ಜನನವಾದ ಪ್ರತಿ ಕ್ಷಣದ ವ್ಯತ್ಯಾಸಕ್ಕೂ ಜಾತಕದಲ್ಲಿ ಗ್ರಹಲಕ್ಷಣಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಇನ್ನು ಬೇರೆ ಬೇರೆ ತಿಂಗಳಲ್ಲಿ ಜನಿಸಿದವರಿಗೂ ಅವರದ್ದೇ ಆದ ವಿಭಿನ್ನ ವ್ಯಕ್ತಿತ್ವ ಇರುತ್ತದೆ. ಅಷ್ಟೇ ಅಲ್ಲದೆ ವ್ಯಕ್ತಿಯು ಜನಿಸಿದ ತಿಂಗಳು ಸಹ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಜನವರಿಯಲ್ಲಿ ಜನಿಸಿದವರು ಪಾದರಸದಂತೆ ಚುರುಕಾಗಿದ್ದರೆ, ಜೂನ್‌ನವರು ಭಾವನಾ ಜೀವಿಗಳು, ಹೀಗೆ ಪ್ರತಿ ತಿಂಗಳಿಗೂ ಅದರದ್ದೇ ಆದ ವಿಶಿಷ್ಟತೆ ಇರುತ್ತದೆ. ಹಾಗೆಯೇ ಸೆಪ್ಟೆಂಬರ್‌ನಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ..ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಜನಿಸಿದವರದ್ದು ಕನ್ಯಾ ರಾಶಿ ಮತ್ತು ಬುಧ ಗ್ರಹದಿಂದ ಆಳಲ್ಪಡುತ್ತಾರೆ. ಎಲ್ಲ ಕೆಲಸಗಳಲ್ಲೂ ನಿಖರತೆಯನ್ನು ಇಚ್ಛಿಸುವ ಇವರು ಪರಿಪೂರ್ಣರು. ತಮ್ಮದೆ ಆದ ರೀತಿಯಲ್ಲಿ ಕಾರ್ಯಗಳನ್ನು ಮಾಡಿ ಯಶಸ್ಸನ್ನು ಕಾಣುವವರು ಸೆಪ್ಟೆಂಬರ್‌ನಲ್ಲಿ ಜನಿಸಿದವರು.

ಇದನ್ನು ಓದಿ: ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..? 

ಮೃದು ಮನಸ್ಸಿನವರು
ಸೆಪ್ಟೆಂಬರ್‌ನಲ್ಲಿ ಜನಿಸಿದವರು ಮೃದು ಸ್ವಭಾವದವರು ಮತ್ತು ವಿನಯವಂತರು. ಕಠೋರ ಸ್ವಭಾವವನ್ನು ಹೊಂದಿದ್ದವರಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಎಷ್ಟು ಸೂಕ್ಷ್ಮ ಸ್ವಭಾವವೋ ಅಷ್ಟೇ ಸ್ಮಾರ್ಟ್ ಆಗಿರುತ್ತಾರೆ. ಸಂಕೋಚ ಸ್ವಭಾವವನ್ನು ಹೊಂದಿರುವ ಇವರು ಮನಸ್ಸಿನ ಮಾತನ್ನು ಬೇಗ ಹೇಳಿಕೊಳ್ಳುವುದಿಲ್ಲ.

ಪರಿಶ್ರಮಿಗಳು ಮತ್ತು ಹಣವಂತರು
ಈ ತಿಂಗಳಿನಲ್ಲಿ ಜನಿಸಿದವರಿಗೆ ಸುಲಭವಾಗಿ ಯಾವುದೂ ದಕ್ಕುವುದಿಲ್ಲ. ಸ್ವಂತ ಪ್ರಯತ್ನದಿಂದಲೇ ಎಲ್ಲವನ್ನು ಪಡೆದುಕೊಳ್ಳಬೇಕಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕಠಿಣ ಪರಿಶ್ರಮದಿಂದ ಮಾತ್ರ ಬಯಸಿದ್ದನ್ನು ಪಡೆಯುತ್ತಾರೆ.ಇವರದ್ದು ಪ್ರೇಮ ವಿವಾಹವಂತೆ
ಸೆಪ್ಟೆಂಬರ್‌ನಲ್ಲಿ ಜನಿಸಿದವರು ಯಾವಾಗಲೂ ಖುಷಿಯಿಂದ ಕಾಲ ಕಳೆಯುವುದನ್ನು ಇಷ್ಟಪಡುತ್ತಾರೆ. ಹೆಚ್ಚು ರೊಮ್ಯಾಂಟಿಕ್ ಮತ್ತು ಹೆಚ್ಚಾಗಿ ಪ್ರೇಮ ವಿವಾಹವಾಗುತ್ತಾರಂತೆ.

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ? 

ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದರೆ ಉತ್ತಮ
ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೌಶಲ್ಯವಂತರು ಮತ್ತು ಕೆಲಸದಲ್ಲಿ ಸದಾ ಎಲ್ಲರಿಗಿಂತ ಮುಂದಿರುವಂಥವರು. ಹಾಗಾಗಿ ಪ್ರಖ್ಯಾತಿಯನ್ನು ಬೇಗ ಪಡೆದುಕೊಳ್ಳುತ್ತಾರೆ. ಹೆಚ್ಚು ಬುದ್ಧಿವಂತರಾಗಿರುವ ಕಾರಣ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದರೆ ಹೆಚ್ಚು ಸಾಧನೆಯನ್ನು ಮಾಡಬಹುದಾಗಿದೆ. ಬೇರೆಯವರ ಮನಮುಟ್ಟುವಂತೆ ವಿಷಯವನ್ನು ಅರ್ಥಮಾಡಿಸುವ ಕಲೆಯನ್ನು ಹೊಂದಿರುತ್ತಾರೆ. ಮೋಸ-ವಂಚನೆಯನ್ನು ಸಹಿಸದ ಇವರು ಕೆಲಸದ ವಿಷಯದಲ್ಲಿ ಪರಿಪೂರ್ಣರು.

ಪುಸ್ತಕ ಪ್ರೇಮಿಗಳು
ಸೆಪ್ಟೆಂಬರ್‌ನಲ್ಲಿ ಜನಿಸಿದವರಿಗೆ ಪುಸ್ತಕದ ಬಗ್ಗೆ ಒಲವು ಜಾಸ್ತಿ. ಓದುವುದು, ಹೆಚ್ಚೆಚ್ಚು ತಿಳಿದುಕೊಳ್ಳುವುದು ಇವರ ಹವ್ಯಾಸಗಳಲ್ಲೊಂದು. ಈ ತಿಂಗಳಿನಲ್ಲಿ ಜನಿಸಿದವರನ್ನು ಪುಸ್ತಕದ ಹುಳುಗಳೆಂದರೆ ತಪ್ಪಾಗಲಾರದು. ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಹೊಂದಿರುತ್ತಾರೆ.

ಅತಿಯಾಗಿ ಚಿಂತಿಸುವವರು
ಈ ತಿಂಗಳಿನಲ್ಲಿ ಜನಿಸಿದವರು ಹೆಚ್ಚು ಯೋಚಿಸುವವರು. ಸಮಸ್ಯೆಗಳು ಎದುರಾದಾಗ ಅದರ ಬಗ್ಗೆಯೇ ಹೆಚ್ಚು ಯೋಚಿಸಿ ಸಮಸ್ಯೆಯನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುವ ಸ್ವಭಾವ ಇವರದ್ದು.

ಹುಟ್ಟು ಕಲೆಗಾರರು
ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕಲೆಯಲ್ಲಿ ಹೆಚ್ಚು ಕೌಶಲ್ಯತೆಯನ್ನು ಹೊಂದಿರುತ್ತಾರೆ. ಕಲೆ, ನೃತ್ಯ, ಹಾಡುಗಾರಿಕೆ, ವಿವಿಧ ವಾದ್ಯಗಳನ್ನು ನುಡಿಸುವ ಚಾತುರ್ಯವುಳ್ಳವರು. ಅಷ್ಟೇ ಅಲ್ಲದೆ ಉತ್ತಮ ವಾಗ್ಮಿ ಸಹ ಆಗಿರುತ್ತಾರೆ.

ಖಾದ್ಯ ಪ್ರಿಯರು
ಆರೋಗ್ಯಯುತ ಜೀವನ ಕ್ರಮವನ್ನು ಪಾಲಿಸುವ ಸೆಪ್ಟೆಂಬರ್‌ನವರು ಖಾದ್ಯ ಪ್ರಿಯರು. ರುಚಿಯಾಗಿ ತಿನ್ನಲು ಬಯಸುವವರು. ವಿವಿಧ ರೀತಿಯ ಆಹಾರವನ್ನು ಎಷ್ಟೇ ಇಷ್ಟಪಟ್ಟರೂ ಅಷ್ಟೇ ಕಟ್ಟುನಿಟ್ಟಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಮೊದಲಿಗರು.

ಅವಕಾಶದ ಸದುಪಯೋಗ ಪಡೆಯುವವರು
ಈ ತಿಂಗಳಿನಲ್ಲಿ ಜನಿಸಿದವರು ಸಿಕ್ಕ ಅವಕಾಶವನ್ನು ಎಂದೂ ಹಾಳುಮಾಡಿಕೊಳ್ಳುವುದಿಲ್ಲ. ಅದರಿಂದ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. 

ಇದನ್ನು ಓದಿ: ಪಿತೃಪಕ್ಷದಲ್ಲಿ ಹೀಗೆ ಮಾಡಿ ಪಿತೃ ದೋಷದಿಂದ ಮುಕ್ತರಾಗಿ.. 

ಬೇಗ ನಿರಾಶರಾಗುತ್ತಾರೆ
ಸೆಪ್ಟೆಂಬರ್‌ನಲ್ಲಿ ಜನಸಿದವರು ಬುದ್ಧಿವಂತರು, ಸದಾ ಕೆಲಸದಲ್ಲಿ ತೊಡಗಿಕೊಳ್ಳವವರು ಅಷ್ಟೇ ಬೇಗ ನಿರಾಸೆಯನ್ನು ಹೊಂದುವ ಸ್ವಭಾವದವರು. ತಮ್ಮಿಷ್ಟದಂತೆ ಕೆಲಸ ಪೂರ್ಣವಾಗದಿದ್ದರೆ, ಕೆಲಸದಲ್ಲಿ ತಪ್ಪಾದರೆ ಬೇಗ ಬೇಸರವನ್ನು ಹೊಂದುತ್ತಾರೆ.