ಗಾಯತ್ರಿ ಮಂತ್ರ ಪಠಿಸಿ ಈ ಐದು ಪ್ರಯೋಜನ ಪಡೆಯಿರಿ

ಮಾನಸಿಕ ನೆಮ್ಮದಿಗಾಗಿ ತವಕಿಸುತ್ತಿರುವ ಇಂದಿನ ದಿನಗಳಲ್ಲಿ ವರವಾಗಿ ಸಿಕ್ಕಿರುವುದು ಗಾಯತ್ರಿ ಮಂತ್ರ. ಪುರಾಣ ಕಾಲದಿಂದಲೂ ಶಕ್ತಿಶಾಲಿ ಮಂತ್ರವೆಂದೇ ಕರೆಯಲ್ಪಡುವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮತ್ತಷ್ಟು ತಿಳಿಯೋಣ...  

Chanting goddess Gayathri mantra benefits on life and health

ಪುರಾಣದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಗಾಯತ್ರಿ ಮಂತ್ರವು (Gayathri Mantra) ಅತ್ಯಂತ ಶಕ್ತಿಶಾಲಿ (Strength)  ಮಂತ್ರವೆಂದೇ ಹೇಳಲಾಗುತ್ತದೆ. ಪೌರಾಣಿಕ ಗ್ರಂಥಗಳಲ್ಲಿ ಮತ್ತು ಶಾಸ್ತ್ರಗಳಲ್ಲಿ ಗಾಯತ್ರಿ ಮಂತ್ರದ ಪ್ರಯೋಜನಗಳ (Benefits) ಬಗ್ಗೆ ಅತ್ಯಂತ ವಿವರವಾಗಿ ಉಲ್ಲೇಖಿಸಿದ್ದಾರೆ. ಗಾಯತ್ರಿ ದೇವಿಯ ಸ್ಮರಣೆ ಮತ್ತು ಉಪಾಸನೆಯಿಂದ ಸಕಲ ಕಷ್ಟಗಳು ದೂರವಾಗುತ್ತವೆ ಮತ್ತು ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. 

ಹಿಂದೂ ಸನಾತನ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಬ್ರಹ್ಮೋಪದೇಶ (Thread ceremony) ಮಾಡುವ ಸಮಯದಲ್ಲಿ ವಟುವಿಗೆ ಪುರೋಹಿತರ ಆದೇಶದಂತೆ ತಂದೆಯು ಗಾಯತ್ರಿ ಮಂತ್ರವನ್ನು ಉಪದೇಶಿಸುವ ಪದ್ಧತಿ ಪುರಾಣ ಕಾಲದಿಂದಲೂ ಪ್ರಸಿದ್ಧವಾಗಿದೆ. ಈ ಮಂತ್ರದ ಉಪದೇಶ ಪಡೆದ ನಂತರ ಅದನ್ನು ವಿಧಿವತ್ತಾಗಿ, ಸರಿಯಾದ ಸಮಯದಲ್ಲಿ ಪಠಿಸುವುದರಿಂದ (Chanting) ಅನೇಕ ಪ್ರಯೋಜನಗಳಿವೆ.
ಇಂದಿನ ಒತ್ತಡದ ಜಗತ್ತಿನಲ್ಲಿ ಧ್ಯಾನ, ಯೋಗ ಮಾಡಲು ಸಮಯವಿಲ್ಲದೇ ಇರುವವರು ಕೆಲ ನಿಮಿಷಗಳ ಕಾಲ ಸಂಧ್ಯಾವಂದನೆ (Sandyavandane) ಮಾಡಿದರೆ ಅಥವಾ ಗಾಯತ್ರಿ ಮಂತ್ರವನ್ನು ಪಠಿಸಿದರೆ ಸಾಕು. ಆ ಮಂತ್ರದಲ್ಲಿರುವ ಶಕ್ತಿಯಿಂದ ಒತ್ತಡ (Stress), ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು (Mental illness) ದೂರವಾಗುವುದಲ್ಲದೇ, ಜೀವನದಲ್ಲಿ ಮಾನಸಿಕ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ಅಂಥ ಪವಿತ್ರ ಮತ್ತು ಶಕ್ತಿಯುತ ಮಂತ್ರವಾದ ಗಾಯತ್ರಿ ಮಂತ್ರದ ಬಗ್ಗೆ ಮತ್ತಷ್ಟು ತಿಳಿಯೋಣ...

ಗಾಯತ್ರಿ ಮಂತ್ರವನ್ನು ಪಠಿಸುವ ಸಮಯ : 
ಗಾಯತ್ರಿ ಮಂತ್ರವನ್ನು ತ್ರಿಕಾಲದಲ್ಲೂ ಪಠಿಸಬಹುದಾಗಿದೆ. ಅಂದರೆ ಪ್ರಾತಃ ಕಾಲದಲ್ಲಿ ಸೂರ್ಯೋದಯವಾದ (Sunrise) ನಂತರ, ಮಧ್ಯಾಹ್ನದ ಹೊತ್ತು ಮತ್ತು ಸಂಧ್ಯಾ ಸಮಯದಲ್ಲಿ ಸೂರ್ಯಾಸ್ತವಾಗುವ (Sunset) ಸ್ವಲ್ಪ ಹೊತ್ತಿನ ಮುಂಚೆ ಆರಂಭಿಸಿ ಸೂರ್ಯಸ್ತವಾದ ಸ್ವಲ್ಪ ಹೊತ್ತಿನವರೆಗೂ ಜಪಿಸಬೇಕೆಂದು ಶಾಸ್ತ್ರ ಹೇಳುತ್ತದೆ.

ಇದನ್ನು ಓದಿ: ಜೂನ್‌ನಲ್ಲಿ ಹುಟ್ಟಿದೋರ ಭವಿಷ್ಯ, ಗುಣ-ಸ್ವಭಾವ ತಿಳಿಯಿರಿ!

ವಿದ್ಯಾರ್ಥಿಗಳಿಗೆ ಲಾಭದಾಯಕ 
ಗಾಯತ್ರಿ ಮಂತ್ರವನ್ನು ವಿದ್ಯಾರ್ಥಿಗಳು (Students) ಪಠಿಸಿದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಮಂತ್ರವನ್ನು ಪಠಿಸುವುದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಹೆಚ್ಚಿನ ಜ್ಞಾನ (Knowledge) ಪಡೆಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ಸ್ಮರಣ ಶಕ್ತಿ ಹೆಚ್ಚುತ್ತದೆ. ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಮಂತ್ರ ಪ್ರಯೋಜನಕಾರಿಯಾಗಿದೆ. ಹಾಗಾಗಿ ಶಿಕ್ಷಣದಲ್ಲಿ ಸಫಲತೆಯನ್ನು ಕಾಣಬಯಸುವವರು ಈ ಮಂತ್ರವನ್ನು ಜಪಿಸಬೇಕು.

ಉತ್ಸಾಹ - ಪಾಸಿಟಿವ್ ಎನರ್ಜಿ (Positive energy)
ಗಾಯತ್ರಿ ಮಂತ್ರವನ್ನು ಜಪ ಮಾಡುವುದರಿಂದ ಜೀವನದಲ್ಲಿ ಉತ್ಸಾಹ ಮೂಡುತ್ತದೆ. ಅದರಲ್ಲೂ ಮುಖ್ಯವಾಗಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಎಂಥದ್ದೇ ಕಷ್ಟದ ಪರಿಸ್ಥಿತಿ ಎದುರಾದರೂ ಅದರಿಂದ ಹೊರಬರುವ ಧೈರ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಸಹ ಇದು ಸಹಕಾರಿಯಾಗುತ್ತದೆ. ಜೀವನದಲ್ಲಿ ಸುಖ ಮತ್ತು ಸಮೃದ್ಧಿ ನೆಲಸುತ್ತದೆ.

ಕ್ರೋಧ ನಿಯಂತ್ರಣಕ್ಕೆ ಸಹಕಾರಿ (Anger control)
ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಸಿಟ್ಟು ನಿಯಂತ್ರಣಕ್ಕೆ ಬರುತ್ತದೆ. ಈ ಮಂತ್ರ ಪಠಣೆಯಿಂದ ಮಾನಸಿಕ ಶಾಂತಿ ದೊರಕುತ್ತದೆ. ಹೆಚ್ಚಿನ ಕ್ರೋಧ ಉಳ್ಳವರು ಈ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಸಿಟ್ಟು ನಿಯಂತ್ರಣಕ್ಕೆ ಬರುತ್ತದೆ.

ಇದನ್ನು ಓದಿ: ಏನು ಮಾಡಿದರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ? ಈ ಗಿಡೆ ನೆಟ್ಟು ನೋಡಿ

ಕಾರ್ಯ ಸಫಲತೆಗೆ ಈ ಮಂತ್ರ (Success)
ಗಾಯತ್ರಿ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಅನೇಕ ಸಿದ್ಧಿಗಳನ್ನು ಪಡೆಯಬಹುದಾಗಿದೆ. ಯಶಸ್ಸು ನೀಡುವ ಮಂತ್ರ ಇದಾಗಿದ್ದು ಕಾರ್ಯ ಸಫಲತೆಗೆ ಈ ಮಂತ್ರವು ರಾಮಬಾಣವಾಗಿದೆ. ಸಪ್ತ ಚಕ್ರಗಳು ಜಾಗೃತವಾಗಲು ಈ ಮಂತ್ರ ಸಹಕಾರಿಯಾಗಿದೆ. 

ಆರೋಗ್ಯಕ್ಕೆ ಸಿದ್ಧಮಂತ್ರ (For Good Health)
ನಿರಂತರವಾಗಿ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ರೀತಿಯ ಕಾಯಿಲೆಗಳು ಗುಣವಾಗುತ್ತವೆ. ಈ ಮಂತ್ರವನ್ನು ಜಪಿಸುವುದರಿಂದ ಮುಖದಲ್ಲಿ ತೇಜಸ್ಸು ಮತ್ತು ಆರೋಗ್ಯ ಲಭಿಸುತ್ತದೆ. ಅಷ್ಟೇ ಅಲ್ಲದೆ ಕಣ್ಣುಗಳಿಗೆ ವಿಶೇಷ ಶಕ್ತಿ ದೊರಕುತ್ತದೆ.

Latest Videos
Follow Us:
Download App:
  • android
  • ios