾಗೆಗಳನ್ನೂ ಶನಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಶನಿ ಯಾವ ವಾಹನದಲ್ಲಿ ಬಂದರೆ ಏನು ಫಲ ನೋಡೋಣ. 

ಕಾಗೆ: ಶನಿದೇವನು ಕಾಗೆಯ ಮೇಲೆ ಸವಾರಿ ಮಾಡುವ ಮೂಲಕ ವ್ಯಕ್ತಿಯ ಎಲ್ಲ ದುಃಖಗಳನ್ನು ತೊಡೆದುಹಾಕುತ್ತಾನೆ ಮತ್ತು ರೋಗಗಳಿಂದ ಮುಕ್ತಿ ನೀಡುತ್ತಾನೆ.
ನರಿ(jackal): ಶನಿದೇವನು ನರಿಯ ಮೇಲೆ ಸವಾರಿ ಮಾಡುವಾಗ ಆ ರಾಶಿಯ ಸ್ಥಳೀಯರ ಬುದ್ಧಿಶಕ್ತಿಯು ನಾಶವಾಗುತ್ತದೆ ಮತ್ತು ಈ ವಾಹನದಲ್ಲಿ ಶನಿದೇವನು ಸವಾರಿ ಮಾಡುವ ರಾಶಿಯಲ್ಲಿ ಸಂಪತ್ತು ಮತ್ತು ಗೌರವವೂ ನಾಶವಾಗುತ್ತದೆ.
ಆನೆ(elephant): ಶನಿದೇವನು ಆನೆಯ ಮೇಲೆ ಸವಾರಿ ಮಾಡುತ್ತಾ ಯಾರೊಬ್ಬರ ರಾಶಿಯನ್ನು ಪ್ರವೇಶಿಸಿದಾಗ, ಆ ರಾಶಿಯವನ ಸಂಪತ್ತು ಮತ್ತು ಗೌರವ ಹೆಚ್ಚುತ್ತದೆ.
ಕತ್ತೆ(donkey): ಶನಿದೇವನು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಯಾವುದೇ ರಾಶಿಗೆ ಪ್ರವೇಶಿಸಿದಾಗ, ಆ ರಾಶಿಯ ಜನರು ಮಾಡುವ ಕೆಲಸವೂ ಹಾಳಾಗುತ್ತದೆ ಮತ್ತು ಅವರು ಧನ ನಷ್ಟವನ್ನು ಎದುರಿಸಬೇಕಾಗುತ್ತದೆ.

ಸೋಮಾವತಿ ಅಮಾವಾಸ್ಯೆಯಂದು ಈ ಯೋಗಗಳ ಸಂಯೋಗ.. ಈ ಕೆಲಸ ಮಾಡಿ

ಜಿಂಕೆ(deer): ಶನಿ ದೇವನು ಜಿಂಕೆಯ ಮೇಲೆ ಸವಾರಿ ಮಾಡುತ್ತಾ ಯಾವುದಾದರೂ ರಾಶಿಗೆ ಪ್ರವೇಶಿಸಿದಾಗ, ಆ ರಾಶಿಯವನು ಮರಣವನ್ನು ಎದುರಿಸಬೇಕಾಗುತ್ತದೆ, ಅಂದರೆ, ಅವನು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ರಣಹದ್ದು(Vulture): ಶನಿದೇವನು ರಣಹದ್ದುಗಳ ಮೇಲೆ ಸವಾರಿ ಮಾಡಿ ಯಾವುದಾದರೂ ರಾಶಿಗೆ ಹೋದಾಗ ಅನೇಕ ರೋಗಗಳು ವ್ಯಕ್ತಿಯನ್ನು ಸುತ್ತುವರೆಯುತ್ತವೆ.
ನಾಯಿ(dog): ನಾಯಿಯು ಭೈರವದೇವನ ಸವಾರಿ, ಆದರೆ ಶನಿದೇವನು ಅದರ ಮೇಲೆ ಸವಾರಿ ಮಾಡಿದಾಗ ಮತ್ತು ಯಾವುದೇ ರಾಶಿಯಲ್ಲಿ ಹೋದಾಗ, ಆ ರಾಶಿಯವನು ಸಂಪತ್ತನ್ನು ಪಡೆಯುತ್ತಾನೆ.

Latest Videos
Follow Us:
Download App:
  • android
  • ios