ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..!

ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ಅಗತ್ಯವಿರುವ ವಸ್ತುಗಳನ್ನು ಪಿತೃಪಕ್ಷದಲ್ಲಿ ದಾನ ನೀಡುವುದರಿಂದ ಹಿರಿಯರ ಆಶೀರ್ವಾದ ಲಭಿಸುತ್ತದೆ. ಹಿರಿಯರ ಆತ್ಮಕ್ಕೆ ಶಾಂತಿ ಲಭಿಸುವುದಲ್ಲದೇ, ಜಾತಕದಲ್ಲಿ ಪಿತೃದೋಷವಿದ್ದರೆ ಅದರ ಪ್ರಭಾವ ಕಡಿಮೆಯಾಗುತ್ತದೆ. ಪಿತೃಪಕ್ಷದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಲಭಿಸುವುದಲ್ಲದೇ, ಹಿರಿಯರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಯೂರುತ್ತದೆ. ಹಾಗದರೆ ಆ ವಸ್ತುಗಳ ಬಗ್ಗೆ ತಿಳಿಯೋಣ..
 

Donate these things on Pitrupaksha to please ancestors

ಹಿಂದೂ ಧರ್ಮವೆಂದರೆ ಅನೇಕ ಆಚರಣೆಗಳಿವೆ. ಇಲ್ಲಿ ಗರ್ಭಾವಸ್ಥೆಯಿಂದ ಹಿಡಿದು ಮರಣಾನಂತರವೂ ಅನೇಕ ವಿಧಿ-ವಿಧಾನಗಳು, ಸಂಸ್ಕಾರಗಳು, ಆಚರಣೆಗಳು ಚಾಲ್ತಿಯಲ್ಲಿವೆ. ಮತ್ತವುಗಳಿಗೆ ಒಂದೊಂದು ಸಕಾರಣಗಳನ್ನೂ ಕೊಡಲಾಗಿದೆ. 

ಗರ್ಭವತಿಯರಾಗಿರುವಾಗಿನ ಕೆಲವು ಸಂಸ್ಕಾರಗಳು, ಮರಣಾನಂತರ ಮಾಡುವ ಶ್ರಾದ್ಧ ಕರ್ಮಗಳು, ವೈದಿಕಗಳು ಹೀಗೆ ಹತ್ತು ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಪಿತೃಪಕ್ಷದಲ್ಲಿ ನಮ್ಮ ಪೂರ್ವಜರಿಗೆ ಜಲ ತರ್ಪಣ ನೀಡುವ ಮೂಲಕ ಅವರನ್ನು ಸಂತುಷ್ಟಿಗೊಳಿಸುವುದಾಗಿದೆ. ಪೂರ್ವಜರು ಮೃತ್ಯು ಹೊಂದಿದ ತಿಥಿಯಲ್ಲಿ ಅವರ ಶ್ರಾದ್ಧವನ್ನು ನೇರವೇರಿಸುವುದು ಸಹ ಒಂದು ಮಹತ್ವದ ಕಾರ್ಯವಾಗಿರುತ್ತದೆ. ತಂದೆ-ತಾಯಿ ಅಥವಾ ಪರಿವಾರದ ಇತರ ಸದಸ್ಯರು ಮೃತ್ಯು ಹೊಂದಿದ್ದಲ್ಲಿ ಅವರ ತೃಪ್ತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. “ಶ್ರದ್ಧಯಾ ಇದಂ ಶ್ರಾದ್ಧಮ್” ಅಂದರೆ ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧವೆಂದು ಕರೆಸಿಕೊಳ್ಳುತ್ತದೆ.

Donate these things on Pitrupaksha to please ancestors

ಭಾದ್ರಪದ ಮಾಸದ ಪೂರ್ಣಿಮಿಗೆ ಪ್ರಾರಂಭವಾಗಿ ಆಶ್ವಯುಜ ಮಾಸದ ಅಮಾವಾಸ್ಯೆಗೆ ಪಿತೃಪಕ್ಷ ಮುಗಿಯಲಿದೆ. ಈ 15 ದಿನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲಿದೆ. ಜೊತೆಗೆ ಇಂತಹ ಸಮಯದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಹಿರಿಯ ಆಶೀರ್ವಾದದ ಜೊತೆಗೆ ಪುಣ್ಯಫಲವೂ ಪ್ರಾಪ್ತಿಯಾಗಲಿದೆ. 

ಇದನ್ನು ಓದಿ: ಸೆಪ್ಟೆಂಬರ್‌ನಲ್ಲಿ ಜನಿಸಿದವರು ಹೀಗಿರ್ತಾರೆ..! 

ಬೆಳ್ಳಿ ದಾನ
ಶಾಸ್ತ್ರದಲ್ಲಿ ಹೇಳುವ ಪ್ರಕಾರ, ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲು ಬೆಳ್ಳಿಯ ದಾನ ಉತ್ತಮ. ಇದರಿಂದ ಪಿತೃಗಳ ಆಶೀರ್ವಾದ ಲಭಿಸುವುದಲ್ಲದೆ, ಜೀವನದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಲಿದೆ. 

ಕಪ್ಪು ಎಳ್ಳು ದಾನ
ಪಿತೃಪಕ್ಷದಲ್ಲಿ ಕಪ್ಪು ಎಳ್ಳಿನ ಬಹಳ ಮಹತ್ವವಿದೆ. ಇದನ್ನು ದಾನ ಮಾಡುವುದರಿಂದ ಬಹಳ ಪುಣ್ಯ ಸಿಗಲಿದೆ ಎಂಬ ನಂಬಿಕೆ ಇದೆ. ಬೇರೆ ಯಾವುದನ್ನೂ ದಾನ ಮಾಡುವ ಶಕ್ತಿ ಇಲ್ಲದಿದ್ದರೆ ಇದನ್ನಾದರೂ ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

ವಸ್ತ್ರ ದಾನ
ಪಿತೃಗಳ ಹೆಸರಿನಲ್ಲಿ ವಸ್ತ್ರಗಳನ್ನು ದಾನ ಮಾಡಲೇಬೇಕು. ಇದರಿಂದ ಅವರ ಆಶೀರ್ವಾದ ಸದಾ ನಿಮ್ಮೊಂದಿಗೆ ನೆಲೆಸುತ್ತದೆ. 

ಇದನ್ನು ಓದಿ: ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..? 

ಛತ್ರಿ ದಾನ
ಮನೆಯಲ್ಲಿ ಸುಖ-ಶಾಂತಿ ಬೇಕೆಂದರೆ ಪಿತೃಪಕ್ಷದ ಸಂದರ್ಭದಲ್ಲಿ ಛತ್ರಿಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಲಭಿಸಲಿದೆ. ಇದರಿಂದ ನಿಮ್ಮ ಮನೆಯಲ್ಲೂ ನೆಮ್ಮದಿ ನೆಲೆಸುತ್ತದೆ. 

ಪಾದರಕ್ಷೆ ದಾನ
ನಿರ್ಗತಿಕರು ಅಥವಾ ಅವಶ್ಯಕತೆ ಇದ್ದವರಿಗೆ ಪಾದರಕ್ಷೆಗಳನ್ನು ದಾನ ಮಾಡುವುದು ಬಹಳ ಪುಣ್ಯದ ಕೆಲಸವಾಗಿದೆ. ಹೀಗೆ ಮಾಡುವುದರಿಂದ ಹಿರಿಯರ ಆತ್ಮಕ್ಕೆ ಶಾಂತಿ ಲಭಿಸಿ, ಅವರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿದೆ. 

ಉಪ್ಪು-ಬೆಲ್ಲ ದಾನ ಮಾಡಿ
ಶಾಸ್ತ್ರದಲ್ಲಿ ಹೇಳಿರುವಂತೆ ಪಿತೃಪಕ್ಷದಲ್ಲಿ ಉಪ್ಪು ಮತ್ತು ಬೆಲ್ಲವನ್ನು ದಾನ ಮಾಡಬೇಕು. ಇದನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಸುಖ - ಶಾಂತಿ ನೆಲೆಸಲಿದ್ದು, ಮನೆಯಲ್ಲಿ ಕಲಹಗಳು ದೂರವಾಗುತ್ತದೆ. ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. ಅಲ್ಲದೆ, ಉಪ್ಪನ್ನು ದಾನ ಮಾಡುವುದರಿಂದ ಬಹುಮುಖ್ಯವಾಗಿ ಮೃತ್ಯು ಭಯವೂ ದೂರವಾಗಲಿದೆ. 

ಭೂಮಿ ದಾನ
ಭೂಮಿ ದಾನ ಮಾಡುವುದು ಬಹಳ ದೊಡ್ಡ ಹಾಗೂ ಪುಣ್ಯದ ದಾನವಾಗಿದೆ. ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ, ಶಕ್ತಿ ಇದ್ದವರು ದಾನ ಮಾಡಿದಲ್ಲಿ ಪುಣ್ಯ ಪ್ರಾಪ್ತಿಯಾಗಲಿದೆ. 

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ? 

ಗೋದಾನ 
ಪಿತೃಪಕ್ಷದಲ್ಲಿ ಗೋವನ್ನು ದಾನ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗಿದೆ. ಶಕ್ತಿ ಇದ್ದವರು ಗೋವನ್ನು ದಾನ ಮಾಡಿದಲ್ಲಿ ಪಾಪಗಳೆಲ್ಲ ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಗೋವನ್ನು ದಾನ ಮಾಡಲು ಆಗದೇ ಇದ್ದವರು ಗೋವಿನ ಪ್ರತಿಮೆಯನ್ನಾದರು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಅನ್ನ ದಾನ
ದಾನಗಳಲ್ಲೇ ಶ್ರೇಷ್ಠವಾದ ದಾನ ಅನ್ನದಾನವೆಂದು ಹೇಳುತ್ತಾರೆ. ಹಾಗಾಗಿ ಈ ಮಾಸದಲ್ಲಿ ಅನ್ನದಾನವನ್ನು ಮಾಡುವುದರಿಂದಲೂ ಪುಣ್ಯವು ಲಭಿಸುವುದಲ್ಲದೆ, ಹಿರಿಯರ ಆಶೀರ್ವಾದ ಲಭಿಸಲಿದೆ.

Latest Videos
Follow Us:
Download App:
  • android
  • ios