ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ಪರಿಶೀಲಿಸಿ ಭವಿಷ್ಯದ ಬಗ್ಗೆ ಹೇಳಬಹುದು. ಜಾತಕದಲ್ಲಿರುವ ಯೋಗಗಳ ಬಗ್ಗೆಯೂ ತಿಳಿಯಬಹುದು. ರಾಜಯೋಗವಿದ್ದರೆ ಆ ವ್ಯಕ್ತಿಯು ಜೀವನದಲ್ಲಿ ಹೆಚ್ಚು ಸುಖವಾಗಿರುತ್ತಾನೆ. ಸಂಸಾರ ಜೀವನದಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ. ರಾಜನಂತೆ ವೈಭೋಗದ ಜೀವನ ನಡೆಸುತ್ತಾನೆ ಎಂದರ್ಥ.

ಜಾತಕದಲ್ಲಿ ಒಂಭತ್ತನೇ ಮನೆಯನ್ನು ಭಾಗ್ಯಸ್ಥಾನವೆಂದು, ಹತ್ತನೇ ಮನೆಯನ್ನು ಕರ್ಮಸ್ಥಾನವೆಂದು ಹೇಳುತ್ತಾರೆ. ಈ ಎರಡು ಸ್ಥಾನಗಳಲ್ಲಿ ಗ್ರಹಗಳ ಸ್ಥಿತಿ ಶುಭವಾಗಿದ್ದರೆ ರಾಜಯೋಗವೆಂದು ಹೇಳಲಾಗುತ್ತದೆ. ಹಾಗಾಗಿ ಗ್ರಹಗಳ ಸ್ಥಿತಿ ರಾಶಿಗನುಸಾರ ರಾಜಯೋಗವಾಗುವ ಬಗ್ಗೆ ತಿಳಿಯೋಣ..

ಇದನ್ನು ಓದಿ: ಪಿತೃಪಕ್ಷದಲ್ಲಿ ಹೀಗೆ ಮಾಡಿ ಪಿತೃ ದೋಷದಿಂದ ಮುಕ್ತರಾಗಿ.. 

ಮೇಷ ರಾಶಿ
ಮೇಷ ರಾಶಿಯವರ ಜಾತಕದಲ್ಲಿ ಮಂಗಳ ಗ್ರಹವು ಭಾಗ್ಯಸ್ಥಾನದಲ್ಲಿ ಅಂದರೆ ಒಂಭತ್ತನೇ ಮನೆಯಲ್ಲಿ ಮತ್ತು ಗುರುಗ್ರಹವು ಕರ್ಮಸ್ಥಾನದಲ್ಲಿ ಅಂದರೆ ಹತ್ತನೆ ಮನೆಯಲ್ಲಿ ಸ್ಥಿತವಾಗಿದ್ದರೆ, ಮೇಷ ರಾಶಿಯವರ ಈ ಜಾತಕ ರಾಜಯೋಗವನ್ನು ಸೂಚಿಸುತ್ತದೆ.

ವೃಷಭ ರಾಶಿ
ವೃಷಭ ರಾಶಿಯವರ ಜಾತಕದಲ್ಲಿ ಶುಕ್ರಗ್ರಹವು ಒಂಭತ್ತನೇ ಮನೆಯಲ್ಲಿ ಮತ್ತು ಶನಿಗ್ರಹವು ಹತ್ತನೇ ಮನೆಯಲ್ಲಿ ಸ್ಥಿತವಾಗಿದ್ದು ಶುಭ ಸ್ಥಿತಿಯಲ್ಲಿದ್ದರೆ ಇದು ರಾಜಯೋಗವನ್ನು ಸೂಚಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರ ಜಾತಕದಲ್ಲಿ ಬುಧಗ್ರಹವು ಭಾಗ್ಯ ಸ್ಥಾನದಲ್ಲಿ ಮತ್ತು ಶನಿಗ್ರಹವು ಕರ್ಮಸ್ಥಾನದಲ್ಲಿದ್ದು ಶುಭ ಪ್ರಭಾವವನ್ನು ಬೀರುತ್ತಿದ್ದರೆ ಅಂಥ ಜಾತಕದ ವ್ಯಕ್ತಿಯು ರಾಜನಂತೆ ಜೀವನವನ್ನು ನಡೆಸುತ್ತಾನೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಜಾತಕದಲ್ಲಿ ಚಂದ್ರನು ಭಾಗ್ಯಸ್ಥಾನದಲ್ಲಿ ಮತ್ತು ಗುರುಗ್ರಹವು ಕರ್ಮಸ್ಥಾನದಲ್ಲಿ ಸ್ಥಿತವಾಗಿದ್ದರೆ ಅದಕ್ಕೆ ಕೇಂದ್ರ ತ್ರಿಕೋನ ರಾಜಯೋಗವೆಂದು ಹೇಳುತ್ತಾರೆ. ಇಂಥ ಜಾತಕದವರಿಗೆ ಜೀವನಪೂರ್ತಿ ಯಾವುದಕ್ಕೂ ಕೊರತೆ ಬರುವುದಿಲ್ಲ, ಸುಖಿಗಳಾಗಿರುತ್ತಾರೆ.

ಇದನ್ನು ಓದಿ: ನಿಮ್ಮ ಜಾತಕದಲ್ಲೂ ಈ ದೋಷಗಳಿರಬಹುದು, ಚೆಕ್ ಮಾಡಿಕೊಳ್ಳಿ! 

ಸಿಂಹ ರಾಶಿ
ಸಿಂಹರಾಶಿಯವರು ಜಾತಕದಲ್ಲಿ ಒಂಭತ್ತನೇ ಮತ್ತು ಹತ್ತನೇ ಮನೆಯಲ್ಲಿ ಸೂರ್ಯ ಹಾಗೂ ಮಂಗಳ ಗ್ರಹವು ಸ್ಥಿತವಾಗಿದ್ದರೆ ರಾಜಯೋಗವಾಗುತ್ತದೆ. ಈ ರಾಶಿಯ ಜಾತಕದವರು ವೈಭೋಗದ ಜೀವನವನ್ನು ನಡೆಸುತ್ತಾರೆ.

ಕನ್ಯಾ ರಾಶಿ
ಈ ರಾಶಿಯವರ ಜಾತಕದಲ್ಲಿ ಒಂದೇ ಸಮಯದಲ್ಲಿ ಭಾಗ್ಯ ಸ್ಥಾನದಲ್ಲಿ ಬುಧ ಮತ್ತು ಕರ್ಮ ಸ್ಥಾನದಲ್ಲಿ ಶುಕ್ರನು ಇದ್ದರೆ ಅಂಥ ಜಾತಕ ರಾಜಯೋಗವನ್ನು ಸೂಚಿಸುತ್ತದೆ.

ತುಲಾ ರಾಶಿ
ತುಲಾ ರಾಶಿಯವರ ಜಾತಕದಲ್ಲಿ ಶುಕ್ರ ಗ್ರಹವು ಭಾಗ್ಯಸ್ಥಾನದಲ್ಲಿ ಅಂದರೆ ಒಂಭತ್ತನೇ ಮನೆಯಲ್ಲಿ ಮತ್ತು ಬುಧಗ್ರಹವು  ಕರ್ಮಸ್ಥಾನದಲ್ಲಿ ಅಂದರೆ ಹತ್ತನೆ ಮನೆಯಲ್ಲಿ ಸ್ಥಿತವಾಗಿದ್ದರೆ, ತುಲಾ ರಾಶಿಯವರ ಈ ಜಾತಕ ರಾಜಯೋಗವನ್ನು ಸೂಚಿಸುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಜಾತಕದಲ್ಲಿ ಒಂಭತ್ತನೇ ಮನೆಯಲ್ಲಿ ಸೂರ್ಯಗ್ರಹವು ಮತ್ತು ಮಂಗಳ ಗ್ರಹವು ಹತ್ತನೇ ಮನೆಯಲ್ಲಿ ಇದ್ದರೆ ರಾಜಯೋಗವೆಂದು ಹೇಳಲಾಗುತ್ತದೆ. ಈ ಜಾತಕದವರು ರಾಜನಂತೆ ವೈಭೋಗದ ಜೀವನವನ್ನು ನಡೆಸುತ್ತಾರೆ.

ಧನು ರಾಶಿ
ಈ ರಾಶಿಯವರ ಜಾತಕದಲ್ಲಿ ಭಾಗ್ಯ ಸ್ಥಾನದಲ್ಲಿ ಗುರು ಮತ್ತು ಕರ್ಮ ಸ್ಥಾನದಲ್ಲಿ ಸೂರ್ಯನು ಇದ್ದರೆ ಅಂಥ ಜಾತಕ ರಾಜಯೋಗವನ್ನು ಸೂಚಿಸುತ್ತದೆ.

ಮಕರ ರಾಶಿ
ಮಕರ ರಾಶಿಯವರ ಜಾತಕದಲ್ಲಿ ಒಂದೇ ಸಮಯದಲ್ಲಿ ಶನಿಗ್ರಹವು ಭಾಗ್ಯ ಸ್ಥಾನದಲ್ಲಿ ಮತ್ತು ಬುಧಗ್ರಹವು ಕರ್ಮಸ್ಥಾನದಲ್ಲಿದ್ದರೆ ಅಂಥ ಜಾತಕದ ವ್ಯಕ್ತಿಯು ರಾಜನಂತೆ ಜೀವನವನ್ನು ನಡೆಸುತ್ತಾನೆ.

ಇದನ್ನು ಓದಿ: ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..! 

ಕುಂಭ ರಾಶಿ
ಕುಂಭರಾಶಿಯವರ ಜಾತಕದಲ್ಲಿ ಶುಕ್ರಗ್ರಹವು ಭಾಗ್ಯಸ್ಥಾನದಲ್ಲಿ ಅಂದರೆ ಒಂಭತ್ತನೇ ಮನೆಯಲ್ಲಿ ಮತ್ತು ಶನಿಗ್ರಹವು ಕರ್ಮಸ್ಥಾನದಲ್ಲಿ ಅಂದರೆ ಹತ್ತನೆ ಮನೆಯಲ್ಲಿ ಇದ್ದರೆ, ಕುಂಭ ರಾಶಿಯವರ ಈ ಜಾತಕ ರಾಜಯೋಗವನ್ನು ನಿರ್ಮಾಣ ಮಾಡುತ್ತದೆ.

ಮೀನ ರಾಶಿ
ಮೀನ ರಾಶಿಯವರ ಜಾತಕದಲ್ಲಿ ಗುರುಗ್ರಹವು ಒಂಭತ್ತನೇ ಮನೆಯಲ್ಲಿ ಮತ್ತು ಮಂಗಳಗ್ರಹವು ಹತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಇದು ರಾಜಯೋಗವನ್ನು ಸೂಚಿಸುತ್ತದೆ.