Asianet Suvarna News Asianet Suvarna News

ಸೀತಾರಾಮನ ಮೂರ್ತಿಗಾಗಿ ನೇಪಾಳದಿಂದ ಅಯೋಧ್ಯೆಗೆ ಹೊರಟ ವಿಶೇಷ ಶಿಲೆ

ನೇಪಾಳದಿಂದ ಗಂಡಕಿ ನದಿಯಿಂದ ವಿಶೇಷ ಶಿಲೆಯನ್ನು ತೆಗೆದುಕೊಂಡು ಬರಲು ತಂಡವೊಂದು ಹೋಗಿದ್ದು, ಜನವರಿ 28 ರಂದು ಈ ತಂಡ ಈ ಪವಿತ್ರ ಶಿಲೆಗಳೊಂದಿಗೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯನ್ನು ತಲುಪಲಿದೆ.

Saligram Shilas for Lord Shri Ram and sita mata Idols coming from nepal it will reach ayodhya on jan 28th akb
Author
First Published Jan 26, 2023, 5:00 PM IST

ನೇಪಾಳ:  ಹಲವು ದಶಕಗಳ ಕಾನೂನು ಹೋರಾಟದ ಬಳಿಕ ಅಯೋಧ್ಯೆಯಲ್ಲಿ ಮಾರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ಮಂದಿರದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಉದ್ದೇಶಿಸಲಾದ ಶ್ರೀರಾಮಚಂದ್ರ ಹಾಗೂ ಸೀತೆಯ ಮೂರ್ತಿಯನ್ನು ನಿರ್ಮಾಣ ಮಾಡಲು  ನೇಪಾಳದಿಂದ ಗಂಡಕಿ ನದಿಯಿಂದ ವಿಶೇಷ ಶಿಲೆಯನ್ನು ತೆಗೆದುಕೊಂಡು ಬರಲು ತಂಡವೊಂದು ಹೋಗಿದ್ದು, ಜನವರಿ 28 ರಂದು ಈ ತಂಡ ಈ ಪವಿತ್ರ ಶಿಲೆಗಳೊಂದಿಗೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯನ್ನು ತಲುಪಲಿದೆ.

ನೇಪಾಳದ (Nepal) ಮುಕ್ತಿನಾಥದಲ್ಲಿ ಗಂಡಕಿ (Gandaki) ನದಿಯಲ್ಲಿ  ಪತ್ತೆಯಾದ ಬೃಹತ್ ಗಾತ್ರದ ಎರಡು ಶಿಲೆಗಳನ್ನು ನೇಪಾಳದಿಂದ ಭಾರತದ ಅಯೋಧ್ಯೆಗೆ ಕಳುಹಿಸಲಾಗಿದೆ.  ಈ ಶಿಲೆಗಳನ್ನು ಸಾಲಿಗ್ರಾಮ ಎಂದು ಕರೆಯಲಾಗಿದ್ದು,  ಈ ಸಾಲಿಗ್ರಾಮವೂ ಮಹಾವಿಷ್ಣುವನ್ನು ಪ್ರತಿನಿಧಿಸುತ್ತದೆ.  ಇಂತಹ ಸಾಲಿಗ್ರಾಮ (Saligram) ಶಿಲೆಯಿಂದ ಕೆತ್ತಲ್ಪಡುವ ರಾಮ ಹಾಗೂ ಸೀತೆಯ ವಿಗ್ರಹಗಳು ಮುಂದಿನ ವರ್ಷದ ಜನವರಿಯಲ್ಲಿ ಸಂಕ್ರಾಂತಿ  ವೇಳೆಗೆ ಸಿದ್ಧಗೊಳ್ಳಲಿವೆ. 

ನಮಗೆ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಅಲ್ಲ, ರಾಮ ರಾಜ್ಯ ಕಟ್ಟುವ ಕನಸು ಇದೆ: ಪೇಜಾವರ ಶ್ರೀ

ಹಿಂದೂ ಆಧ್ಯಾತ್ಮದ ನಂಬಿಕೆಯ ಪ್ರಕಾರ ದೇವಿ ಸೀತಾಮಾತೆ, ನೇಪಾಳದ ರಾಜ ಜನಕರಾಯನ ಮಗಳು( Daughter of Janak). ಅಯೋಧ್ಯೆಯ ರಾಜ ಶ್ರೀರಾಮಚಂದ್ರನ ಜೊತೆ ನೇಪಾಳದ ರಾಜ ಜನಕನ ಮಗಳನ್ನು ಕೊಟ್ಟು ಮದುವೆ ಮಾಡಲಾಗಿತ್ತು.  ರಾಮನ ಹುಟ್ಟುಹಬ್ಬವನ್ನು ರಾಮನವಮಿಯಂದು (Ramanavami) ಆಚರಿಸುವಂತೆ ನೇಪಾಳದ ಜಾನಕಪುರದ ಜನ ರಾಮ ಹಾಗೂ ಸೀತೆಯ ಕಲ್ಯಾಣೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸುತ್ತಾರೆ.  ಇದು ಸಾಮಾನ್ಯವಾಗಿ ನವಂಬರ್ ಹಾಗೂ ಡಿಸೆಂಬರ್ ಮಧ್ಯೆ ಬರುವ ಶುಕ್ಲಾ ಪಕ್ಷದ 5ನೇ ದಿನ ಈ ಸೀತಾರಾಮರ ಕಲ್ಯಾಣೋತ್ಸವ ನಡೆಯುತ್ತದೆ. 

ನೇಪಾಳದಿಂದ ವಿಶೇಷ ಶಿಲೆಯನ್ನು ತರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮಜನ್ಮಭೂಮಿಯ ರಾಮಮಂದಿರ ಟ್ರಸ್ಟ್‌ನ ಮೇಲುಸ್ತುವಾರಿ ಪ್ರಕಾಶ್ ಗುಪ್ತ (Prakash Gupta) ಅವರು, ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ (Rajendra Singh Pankaj) ಅವರು  ಬುಧವಾರ ನೇಪಾಳದ ಮುಸ್ತಾಂಗ್ ಜಿಲ್ಲೆಗೆ ಭೇಟಿ ನೀಡಿ,  ಈ ವಿಶೇಷ ಪ್ರತಿಮೆಗಳನ್ನು ಅಯೋಧ್ಯೆಗೆ ತರುವ ಕಾರ್ಯದ ಮುಂದಾಳತ್ವ ವಹಿಸಿದ್ದಾರೆ.  ಜನವರಿ 28 ರಂದು ಅವರು ಈ ಪವಿತ್ರ ಶಿಲೆಗಳೊಂದಿಗೆ ಅಯೋಧ್ಯೆಯನ್ನು ತಲುಪಲಿದ್ದಾರೆ ಎಂದು ಹೇಳಿದರು.

ರಾಮಮಂದಿರ ಜೊತೆ ರಾಮ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ, ಮೋದಿಗೆ ಪೇಜಾವರ ಶ್ರೀ ಸೂಚನೆ

ಈ ಎರಡು ಶಿಲೆಗಳು ಐದರಿಂದ ಆರು ಅಡಿ ಎತ್ತರವಿದ್ದು, 4 ಅಡಿ ಅಗಲವಿದೆ.  ರಾಮಲಲ್ಲಾನ ಮೂರ್ತಿಯನ್ನು ಈ ಶಿಲೆಯಿಂದ ಕೆತ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು.  ರಾಮಲಲ್ಲಾನ ಜೊತೆ ಸೀತಾದೇವಿಯ ಪ್ರತಿಮೆಯನ್ನು ಕೂಡ ಇದೇ ಶಿಲೆಯಿಂದ ಕೆತ್ತಿ ಗರ್ಭಗುಡಿಯಲ್ಲಿ (sanctum) ಜೊತೆಗೆ ಪ್ರತಿಷ್ಠಾಪಿಸಲಾಗುವುದು ಎಂದು ಪ್ರಕಾಶ್ ಗುಪ್ತ ಹೇಳಿದ್ದಾರೆ.  ಮುಂದಿನ ವರ್ಷ  2024ರ ಮಕರ ಸಂಕ್ರಾಂತಿಯಂದು ಈ ಪ್ರತಿಮೆಯನ್ನು ಶ್ರೀರಾಮನ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು.  ನೇಪಾಳದಿಂದ ಹೊರಡುವ ಮೊದಲು ಈ ಶಿಲೆಗೆ ಶಿಲಾ ಪೂಜೆ ನಡೆಸಲಾಗುವುದು. ಈ ಎರಡು ಶಿಲೆಗಳು 12 ರಿಂದ 18 ಟನ್ ತೂಕವಿದೆ ಎಂದು ಅವರು ಹೇಳಿದ್ದಾರೆ. 

Follow Us:
Download App:
  • android
  • ios