ಶನಿ ಗೋಚಾರ: 3 ರಾಶಿಗಳ ಜಾತಕದಲ್ಲಿ ಉಂಟಾಗುತ್ತಿದೆ ಮಹಾಪುರುಷ ರಾಜಯೋಗ!
ಶನಿ ಗೋಚಾರದಿಂದಾಗಿ ಈ 3 ರಾಶಿಗಳ ಜಾತಕದಲ್ಲಿ ಶನಿದೇವನು ಮಹಾಪುರುಷ ಎಂಬ ರಾಜಯೋಗವನ್ನು ಮಾಡುತ್ತಿದ್ದಾನೆ. ಇವರಿಗೆ ಅಕ್ಟೋಬರ್‌ವರೆಗಿನ ಸಮಯವು ತುಂಬಾ ಶುಭಕರವಾಗಿರಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ಎರಡೂವರೆ ವರ್ಷಗಳ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ, ವಿಶೇಷ ಸನ್ನಿವೇಶದಲ್ಲಿ ಇದಕ್ಕೂ ಮುನ್ನವೇ ಶನಿಯ ಸಂಚಾರವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜುಲೈ 12, 2022 ರಿಂದ, ಶನಿದೇವನು ಮಕರ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಕುಳಿತಿದ್ದಾನೆ. ಶನಿದೇವನು 23 ಅಕ್ಟೋಬರ್ 2022ರವರೆಗೆ ಈ ವಕ್ರಿ ರೂಪದಲ್ಲಿರುತ್ತಾನೆ. ಆದರೆ, ಜನವರಿ 17, 2023ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಶನಿದೇವನು 3 ರಾಶಿಚಕ್ರಗಳ ಜಾತಕದಲ್ಲಿ ರಾಜಯೋಗವನ್ನು ಉಂಟು ಮಾಡಿರುತ್ತಾನೆ.
ರಾಜಯೋಗಗಳು ಶುಭ ಯೋಗಗಳಾಗಿದ್ದು, ವೃತ್ತಿ ಅಥವಾ ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತವೆ. ವಿಶೇಷವಾಗಿ ರಾಜಯೋಗಗಳನ್ನು ಉಂಟು ಮಾಡುವ ಗ್ರಹಗಳ ದಶಾ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಆರ್ಥಿಕ ಸಮೃದ್ಧಿಯನ್ನು ನೀಡುತ್ತವೆ. ಆದಾಗ್ಯೂ, ಈ ಫಲಿತಾಂಶಗಳು ಇತರ ಅಶುಭ ಅರಿಸ್ಟಾ ಯೋಗಗಳ ಉಪಸ್ಥಿತಿಯಿಂದ ಪ್ರತಿಕೂಲವಾಗಿ ಮಾರ್ಪಡಿಸಲ್ಪಡಬಹುದು. ಮೂಲಭೂತವಾಗಿ, ಯೋಗ ಅಥವಾ ರಾಜಯೋಗ ಉಂಟು ಮಾಡುವ ಗ್ರಹಗಳು ತಮ್ಮ ದಶಾಗಳ ಅವಧಿಯಲ್ಲಿ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ. ಲಗ್ನ, 3, 6, 8, 9 ಮತ್ತು 12 ನೇ ಮನೆಗಳು ಯಾವುದೇ ಗ್ರಹದಿಂದ ಆಕ್ರಮಿಸಲ್ಪಡದಿದ್ದಲ್ಲಿ ವ್ಯಕ್ತಿಯು ಯೋಗ ಮತ್ತು ರಾಜಯೋಗವನ್ನು ಆನಂದಿಸುತ್ತಾ ಆರೋಗ್ಯವಂತನಾಗಿ, ಶ್ರೀಮಂತನಾಗಿ, ಸಂತೋಷದಿಂದ ಮತ್ತು ಯಶಸ್ವಿಯಾಗುತ್ತಾನೆ.
ಈಗ ಶನಿಯಿಂದ ಉಂಟಾಗುತ್ತಿರುವ ರಾಜಯೋಗವು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಶನಿದೇವನಿಂದ ರಚಿಸಲ್ಪಟ್ಟ ಮಹಾಪುರುಷ ರಾಜಯೋಗ 3 ರಾಶಿಚಕ್ರಗಳಿಗೆ ಅಪಾರ ಲಾಭ ತಂದುಕೊಡಲಿದೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ನೋಡೋಣ.
ಮಿಥುನ(Gemini)
ಶನಿ ದೇವನಿಂದ ಸೃಷ್ಟಿಯಾದ ಮಹಾಪುರುಷ ಯೋಗದ ಪ್ರಭಾವದಿಂದಾಗಿ, ಮಿಥುನ ರಾಶಿಯವರು ವೃತ್ತಿ ಮತ್ತು ಉದ್ಯೋಗದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಬಹುದು. ವ್ಯಾಪಾರ ಮಾಡುವ ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದ ಸಿಗಲಿದೆ. ಅಕ್ಟೋಬರ್‌ವರೆಗಿನ ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭವನ್ನು ಪಡೆಯಬಹುದು. ನೀವು ರಾಜಕೀಯ ಜೀವನದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರದಲ್ಲಿ ಇತರ ಮೂಲಗಳಿಂದ ಆರ್ಥಿಕ ಲಾಭಗಳಿರುತ್ತವೆ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭ ಪಡೆಯಬಹುದು. ಹೊಸ ಉದ್ಯೋಗ ಪ್ರಸ್ತಾಪವನ್ನು ಸಹ ಪಡೆಯಬಹುದು.
ಜುಲೈ 29ರಿಂದ 5 ತಿಂಗಳು ಗುರು ವಕ್ರಿ; ಈ ಐದು ರಾಶಿಗಳು ಕೈ ಇಟ್ಟಿದ್ದೆಲ್ಲ ಚಿನ್ನ
ಮೇಷ ರಾಶಿ(Aries)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಾಪುರುಷ ಯೋಗವು ಮೇಷ ರಾಶಿಯವರಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತದೆ. ಈ ಯೋಗದ ಶುಭ ಪರಿಣಾಮದಿಂದಾಗಿ, ಹಠಾತ್ ಧನಲಾಭ ಇರುವುದು. ರಾಜಕೀಯದಲ್ಲಿರುವವರು ಈ ಯೋಗದಿಂದ ವಿಶೇಷ ಲಾಭ ಪಡೆಯುತ್ತಾರೆ. ಅಲ್ಲದೆ, ಈ ಅವಧಿಯಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಇದಲ್ಲದೇ ಉದ್ಯೋಗದಲ್ಲಿರುವವರು ಬಡ್ತಿಯ ಲಾಭ ಪಡೆಯಬಹುದು. ಒಟ್ಟಾರೆಯಾಗಿ, ಅಕ್ಟೋಬರ್ ವರೆಗಿನ ಸಮಯವು ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಕನ್ಯಾ ರಾಶಿ(Virgo)
ಜ್ಯೋತಿಷ್ಯದ ಪ್ರಕಾರ, ಶನಿಯ ಈ ರಾಜಯೋಗವು ಕನ್ಯಾ ರಾಶಿಯವರಿಗೆ ಹಠಾತ್ ಲಾಭವನ್ನು ನೀಡುತ್ತದೆ. ನೀವು ಬಹುತೇಕ ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸ್ಥಗಿತಗೊಂಡ ಕಾಮಗಾರಿಗಳಲ್ಲಿ ಪ್ರಗತಿ ಕಂಡುಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ಪ್ರಯಾಣದಿಂದ ಹಣ ಲಾಭವಿದೆ. ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.
Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.