ಮಳೆಗಾಲದಲ್ಲಿ ಹುಟ್ಟಿದವರಾ ನೀವು? ಸೀಸನ್‌ಗೆ ತಕ್ಕಂತೆ ಬದಲಾಗುತ್ತೆ ವ್ಯಕ್ತಿತ್ವ

 ಹಿಂದೂ ಪಂಚಾಂಗದಲ್ಲಿ ಆಯಾ ಮಾಸಗಳಿಗೆ ತಕ್ಕಂತೆ ಋತುಮಾನವನ್ನು ವಿಂಗಡಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಯಾವ ಋತುವಿನಲ್ಲಿ ಜನಿಸಿದ್ದಾರೆ ಎಂಬುದರ ಆಧಾರದ ಮೇಲೆ ಅವರ ಗುಣ ಸ್ವಭಾವಗಳನ್ನು ತಿಳಿಸಿದ್ದಾರೆ. ಹಾಗಾದರೆ ಆರು ಋತುಗಳಲ್ಲಿ ಅವುಗಳಿಗೆ ಹೇಳಿರುವ ಮಾಸಗಳು ಮತ್ತು ಗುಣ ಲಕ್ಷಣಗಳ ಬಗ್ಗೆ ತಿಳಿಯೋಣ...

Rainy season born people nature and personality

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಬೇರೆ ರಾಶಿ, ನಕ್ಷತ್ರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಹಾಗೆಯೇ ಹಿಂದೂ ಪಂಚಾಂಗದ ಪ್ರಕಾರ ಆರು  ಋತುಗಳಿವೆ. ಆಯಾ ಕಾಲಕ್ಕೆ ತಕ್ಕಂತೆ ಅಂದರೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ ಹೀಗೆ ಋತುಗಳನ್ನುವಿಂಗಡಿಸಲಾಗಿದೆ. ಎರಡು ಮಾಸಗಳಿಗೆ ಒಂದು ಋತುವಿನಂತೆ ಕಾಲವನ್ನು ವಿಂಗಡಿಸಿದ್ದಾರೆ. ಚೈತ್ರ, ವೈಶಾಖಕ್ಕೆ ವಸಂತ ಋತು, ಜ್ಯೇಷ್ಠ, ಆಷಾಢಕ್ಕೆ ಗ್ರೀಷ್ಮ ಋತು, ಶ್ರಾವಣ, ಭಾದ್ರಪದ ಮಾಸಕ್ಕೆ ವರ್ಷ ಋತು, ಆಶ್ವಯುಜ, ಕಾರ್ತೀಕಕ್ಕೆ – ಶರದ್ ಋತು, ಮಾರ್ಗಶಿರ, ಪುಷ್ಯಕ್ಕೆ ಹೇಮಂತ ಋತು, ಮಾಘ ಮತ್ತು ಫಾಲ್ಗುಣ ಮಾಸಕ್ಕೆ ಶಿಶಿರ ಋತು ಹೀಗೆ ಮಾಸಗಳಿಗೆ ಋತುವನ್ನು ಹೇಳಿದ್ದಾರೆ.  ಹಾಗಾದರೆ ಬೇರೆ ಬೇರೆ ಋತುಗಳಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೇಗಿರುತ್ತದೆ ಎಂಬುದನ್ನು ತಿಳಿಯೋಣ..

ವರ್ಷ ಋತು (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್)
ಈ ಋತುವಿನಲ್ಲಿ ಜನಿಸಿದವರು ಗುಣವಂತರಾಗಿರುತ್ತಾರೆ. ಸಜ್ಜನಿಕೆಯಿಂದ ಇರುವುದಲ್ಲದೇ ಉತ್ತಮ ವ್ಯವಹಾರಕ್ಕೆ (Business) ಹೆಸರುವಾಸಿ ಆಗಿರುತ್ತಾರೆ. ರಾಜರಿಗೆ ಸಿಗುವ ಗೌರವ ಈ ವ್ಯಕ್ತಿಗಳಿಗೆ ಸಿಗುತ್ತದೆ. ಉತ್ತಮ ಜೀವನ ಸಿಗುತ್ತದೆ. ಜನರೊಂದಿಗೆ ಬೆರೆತು ಕೆಲಸ ಮಾಡುವವರು ಇವರಾಗಿರುತ್ತಾರೆ. ಯಶಸ್ಸನ್ನು ಪಡೆಯಲು ಪರಿಶ್ರಮವನ್ನೂ ಪಡುತ್ತಾರೆ. ಸೋಲೊಪ್ಪಿಕೊಳ್ಳುವ ಜಾಯಮಾನ ಇವರದ್ದಾಗಿರುವುದಿಲ್ಲ.

ಇದನ್ನು ಓದಿ: ಚಿತೆಯ ಪ್ರದಕ್ಷಿಣೆ - ಸಂಸ್ಕಾರದ ನಂತರ ಹಿಂದಿರುಗಿ ನೋಡಬಾರದು ಏಕೆ?

ಶಿಶಿರ ಋತು (ಫೆಬ್ರವರಿ, ಮಾರ್ಚ್, ಏಪ್ರಿಲ್)
ಈ ಋತುವಿನಲ್ಲಿ ಜನಿಸಿದವರು ಚೆಂದವಾಗಿರುತ್ತಾರೆ. ಅಷ್ಟೇ ಅಲ್ಲದೇ ಪ್ರಭಾವಶಾಲಿ (Effective) ವ್ಯಕ್ತಿತ್ವವನ್ನು ಸಹ ಹೊಂದಿರುತ್ತಾರೆ. ಈ ವ್ಯಕ್ತಿಗಳ ರೂಪ, ಸೌಂದರ್ಯ ಮತ್ತು ಯೌವ್ವನ ತುಂಬಾ ಕಾಲದ ವರೆಗೆ ಹಾಗೆಯೇ ಇರುತ್ತದೆ. ಈ ಋತುವಿನಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಆಕರ್ಷಕವಾಗಿರುತ್ತಾರೆ. ಅಷ್ಟೇ ಅಲ್ಲದೆ ಸದಾಕಾಲ ಆಗಿರುವ ವಯಸ್ಸಿಗಿಂತ ಕಡಿಮೆ ವಯಸ್ಸಿನವರಂತೆ ಕಾಣಿಸಿಕೊಳ್ಳುತ್ತಾರೆ. ಸ್ವಭಾವದಲ್ಲಿ ಹೆಚ್ಚು ಉಗ್ರರಾಗಿರುತ್ತಾರೆ. ತಮ್ಮ ಪ್ರಭಾವವನ್ನು ಮತ್ತೊಬ್ಬರ ಮೇಲೆ ಹೇರುವ ಮನಸ್ಥಿತಿ ಇವರದ್ದಾಗಿರುತ್ತದೆ.

ವಸಂತ ಋತು (ಏಪ್ರಿಲ್, ಮೇ, ಜೂನ್)
ಈ ಋತುವಿನಲ್ಲಿ ಜನಿಸಿದವರು ಹೆಚ್ಚು ಪರಿಶ್ರಮಿಗಳಾಗಿರುತ್ತಾರೆ. ಸ್ವಂತ ಶ್ರಮದಿಂದಲೇ (Effort) ಮುಂದೆ ಬರುತ್ತಾರೆ. ತಮ್ಮ ಅದೃಷ್ಟವನ್ನು ತಾವೇ ಕಂಡುಕೊಳ್ಳುತ್ತಾರೆ. ಅನೇಕ ಪ್ರತಿಭೆಗಳನ್ನು ಈ ಋತುವಿನಲ್ಲಿ ಜನಿಸಿದವರು ಹೊಂದಿರುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಸಹ ಇವರದ್ದಾಗಿರುತ್ತದೆ. 

ಇದನ್ನು ಓದಿ: ಸೋಮವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ

ಗ್ರೀಷ್ಮ ಋತು (ಜೂನ್, ಜುಲೈ, ಆಗಸ್ಟ್)
ಈ ಋತುವಿನಲ್ಲಿ ಜನಿಸಿದವರು ಮಲ್ಟಿಟಾಸ್ಕಿಂಗ್‌ನಲ್ಲಿ ನಿಸ್ಸೀಮರಾಗಿರುತ್ತಾರೆ. ಹಲವು ಕೆಲಸಗಳನ್ನು (Work) ಒಂದೇ ಬಾರಿಗೆ ಪೂರ್ಣಗೊಳಿಸುತ್ತಾರೆ. ಈ ವ್ಯಕ್ತಿಗಳಿಗೆ ಸಿಟ್ಟನ್ನು ನಿಯಂತ್ರಣ ಮಾಡಿಕೊಳ್ಳುವ ಕಲೆ ತಿಳಿದಿರುತ್ತದೆ. ಅಷ್ಟೇ ವಿನಯವಂತರು ಸಹ ಇವರಾಗಿರುತ್ತಾರೆ. ಇವರು ಬುದ್ಧಿವಂತರು ಮತ್ತು ತರ್ಕಬದ್ಧವಾಗಿ ಯೋಚಿಸುವ ಮನಸ್ಥಿತಿ ಉಳ್ಳವರಾಗಿರುತ್ತಾರೆ.

ಶರದ್ ಋತು (ಅಕ್ಟೋಬರ್, ನವೆಂಬರ್, ಡಿಸೆಂಬರ್)
ಈ ಋತುವಿನಲ್ಲಿ ಜನಿಸಿದವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಜ್ಞಾನವನ್ನು (Knowledge) ಹೊಂದಿರುತ್ತಾರೆ. ಯಶಸ್ಸಿ ವ್ಯಾಪಾರಿಗಳಾಗುವ ಗುಣ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಕುಶಲತೆಯನ್ನು ಹೊಂದಿರುತ್ತಾರೆ. ಎಲ್ಲರೊಂದಿಗೂ ಬೆರೆಯುವ ಗುಣವನ್ನು ಹೊಂದಿರುತ್ತಾರೆ.

ಹೇಮಂತ ಋತು (ಡಿಸೆಂಬರ್, ಜನವರಿ, ಫೆಬ್ರವರಿ)
ಈ ಋತುವಿನಲ್ಲಿ ಜನಿಸಿದ ವ್ಯಕ್ತಿಗಳು ಸ್ವಭಾವದಲ್ಲಿ ಅತ್ಯಂತ ಚುರುಕಾಗಿರುತ್ತಾರೆ (Brave). ಅಷ್ಟೇಅಲ್ಲದೇ ಅತ್ಯಂತ ಚಾಣಾಕ್ಷತನವನ್ನು ಹೊಂದಿರುತ್ತಾರೆ ಮತ್ತು ತಮ್ಮ ನಿಲುವನ್ನು ಇನ್ನೊಬ್ಬರಿಗೆ ಅರ್ಥವಾಗುವಂತೆ ತಿಳಿಸುವ ಗುಣ ಇವರಲ್ಲಿರುತ್ತದೆ. ಆದರೆ ಈ ವ್ಯಕ್ತಿಗಳು ಜೀವನದ್ಲಲಿ ಅನೇಕ ಸಮಸ್ಯೆಗಳನ್ನು (Problem) ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಈ ವ್ಯಕ್ತಿಗಳಿಗೆ ರೋಗನಿರೋಧಕ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಹಾಗಾಗಿ ಆಗಾಗ ರೋಗಗಳಿಗೆ ತುತ್ತಾಗುತ್ತಾರೆ.

Latest Videos
Follow Us:
Download App:
  • android
  • ios