Asianet Suvarna News Asianet Suvarna News

Zodiac Traits: ಜನರ ಗುಂಪಲ್ಲಿದ್ದಾಗ ವಿಲವಿಲ ಒದ್ದಾಡುವ ರಾಶಿಗಳಿವು..

ಕೆಲವರಿಗೆ ಜನನಿಬಿಡ ಪ್ರದೇಶ ಅಂದ್ರೆ ತುಂಬಾ ಇಷ್ಟ, ಜನರು ಸೇರಿದಲ್ಲಿ ತಾವೂ ಒಬ್ಬರಾಗಿ ಸೇರಿಕೊಳ್ಳುತ್ತಾರೆ. ಮತ್ತೆ ಕೆಲವರನ್ನು ಹೀಗೆ ಗುಂಪಿನ ನಡುವೆ ಬಿಟ್ರೆ ಗುಂಪಿಗೆ ಸೇರದ ಪದದಂತೆ ಒದ್ದಾಡುತ್ತಾರೆ. ಹಾಗೆ ಒದ್ದಾಡುವವರು ಸಾಮಾನ್ಯವಾಗಿ ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ. 

These are the 4 Zodiac signs that struggle with crowds skr
Author
First Published Sep 21, 2022, 12:55 PM IST

ತಮ್ಮ ಪಾಡಿಗೆ ತಾವಿದ್ದರೆ ಅದೇ ಸ್ವರ್ಗ ಎಂದು ನಂಬಿದವರು ಕೆಲವರಿರುತ್ತಾರೆ. ಅವರನ್ನು ತೆಗೆದುಕೊಂಡು ಜನರ ಮಧ್ಯೆ ಬಿಟ್ಟರೆ ಅವರ ಎದೆ ಢವಢವ ಬಡಿದುಕೊಳ್ಳುತ್ತದೆ. ಯಾರೊಂದಿಗೆ ಹೇಗೆ, ಏನು ಮಾತಾಡಬೇಕು ತಿಳಿಯದೆ ಕಂಗಾಲಾಗುತ್ತಾರೆ. ಗುಂಪು ಎಂದರೆ ಪಲಾಯನ ಮಾಡುವವರಿವರು. ಯಾವುದೋ ಮದುವೆಗೋ, ಮುಂಜಿಗೋ ಹೋಗಬೇಕೆಂದರೆ ತಪ್ಪಿಸಿಕೊಳ್ಳಲು ನೆಪ ಹುಡುಕತೊಡಗುತ್ತಾರೆ. ಸೋಷ್ಯಲ್ ಆ್ಯಂಕ್ಸೈಟಿ ಇವರನ್ನು ಸ್ವಭಾವತಃ ಕಾಡುತ್ತದೆ. ಸೋಷ್ಯಲ್ ಫೋಬಿಯಾದಿಂದ ಹೊರಬರಲಾರದೆ ಒದ್ದಾಡುತ್ತಾರೆ. ಕಿಕ್ಕಿರಿದ ಕೊಠಡಿಗಳು ಅಥವಾ ಸಾರ್ವಜನಿಕ ಸ್ಥಳಗಳ ಸಾಮಾಜಿಕ ಕೂಟಗಳೆಂದರೆ ಮೈಲು ದೂರ ಓಡುವ ಇವರಿಗೆ ಅಲ್ಲಿ ಆತ್ಮವಿಶ್ವಾಸವೇ ಕುಸಿದಂತ ಅನುಭವವಾಗುತ್ತದೆ. ಈ ರೀತಿ ಸಾಮಾಜಿಕವಾಗಿ ಬೆರೆಯಲು ಒದ್ದಾಡುವವರು ಸಾಮಾನ್ಯವಾಗಿ ಈ ನಾಲ್ಕು ರಾಶಿಚಕ್ರಗಳಿಗೆ ಸೇರಿರುತ್ತಾರೆ. 

1. ಮೀನ ರಾಶಿ(Pisces)
ಮೀನ ರಾಶಿಯವರು ಹೊರಗೆ ಹೋಗುವುದನ್ನು ಇಷ್ಟ ಪಡುವುದೇ ಇಲ್ಲ ಎಂದಲ್ಲ. ಆದರೆ, ಈ ಸಂಬಂಧಿಕರು, ನೆಂಟರಿಷ್ಟರು ಸೇರುವಲ್ಲಿ ಹೋಗುವುದು ಅವರಿಗೆ ಕೊಂಚ ಕಷ್ಟದ ವಿಷಯ. ಬದಲಿಗೆ ಮನೆಯಲ್ಲೇ ಹ್ಯಾಂಗ್ ಔಟ್ ಮಾಡಲು ಮತ್ತು ತಮ್ಮದೇ ಕಂಪನಿಯನ್ನು ಆನಂದಿಸಲು ಬಯಸುತ್ತಾರೆ. ಹಗಲುಗನಸು ಕಾಣುತ್ತಾ, ತಮ್ಮದೇ ಆಸಕ್ತಿಯ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಅವರಿಗಿಷ್ಟ. ಅವರು ತಮ್ಮ ನಿಕಟ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸುತ್ತಾರೆ, ಆದರೆ ಹೊಸ ಸ್ನೇಹಿತರು ಗುಂಪಿಗೆ ಸೇರಿದರೆ ಅವರನ್ನು ಒಪ್ಪಿಕೊಳ್ಳಲು ಹೆಚ್ಚೇ ಸಮಯ ತೆಗೆದುಕೊಳ್ಳುತ್ತಾರೆ, ಸಣ್ಣಪುಟ್ಟ ವಿಷಯಗಳಿಂದ ಅವರು ಆಗಾಗ್ಗೆ ನೋಯುವುದರಿಂದ ಅವರು ಗುಂಪುಗೂಡುವುದನ್ನು ತಪ್ಪಿಸಲು ಬಯಸುತ್ತಾರೆ.  

ಈ Harmful Yoga ಜಾತಕದಲ್ಲಿದ್ರೆ ಜೀವನದಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತೆ!

2. ವೃಷಭ ರಾಶಿ(Taurus)
ವೃಷಭ ರಾಶಿಯ ಜನರು ಸಾಮಾಜಿಕ ಸಂದರ್ಭಗಳನ್ನು ತಪ್ಪಿಸಲು, ಕಾರ್ಯಕ್ರಮಗಳನ್ನು ತಪ್ಪಿಸುವುದರಿಂದ ಹಿಡಿದು ಯೋಜನೆಗಳನ್ನು ತಕ್ಷಣವೇ ರದ್ದುಗೊಳಿಸುವವರೆಗೆ ಎಲ್ಲವನ್ನೂ ಮಾಡುತ್ತಾರೆ. ಇದಕ್ಕೆ ಕಾರಣ ದೊಡ್ಡ ಸಭೆ ಎಂದರೆ ಅವರು ಅನಾನುಕೂಲತೆ ಅನುಭವಿಸುವುದು. ವೃಷಭ ರಾಶಿಯವರು ಸುಲಭವಾಗಿ ಯಾರೊಂದಿಗೂ ಬೆರೆಯುವುದಿಲ್ಲ. ಜೊತೆಗೆ ಯಾರ ಸಲಹೆಗಳನ್ನೂ ಸುಲಭವಾಗಿ ಒಪ್ಪುವವರಲ್ಲ. ಜನಸಮೂಹದ ನಡುವೆ ಅವರ ಸಾಮಾಜಿಕ ವಿಚಿತ್ರತೆಯಿಂದಾಗಿ, ಈ ವ್ಯಕ್ತಿಗಳು ಯಾವಾಗಲೂ ತಮ್ಮನ್ನು ಏಕಾಂಗಿಯಾಗಿ ಭಾವಿಸುತ್ತಾರೆ.

3. ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರು ಮನೆಯಲ್ಲಿ ಸಮಯ ಕಳೆಯುವುದನ್ನು ಆನಂದಿಸುತ್ತಾರೆ. ಈ ಚಿಹ್ನೆಯು ಸಾಮಾಜಿಕ ಸನ್ನಿವೇಶಗಳೊಂದಿಗೆ ಹೋರಾಡುತ್ತದೆ ಮತ್ತು ಹೆಚ್ಚು ಅಂತರ್ಮುಖಿಯಾಗಿದೆ. ಮನೆಯಲ್ಲಿರುವುದೊಂದೇ ಅವರಿಗೆ ವಿಶ್ರಾಂತಿ ಪಡೆಯಲು ಏಕೈಕ ಮತ್ತು ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಅವರು ನಿರಾಳವಾಗಿರಲು ಇದೊಂದೇ ವಾತಾವರಣ ಬೇಕು. ದೊಡ್ಡ ಜನಸಮೂಹದ ಮುಂದೆ ಏನಾದರೂ ಮಾತಾಡಬೇಕು, ಹಾಡಬೇಕು ಅಥವಾ ಕುಣಿಯಬೇಕೆಂದರೆ ಅವರ ಕಾಲು ನಡುಗಲು ಆರಂಭಿಸುತ್ತದೆ.

Lucky zodiacs: 5 ರಾಶಿಗಳಿಗೆ ಅದೃಷ್ಟದ ಅಕ್ಟೋಬರ್, ನಿಮ್ಮದ್ಯಾವ ರಾಶಿ?

4. ಕುಂಭ ರಾಶಿ(Aquarius)
ಹನ್ನೆರಡು ರಾಶಿಚಕ್ರದ ಚಿಹ್ನೆಗಳಲ್ಲಿ ಅತ್ಯಂತ ಏಕಾಂತ ಬಯಸುವ ರಾಶಿ ಕುಂಭವಾಗಿದೆ. ಕುಂಭ ರಾಶಿಯ ಜನರು ಶಾಂತವಾಗಿರಲು ಬಯಸುತ್ತಾರೆ. ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹ್ಯಾಂಗ್ ಔಟ್ ಮಾಡಲು ಆದ್ಯತೆ ನೀಡುತ್ತಾರೆ. ಅವರು ಹೊಸಬರೊಂದಿಗೆ ಸಂವಹನ ನಡೆಸಲು ಹೆಣಗಾಡುತ್ತಾರೆ ಮತ್ತು ತಮ್ಮದೇ ಆದ ಖಾಸಗಿತನಕ್ಕಾಗಿ ಹಾತೊರೆಯುತ್ತಾರೆ. ಅವರ ಸಂಕೀರ್ಣ ವ್ಯಕ್ತಿತ್ವದ ಕಾರಣ, ಕುಂಭ ರಾಶಿಯವರು ಯಾವಾಗಲೂ ಗುಂಪಿನೊಂದಿಗೆ ಬೆರೆಯುವುದಿಲ್ಲ. ಅದರ ಬದಲು ಪುಸ್ತಕ ಓದುವುದನ್ನೋ ಅಥವಾ ಇನ್ನಾವುದೋ ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವುದನ್ನೋ ಇವರು ಇಷ್ಟ ಪಡುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios