Asianet Suvarna News Asianet Suvarna News

ಪ್ರೀತಿಗೆ ಮಾತ್ರವಲ್ಲ, ತ್ರಿಜೋರಿ ತುಂಬಿಸಲೂ ಗುಲಾಬಿ ಬೇಕು

ಪ್ರೀತಿಯ ಸಂಕೇತ ಗುಲಾಬಿ ಹೂ. ದೇವರ ಪೂಜೆಗೂ ಗುಲಾಬಿ ಹೂ ಬಳಸಲಾಗುತ್ತದೆ. ಈ ಗುಲಾಬಿಯಿಂದ ಅನೇಕ ಪ್ರಯೋಜವಿದೆ. ಔಷಧಿ ರೂಪದಲ್ಲೂ ಬಳಕೆಯಾಗುವ ಗುಲಾಬಿ ಅನೇಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
 

Rose Flower Remedies to get prosperity luck with love
Author
First Published Sep 22, 2022, 5:42 PM IST

ಎಲ್ಲರು ಮೆಚ್ಚಿಕೊಳ್ಳುವ ಹೂಗಳಲ್ಲಿ ಗುಲಾಬಿ ಹೂ ಮೊದಲ ಸ್ಥಾನದಲ್ಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮಾತ್ರವಲ್ಲ ದೇವಾನುದೇವತೆಗಳಿಗೂ ಗುಲಾಬಿ ಹೂ ಇಷ್ಟ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಗುಲಾಬಿ ಹೂವನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಗುಲಾಬಿ ಹೂವನ್ನು ಸಂಪತ್ತಿಗೆ ಹೋಲಿಕೆ ಮಾಡಲಾಗುತ್ತದೆ. ದೇವರ ಪೂಜೆಯಲ್ಲಿ ಅತಿ ಹೆಚ್ಚು ಬಳಸುವ ಹೂ ಅಂದ್ರೆ ಅದು ಗುಲಾಬಿ ಹೂ. ಈ ಹೂವನ್ನು ಕೇವಲ ದೇವರ ಕೃಪೆಗೆ ಪಾತ್ರರಾಗಲು ಮಾತ್ರ ಬಳಸೋದಿಲ್ಲ. ಇದ್ರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಹೇಳುವ ಗುಲಾಬಿ (Rose) ಹೂವಿನ ಪರಿಹಾರಗಳು ಮನೆಯ ಐಶ್ವರ್ಯ ವೃದ್ಧಿಸುತ್ತದೆ. ಮನೆಯಲ್ಲಿ ಸದಾ ಸುಖ ನೆಲೆಸಲು ಕಾಣವಾಗುತ್ತದೆ. ಗುಲಾಬಿ ಹೂವಿನಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಗುಲಾಬಿ ಹೂವಿನಲ್ಲಿದೆ ಇಷ್ಟೊಂದು ಶಕ್ತಿ :
ಜಾತಕ (Horoscope) ದೋಷಕ್ಕೆ ಪರಿಹಾರ :
ಒಂದು ಪಾತ್ರೆಯಲ್ಲಿ 7 ಗುಲಾಬಿ ದಳಗಳನ್ನು ಹಾಕಬೇಕು. ನಂತ್ರ ಈ ದಳಗಳನ್ನು ತಾಯಿ ದುರ್ಗಾ (Durga) ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದ್ರಿಂದ ಜಾತಕದ ಅನೇಕ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರ ಪರಿಹಾರಕ್ಕೆ ಮಂಗಳವಾರ ಶಿವಲಿಂಗಕ್ಕೆ 11 ಗುಲಾಬಿ ಹೂವುಗಳನ್ನು ಅರ್ಪಿಸಬೇಕು. ಇದ್ರಿಂದ ಶಿವನ ಆಶೀರ್ವಾದ ನಿಮಗೆ ಸಿಗುವುದಲ್ಲದೆ, ಮಂಗಳ ದೋಷ ನಿವಾರಣೆಯಾಗುತ್ತದೆ. 

Zodiac Traits: ಜನರ ಗುಂಪಲ್ಲಿದ್ದಾಗ ವಿಲವಿಲ ಒದ್ದಾಡುವ ರಾಶಿಗಳಿವು..

ಆರ್ಥಿಕ ವೃದ್ಧಿಗೆ ಹೀಗೆ ಮಾಡಿ : ಮನೆಯಲ್ಲಿ ಸದಾ ಹಣ ತುಂಬಿ ತುಳುಕಬೇಕೆಂದ್ರೆ  ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ಮತ್ತು ಗಣೇಶನಿಗೆ 11 ಗುಲಾಬಿಗಳನ್ನು ಅರ್ಪಿಸಿ. ಜೊತೆಗೆ ಲಕ್ಷ್ಮಿ ದೇವಿಯ ಮಂತ್ರವನ್ನು ಪಠಿಸಿ. ಇದರಿಂದ ಜೀವನದಲ್ಲಿ ಎಂದೂ ಹಣದ ಕೊರತೆಯಾಗುವುದಿಲ್ಲ. 

ನಿಮ್ಮೆಲ್ಲ ಆಸೆ ಈಡೇರಬೇಕೆಂದ್ರೆ ಈ ಕೆಲಸ ಮಾಡಿ : ಆಸೆ ಈಡೇರಿಕೆಗಾಗಿ ಗುಲಾಬಿಯನ್ನು ನೀವು ಬಳಸಬಹುದು. ಮನಸ್ಸಿನಲ್ಲಿ ದೊಡ್ಡ ಆಸೆಯಿದ್ದು, ಅದು ನೆರವೇರುತ್ತಿಲ್ಲ ಎನ್ನುವವರು, ಮಂಗಳವಾರ  ಹನುಮಂತನಿಗೆ 11 ತಾಜಾ ಗುಲಾಬಿ ಹೂವುಗಳನ್ನು ಅರ್ಪಿಸಿ. ಸತತ 11 ಮಂಗಳವಾರಗಳ ಕಾಲ ಈ ಉಪಾಯ ಮಾಡುವುದ್ರಿಂದ ನಿಮ್ಮೆಲ್ಲ ಆಸೆಗಳು ಸುಲಭವಾಗಿ ಈಡೇರುತ್ತವೆ. ಹನುಮಂತನ ಆಶೀರ್ವಾದ ನಿಮಗೆ ಸಿಗುತ್ತದೆ. 

ಋಣ ಭಾರದಿಂದ ಮುಕ್ತಿ ಹೊಂದಲು ಏನು ಮಾಡ್ಬೇಕು ಗೊತ್ತಾ? : ಋಣ ಭಾರದಿಂದ ಮುಕ್ತಿ ಹೊಂದುವುದು ಸುಲಭವಲ್ಲ. ಅದರಿಂದ ಮುಕ್ತಿ ಹೊಂದಲು ಐದು ಕೆಂಪು ಗುಲಾಬಿ ಹೂಗಳನ್ನು ನೀವು ತೆಗೆದುಕೊಳ್ಳಬೇಕು. ನಂತ್ರ ಬಿಳಿ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಬಿಳಿ ಬಟ್ಟೆಯ ನಾಲ್ಕು ಮೂಲೆಗೆ ಕೆಂಪು ಹೂಗಳನ್ನು ಕಟ್ಟಬೇಕು. ನಂತ್ರ ಮಧ್ಯದಲ್ಲಿ ಮತ್ತೊಂದು ಗುಲಾಬಿ ಹೂವನ್ನು ಕಟ್ಟಬೇಕು.  ನಂತ್ರ ಈ ಬಟ್ಟೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಹೀಗೆ ಮಾಡಿದ್ರೆ ನೀವು ಋಣಭಾರದಿಂದ ಮುಕ್ತಿ ಹೊಂದುತ್ತೀರಿ. ಜೊತೆಗೆ ಸಂತೋಷ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತದೆ.  
ಆಹಾರ ಧಾನ್ಯ ಮನೆಯಲ್ಲಿರಬೇಕೆಂದ್ರೆ ಈ ಉಪಾಯ ಮಾಡಿ : ಗುಲಾಬಿ ಹೂವಿನ ಉಪಾಯ ನಿಮ್ಮ ಮನೆಯಲ್ಲಿ ದವಸ, ಧಾನ್ಯ ತುಂಬಲು ನೆರವಾಗುತ್ತದೆ. ಮಂಗಳವಾರದಂದು ಕೆಂಪು ಚಂದನ, ಕೆಂಪು ಗುಲಾಬಿಯನ್ನ ಕೆಂಪು ಬಟ್ಟೆಯಲ್ಲಿ ಕಟ್ಟಿಬೇಕು. ಇದನ್ನು ದೇವಸ್ಥಾನದಲ್ಲಿ ಹನುಮಂತನ ಮುಂದೆ ಅಥವಾ ಮನೆಯಲ್ಲಿಯೇ ಹನುಮಂತನ ಪ್ರತಿಮೆ ಮುಂದೆ ಇಡಬೇಕು. ಇದನ್ನು ಒಂದು ವಾರ ದೇವರ ಮನೆಯಲ್ಲಿ ಇಟ್ಟ ನಂತ್ರ ಅದನ್ನು ಮನೆ ಅಥವಾ ಅಂಗಡಿ ಸುರಕ್ಷಿತ ಜಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ದವಸ, ಧಾನ್ಯದ ಕೊರತೆಯಾಗುವುದಿಲ್ಲ. 

Women traits: ಯಾವ ರಾಶಿಯ ಮಹಿಳೆಯ ಸ್ವಭಾವ ಹೇಗಿರುತ್ತೆ ಗೊತ್ತಾ?

ತ್ರಿಜೋರಿ ತುಂಬಲು ಈ ಉಪಾಯ ಮಾಡಿ : ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೆ ನೀವು ಗುಲಾಬಿ ಹೂವನ್ನು ಬಳಸಬಹುದು. ಗುಲಾಬಿ ಹೂವನ್ನು ಶುಕ್ರವಾರ ಸಂಜೆ ಗುಲಾಬಿ ಹೂವಿನ ಮೇಲೆ ಕರ್ಪೂರ ಹಚ್ಚಬೇಕು. ನಂತ್ರ  ಆ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಈ ಉಪಾಯ ಮಾಡಿದ್ರೆ ತಾಯಿ ಲಕ್ಷ್ಮಿ ಕೃಪೆ ನಿಮ್ಮ ಮೇಲಾಗುತ್ತದೆ. 
 

Follow Us:
Download App:
  • android
  • ios