Asianet Suvarna News Asianet Suvarna News

ಅಪರೂಪಕ್ಕೆ ಸಂಭವಿಸಲಿದೆ ಕಂಕಣ ಗ್ರಹಣ; ಯಾರಿಗೆ ಕೆಡುಕು, ಯಾರಿಗೆ ಒಳಿತು?

ಸೂರ್ಯನ ಸುತ್ತ ಭೂಮಿ ಸುತ್ತುವುದು, ಭೂಮಿ ಸುತ್ತ ಚಂದ್ರ ಸುತ್ತುವುದು ನೈಸರ್ಗಿಕ ಪ್ರಕ್ರಿಯೆಗಳು. ಹೀಗೆ ಸುತ್ತುವಾಗ ಆಗೊಮ್ಮೆ, ಈಗೊಮ್ಮೆ ಗ್ರಹಣ ಗೋಚರಿಸುವುದೂ ಹೊಸತಲ್ಲ. ಖಗೋಳ ಕುತೂಹಲಿಗಳಿಗೆ ಈ ಬಗ್ಗೆ ಎಲ್ಲಿಲ್ಲದ ಕೌತುಕ. ಆದರೆ, ಭಾರತೀಯರಲ್ಲಿ ಗ್ರಹಣದ ಬಗ್ಗೆ ತುಸು ಭಯವಿದೆ. ಜಾತಕದ ಮೇಲೆ ಪ್ರಭಾವ ಬೀರುವ ಬಗ್ಗೆ ಆತಂಕವಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ಗೋಚರಿಸುವ ಗ್ರಹಣದ ಬಗ್ಗೆ ಇಲ್ಲಿದೆ ಮಾಹಿತಿ...

pros and cons about Kankana Surya Grahana 2019
Author
Bangalore, First Published Nov 29, 2019, 2:07 PM IST

ಸೂರ್ಯ ಗ್ರಹಣ. ಇದೇ ಡಿಸೆಂಬರ್ 26 ರಂದು ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಆ ದಿನ ಎಷ್ಟು ಹೊತ್ತಿಗೆ ಗ್ರಹಣ ಸಂಭವಿಸಲಿದೆ..?

ಗ್ರಹಣ ಸ್ಪರ್ಶ ಕಾಲ - ಬೆಳಗ್ಗೆ 08.06
ಗ್ರಹಣ ಮಧ್ಯ ಕಾಲ - ಬೆಳಗ್ಗೆ 09.38
ಗ್ರಹಣ ಮೋಕ್ಷ ಕಾಲ - ಬೆಳಗ್ಗೆ 11.11

ಈ ಗ್ರಹಣ ಯಾರಿಗೆ ಕೆಡುಕು ತರಲಿದೆ..? ಯಾರಿಗೆ ಭಯವನ್ನುಂಟುಮಾಡಲಿದೆ..?

ಜನ ಸಾಮಾನ್ಯರಲ್ಲಿ ಸಹಜವಾಗಿ ಈ ಪ್ರಶ್ನೆ ಹುಟ್ಟುತ್ತದೆ. ಅದೆಲ್ಲವನ್ನೂ ಸವಿಸ್ತಾರವಾಗಿ ನೋಡೋಣ. ಅದಕ್ಕೂ ಮುನ್ನ ಗ್ರಹಣದ ಅರಿವು ನಮಗೆ ಬೇಕು. ಅರಿವಿದ್ದಲ್ಲಿ ಭಯವಿರುವುದಿಲ್ಲ ಎಂಬುದು ಶಾಸ್ತ್ರ ವಾಣಿ. ಹೀಗಾಗಿ ಗ್ರಹಣ ಎಂದರೆ ಏನು ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳೋಣ. ಗೃಣ್ಹಾತಿ ಇತಿ ಗ್ರಹಣ ಅಂತ. ಹಾಗಂದರೆ ಹಿಡಿಯುವುದು, ಆವರಿಸುವುದು ಎಂದು ಅರ್ಥ. ಸೂರ್ಯನನ್ನೋ ಅಥವಾ ಚಂದ್ರನನ್ನೋ ರಾಹು-ಕೇತುಗಳ ಛಾಯೆ ಆವರಿಸುವ ನೈಸರ್ಗಿಕ ಪ್ರಕ್ರಿಯೆಯೇ ಗ್ರಹಣ. ಗ್ರಹಣ ಎನ್ನುವುದು ಬೌಗೋಳಿಕವಾಗಿ ಒಂದು ವಿದ್ಯಮಾನ ಎನಿಸಿಕೊಂಡರೂ ಧಾರ್ಮಿಕವಾಗಿ ಅವುಗಳನ್ನು ಸೂತಕ ಅಥವಾ ಋಣಾತ್ಮಕ ಎನ್ನುವ ರೀತಿಯಲ್ಲಿ ಪರಿಗಣಿಸಲಾಗುವುದು. ಗ್ರಹಣದ ಸಂದರ್ಭದಲ್ಲಿ ಪರಿಸರವು ಸಾಕಷ್ಟು ಕಲುಷಿತವಾಗುವುದು. ಇದರ ಪ್ರಭಾವ ಎಲ್ಲಾ ಜೀವ ಸಂಕುಲಗಳ ಮೇಲೆ ಪರಿಣಾಮ ಬೀರುವುದು. ಅಂತಹ ಸಂದರ್ಭದಲ್ಲಿ ಮನೆಯಿಂದ ಆಚೆ ಹೋಗ ಬಾರದು. ದೇವರ ನಾಮ ಸ್ಮರಣೆ ಮಾಡುವುದರ ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ನಿಯಂತ್ರಿಸಬೇಕು ಎನ್ನುವ ವಿಚಾರವನ್ನು ಒಳಗೊಂಡಿರುತ್ತದೆ.

ಬೇಡ ಹೇಳಿ? ಲಕ್ಷ್ಮಿ ಒಲಿಸಿಕೊಳ್ಳಲು ಶ್ರೀ ಸೂಕ್ತವೆಂಬ ಶಕ್ತಿ!

ಚಂದ್ರ ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರನ ಮುಖಾಮುಖಿಯಾಗಿ ಭೂಮಿಯು ಬರುತ್ತದೆ. ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ನಿಂತಿರುತ್ತದೆ. ಅಂತಹ ಸಂದರ್ಭದಲ್ಲಿ ಭುಮಿಯ ಮೇಲೆ ಬೀಳುವ ಬೆಳಕು ನೆರಳಿನಿಂದ ಕೂಡಿರುವುದಾಗಿರುತ್ತದೆ. ಕೆಂಪು, ಕಂದು ಮತ್ತು ಬೂದು ಬಣ್ಣದ ತೀವ್ರವಾದ ಛಾಯೆಗಳಲ್ಲಿ ಮಾರ್ಪಡಿಸುತ್ತದೆ ಎನ್ನುವುದನ್ನು ನಾವು ನೋಡಬಹುದು. ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬರುತ್ತಾನೆ. ಹಾಗಾಗಿ ಚಂದ್ರನಂತಹ ಸಣ್ಣ ಉಪಗ್ರಹವು ಭೂಮಿಯ ಮೇಲೆ ಪ್ರತಿಬಿಂಬಿಸುವ ಸೂರ್ಯನ ಬೆಳಕನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಲಾಗುವುದು. ಈ ಸಂದರ್ಭದಲ್ಲಿ ಭೂಮಿಗೆ ಸೂರ್ಯನ ಕಿರಣ ಬೀಳದೆ ಇರುವುದರಿಂದ ಪರಿಸರವು ಕಲುಷಿತವಾಗಿರುತ್ತದೆ. ಅಂಧಕಾರವು ದುಷ್ಟ ಶಕ್ತಿಗಳ ಹುಟ್ಟಿಗೆ ಕಾರಣವಾಗುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಈ ಖಗೋಳ ವಿದ್ಯಮಾನವು ಕೇವಲ ಪರಿಸರದ ಮೇಲಷ್ಟೇ ಅಲ್ಲ. ಅದು ಯಾವ ರಾಶಿಚಕ್ರಗಳ ಮೇಲೆ ಬೀರಲಿದೆ ಅದರಿಂದ ವ್ಯಕ್ತಿಯ ದೈನಂದಿನ ಜೀವನ, ವೃತ್ತಿ, ಹಣಕಾಸು, ವ್ಯವಹಾರ ಸಂಬಂಧ ಸೇರಿದಂತೆ ಅನೇಕ ವಿಚಾರಗಳಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ರೀತಿಯ ಪರಿವರ್ತನೆ ಉಂಟಾಗುವುದು ಎಂಬ ನಂಬಿಕೆ ಇದೆ. ಅದು ಹಲವು ಬಾರಿ ಸತ್ಯವೂ ಆಗಿದೆ. ಹಾಗಾದರೆ ಈ ಗ್ರಹಣ ಯಾವ ರಾಶಿಗೆ ಮಾರಕ - ಯಾವ ರಾಶಿಗೆ ತಾರಕವಾಗಲಿದೆ..?

ಗ್ರಹಣ ಯಾವ ರಾಶಿಯಲ್ಲಿ ಸಂಭವಿಸಲಿದೆ..?

ಧನಸ್ಸು ರಾಶಿಯಲ್ಲಿ ಗ್ರಹಣ ಮೂಲಾ ಹಾಗೂ ಪೂರ್ವಾಷಾಢ ನಕ್ಷತ್ರದವರು ಎಚ್ಚರವಾಗಿರಬೇಕು.

ಮೇಷ : ಮೇಷ ದಿಂದ 9 ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದ್ದು ಅದು ಧರ್ಮ ಸ್ಥಾನ, ತಪಸ್ಸಿನ ಸ್ಥಾನ, ಭಾಗ್ಯ ಸ್ಥಾನವೆಂದೆಲ್ಲಾ ಪರಿಗಣಿತವಾಗಿದೆ ಹೀಗಾಗಿ ನಿಮ್ಮ ಅದೃಷ್ಟ ಕೈಕೊಡಲಿದೆ, ಪ್ರಮುಖವಾಗಿ ರಾಜ ಕಾರಣಿಗಳ ಜೀವನ ಅಸ್ತವ್ಯಸ್ತವಾಗಲಿದೆ, ಭಯದ ವಾತಾವರಣ ಉಂಟಾಗಲಿದೆ. ಧರ್ಮ ಕಾರ್ಯಗಳಲ್ಲಿ ಅಸಡ್ಡೆ, ಗುರು-ಹಿರಿಯರಲ್ಲಿ ಅಗೌರವ ಭಾವನೆಗಳು ಮೂಡಲಿವೆ.

ಪರಿಹಾರ : ದುರ್ಗಾ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ

ವೃಷಭ : ರಾಶಿಯಿಂದ ಅಷ್ಟಮ ಸ್ಥಾನದಲ್ಲಿ ಗ್ರಹಣ ಸಂಭವಿಸುವುದರಿಂದ ಆರೋಗ್ಯ ಭೀತಿ ಕಾಡಲಿದೆ, ವಾಹನ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ, ಮನೆ-ನಿವೇಶನಗಳಲ್ಲಿ ತಕರಾರು, ಕೋರ್ಟು - ಕಚೇರಿ ವ್ಯಾಜ್ಯಗಳು ಅಸಮಧಾನವನ್ನು ಉಂಟುಮಾಡಲಿವೆ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಮುಖ್ಯ ವಸ್ತು ಗಳು ಕಳೆದುಹೋಗುವ ಸಾಧ್ಯತೆ ಇದೆ. ಬಹಳ ಎಚ್ಚರಿಕೆ ಬೇಕು.

ಸೂರ್ಯಗ್ರಣದ ಮಾಹಿತಿಗೆ ವೆಬ್‌ಸೈಟ್‌ ಆರಂಭ

ಪರಿಹಾರ : ಸೂರ್ಯ ನಾರಾಯಣ ಪ್ರಾರ್ಥನೆ ಮಾಡಿ

ಮಿಥುನ : ರಾಶಿಯಿಂದ ಸಪ್ತಮ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿದೆ ಹೀಗಾಗಿ ಬಹಳ ಎಚ್ಚರಿಕೆ ಬೇಕು. ದಾಂಪತ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂದರ್ಭ ಎದುರಾಗಬಹುದು, ಮಿತ್ರರಲ್ಲಿ ಅಪನಂಬಿಕೆ, ನಂಬಿದವರಿಂದ ಮೋಸ ಹೋಗುವ ಸಾಧ್ಯತೆ ಇದೆ, ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ಪ್ರಯಾಣದಲ್ಲಿ ಅಗ್ನಿ ಅವಘಡದಮಥ ಭಯಗಳಿದ್ದಾವೆ ಎಚ್ಚರಿಕೆ ಇರಲಿ.

ಕಟಕ : ರಾಶಿಯಿಂದ ರೋಗ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿದೆ, ಹೃದಯ ಭಾಗದಲ್ಲಿ ತೊಂದರೆಗಳಾಗಬಹುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ತಂದೆ-ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯಗಳಾಗಬಹುದು, ಎಚ್ಚರಿಕೆ ಬೇಕು, ನೀರಿಹನ ಸಮೀಪದಲ್ಲಿ ಸುತ್ತಾಡಬೇಡಿ, ನಿಮ್ಮ ಮನಸ್ಸು ಚಂಚಲವಾಗಿ ಕಾರ್ಯ ಹಾನಿಯಾಗುವ ಸಾಧ್ಯತೆ ಇದೆ.
ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ.

ಸಿಂಹ : ರಾಶಿಯಿಂದ ಪಂಚಮದಲ್ಲಿ ಗ್ರಹಣ ಸಂಭವಿಸುತ್ತಿರುವ ಕಾರಣ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಇದೆ ಎಚ್ಚರ ವಹಿಸಿ, ಬುದ್ಧಿ ವಿಕಾರವಾಗುವ ಸಾಧ್ಯತೆ, ಮಂಕು ಕವಿಯುವ ಸಾಧ್ಯತೆಗಳು ಹೆಚ್ಚಾಗಿವೆ, ಬಹಳ ಎಚ್ಚರಿಕೆ ಬೇಕು. ಸಂತಾನ ಸೂಚನೆ ಇರುವವರಿಗೆ ಕೊಂಚ ಆತಂಕವಿರಲಿದೆ. ಪೂರ್ವ ಜನ್ಮ ಕರ್ಮ ಫಲಗಳು ಕೊಂಚ ತೊಂದರೆಗೆ ಸಿಲುಕಿಸಲಿವೆ ಜಾಗ್ರತೆ ಇರಲಿ.

ಪರಿಹಾರ : ಶಿವ ದೇವಸ್ಥಾನದಲ್ಲಿ ಬಿಲ್ವಾರ್ಚನೆ ಮಾಡಿಸಿ.

ಕನ್ಯಾ : ರಾಶಿಯಿಂದ ಚತುರ್ಥ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿದೆ ಹಾಗಾಗಿ ವಾಹನ ಸಂಚಾರರು ಬಹಳ ಎಚ್ಚರಿಕೆಯಿಂದ ಇರಬೇಕು, ಗೃಹ ಕಲಹ, ನಿವೇಶನ ಸಲುವಾಗಿ ಪರದಾಟದಂತ ಸಮಸ್ಯೆಗಳು ತಲೆದೋರುತ್ತವೆ, ಸುಖ ಹಾನಿ ನೆಮ್ಮದಿ ಇಲ್ಲದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಉದ್ಯೋಗದಲ್ಲಿ ಹಿರಿಯರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ತುಲಾ : ಸಹೋದರರಲ್ಲಿ ಭಿನ್ನಾಭಿಪ್ರಾಯ, ಭಯದ ವಾತಾವರಣ ನಿಮ್ಮನ್ನು ಕಾಡಲಿದೆ, ನಿಮ್ಮ ಪರಾಕ್ರಮ ಶಕ್ತಿ ಉಡುಗಿಹೋಗಲಿದೆ. ಅದೃಷ್ಟ ಕೈತಪ್ಪಿಹೋಗುತ್ತದೆ, ಉದ್ಯೋಗದಲ್ಲಿ ಕೊಂಚ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ, ಅದೃಷ್ಟ ಹೀನತೆಯಿಂದ ಮಾನಸಿಕ ಬೇಸರ.

ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಹಣಕಾಸಿಗೆ ಹೆಚ್ಚಿನ ಪರದಾಟವಾಗುತ್ತದೆ, ಮನೆಯಲ್ಲಿ ನಿಮ್ಮ ಮಾತಿಗೆ ವಿರೋಧ ಉಂಟಾಗುತ್ತದೆ, ಕುಟಂಬದವರ ಮಧ್ಯೆ ಕಲಹಗಳು ಉಂಟಾಗುತ್ತವೆ, ಸ್ತ್ರೀಯರಲ್ಲಿ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ, ಮಾತಿನಲ್ಲಿ ಒರಟುತನ ಉಂಟಾಗಲಿದೆ, ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ಎಚ್ಚರಿಕೆ ಬೇಕು.

ಸೂರ್ಯ ಗ್ರಹಣವಿದ್ದರೂ ಯಾವುದೇ ಅಡ್ಡಿ ಆತಂಕಗಳಿಲ್ಲ!: ಹೀಗಿದೆ ಇಂದಿನ ಪಂಚಾಂಗ

ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಹೇಳಿಕೊಳ್ಳಿ

ಧನಸ್ಸು : ರಾಶಿಯಲ್ಲೇ ಗ್ರಹಣ ಸಂಭವಿಸುತ್ತಿರುವ ಕಾರಣ ಕೊಂಚ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಬೆಂಕಿ ಅವಘಡಗಳು ಸಂಭವಿಸಲಿವೆ, ಆತ್ಮ ಶಕ್ತಿ ಅಡಗಿಹೋಗಲಿದೆ, ಗಂಡ-ಹೆಂಡಿರ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಲಿವೆ. ಬಹಳ ಎಚ್ಚರಿಕೆಯಿಂದ  ಜೀವನ ನಡೆಸಿ

ಪರಿಹಾರ : ಸೂರ್ಯ ಪ್ರಾರ್ಥನೆ, ಹಾಗೂ ಶಿವಾರಾಧನೆ ಮಾಡಿ

ಮಕರ : ರಾಶಿಯಿಂದ ವ್ಯಯ ಭಾವದಲ್ಲಿ ಗ್ರಹಣ ಸಂಭವಿಸುತ್ತಿದೆ ಹೀಗಾಗಿ ಹೆಚ್ಚಿನ ಹಣ ವ್ಯಯ, ಕೆಲಸಗಳಲ್ಲಿ ಹಿನ್ನಡೆ, ಆಪ್ತರು ದೂರವಾಗಲಿದ್ದಾರೆ, ಮನಸ್ಸಿಗೆ ನೋವುಂಟಾಗುವ ಸಾಧ್ಯತೆ ಇರಲಿದೆ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆ ಹೆಚ್ಚಾಗಿದೆ, ಮುಖ್ಯ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ. ಎಚ್ಚರ.

ಪರಿಹಾರ : ಹುತ್ತಕ್ಕೆ ಪ್ರದಕ್ಷಿಣೆ ಹಾಗೂ ಮೃತ್ಯುಂಜಯ ಮಂತ್ರವನ್ನು ಪಠಿಸಿ

ಕುಂಭ : ಲಾಭ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿರುವ ಕಾರಣದಿಂದ ನಿಮಗೆ ಬರು ಲಾಭಕ್ಕೆ ಕತ್ತರಿ ಬೀಳಬಹುದು, ದೂರ ಪ್ರಯಾಣಗಳು ವಿಳಂಬವಾಗುತ್ತವೆ, ಸಂಗಾತಿಯಲ್ಲಿ ಕಲಹ ಸಂಭವ, ಮಿತ್ರರು ದೂರಾಗುತ್ತಾರೆ, ದೇಹಾಯಾಸ ಹಾಗೂ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗುವ ಸಾಧ್ಯತೆಯೂ ಇದೆ. ಎಚ್ಚರ

ಪರಿಹಾರ : ಶಿವನಿಗೆ ಭಸ್ಮಾರ್ಚನೆ ಮಾಡಿಸಿ

ಮೀನ : ಕರ್ಮ ಸ್ಥಾನದಲ್ಲಿ ಗ್ರಹಣ ಸಂಭವಿಸುತ್ತಿರುವ ಕಾರಣ ಉದ್ಯೋಗಿಗಳಿಗೆ ಹೆಚ್ಚಿನ ಆತಂಕ, ನಿಮಗೆ ದಕ್ಕಬೇಕಾದ ಮಾನ್ಯತೆ, ಪ್ರತಿಷ್ಠೆಗಳು ಕೈತಪ್ಪಿಹೋಗುವ ಸಾಧ್ಯತೆ ಇದೆ, ಅವಕಾಶ ವಂಚಿತರಾಗುವ ಸಾಧ್ಯತೆ ಇದೆ. ಪ್ರಯಾಣದಲ್ಲೂ ಏರುಪೇರು, ಆರೋಗ್ಯದಲ್ಲಿ ಏರುಪೇರುಗಳಾಗುವ ಸಾಧ್ಯತೆ ಇದೆ.

ಪರಿಹಾರ : ಮಹಾಗಣಪತಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿ.

ಗ್ರಹಣ ಕಾಲದಲ್ಲಿ ನೀವು ಮಾಡಬೇಕಾದದ್ದೇನು..? ಮಾಡಬಾರದ್ದೇನು..?

ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ.

ಗ್ರಹಣ ಮಧ್ಯ ಕಾಲದಲ್ಲಿ ಹೋಮ ಅಥವಾ ದೇವತಾರ್ಚನೆ.

ಗ್ರಹಣ ಬಿಡುವ ಸಮಯದಲ್ಲಿ ದಾನ.

ಗ್ರಹಣ ಮೋಕ್ಷಾನಂತರ ಪುನಃ ಸ್ನಾನ ಮಾಡುವುದು ಕ್ರಮವಾಗಿದೆ. ಗ್ರಹಣ ಸ್ಪರ್ಶ ಕಾಲದಲ್ಲಿ ಹರಿಯುವ ನೀರು, ಸರೋವರ, ನದಿ, ಸಮುದ್ರಗಳಲ್ಲಿ ಸ್ನಾನಮಾಡಬೇಕು. ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ, ಸ್ನಾನಾ ನಂತರ, ಮೋಕ್ಷ ಸಮಯದವರೆಗೆ, ಪೂಜೆ, ಜಪ, ತರ್ಪಣ, ಗ್ರಹಣ ಶ್ರಾದ್ಧ ಇವುಗಳ ಪೈಕಿ ಶಕ್ಯವಾದುದ್ದನ್ನು ಮಾಡಬೇಕು. ಗ್ರಹಣ ಕಾಲದಲ್ಲಿ ಮೊದಲು ತೆಗೆದುಕೊಂಡಿರುವ ಮಂತ್ರದ ಪುನಶ್ಚರಣ ಮಾಡಬೇಕು. ಇಲ್ಲದಿದ್ದಲ್ಲಿ ಮಂತ್ರಶಕ್ತಿ ಕ್ಷೀಣಿಸುತ್ತದೆ. ಹೊಸ ಮಂತ್ರಗಳನ್ನು ಪ್ರಾರಂಭಿಸಲು ಮತ್ತು ಮಂತ್ರದ ಪನಶ್ಚರಣ ಮಾಡಲು ಸೂರ್ಯಗ್ರಹಣದ ಕಾಲ ಅತ್ಯಂತ್ರ ಶ್ರೇಷ್ಠವಾಗಿದೆ. ಗ್ರಹಣಕಾಲದಲ್ಲಿ ನಿದ್ರೆ, ಅಭ್ಯಂಗ, ಆಹಾರ ಸೇವನೆ ಹಾಗೂ ಇತರೆ ಕಾರ್ಯಗಳನ್ನು ಮಾಡಬಾರದು. ಗ್ರಹಣ ಕಾಲದಲ್ಲಿ ಮಾಡುವ ಯಾವುದೇ ದಾನವು, ಭೂದಾನಕ್ಕೆ ಸಮಾನ, ಗ್ರಹಣಕಾಲದಲ್ಲಿ ಎಲ್ಲಾ ಜಲವು ಗಂಗಾ ಜಲಕ್ಕೆ ಸಮಾನವಾಗಿರುತ್ತದೆ.

ಮೆಕ್ಕೆಜೋಳದಲ್ಲಿ ಹೋದ ಹಣ ತರಕಾರಿಯಲ್ಲಿ ಬಂತು!

ಜಪದ ಮಹತ್ವ..!

ಗ್ರಹಣ ಕಾಲದಲ್ಲಿ ಜಪ-ತಪಾದಿಗಳಿಗೆ ಹೆಚ್ಚಿನ ಮಹತ್ವ ಇದೆ. ತೀರ್ಥಕ್ಷೇತ್ರಗಳಲ್ಲಿಯೂ, ಸಿದ್ಧ ಕ್ಷೇತ್ರಗಳಲ್ಲಿಯೂ, ಶಿವಾಲಯಗಲ್ಲಿಯೂ ಗ್ರಹಣ ಕಾಲದಲ್ಲಿ ಮಂತ್ರವನ್ನು ಉಪದೇಶಿಸಿದರೆ, ಅದು ದೀಕ್ಷೊಪದೇಶವಾಗುವುದೆಂದು ಧರ್ಮ ಸಿಂಧುವಿನಲ್ಲಿ ಹೇಳಿದೆ. ಅಲ್ಲದೇ ಈ ಕಾಲದಲ್ಲಿ ಮಾಡಿವ ಜಪ-ತಪಗಳಿಗೆ ಸಹಸ್ರ ಪಟ್ಟು ಫಲ ಸಿದ್ಧಿಯಾಗುತ್ತದೆ.

ವಿಷೇಶ ಸೂಚನೆ :

ಆಕಾಶ ಕಾಯದಲ್ಲಿ ಸಂಭವಿಸುವ ಗ್ರಹಣಗಳು ಒಂದು ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ. ಜಗತ್ತಿನಾದ್ಯಂತ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ಶಾಸ್ತ್ತ್ರಜ್ಞರು ಕಾತುರದಿಂದ ಕಾಯುತ್ತಿದ್ದಾರೆ. ಅಪರೂಪದ ಕಂಕಣ ಸೂರ್ಯ ಗ್ರಹಣದ ವಿಸ್ಮಯ ವಿದ್ಯಮಾನವನ್ನು ಭಾರತದಲ್ಲಿ ವೀಕ್ಷಿಸಬಹುದಾಗಿದೆ. ಗ್ರಹಣ ಫಲವೂ ಕೂಡ ಪ್ರಭಾವಯುತವಾಗಿದ್ದರೂ ಆತಂಕ ಬೇಡ. ಜಪ-ತಪಗಳಿಂದ ಶುಭಫಲ ಹೊಂದಲಿದ್ದೀರಿ.

Follow Us:
Download App:
  • android
  • ios