ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?

ಜನರ ಜತೆಗಿನ ಬಾಂಧವ್ಯ ಚೆನ್ನಾಗಿರುವುದಕ್ಕೆ ಮತ್ತು ಕೆಟ್ಟದಾಗುವುದಕ್ಕೆ ಗ್ರಹಗಳೇ ಕಾರಣವಾಗಿರುತ್ತವೆ. ಪ್ರತಿಯೊಬ್ಬರ ಜತೆಗೂ ಬಾಂಧವ್ಯ ಚೆನ್ನಾಗಿದೆ ಎಂದರೆ ಅದಕ್ಕೆ ತಕ್ಕ ಗ್ರಹದ ಸ್ಥಿತಿ ಉತ್ತಮವಾಗಿದೆ ಎಂದೇ ಅರ್ಥ. ಹಾಗಾದರೆ ಯಾವ ಸಂಬಂಧಕ್ಕೆ ಯಾವ ಗ್ರಹ ತಿಳಿಯೋಣ....

role of different planets in family and relationship

ಸಂಬಂಧಗಳಿಗೆ (Relationships) ಅದರದ್ದೇ ಆದ ವಿಶೇಷತೆಗಳು, ಬೆಲೆಗಳು ಇರುತ್ತವೆ. ಮನೆಯವರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಸಂಬಂಧ ಸಹ ಗಟ್ಟಿಯಾಗಿರುತ್ತದೆ. ಆದರೆ, ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿದರೆ ತಕರಾರುಗಳು ಹೆಚ್ಚಿ ಜಗಳ ಹೆಚ್ಚುತ್ತಾ ಹೋಗುತ್ತವೆ. ಮನೆಯವರ ಜೊತೆಗಿನ ನೆಮ್ಮದಿ (Comfort) ಹಾಳಾಗುತ್ತದೆ. ಆದರೆ, ಸಂಬಂಧಗಳಲ್ಲಿ ಬಿರುಕು ಮೂಡಲು ಗ್ರಹಗತಿಗಳೂ ಕಾರಣ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. 

ಮನೆಯಲ್ಲಿ ಕೆಲವೊಮ್ಮೆ ನಡೆಯುವ ಮನಸ್ಥಾಪಗಳಿಗೆ ಕಾರಣ ಇರುವುದಿಲ್ಲ. ಆದರೂ, ಗಲಾಟೆಗಳು ನಡೆದುಬಿಡುತ್ತವೆ. ಕ್ಷುಲ್ಲಕ ಎನಿಸುವಂತ ವಿಷಯಕ್ಕೂ ಜಗಳಗಳು ನಡೆಯುತ್ತವೆ. ಆದರೆ, ಪದೇ ಪದೇ ಹೀಗಾಗುತ್ತಿದ್ದರೆ ಜಾತಕವನ್ನು (Horoscope)  ಬಲ್ಲವರಿಗೆ ತೋರಿಸಬೇಕು. ಗ್ರಹಗತಿಗಳು ನಿಮ್ಮ ಮೇಲೆ ಯಾವ ಪರಿಣಾಮ ಬೀರುತ್ತಿವೆ ಎಂಬುದನ್ನು ಅರಿತರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ದೋಷವುಳ್ಳ ಗ್ರಹಗಳಿಗೆ ಶಾಂತಿ ಮಾಡಿಸಿಕೊಳ್ಳಬಹುದು. ಯಾವ ಸಂಬಂಧಕ್ಕೆ ಯಾವ ಗ್ರಹಗಳ ಪ್ರಭಾವ? ಅದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ನೋಡೋಣ... 

ತಂದೆ (Father) ಜೊತೆಗಿನ ಸಂಬಂಧಕ್ಕೆ ಸೂರ್ಯ (Sun planet)
ಅಪ್ಪನಿಗೆ ಸಂಬಂಧಪಟ್ಟ ಗ್ರಹ ಸೂರ್ಯ ಆಗಿರುತ್ತದೆ. ಯಾವುದೇ ವ್ಯಕ್ತಿಯು ತನ್ನ ಅಪ್ಪನ ಜೊತೆಗೆ ಗೌರವದಿಂದ ನಡೆದುಕೊಳ್ಳವುದಿಲ್ಲವೋ, ಪ್ರತಿ ಮಾತಿಗೆ ಜಗಳ (Quarrels) ಮಾಡತ್ತಾರೋ... ಹೇಳಿದ್ದಕ್ಕೆಲ್ಲ ವಿರುದ್ಧವಾಗಿ ಕೆಲಸವನ್ನು ಮಾಡುತ್ತಿದ್ದಾರೆಂದರೆ ಈ ಮೂಲಕ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಲು ಸಂಬಂಧದ ಗ್ರಹವಾಗಿರುವ ಸೂರ್ಯನು ನೀಚ ಸ್ಥಾನದಲ್ಲಿ ಇದ್ದರೆ ಕಾರಣವಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಿತಿಯನ್ನು ಪರಿಶೀಲಿಸಿದರೆ ತಂದೆ ಜೊತೆಗಿನ ಸಂಬಂಧವು ಹೇಗಿದೆ ಇಲ್ಲವೇ ಹೇಗೆ ಇರಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರ ಪರಿಹಾರಕ್ಕೆ ಸೂರ್ಯನಿಗೆ ಅರ್ಘ್ಯ ನೀಡಬೇಕು. ಜೊತೆಗೆ ಏಕಮುಖಿ ರುದ್ರಾಕ್ಷಿ ಧಾರಣೆ ಮಾಡಬೇಕು.

ಇದನ್ನು ಓದಿ: ಗಾಯತ್ರಿ ಮಂತ್ರ ಪಠಿಸಿ ಈ ಐದು ಪ್ರಯೋಜನ ಪಡೆಯಿರಿ

ತಾಯಿ (Mother) ಜೊತೆಗಿನ ಬಾಂಧವ್ಯಕ್ಕೆ ಚಂದ್ರ ಗ್ರಹ (Moon Planet)
ಅಮ್ಮನ ಜೊತೆಗೆ ಬಾಂಧವ್ಯ ಇರಲು ಚಂದ್ರ ಗ್ರಹವು ಮುಖ್ಯವಾದ ಕಾರಕ ಗ್ರಹವಾಗಿದೆ. ಚಂದ್ರ ಗ್ರಹವು ನೀಚ ಸ್ಥಾನದಲ್ಲಿ ಇದ್ದಿದ್ದೇ ಆದರೆ, ತಾಯಿಯೊಂದಿಗಿನ ಸಂಬಂಧ ಹಾಳಾಗುವುದಲ್ಲದೆ, ಪದೇ ಪದೇ ಮನಸ್ತಾಪಗಳು ಉಂಟಾಗಲಿವೆ. ಇಂಥ ಕೆಟ್ಟ ಪರಿಸ್ಥಿತಿಯು ಎದುರಾದರೆ ಚಂದ್ರ ಗ್ರಹಕ್ಕೆ ಶಾಂತಿ ಮಾಡಿಸಬೇಕು. ತಾಯಿಯ ಸೇವೆ ಮಾಡಿಯೂ ಸಹ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸೋಮವಾರ ಶಿವನ ಪೂಜೆ ಮಾಡಬೇಕು. ಶ್ವೇತ ವಸ್ತ್ರವನ್ನು (White) ಧರಿಸಬೇಕು. ಈ ರೀತಿ ನಡೆದುಕೊಂಡರೆ ಚಂದ್ರನ ಸ್ಥಿತಿಯು ಬಲವಾಗುತ್ತದೆ. 

ಮನೆಯ ಸದಸ್ಯರ ಜೊತೆಗೆ ಮಂಗಳ ಗ್ರಹ (Mars)
ಮನೆಯ ಸದಸ್ಯರ ಜೊತೆಗೆ ಸಂಬಂಧವು ಉತ್ತಮ ಆಗಿರಬೇಕೆಂದರೆ ಮಂಗಳ ಗ್ರಹದ ಸ್ಥಿತಿಯು ಉತ್ತಮ ಆಗಿರಬೇಕು. ಮುಖ್ಯವಾಗಿ ಮಂಗಳ ಗ್ರಹದ ಪ್ರಭಾವದ ಮೇಲೆ ಅಣ್ಣ - ತಂಗಿಯ ಸಂಬಂಧವು ನಿಂತಿರುತ್ತದೆ. ಈ ಗ್ರಹ ಬಲವಾಗಿದ್ದರೆ ಇವರ ಸಂಬಂಧ ಉತ್ತಮವಾಗಿರುತ್ತದೆ. ಸ್ನೇಹಿತರೊಂದಿಗಿನ ಸಂಬಂಧ ವೃದ್ಧಿಗೆ ಕೂಡಾ ಮಂಗಳ ಗ್ರಹವು ಕಾರಣವಾಗುತ್ತದೆ. ಈ ಸಂಬಂಧಗಳು ಸರಿ ಇಲ್ಲದಿದ್ದರೆ ಸಹೋದರ (Brother) ಮತ್ತು ಸಹೋದರಿ (Sister) ಒಟ್ಟಾಗಿ ಕುಳಿತು ಊಟ ಮಾಡಬೇಕು. ಇನ್ನು ಮಂಗಳವಾರದ ದಿನ ಕೆಂಪು ಬಟ್ಟೆಯನ್ನು (Red Dress) ತೊಟ್ಟು, ಆಂಜನೇಯನನ್ನು ಆರಾಧನೆ ಮಾಡಬೇಕು. ಹೀಗೆ ಮಾಡಿದಲ್ಲಿ ಮಂಗಳ ಗ್ರಹದಿಂದ ಉಂಟಾಗುವ ದೋಷ ನಿವಾರಣೆಯಾಗುತ್ತದೆ.

ಇದನ್ನು ಓದಿ : ಏನು ಮಾಡಿದರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ

ತಾಯಿ ಮನೆಯವರ ಜೊತೆಗೆ ಬುಧ ಗ್ರಹ (Mercury)
ತಾಯಿಯ ಸಂಬಂಧಿಕರೊಡನೆ ಅಂದರೆ ಮಾವ, ಅತ್ತೆ ಹೀಗೆ ಎಲ್ಲರೊಡನೆ ಸಂಬಂಧ ಚೆನ್ನಾಗಿರಬೇಕೆಂದರೆ ಬುಧ ಗ್ರಹದ ಸ್ಥಿತಿ ಉತ್ತಮವಾಗಿರಬೇಕು. ತಾಯಿ ಕಡೆ ಮನೆಯವರನ್ನು ಗೌರವಾದರಗಳಿಂದ ಕಂಡರೆ ಬುಧ ಗ್ರಹದ ಪ್ರಭಾವವು ಸಹ ಉತ್ತಮವಾಗಿ ಇರುತ್ತದೆ. ನೀಚ ಸ್ಥಿತಿಯಲ್ಲಿ ಬುಧನ ಗ್ರಹವಿದ್ದರೆ ಸಂಬಂಧಗಳು ಸಹ ಹದಗೆಡುತ್ತವೆ. ಹೀಗಾದಲ್ಲಿ ಹಸಿರು (Green) ವಸ್ತುಗಳನ್ನು ದಾನ ಮಾಡಬೇಕು. ವಿಘ್ನನಿವಾರಕ ಗಣೇಶನಿಗೆ ಪೂಜೆ ಸಲ್ಲಿಸಬೇಕು. ಬುಧವಾರ ಹಸಿರು ಬಟ್ಟೆಯನ್ನು ತೊಡಬೇಕು. 

ಶುಕ್ರ ಗ್ರಹವು (Venus) ಸಂಗಾತಿ ಸಂಬಂಧಕ್ಕೆ ಕಾರಕ
ಸಂಗಾತಿ (Partner) ಜೊತೆಗೆ ಸಂಬಂಧ ತಿಳಿಯಲು ಶುಕ್ರ ಗ್ರಹದ ಸ್ಥಿತಿಯನ್ನು ಜ್ಯೋತಿಷ್ಯದಲ್ಲಿ ನೋಡಲಾಗುವುದು. ದಂಪತಿಗಳ ನಡುವೆ ಬಾಂಧವ್ಯ ಉತ್ತಮವಾಗಿದೆ ಎಂದರೆ ಶುಕ್ರನ ಸ್ಥಿತಿ ಸಹ ಉತ್ತಮವಾಗಿಯೇ ಇದೆ ಎಂದು ಅರ್ಥ. ವಿವಾಹಿತರು ಹೆಚ್ಚು ಅನ್ಯೋನ್ಯವಾಗಿರಲು ಶುಕ್ರನ ಸ್ಥಿತಿ ಉತ್ತಮವಾಗಿರಬೇಕು. ಹೀಗೆ ಇರುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ವೃದ್ಧಿಸುತ್ತದೆ. ದಂಪತಿಗಳಲ್ಲಿ ಸಂಬಂಧ ಸರಿ ಇಲ್ಲದಿದ್ದರೆ ಪರಿಹಾರವಾಗಿ ವಿಷ್ಣು ಮತ್ತು ಲಕ್ಷ್ಮೀ ಸಂಯುಕ್ತ ಪೂಜೆಯನ್ನು ಮಾಡಬೇಕು, ಲಕ್ಷ್ಮೀ ನಾರಾಯಣನನ್ನು ಆರಾಧನೆ ಮಾಡಬೇಕು. ಶುಕ್ರವಾರದ ದಿನ ಶ್ವೇತ ಇಲ್ಲವೇ ಗುಲಾಬಿ (Pink) ಬಣ್ಣದ ವಸ್ತ್ರವನ್ನು ಧರಿಸಬೇಕು.
 

Latest Videos
Follow Us:
Download App:
  • android
  • ios