ಇಡೀ ಬ್ರಹ್ಮಾಂಡವ್ನನಾಳುತ್ತುರುವ ಶಕ್ತಿಯೇ ಮಹಾಲಕ್ಷ್ಮೀ. ಮಹಾಲಕ್ಷ್ಮಿ ಇಲ್ಲದೆ ಜೀವನ ಶೂನ್ಯ. ಮನುಷ್ಯ ಜೀವಂತವಾಗಿರಬೇಕಾದರೆ ಐದು ಪ್ರಾಣಗಳು ಬಹಳ ಮುಖ್ಯ ಅದನ್ನ ಪಂಚ ಪ್ರಾಣಗಳು ಅಂತಾರೆ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಅಂತ. ಈ 5 ವಾಯುಗಳಲ್ಲಿ ಒಂದು ವಾಯುವಿಲ್ಲದೇ ಹೋದರೂ ಮನುಷ್ಯ ಬದುಕುವುದು ಸಾಧ್ಯವಿಲ್ಲ. ಈ ಐದು ಪ್ರಾಣಗಳು ಮನುಷ್ಯನ ದೇಹದೊಳಗಿರುವ ಪ್ರಾಣಗಳು. ಆದರೆ ರಾಮಾಯಣದಲ್ಲಿ ಒಂದು ಮಾತು ಬರತ್ತೆ. ಅರ್ಥಾ: ಬಹಿಶ್ಚರ ಪ್ರಾಣಾ: ಅಂತ. ಹಾಗಂದರೆ ನಮ್ಮ ದೇಹ ಬಿಟ್ಟು ಹೊರಗಡೆಯೂ ಒಂದು ಪ್ರಾಣವಿದೆ. ಅದೇ ಹಣ. ಹಣವೆಂಬುದು ಹೊರಗಿನ ಪ್ರಾಣ. ಮನುಷ್ಯ ಜೀವಿಸಬೇಕಿದ್ದರೆ ಆ ಆರನೇ ಪ್ರಾಣ ಬೇಕೇ ಬೇಕು ಅಂತ.

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಹಾಗಾದರೆ ಹಣ ಸಂಪಾದನೆ ಮಾಡುವುದು ಹೇಗೆ..? ನಾವೆಲ್ಲ ದುಡುಯುತ್ತೇವೆ. ಮೈ ಮುರಿದು ದುಡಿಯುತ್ತೇವೆ. ಆದರೆ ಶ್ರಮಕ್ಕೆ ತಕ್ಕ ಹಣ ಕೈ ಸೇರುತ್ತಿಲ್ಲ, ಹೀಗಾಗಿ ಶ್ರಮಕ್ಕೆ ತಕ್ಕ ಹಣ ಪಡೆಯುವುದು ಹೇಗೆ..? ಮನೆಯ ಖಜಾನೆ ತುಂಬಿಸಿಕೊಳ್ಳುವುದು ಹೇಗೆ..? ಅದಕ್ಕಿರುವ ಒಂದೇ ಉಪಾಯ ಮಹಾಲಕ್ಷ್ಮೀ ಪೂಜೆ. ದುಡ್ಡಿನ ಒಡತಿ ಮಹಾಲಕ್ಷ್ಮಿ ಪೂಜೆ ಮಾಡಬೇಕು. ಎಲ್ಲರೂ ಲಕ್ಷ್ಮೀ ಪೂಜೆ ಮಾಡುತ್ತಾರೆ. ಹೇಗಂದರೆ ಹಾಗೆ ಪೂಜಿಸುವುದಲ್ಲ. ಅದಕ್ಕೊಂದು ಕ್ರಮವಿದೆ. ಹಾಗೆ ಪೂಜಿಸಿದರೆ ಮಾತ್ರವೇ ಲಕ್ಷ್ಮೀ ನಿಮ್ಮ ಮನೆ ಸೇರೋದು. ಆ ಪೂಜಾ ಕ್ರಮ ಏನು..?
ಶಾಸ್ತ್ರದಲ್ಲಿ ವಿವರಿಸಿರುವ ಹಾಗೆ 15 ಬಗೆಯಲ್ಲಿ ಮಹಾಲಕ್ಷ್ಮೀ ಆರಾಧನಾ ರಹಸ್ಯಗಳಿದ್ದಾವೆ. ಆ ರಹಸ್ಯಗಳಲ್ಲಿ ನಿಮಗೆ ಯಾವುದು ಸಾಧ್ಯವಾಗುತ್ತದೋ ಆ ಬಗೆಯ ಪೂಜೆಯನ್ನ ಮಾಡಿ.

ರಹಸ್ಯ 1

 ಶ್ರೀ ಮಹಾಲಕ್ಷ್ಮೀ ದೇವಿ ವಿಗ್ರಹವನ್ನು ಅಕ್ಕಿಯ ಮೇಲಿಟ್ಟು ಆ ಲಕ್ಷ್ಮೀಗೆ ಸಹಸ್ರ ನಾಮಗಳನ್ನು ಹೇಳುತ್ತಾ ಕುಂಕುಮಾರ್ಚನೆ ಮಾಡಿ, ಶ್ರೀ ಸೂಕ್ತ ಮಂತ್ರವನ್ನು ಹೇಳಿಕೊಂಡರೆ ಆ ಮನೆಯಲ್ಲಿ ಎಂದೆಂದಿಗೂ ಧಾನ್ಯಲಕ್ಷ್ಮಿಯ ಅಭಿವೃದ್ಧಿಯಾಗುತ್ತದೆ..ಈ ರೀತಿ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ, ಧನ ದಾರಿದ್ಯ ಇರುವುದಿಲ್ಲ..

ರಹಸ್ಯ  02

"ಶ್ರೀ ಮಹಾಲಕ್ಷ್ಮಿ ದೇವಿಯ ವಿಗ್ರಹವನ್ನು ಪೂರ್ವಕ್ಕೆ ಕೂಡಿಸಿ, ಪೂಜೆ ಮಾಡುವವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು "ಶ್ರೀ ಸೂಕ್ತ" ಪಾರಾಯಣ ಮಾಡಿದರೆ, ಇಷ್ಟಾರ್ಥ ಸಿದ್ಧಿಯಾಗಿ, ಆ ಮನೆಯು ಸಂಪೂರ್ಣ ಅಭಿವೃದ್ಧಿಯಾಗುತ್ತದೆ.

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು

ರಹಸ್ಯ 03

"ಶ್ರೀ ಮಹಾಲಕ್ಷ್ಮಿ" ದೇವಿಯನ್ನು ಉತ್ತರಕ್ಕೆ ಕೂಡಿಸಿ ಪೂಜೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಕುಳಿತು ಪೂಜಿಸಿದರೆ, ಆ ಮನೆಯು ಲಕ್ಷ್ಮೀ ವಾಸಸ್ಥಾನವಾಗುತ್ತದೆ.

ರಹಸ್ಯ 04

ಶ್ರೀ ಸೂಕ್ತ ಓದಿ ಶ್ರೀ ಲಕ್ಷ್ಮೀನಾರಾಯಣರ ಪೂಜೆ ಮಾಡಿದರೆ, ಆ ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿ ಇರುತ್ತಾರೆ.

ರಹಸ್ಯ 05

ಯಾರ ಮನೆಯಲ್ಲಿ "ಶ್ರೀ ಸೂಕ್ತ" ದಿಂದ ಸಾಲಿಗ್ರಾಮ ದೇವರಿಗೆ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಎಲ್ಲರಿಗೂ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ.

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ

ರಹಸ್ಯ 06

ಯಾರ ಮನೆಯಲ್ಲಿ ಪ್ರತಿದಿವಸ "ಶ್ರೀಸೂಕ್ತ" ಓದಿ ,ಮನೆಗೆ ಬರುವ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುತ್ತಾರೋ ಆ ಮನೆಯಲ್ಲಿ ಎಂದೂ ದಾರಿದ್ರ್ಯ, ವೈಧವ್ಯ ಬರುವುದಿಲ್ಲ. ಸಮಸ್ತ ಸ್ತ್ರೀ ಶಾಪ ನಿವಾರಣೆಯಾಗುತ್ತದೆ.

ರಹಸ್ಯ 07

ಯಾರು ಪ್ರತಿದಿವಸ "ಶ್ರೀ ಸೂಕ್ತ" ಓದಿ , ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿ ಹಂಚುತ್ತಾರೆಯೋ, ಅವರ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ.

ರಹಸ್ಯ 08

ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳುತ್ತಾ ದೇವರ ವಿಗ್ರಗಳಿಗೆ ಅಥವಾ ಸಾಲಿಗ್ರಾಮ ದೇವರಿಗೆ ಗಂಧದಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಯಾವುದೇ ತರಹದ ರೋಗಭಾದೆ ಇರುವುದಿಲ್ಲ.

ರಹಸ್ಯ 09

ಯಾರು ಶ್ರೀಸೂಕ್ತ ಹೇಳುತ್ತಾ ದೇವರಿಗೆ ಅರಿಸಿನದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಮಂಗಳ ಕಾರ್ಯಗಳು ಅಡಚಣೆ ಇಲ್ಲದೆ ನಡೆಯುತ್ತವೆ.

ರಹಸ್ಯ 11

ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ಕುಂಕುಮದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿನ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ ಅಲ್ಲದೆ ಸಮಸ್ತ ಮಾಟ ಮಂತ್ರ ದೋಷಗಳು ನಿವಾರಣೆಯಾಗುತ್ತದೆ.

ರಹಸ್ಯ 12

ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ಚಂದನದಿಂದ ದೇವರಿಗೆ ಅಭಿಷೇಕ ಮಾಡುತ್ತಾರೋ, ಅವರಿಗೆ ಸಾಲದ ಭಾದೆ ನಿವಾರಣೆಯಾಗುತ್ತದೆ. ಹಣದ ತೊಂದರೆ ನಿವಾರಣೆ.

ಮನೆ ಬಾಗಿಲಲ್ಲಿದ್ದರೆ ನಾಣ್ಯ, ಬ್ಯಾಡ್‌ಲಕ್ ನಗಣ್ಯ

ರಹಸ್ಯ 13

ಶ್ರೀ ಸೂಕ್ತ ಪಾರಾಯಣ ಮಾಡಿ, ಶ್ರೀ ಮಹಾಲಕ್ಷ್ಮೀ ದೇವಿಗೆ ಕಮಲದ ಹೂವನ್ನು ಇಡುತ್ತಾ ಬಂದರೆ, ಅವರಿಗೆ ಧನ,ಕನಕ, ವಸ್ತು ವಾಹನ ಎಲ್ಲವೂ ಶೀಘ್ರವಾಗಿ ದೊರೆತು, ಆಗರ್ಭ ಶ್ರೀಮಂತರಾಗುತ್ತಾರೆ.

ರಹಸ್ಯ 14

ಶ್ರೀ ಸೂಕ್ತ ಹೇಳುತ್ತಾ ಮಹಾಲಕ್ಷ್ಮಿಗೆ ಬಿಲ್ವಪತ್ರೆ  ಇಂದ ಪೂಜೆ ಮಾಡುತ್ತಾ ಬಂದರೆ, ನಿಮಗೆ ಬರಬೇಕಾದ ಹಣವು ಯಾವುದೇ ತೊಂದರೆ ಇಲ್ಲದೆ ಬೇಗ ಬರುತ್ತದೆ.

ರಹಸ್ಯ 15

"ಶ್ರೀ ಸೂಕ್ತ" ಹೇಳಿ "ಶ್ರೀಲಕ್ಷ್ಮೀನಾರಾಯಣ"ರಿಗೆ "ಕೆಂಡಸಂಪಿಗೆ" ಹೂವಿನಿಂದ ಪೂಜೆ ಮಾಡಿದರೆ, ಸಮಸ್ತ ಸರ್ಪದೋಷಗಳು ನಿವಾರಣೆಯಾಗುತ್ತದೆ. ಇಷ್ಟು ತಿಳಿದ ಮೇಲೆ ಇನ್ನೊಂದು ಅಂಶ ನೀವು ಅರ್ಥ ಮಾಡಿಕೊಳ್ಳಲೇ ಬೇಕು. ನೀವು ಪೂಜಿಸುವಾಗ ಶ್ರದ್ಧೆ-ಭಕ್ತಿಗಳು ಬಹಳ ಮುಖ್ಯ. ನಿಮ್ಮ ಮನಸ್ಸು ಎಷ್ಟು ಶುದ್ಧವಾಗಿರುತ್ತದೋ ಅಷ್ಟು ಶೀಘ್ರವಾಗಿ ಲಕ್ಷ್ಮೀ ನಿಮ್ಮ ಖಜಾನೆ ಸೇರುತ್ತಾಳೆ ಅದರಲ್ಲಿ ಸಂಶಯವಿಲ್ಲ.