Women traits: ಯಾವ ರಾಶಿಯ ಮಹಿಳೆಯ ಸ್ವಭಾವ ಹೇಗಿರುತ್ತೆ ಗೊತ್ತಾ?

ಮೀನಿನ ಹೆಜ್ಜೆನಾದ್ರೂ ಕಂಡುಹಿಡಿಯಬಹುದು. ಆದ್ರೆ ಈ ಹುಡುಗಿಯರ ಮನಸ್ಸನ್ನು ಮಾತ್ರ ಅರಿಯೋಕಾಗಲ್ಲ ಅಂತಾರೆ. ಆದ್ರೆ, ರಾಶಿ ಅನುಸಾರ ಒಬ್ಬರ ಸ್ವಭಾವ ಅರಿತರೆ, ಅವರ ಮನಸ್ಸನ್ನು ಅರಿಯುವುದು ಸುಲಭವಾಗುತ್ತದೆ. ಅಂದ ಹಾಗೆ ನಿಮ್ಮ ಹುಡುಗಿಯ ರಾಶಿ ಯಾವುದು?

Know your Woman traits of each zodiac sign decoded skr

'ಮೆನ್ ಆರ್ ಫ್ರಂ ಮಾರ್ಸ್ ಆ್ಯಂಡ್ ವಿಮೆನ್ ಆರ್ ಫ್ರಂ ವೀನಸ್' ಎಂಬುದು ಇನ್ನೂ ಹೆಚ್ಚಿನ ಪುರುಷರ ಸಿದ್ಧಾಂತವಾಗಿದೆ. ಅವರು ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಾರೆ. ತಾವು ತಮ್ಮ ಹುಡುಗಿಯನ್ನು ಅರ್ಥ ಮಾಡಿಕೊಂಡೆವೆಂದುಕೊಂಡು ಅವರು ಬೀಗುವಷ್ಟರಲ್ಲಿ ಅವಳ ಮತ್ತೊಂದು ಮುಖ ಕಾಣಿಸುತ್ತದೆ. ಹಾಗಾಗಿ, ಹೆಣ್ಣುಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಷರಾ ಬರೆದುಬಿಡುತ್ತಾರೆ. ಆದರೆ, ರಾಶಿಚಕ್ರಗಳ ಆಧಾರದಲ್ಲಿ ನೀವು ಹುಡುಗಿಯರ ಸ್ವಭಾವ ಅರ್ಥ ಮಾಡಿಕೊಳ್ಳಲು ಯತ್ನಿಸಿದರೆ ಆಕೆಯನ್ನು ಅರಿಯುವುದು ಸುಲಭವಾಗಬಹುದು. ಯಾವ ರಾಶಿಯ ಹುಡುಗಿಯ ಸ್ವಭಾವ ಹೇಗಿರುತ್ತದೆ ನೋಡೋಣ..

ಮೇಷ(Aries)
ಮೇಷ ರಾಶಿಯ ಮಹಿಳೆಯೊಂದಿಗೆ ವ್ಯವಹರಿಸುವಾಗ, ಅವರು ತಮ್ಮ ಸುತ್ತಲಿನ ಎಲ್ಲಾ ಸಂದರ್ಭಗಳನ್ನು ಮತ್ತು ಜನರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಂಶವನ್ನು ನೆನಪಿನಲ್ಲಿಡಿ. ಅವರು ಸುಲಭವಾಗಿ ಯಾವುದೇ ಸನ್ನಿವೇಶವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಬಹುದು.

ವೃಷಭ(Taurus)
ವೃಷಭ ರಾಶಿಯ ಮಹಿಳೆಯರು ನ್ಯಾಯಕ್ಕಾಗಿ ನಿಲ್ಲುತ್ತಾರೆ. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅವರು ಬಹಳ ರಾಜತಾಂತ್ರಿಕ ರೀತಿಯಲ್ಲಿ ಜನರೊಂದಿಗೆ ವ್ಯವಹರಿಸಲು ಇಷ್ಟಪಡುತ್ತಾರೆ.

ಮಿಥುನ(Gemini)
ಮಿಥುನ ರಾಶಿಯ ಮಹಿಳೆಯರು ಅಸೂಯೆ ಸ್ವಭಾವದವರು. ಅವರು ಸಹಾಯವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ಆದರೆ ಇತರರಿಗೆ ಸಹಾಯ ಮಾಡಲು ಬಂದಾಗ, ಅವರು ಯಾವಾಗಲೂ ಹಿಂದೆ ಸರಿಯುತ್ತಾರೆ. ಇವರು ಅತಿ ಭಾವುಕರಾಗಬಲ್ಲರು. ಕೆಲವೊಮ್ಮೆ ಇವರ ಎಕ್ಸ್ಟ್ರೀಮ್ ಸ್ವಭಾವ ಜೊತೆಗಿರುವವರಿಗೆ ಹಿಂಸೆಯಾಗಬಹುದು.

ಕರ್ಕಾಟಕ(Cancer)
ಅವರು ತುಂಬಾ ಲೆಕ್ಕಾಚಾರ ಮಾಡುತ್ತಾರೆ ಮತ್ತು ಕೆಲವು ಜನರನ್ನು ದೂರದಲ್ಲಿಡಲು ಇಷ್ಟಪಡುತ್ತಾರೆ. ಭವಿಷ್ಯದಲ್ಲಿ ಸ್ವಲ್ಪ ಸಹಾಯವಾಗುತ್ತದೆ ಎಂದು ಅವರು ಭಾವಿಸುವ ವ್ಯಕ್ತಿಯ ಕಡೆಗೆ ಅವರು ಹೆಚ್ಚು ಸ್ನೇಹ ಹೊಂದುತ್ತಾರೆ. 

Samudrik Shastra: ಈ ರೀತಿ ಹಣೆ ಇರುವ ಹುಡುಗಿಯರು ಪತಿಗೆ ತರ್ತಾರೆ ಅದೃಷ್ಟ!

ಸಿಂಹ(Leo)
ಸಿಂಹ ರಾಶಿಯ ಮಹಿಳೆಯರು ತುಂಬಾ ಭಾವನಾತ್ಮಕ ಸ್ವಭಾವದವರು. ಈ ಗುಣಲಕ್ಷಣದಿಂದಾಗಿ, ಅವರು ಕೆಲವೊಮ್ಮೆ ಭಾವನಾತ್ಮಕವಾಗಿ ಬಂಧಿಸಲ್ಪಡುತ್ತಾರೆ. ಅವರು ಸಾಮಾನ್ಯವಾಗಿ ಉದ್ವಿಗ್ನತೆಗೆ ಒಳಗಾಗುತ್ತಾರೆ ಅಥವಾ ಸುಲಭವಾಗಿ ಒತ್ತಡಕ್ಕೊಳಗಾಗುತ್ತಾರೆ.

ಕನ್ಯಾ(Virgo)
ಕನ್ಯಾ ರಾಶಿಯ ಮಹಿಳೆಯರು ಉತ್ತಮ ಭವಿಷ್ಯದ ಲಾಭಕ್ಕಾಗಿ ತಮ್ಮ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಲು ಬಯಸುತ್ತಾರೆ. ಅವರು ತುಂಬಾ ಹಣದ ಮನಸ್ಸಿನವರು.

ತುಲಾ(Libra)
ತುಲಾ ರಾಶಿಯ ಮಹಿಳೆಯರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಎರಡರಲ್ಲೂ ಸಮಾನವಾಗಿ ಮಿಂಚುತ್ತಾರೆ.

ವೃಶ್ಚಿಕ(Scorpio)
ವೃಶ್ಚಿಕ ರಾಶಿಚಕ್ರದ ಮಹಿಳೆಯರು ಜಗತ್ತು ಹೇಳುವುದನ್ನು ಕೇಳಿ ಸುಲಭವಾಗಿ ಪ್ರಭಾವಕ್ಕೊಳಗಾಗುತ್ತಾರೆ. ವಿಶೇಷವಾಗಿ ಹಣದ ವಿಷಯಗಳಿಗೆ ಬಂದಾಗ ಅವರು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅವರಲ್ಲಿ ಗುಟ್ಟುಗಳೂ ಹೆಚ್ಚು. ತಮ್ಮ ಸ್ವಂತ ವಿಷಯವನ್ನು ಯಾರಿಗೂ ಬಿಟ್ಟುಕೊಡದವರು ಇವರು. 

ಚಾಮುಂಡಿ ಮಹಿಮೆ: ಮೈಸೂರಿನಲ್ಲಿ ಚಾಮುಂಡೇಶ್ವರಿ ಪ್ರತಿಷ್ಠಾಪನೆ ಮಾಡಿದ್ದು ಯಾರು?

ಧನು(Sagittarius)
ಧನು ರಾಶಿಯ ಮಹಿಳೆಯರು ತಮ್ಮ ಸ್ವಂತ ಜೀವನವನ್ನು ನಡೆಸುವಲ್ಲಿ ತಮ್ಮ ಗಮನವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಹಿಂದಿನ ಎಲ್ಲಾ ಸಮಸ್ಯೆಗಳನ್ನು ಹೇಗೆ ಕೊನೆಗೊಳಿಸುವುದು ಮತ್ತು ಹೊಸದಾಗಿ ಏನನ್ನಾದರೂ ಹೇಗೆ ಪ್ರಾರಂಭಿಸುವುದು ಎಂದು ಅವರಿಗೆ ತಿಳಿದಿದೆ. ಅವರು ಯಾವಾಗಲೂ ಪ್ರಯಾಣದಲ್ಲಿರಲು ಇಷ್ಟಪಡುತ್ತಾರೆ. ಅವರ ಸ್ವತಂತ್ರಪ್ರಿಯತೆಗೆ ಯಾರಾದರೂ ಅಡ್ಡಿಪಡಿಸಿದರೆ ತುಂಬಾ ಕಿರಿಕಿರಿಗೊಳ್ಳುತ್ತಾರೆ.

ಮಕರ(Capricorn)
ಮಕರ ರಾಶಿಯ ಮಹಿಳೆಯರು ತಮ್ಮ ಬಲ ಅಥವಾ ಪ್ರಭಾವವನ್ನು ಬಳಸಿಕೊಂಡು ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಅವರು ಎರಡು ವಿರೋಧಾಭಾಸಗಳನ್ನು ಒಟ್ಟಿಗೆ ಬಂಧಿಸಬೇಕಾದಾಗಲೂ ತಾವು ನಿರ್ಧರಿಸಿದ್ದೇ ನಡೆಯಬೇಕೆಂದು ಖಚಿತಪಡಿಸಿಕೊಳ್ಳಲು ಯಾವುದೇ ಬಲ ಬಳಸಲು ತಯಾರಿರುತ್ತಾರೆ. 

ಕುಂಭ(Aquarius)
ಕುಂಭ ರಾಶಿಯ ಮಹಿಳೆಯರು ತುಂಬಾ ಶ್ರಮಜೀವಿಗಳು ಮತ್ತು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಕಷ್ಟು ಸಾಧಿಸಲು ಅವರಿಗೆ ಸಾಧ್ಯವಾಗುತ್ತದೆ. ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಅವರು ಸಮರ್ಥರಾಗಿದ್ದಾರೆ. 

ಮೀನ(Pisces)
ಮೀನ ರಾಶಿಯ ಮಹಿಳೆಯರು ಸಾಮಾನ್ಯವಾಗಿ ತಮ್ಮ ಸುತ್ತಮುತ್ತಲಿನ ಜನರಿಂದ ಅಸಮಾಧಾನಗೊಳ್ಳುತ್ತಾರೆ. ಮಾತಿನಲ್ಲಿ ಗೆಲ್ಲಲೇಬೇಕೆಂಬ ಹಟದಿಂದ ಆಗಾಗ್ಗೆ ವಾದ ಮಾಡುತ್ತಾರೆ. 

Latest Videos
Follow Us:
Download App:
  • android
  • ios