ಚಿತೆಯ ಪ್ರದಕ್ಷಿಣೆ - ಸಂಸ್ಕಾರದ ನಂತರ ಹಿಂದಿರುಗಿ ನೋಡಬಾರದು ಏಕೆ?
ಸಹಜವಾಗಿ ಆತ್ಮ, ಸಾವು ಮತ್ತು ಜನ್ಮ ಇವುಗಳ ಬಗ್ಗೆ ಅನೇಕರಿಗೆ ಗೊಂದಲವಿರುತ್ತದೆ. ಆ ಎಲ್ಲ ಗೊಂದಲಗಳನ್ನು ಗರುಡ ಪುರಾಣದಲ್ಲಿರುವ ವಿಚಾರಗಳನ್ನು ಅರಿಯುವುದರ ಮೂಲಕ ಬಗೆಹರಿಸಿಕೊಳ್ಳ ಬಹುದಾಗಿದೆ. ಮೃತ್ಯುವಾದ ಬಳಿಕ ಮಾಡುವ ಅನೇಕ ಶಾಸ್ತ್ರಗಳಲ್ಲಿ ದಹನ ಸಂಸ್ಕಾರವು ಒಂದಾಗಿದೆ. ಚಿತೆಗೆ ಪ್ರದಕ್ಷಿಣೆ ಹಾಕುವುದು ಏಕೆ ಮತ್ತು ಶವ ಸಂಸ್ಕಾರದ ಬಳಿಕ ಹಿಂದೆ ತಿರುಗಿ ನೋಡಬಾರದೇಕೆ..? ಇವುಗಳ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ...
ಗರುಡ ಪುರಾಣದಲ್ಲಿ ಮೃತ್ಯುವಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿರುವ ವಿಶೇಷ ಪುರಾಣಗಳಲ್ಲಿ ಗರುಡ ಪುರಾಣವು(Garuda purana) ಸಹ ಒಂದಾಗಿದೆ. ಜನ್ಮವಾದಾಗಿನಿಂದ ಮೃತ್ಯುವಾಗುವವರೆಗೆ ಮತ್ತು ಮೃತ್ಯುವಿನ (Death) ನಂತರ ಆತ್ಮದ ಬಗ್ಗೆ ಬರುವ ಅನೇಕ ವಿಷಯಗಳನ್ನು ಗರುಡ ಪುರಾಣ ತಿಳಿಸುತ್ತದೆ. ಜನ್ಮವಾದ ನಂತರ ಮೃತ್ಯು ನಿಶ್ಚಿತವಾಗಿರುತ್ತದೆ. ವ್ಯಕ್ತಿಯ ಮೃತ್ಯುವಾದ ನಂತರ ಶರೀರವನ್ನು ತ್ಯಜಿಸಿದ ಆತ್ಮ ನಂತರ ಮತ್ತೊಂದು ಶರೀರವನ್ನು ಧಾರಣೆ ಮಾಡುತ್ತದೆ. ಆತ್ಮಕ್ಕೆ ಮೋಕ್ಷ ಸಿಗುವವರೆಗೂ ಜೀವನ (Life) ಮತ್ತು ಮರಣ ಚಕ್ರ ಮುಂದುವರೆಯುತ್ತಾ ಹೋಗುತ್ತದೆ ಎಂಬುದಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ. ವ್ಯಕ್ತಿಯ ಮೃತ್ಯುವಾದ ಬಳಿಕ ಆತ್ಮ ಹೊರಬರುತ್ತದೆ. ಆದರೆ ಆ ಆತ್ಮದ ಆಸೆ ಆಕಾಂಕ್ಷೆಗಳು ಸಮಾಪ್ತಿಗೊಂಡಿರುವುದಿಲ್ಲ. ಹಾಗಾಗಿಯೇ ಆಸೆ (Desires) ಮತ್ತು ಮೋಹಗಳನ್ನು ಸಮಾಪ್ತಿಗೊಳಿಸುವ ಸಲುವಾಗಿ ಅಂತಿಮ ಸಂಸ್ಕಾರದ (Funeral) ಸಮಯದಲ್ಲಿ ಕೆಲವು ಶಾಸ್ತ್ರ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಶವಕ್ಕೆ ಅಗ್ನಿ (Fire) ಸ್ಪರ್ಶ ಮಾಡುವ ಮೊದಲು ಶವದ ಪ್ರದಕ್ಷಿಣೆ ಮಾಡಲಾಗುತ್ತದೆ. ಆ ಎಲ್ಲ ಶಾಸ್ತ್ರಗಳು ಮುಕ್ತಾಯವಾದ ನಂತರ ಹಿಂದಿರುಗಿ ನೋಡದೇ ಮನೆಗೆ ಬರಬೇಕೆಂಬ ಶಾಸ್ತ್ರ ನಿಯಮವಿದೆ. ಆ ನಿಯಮಗಳಿಗೆ ಕಾರಣವೆನೇಂಬುದನ್ನು ಗರುಡ ಪುರಾಣ ತಿಳಿಸುತ್ತದೆ. ಹಾಗಾದರೆ ಈ ಎಲ್ಲ ಶಾಸ್ತ್ರಗಳು ಮತ್ತು ನಿಯಮಗಳ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ ಎಂಬುದನ್ನು ನೋಡೋಣ.
ಇದನ್ನು ಓದಿ: ಚಾತುರ್ಮಾಸದಲ್ಲಿ ಈ ರಾಶಿಯವರಿಗೆ ವಿಷ್ಣುವಿನ ವಿಶೇಷ ಕೃಪೆ
ಚಿತೆಯ ಪ್ರದಕ್ಷಿಣೆ (Peristrephic)
ಹಿಂದೂ ಧರ್ಮದಲ್ಲಿ ಮೃತ ಪಟ್ಟರೆ ಆ ವ್ಯಕ್ತಿಯ ದಹನ ಸಂಸ್ಕಾರವನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಚಿತೆಯ ಪ್ರದಕ್ಷಿಣೆಯನ್ನು ಮಾಡಲಾಗುತ್ತದೆ. ಮಡಕೆಗೆ ತೂತು ಮಾಡಿ ಅದರಲ್ಲಿ ನೀರನ್ನು ತುಂಬಿರುತ್ತಾರೆ, ಅದನ್ನು ಹೆಗಲ ಮೇಲಿಟ್ಟುಕೊಂಡು ಪ್ರದಕ್ಷಿಣೆ ಮಾಡಲಾಗುತ್ತದೆ. ಹೀಗೆ ಪ್ರದಕ್ಷಿಣೆ () ಮಾಡಿದ ನಂತರ ಅದನ್ನು ಒಡೆಯಲಾಗುತ್ತದೆ. ಈ ಪ್ರದಕ್ಷಿಣೆಯು ಮೃತ ವ್ಯಕ್ತಿಗೆ ಸಲ್ಲಿಸುವ ಶ್ರದ್ಧೆಯ ಪ್ರತೀಕವಾಗಿರುತ್ತದೆ. ಮಡಕೆಯನ್ನು ಒಡೆಯುವ ಉದ್ದೇಶವು ಆಸೆ ಮತ್ತು ಮೋಹಗಳನ್ನು ಬಿಡಬೇಕೆಂಬ ಸಂಕೇತವಾಗಿರುತ್ತದೆ. ಆತ್ಮಕ್ಕೆ ಸತ್ಯವನ್ನು ತಿಳಿಸುವ ಉದ್ದೇಶ ಇದಾಗಿರುತ್ತದೆ.
ಈ ವಸ್ತುಗಳನ್ನು ದಾನ ಮಾಡಿ (Donation)
ಸಾವಿನ ನಂತರ ವ್ಯಕ್ತಿಯ ಕರ್ಮಗಳು ಮಾತ್ರ ಜೊತೆಗಿರುತ್ತವೆ. ಹಾಗಾಗಿ ಜೀವಿತಾವಧಿಯಲ್ಲಿ ಎಳ್ಳು, ಲೋಹ, ಬಂಗಾರ, ಉಪ್ಪು ಇವುಗಳನ್ನು ದಾನ ಮಾಡಬೇಕು. ಅಷ್ಟೇ ಅಲ್ಲದೆ ಅನ್ನ, ಭೂಮಿ, ಗೋವು (cow), ಜಲಪಾತ್ರೆಗಳು ಮತ್ತು ಪಾದುಕೆಗಳನ್ನು ದಾನವಾಗಿ ನೀಡಬೇಕೆಂದು ಹೇಳಲಾಗುತ್ತದೆ. ಈ ಎಲ್ಲ ವಸ್ತುಗಳನ್ನು ದಾನವಾಗಿ ನೀಡುವುದರಿಂದ, ಸಾವಿನ ನಂತರ ಯಮದೂತರ ಜೊತೆ ಹೋಗುವಾಗ ಈ ವಸ್ತುಗಳು ಪ್ರಾಪ್ತವಾಗುತ್ತವೆ. ಜೀವಿತಾವಧಿಯಲ್ಲಿ ದಾನ ಮಾಡಿಲ್ಲವೆಂದ ಪಕ್ಷದಲ್ಲಿ ಮೃತರ ಸಂಬಂಧಿಗಳು ವ್ಯಕ್ತಿಯು ಸಾವನ್ನಪ್ಪಿದ ಸಮಯದಲ್ಲಿ ಈ ವಸ್ತುಗಳನ್ನು ದಾನ ನೀಡಿದರೆ ಅವು ಯಮಮಾರ್ಗದಲ್ಲಿ ಸಹಾಯಕ್ಕೆ ಬರುತ್ತವೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: Morning Habits: ಕೈ ನೋಡಿ ಲಕ್ಷ್ಮೀನ ನೆನೆಯಿರಿ, ಶುಭವಾಗುತ್ತೆ
ಹಿಂತಿರುಗಿ ನೋಡಬಾರದೇಕೆ? ( Why not look back)
ಗರುಡ ಪುರಾಣದ ಪ್ರಕಾರ ಶವಕ್ಕೆ ಅಗ್ನಿ ಸ್ಪರ್ಶ ಮಾಡಿದ ನಂತರವೂ ಆತ್ಮಕ್ಕೆ ಜೀವಿತದಲ್ಲಿ ಇದ್ದ ಮೋಹವು ನಾಶವಾಗಿರುವುದಿಲ್ಲ ಹಾಗಾಗಿ ಯಾರದ್ದಾದರೂ ಶರೀರದಲ್ಲಿ ಪ್ರವೇಶಿಸುವ ಬಯಕೆಯನ್ನು ಅದು ಹೊಂದಿರುತ್ತದೆ. ಹಾಗಾಗಿ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಂಬಂಧಿಗಳು ವ್ಯಕ್ತಿಯ ಮೋಹವನ್ನು ನಾಶಗೊಳಿದ್ದೇವೆ, ಹಾಗಾಗಿ ಆತ್ಮವು ಈಗ ತನ್ನ ಮಾರ್ಗದಲ್ಲಿ (Road) ಮುಂದುವರೆಯಬೇಕೆಂಬ ಸಂದೇಶವನ್ನು ತಿಳಿಸುವ ಉದ್ದೇಶ ಇದಾಗಿರುತ್ತದೆ. ಹಾಗಾಗಿ ಹಿಂತಿರುಗಿ ನೋಡಬಾರದೆಂದು ಹೇಳಲಾಗುತ್ತದೆ.