ಜುಲೈ 29ರಿಂದ 5 ತಿಂಗಳು ಗುರು ವಕ್ರಿ; ಈ ಐದು ರಾಶಿಗಳು ಕೈ ಇಟ್ಟಿದ್ದೆಲ್ಲ ಚಿನ್ನ
ಜುಲೈನಲ್ಲಿ ದೇವಗುರು ಬೃಹಸ್ಪತಿ ಗುರುವು ಹಿಮ್ಮುಖವಾಗಿ ಚಲಿಸುತ್ತದೆ. ಗುರುಗ್ರಹದ ಹಿಮ್ಮುಖ ಚಲನೆಯಿಂದ ಅನೇಕ ರಾಶಿಚಕ್ರ ಚಿಹ್ನೆಗಳು ಪ್ರಯೋಜನ ಪಡೆಯುತ್ತವೆ. ಯಾವ ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಸಂತೋಷ ತುಂಬುತ್ತದೆ ಎಂದು ನೋಡೋಣ.
ಗುರು ಗ್ರಹಕ್ಕೆ ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು 13 ತಿಂಗಳು ಬೇಕಾಗುತ್ತದೆ. ಆದರೆ ಈ ಬಾರಿ ಗುರು ಹಿಮ್ಮುಖ ಚಲನೆಗೆ ತಿರುಗಲಿದೆ. ಹೌದು, ಜುಲೈ 29ರಿಂದ ಗುರುವು ತನ್ನದೇ ಆದ ಮೀನ ರಾಶಿಯಲ್ಲಿ ವಕ್ರಿಯಾಗಲಿದೆ. ಗುರು ಗ್ರಹದ ಹಿಮ್ಮುಖ ಚಲನೆಯು 5 ತಿಂಗಳವರೆಗೆ ಮುಂದುವರಿಯಲಿದೆ. ನವೆಂಬರ್ 24, 2022ರಂದು ನೇರ ನಡೆ ಪುನರಾರಂಭಿಸುತ್ತದೆ. ಜ್ಯೋತಿಷ್ಯದಲ್ಲಿ, ಗುರುವು ವಿಸ್ತರಣೆ, ಸಮೃದ್ಧಿ ಮತ್ತು ಶುಭಸಂಗತಿಗಳ ಗ್ರಹವಾಗಿದೆ. ಧನು ಮತ್ತು ಮೀನ ರಾಶಿಗಳ ಅಧಿಪತಿಯಾಗಿರುವ ಗುರುವಿನ ಹಿಮ್ಮುಖ ಚಲನೆಯು ಕೆಲ ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರುತ್ತಾನೆ.
ವೃಷಭ ರಾಶಿ(Taurus)
ವೃಷಭ ರಾಶಿಯ ಜನರು ಜುಲೈ 29ರಿಂದ ಗುರುವು ಹಿಮ್ಮುಖವಾಗಿದ್ದಾಗ ಶುಭ ಫಲಿತಾಂಶಗಳನ್ನು ಪಡೆಯಬಹುದು. ಇವರ ಆದಾಯವು ಹೆಚ್ಚಾಗಬಹುದು. ಮನೆಗೆ ಸಂಬಂಧಿಸಿದಂತೆ, ವೈಯಕ್ತಿಕವಾಗಿ ವಸ್ತು ಸೌಕರ್ಯಗಳಲ್ಲಿ ಹೆಚ್ಚಳವಿರುತ್ತದೆ. ಕಾರ್ಯ ಸ್ಥಳದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ಉದ್ಯೋಗ ಹುಡುಕುವವರು ಒಳ್ಳೆಯ ಸುದ್ದಿ ಪಡೆಯಬಹುದು. ಇದರಿಂದ ಮನೆಯಲ್ಲಿ ಸಂತೋಷ ಹೆಚ್ಚಲಿದೆ.
ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರಿಗೆ ಗುರುಗ್ರಹದ ಹಿಮ್ಮುಖ ಹಂತದಲ್ಲಿ ವಿಶೇಷ ಅನುಗ್ರಹವಿರುತ್ತದೆ. ಈ ಸಮಯದಲ್ಲಿ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಮತ್ತು ಬಡ್ತಿಯ ಸಾಧ್ಯತೆಯಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸಂಬಂಧ ಅರಸಿ ಬರಲಿದೆ. ಸಮಯದ ಸಂಪೂರ್ಣ ಪ್ರಯೋಜನ ಪಡೆಯಲು ಶ್ರಮ ಹೆಚ್ಚಿಸಿ.
ಮನಸ್ಸಿಗೇನೋ ಕಿರಿಕಿರಿನಾ? ಶಿವನಿಗೆ ಸಂಬಂಧಿಸಿದ ಈ ವಸ್ತು ಮನೆಯಲ್ಲಿಡಿ..
ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರಿಗೆ ಗುರುವಿನ ಹಿಮ್ಮೆಟ್ಟುವಿಕೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಕುಟುಂಬ ಮತ್ತು ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತವೆ. ಇದಕ್ಕಾಗಿ ಹೆಚ್ಚಿನ ಪರಿಶ್ರಮ ಹಾಕಿ.
ವೃಶ್ಚಿಕ ರಾಶಿ(Scorpio)
ಈ ಜನರು ಈ ಅವಧಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಬಹಳ ಸಮಯದಿಂದ ನಿಂತ ಕೆಲಸಗಳು ನಡೆಯಲಿವೆ. ಉದ್ಯೋಗದಲ್ಲಿ ಹೊಸ ಅವಕಾಶಗಳಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರಿಗಳು ಉತ್ತಮ ಲಾಭವನ್ನು ಗಳಿಸಬಹುದು. ನೀವು ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ. ವಿವಾಹಾದಿ ಕಾರ್ಯಗಳು ನಡೆಯಲಿವೆ. ಎಲ್ಲಕ್ಕೂ ನಿಮ್ಮ ಪ್ರಯತ್ನ ಅತಿ ಮುಖ್ಯವಾಗಿರುತ್ತದೆ.
ಕುಂಭ ರಾಶಿ(Aquarius)
ಕುಂಭ ರಾಶಿಯ ಜನರು ಈ ಅವಧಿಯಲ್ಲಿ ಮಾತ್ರ ಲಾಭ ಪಡೆಯುವ ಸಾಧ್ಯತೆ ಇದೆ. ಈ ಸಮಯವು ನಿಮಗೆ ವರದಾನಕ್ಕಿಂತ ಕಡಿಮೆ ಏನಲ್ಲ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಮಕ್ಕಳ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯ. ಹಣವು ಲಾಭದಾಯಕವಾಗಿರುತ್ತದೆ. ಇದುವರೆಗೂ ಕಾಡುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ. ಆರೋಗ್ಯ ಎಲ್ಲ ಕೆಲಸಕ್ಕೂ ಸಾಥ್ ನೀಡಲಿದೆ.
ಚಾಣಕ್ಯ ನೀತಿ: ಈ ನಾಲ್ಕು ತಪ್ಪುಗಳಿಂದ ದೂರವಿದ್ರೆ ಯಶಸ್ಸು ನಿಮ್ಮದೇ..
ಮೀನ ರಾಶಿ(Pisces)
ಹಿಮ್ಮುಖ ಗುರುವು ಮೀನ ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಬಹುದು. ಕಷ್ಟಪಟ್ಟು ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಧನಲಾಭಗಳಿರುತ್ತವೆ. ಉದ್ಯೋಗದಲ್ಲಿ ಪ್ರಗತಿಯೊಂದಿಗೆ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣದ ಅವಕಾಶ ಇರುವುದು. ವೈವಾಹಿಕ ಜೀವನದಲ್ಲಿ ಇರುವ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.