Asianet Suvarna News Asianet Suvarna News

ಸೀತೆ ಹುಟ್ಟಿದ ಊರಿಂದ ಅಯೋಧ್ಯೆಗೆ ಬಂದ ಪವಿತ್ರ ಬಂಡೆಕಲ್ಲು: ರಾಮ - ಜಾನಕಿ ವಿಗ್ರಹಕ್ಕೆ ಬಳಕೆ..!

ಈ ಬಂಡೆಗಳನ್ನು ರಾಮ ಮತ್ತು ಜಾನಕಿ ಮೂರ್ತಿಗಳ ನಿರ್ಮಾಣಕ್ಕೆ ಬಳಸಿಕೊಳ್ಳುವ ನಿರೀಕ್ಷೆ ಇದ್ದು, ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮುಖ್ಯ ದೇವಾಲಯದ ಸಂಕೀರ್ಣದಲ್ಲಿ ಇದನ್ನು ಇರಿಸಲಾಗುವುದು ಎಂದು ತಿಳಿದುಬಂದಿದೆ.

shaligram stones from nepal janakpur reach ayodhya likely to be used for rams idol ash
Author
First Published Feb 2, 2023, 4:45 PM IST

ಅಯೋಧ್ಯೆ (ಫೆಬ್ರವರಿ 2, 2023): ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಉದ್ಘಾಟನೆಗೂ ಡೇಟ್ ಫಿಕ್ಸ್ ಮಾಡಲಾಗಿದೆ. ಈ ರಾಮ ಮಂದಿರ ದೇಗುಲಕ್ಕೆ ಸೀತೆಯ ತವರು ನೇಪಾಳದಿಂದ ರವಾನೆಯಾದ ಎರಡು ಶಾಲಿಗ್ರಾಮ (ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿನ ಮಾನವರೂಪವಲ್ಲದ ರೂಪ) ಕಲ್ಲುಗಳು ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಬಂದು ತಲುಪಿವೆ. ಈ ಹಿನ್ನೆಲೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸುವ ಮೊದಲು ಹಿಂದೂ ದೇವರು ಭಗವಾನ್ ರಾಮನ ಜನ್ಮಸ್ಥಳದಲ್ಲಿ ಪವಿತ್ರ ಕಲ್ಲುಗಳನ್ನು ಅರ್ಚಕರು ಮತ್ತು ಸ್ಥಳೀಯರು ಬಂಡೆಗಳನ್ನು ಹೂಮಾಲೆಯಿಂದ ಅಲಂಕರಿಸಿ ಧಾರ್ಮಿಕ ವಿಧಿಗಳನ್ನು ಅರ್ಪಿಸಿ ಸ್ವಾಗತಿಸಿದ್ದಾರೆ. ಈ ಬಂಡೆಗಳನ್ನು ರಾಮ ಮತ್ತು ಜಾನಕಿ ಮೂರ್ತಿಗಳ ನಿರ್ಮಾಣಕ್ಕೆ ಬಳಸಿಕೊಳ್ಳುವ ನಿರೀಕ್ಷೆ ಇದ್ದು, ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮುಖ್ಯ ದೇವಾಲಯದ ಸಂಕೀರ್ಣದಲ್ಲಿ ಇದನ್ನು ಇರಿಸಲಾಗುವುದು ಎಂದು ತಿಳಿದುಬಂದಿದೆ.

ಮಯಾಗಡಿ ಮತ್ತು ಮುಸ್ತಾಂಗ್ ಜಿಲ್ಲೆಗಳ ಮೂಲಕ ಹರಿಯುವ ಕಾಳಿ ಗಂಡಕಿ ನದಿಯ (Kali Gandaki River) ದಡದಲ್ಲಿ ಮಾತ್ರ ಕಂಡುಬರುವ ಶಾಲಿಗ್ರಾಮ (Shaligram) ಬಂಡೆ ಕಲ್ಲುಗಳು ಸೀತೆಯ ಜನ್ಮಸ್ಥಳವಾದ (Sita Birth Place)ನೇಪಾಳದ (Nepal) ಜನಕಪುರದಿಂದ (Janakpur) ಭಾರಿ ಗಾತ್ರದ ಟ್ರಕ್‌ಗಳಲ್ಲಿ ಅಯೋಧ್ಯೆಯನ್ನು (Ayodhya) ತಲುಪಿದರು. ಶಾಲಿಗ್ರಾಮ ಕಲ್ಲುಗಳು ಬುಧವಾರ ಗೋರಖ್‌ಪುರ (Gorakhpur) ತಲುಪಿದ್ದು, ಅಲ್ಲಿ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಇದನ್ನು ಓದಿ: ಸೀತಾರಾಮನ ಮೂರ್ತಿಗಾಗಿ ನೇಪಾಳದಿಂದ ಅಯೋಧ್ಯೆಗೆ ಹೊರಟ ವಿಶೇಷ ಶಿಲೆ

ನೇಪಾಳದಲ್ಲಿ ಕಾಳಿ ಗಂಡಕಿ ಎಂಬ ಹೆಸರಿನ ಜಲಪಾತವಿದೆ. ಇದು ದಾಮೋದರ್ ಕುಂಡ್‌ನಿಂದ ಹುಟ್ಟುತ್ತದೆ ಮತ್ತು ಗಣೇಶ್ವರ ಧಾಮ್ ಗಂಡ್ಕಿಯಿಂದ ಉತ್ತರಕ್ಕೆ 85 ಕಿಮೀ ದೂರದಲ್ಲಿದೆ. ಈ ಎರಡೂ ಬಂಡೆಗಳನ್ನು ಅಲ್ಲಿಂದ ತರಲಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 6,000 ಅಡಿ ಎತ್ತರದಲ್ಲಿದ್ದು, ಇದು ಕೋಟ್ಯಂತರ ವರ್ಷಗಳಷ್ಟು ಹಳೆಯದು ಎಂದು ಜನರು ಹೇಳುತ್ತಾರೆ ಎಂದೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ನೇಪಾಳ ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪಪ್ರಧಾನಿ ಬಿಮಲೇಂದ್ರ ನಿಧಿ ಅವರು ಸೀತೆಯ ಜನ್ಮಸ್ಥಳವಾದ ಜನಕಪುರದವರಾಗಿದ್ದು, ಜಾನಕಿ ದೇವಸ್ಥಾನದೊಂದಿಗೆ ಮಾತುಕತೆ ನಡೆಸಿ, ಶಾಲಿಗ್ರಾಮ ಬಂಡೆಗಳು ಹೇರಳವಾಗಿ ಕಂಡುಬರುವ ಕಾಳಿ ಗಂಡಕಿ ನದಿಯಿಂದ ಎರಡು ಬಂಡೆ ಕಲ್ಲುಗಳನ್ನು ಕಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಎರಡು ಪವಿತ್ರ ಬಂಡೆ ಕಲ್ಲುಗಳುಲ್ಲಿ ಒಂದು 18 ಟನ್ ತೂಕ ಮತ್ತು ಇನ್ನೊಂದು 16 ಟನ್ ತೂಕವಿದ್ದು, ವಿಗ್ರಹವನ್ನು ತಯಾರಿಸಲು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಅನುಮೋದಿಸಲಾಗಿದೆ ಎಂದು ನೇಪಾಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ,ಅಯೋಧ್ಯೆ, ಜನಕಪುರ ರೈಲು ಟಿಕೆಟ್ ಬೆಲೆ 39,995 ರೂ; 7 ದಿನದ ಪ್ರಯಾಣಕ್ಕೆ ಇಎಂಐ ಸೌಲಭ್ಯ!

ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಬಿಹಾರದ ಮಧುಬನಿಯ ಪಿಪ್ರೌನ್ ಗಿರ್ಜಸ್ಥಾನದ ಮೂಲಕ ಬಂಡೆ ಕಲ್ಲುಗಳು ಪ್ರಯಾಣಿಸಿದ್ದು, ಮತ್ತು ಅಯೋಧ್ಯೆಯನ್ನು ತಲುಪುವ ಮೊದಲು ಮುಜಾಫರ್‌ಪುರ ಮತ್ತು ಗೋರಖ್‌ಪುರ ಎಂಬ ಎರಡು ಸ್ಥಳಗಳಲ್ಲಿ ರಾತ್ರಿ ನಿಲ್ಲಿಸಲಾಗಿತ್ತು ಎಂದೂ ತಿಳಿದುಬಂದಿದೆ. ಇನ್ನು, ರಾಮಮಂದಿರ ಟ್ರಸ್ಟ್‌ನ ನಿರ್ದಿಷ್ಟತೆಯಂತೆ ಜಾನಕಿ ದೇವಾಲಯವು ಅಯೋಧ್ಯೆಯ ರಾಮಮಂದಿರಕ್ಕೆ ಬಿಲ್ಲನ್ನು ಸಹ ಕಳುಹಿಸುತ್ತದೆ ಎಂದೂ ನೇಪಾಳಿ ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.

ಇದನ್ನೂ ಓದಿ; ಅಯೋಧ್ಯೆಯ ಹೆಬ್ಬಾಗಿಲುಗಳಿಗೆ ರಾಮಾಯಣದ ಪಾತ್ರಗಳ ಹೆಸರು

Follow Us:
Download App:
  • android
  • ios