ಏನು ಮಾಡಿದರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ
ವಾಸ್ತು ಶಾಸ್ತ್ರದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಅಷ್ಟೇ ಅಲ್ಲದೆ ಹೆಚ್ಚು ಹಣವನ್ನು ಗಳಿಸಲು ಸಹ ಇದು ಸಹಕಾರಿಯಾಗಿದೆ. ಮನೆಯಲ್ಲಿ ಕೆಲವೊಂದು ಗಿಡಗಳನ್ನು ನೆಡುವುದರಿಂದ ಮನೆಗೆ ಶುಭ ಉಂಟಾಗುವುದಲ್ಲದೇ, ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಹಾಗಾದರೆ ಆ ಗಿಡಗಳು ಯಾವುದು? ಮತ್ತು ಅದನ್ನು ಎಲ್ಲಿ ನೆಡಬೇಕು? ಎಂಬುದನ್ನು ತಿಳಿಯೋಣ...
ಪುರಾಣ ಕಾಲದಿಂದಲೂ ಕೆಲವಷ್ಟು ಗಿಡ ಮರಗಳನ್ನು (Tree) ಬೆಳೆಸುವ ಪದ್ಧತಿ ಸಾಗಿ ಬಂದಿದೆ. ಈ ಗಿಡಗಳು ಸಕಾರಾತ್ಮಕ ಶಕ್ತಿಯ (Positive energy) ಹರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಾಯಕವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರ (Astrology) ಮತ್ತು ವಾಸ್ತು ಶಾಸ್ತ್ರದಲ್ಲಿ (Vastu shastra) ಕೆಲವು ಗಿಡ ಮರಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ್ದಾರೆ. ವ್ಯಕ್ತಿಯ ಜೀವನದಲ್ಲಿ ಸುಖ, ನೆಮ್ಮದಿ ಮತ್ತು ಸಂಪತ್ತು ಒದಗಿ ಬರಲು ಕೆಲವು ಗಿಡಗಳು ಹೇಗೆ ಸಹಾಯಕವಾಗುತ್ತವೆ ಎಂಬುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಮನಿಪ್ಲಾಂಟ್ (Money plant) ಅನ್ನು ಮನೆಯ ಒಳಗೆ ಅಥವಾ ಹೊರಗೆ ನೆಡುವುದರಿಂದ ಆರ್ಥಿಕ (Economic) ಸಮೃದ್ಧಿ ಬರುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಅದರ ಜೊತೆಗೆ ಇನ್ನು ಕೆಲವು ವಿಶೇಷ ಸಸ್ಯಗಳಿದ್ದು ಅವುಗಳನ್ನು ಮನೆಯ ಮುಖ್ಯದ್ವಾರದಲ್ಲಿ ನೆಡುವುದರಿಂದ ಆರ್ಥಿಕ ಸಂಪತ್ತು ಹೆಚ್ಚಲಿದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ಸಸ್ಯಗಳು ಯಾವುದು ಎಂಬುದನ್ನು ತಿಳಿಯೋಣ.. ಈ ಮೂಲಕ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಬಲ ಪಡಿಸಿಕೊಳ್ಳುವ ಮಾರ್ಗವನ್ನು ತಿಳಿಯಬಹುದಾಗಿದೆ.
ಮನೆಯ ಮುಖ್ಯದ್ವಾರದ ಬಳಿ ಕೆಲವು ಗಿಡಗಳನ್ನು ನೆಡುವುದರಿಂದ ಆ ಮನೆಯಲ್ಲಿ ಲಕ್ಷ್ಮೀ (Lakshmi) ಸದಾ ನೆಲೆಸಿರುತ್ತಾಳೆ. ಆ ಮೂರು ಗಿಡಗಳ ಬಗ್ಗೆ ಇನ್ನಷ್ಟು ತಿಳಿಯೋಣ..
ಶಮೀ ವೃಕ್ಷ : ಪುರಾಣ ಕಾಲದಿಂದಲೂ ಅತ್ಯಂತ ಪವಿತ್ರ ವೃಕ್ಷ ಎಂದೇ ಕರೆಯಲ್ಪಡುವ ಶಮೀ ವೃಕ್ಷವನ್ನು ಮನೆಯ ಮುಖ್ಯ ದ್ವಾರದ (Entrance) ಎಡ ಬದಿಗೆ ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಮೀ ಗಿಡವನ್ನು ನೆಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲವೆಂದು ಸಹ ಹೇಳಲಾಗುತ್ತದೆ.
ಇದನ್ನು ಓದಿ: ಮಗು ಹುಟ್ಟಿದ ವಾರದ ಪ್ರಕಾರ ಭವಿಷ್ಯ ಹೇಗಿದೆ ನೋಡಿ..
ದಾಳಿಂಬೆ ಗಿಡ : ಮನೆಯ ಮುಖ್ಯದ್ವಾರದ ಬಲ ಬದಿಗೆ ದಾಳಿಂಬೆ (Promogranate) ಗಿಡವನ್ನು ನೆಡುವುದರಿಂದ ಸಹ ವ್ಯಕ್ತಿಯು ಅತ್ಯಂತ ಭಾಗ್ಯವನ್ನು ಹೊಂದುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ದಾಳಿಂಬೆ ಗಿಡವನ್ನು ನೆಡುವುದರಿಂದ ಲಕ್ಷ್ಮೀ ದೇವಿ ಮತ್ತು ಕುಬೇರ ದೇವರನ್ನು ಆಕರ್ಷಿಸಿದಂತಾಗುತ್ತದೆ. ದಾಳಿಂಬೆ ಗಿಡವು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯದ್ವಾರದ ಬಳಿ ನೆಡುವುದರಿಂದ ನೆಗೆಟಿವ್ ಎನರ್ಜಿಯನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ.
ಬಿಲ್ವ ಪತ್ರೆ : ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವ (Bilva) ಪತ್ರೆಯ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡುವುದು ಒಳ್ಳೆಯದು. ಇದರಿಂದ ಅನಾವಶ್ಯಕ ಖರ್ಚಿಗೆ (Expenditure) ಕಡಿವಾಣ ಬೀಳುವುದಲ್ಲದೇ, ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಕೂಡಾ ಹೆಚ್ಚುವಲ್ಲಿ ಇದು ಸಹಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ಮನೆಯ ಹಿಂದೆ ಬಾಳೆ, ಮನೆಯ ಮುಂದೆ ಬಿಲ್ವ ಆಮೇಲೆ ನೋಡಿ ಲಕ್ಷ್ಮೀ ದೇವಿಯ ಕೃಪಾಶೀರ್ವಾದ ಸಿಗುವ ರೀತಿ... ಹಾಗಾಗಿ ಮನೆಯ ಹಿಂದೆ ಬಾಳೆ ಗಿಡ ಮತ್ತು ಮನೆಯ ಮುಂದೆ ಬಿಲ್ವ ಪತ್ರೆ ಗಿಡವನ್ನು ನೆಡುವುದರಿಂದ ಶುಭವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಈ ಸೂಚನೆಗಳು ಕಂಡರೆ, ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದರ್ಥ!
ಈ ರೀತಿಯ ಉಪಾಯ ಮಾಡಿ ಮನೆಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿಯ ಜೊತೆಗೆ ದೇವರ ಕೃಪೆ ಸಾಧ್ಯವಾಗುತ್ತದೆ. ಅದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದಲ್ಲದೇ, ಹಣ ಬಂದು ಸೇರುತ್ತಾ ಹೋಗುತ್ತದೆ. ಅಷ್ಟೇ ಅಲ್ಲದೆ ಸಾಲ ಕೊಟ್ಟ ಹಣ ವಾಪಸ್ ಬಂದು ನಿಮ್ಮ ಕೈ ಸೇರುತ್ತದೆ.