ಡಿ.26ರಂದು ಅಪರೂಪದ ಕಂಕಣ ಸೂರ್ಯಗ್ರಹಣ ನಡೆಯಲಿರುವುದರಿಂದ, ಆ ಬಗ್ಗೆ ಹೆಚ್ಚೆಚ್ಚು ಜನರಿಗೆ ಗ್ರಹಣದ ಕುರಿತು ಮಾಹಿತಿ ತಲುಪಿಸಲು ಮತ್ತು ಜಾಗೃತಿ ನೀಡುವ ತಯಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಉಡುಪಿಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ https://paac.ppc.ac.in/ ಎಂಬ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ.

ಉಡುಪಿ(ನ.29): ಪೂರ್ಣಪ್ರಜ್ಞ ಕಾಲೇಜಿನ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿ.ಎ.ಎ.ಸಿ.) ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಡುಪಿ: ಈ ಬಾರಿ 1 ಲಕ್ಷ ಮಕ್ಕಳಿಂದ ಸೂರ್ಯಗ್ರಹಣ ವೀಕ್ಷಣೆ..!

ಡಿ.26ರಂದು ಅಪರೂಪದ ಕಂಕಣ ಸೂರ್ಯಗ್ರಹಣ ನಡೆಯಲಿರುವುದರಿಂದ, ಆ ಬಗ್ಗೆ ಹೆಚ್ಚೆಚ್ಚು ಜನರಿಗೆ ಗ್ರಹಣದ ಕುರಿತು ಮಾಹಿತಿ ತಲುಪಿಸಲು ಮತ್ತು ಜಾಗೃತಿ ನೀಡುವ ತಯಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಉಡುಪಿಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ https://paac.ppc.ac.in/ ಎಂಬ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ.

ಸಂಘ ಸ್ಥಾಪಕ ಸಂಯೋಜಕ ಡಾ.ಎ.ಪಿ.ಭಟ್‌, ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಪ್ರತಿಭಾ ಆಚಾರ್ಯ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.

ಲಾರ್ಡ್ ಆಫ್ ದ ರಿಂಗ್ಸ್: ಶತಮಾನದ ಸೂರ್ಯಗ್ರಹಣಕ್ಕೆ ದಿನಗಣನೆ!...

ಈ ವೆಬ್‌ಸೈಟ್‌ ಮೂಲಕ ಪಿ.ಎ.ಎ.ಸಿ. ಹಳೆವಿದ್ಯಾರ್ಥಿಗಳಿಗೆ ಹಾಗೂ ಈಗಿನ ವಿದ್ಯಾರ್ಥಿಗಳಿಗೆ ಖಗೋಳ ಶಾಸ್ತ್ರದ ಬಗ್ಗೆ ಮಾಹಿತಿ ನೀಡಲು ಭೌತಶಾಸ್ತ್ರ ವಿಭಾಗದವರು ಪ್ರಯತ್ನಿಸುತ್ತಿದ್ದಾರೆ. ಈ ವೆಬ್‌ಸೈಟ್‌ ಅನ್ನು ಪಿ.ಎ.ಎ.ಸಿ.ನ ವಿದ್ಯಾರ್ಥಿಗಳೇ ನಡೆಸುವಂತೆ ಯೋಜಿಸಲಾಗಿದೆ.

ಪುತ್ತೂರು ರೇಪ್‌: 4ನೇ ಆರೋಪಿ ಪ್ರಜ್ವಲ್‌ಗೆ ಜಾಮೀನು