ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆ ನಗರಕ್ಕೆ ವಿವಿಧ ಸ್ಥಳಗಳಿಂದ ಬರುವ ಭಕ್ತರನ್ನು ಸ್ವಾಗತಿಸಲು ಬೃಹತ್ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಈ ದ್ವಾರಗಳಿಗೆ ರಾಮಾಯಣದ ಪಾತ್ರಗಳ ಹೆಸರಿಂದ ನಾಮಕರಣ ಮಾಡಲಾಗುತ್ತಿದೆ.
ಅಯೋಧ್ಯೆ: ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆ ನಗರಕ್ಕೆ ವಿವಿಧ ಸ್ಥಳಗಳಿಂದ ಬರುವ ಭಕ್ತರನ್ನು ಸ್ವಾಗತಿಸಲು ಬೃಹತ್ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಈ ದ್ವಾರಗಳಿಗೆ ರಾಮಾಯಣದ ಪಾತ್ರಗಳ ಹೆಸರಿಂದ ನಾಮಕರಣ ಮಾಡಲಾಗುತ್ತಿದೆ. ಲಖನೌ ಕಡೆಯಿಂದ ಅಯೋಧ್ಯೆಯನ್ನು ಪ್ರವೇಶಿಸುವ ಭಕ್ತರು 'ಶ್ರೀರಾಮ ದ್ವಾರ'ದ ಮೂಲಕ ಹಾದು ಬರಲಿದ್ದಾರೆ. ಅದೇ ರೀತಿ ಗೋರಖ್‌ಪುರ ರಸ್ತೆಯಲ್ಲಿರುವ ದ್ವಾರಕ್ಕೆ ‘ಹನುಮಾನ್ ದ್ವಾರ’, ಅಲಹಾಬಾದ್ ರಸ್ತೆಗೆ ‘ಭರತ ದ್ವಾರ’, ಗೊಂಡಾ ರಸ್ತೆಗೆ ‘ಲಕ್ಷ್ಮಣ ದ್ವಾರ’, ವಾರಾಣಸಿ ರಸ್ತೆಗೆ ‘ಜಟಾಯು ದ್ವಾರ’ ಮತ್ತು ರಾಯ್‌ಬರೇಲಿ ರಸ್ತೆಯಲ್ಲಿರುವ ದ್ವಾರಕ್ಕೆ ‘ಗರುಡ ದ್ವಾರ’ ಎಂದು ಹೆಸರಿಡಲಾಗುತ್ತದೆ. ಅಯೋಧ್ಯೆಯಲ್ಲಿ ಜಾಗತಿಕ ಗುಣಮಟ್ಟದ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
