Asianet Suvarna News Asianet Suvarna News

ರೋಗಕ್ಕಿದೆ ಮಂತ್ರದ ಮದ್ದು, ಯಾವ ಅನಾರೋಗ್ಯಕ್ಕೆ ಯಾವ ಮಂತ್ರ?

ಮಂತ್ರದಲ್ಲಿ ಮಹಾನ್ ಶಕ್ತಿಯಿದೆ. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಕೆಲ ರೋಗಗಳಿಗೆ ಔಷಧಿ ಜೊತೆ ಮಂತ್ರ ಪಠಣ ಮಾಡಿದ್ರೆ ಪರಿಣಾಮ ಬೇಗ ಕಾಣಿಸಿಕೊಳ್ಳುತ್ತದೆ. ಬೇರೆ ಬೇರೆ ರೋಗಕ್ಕೆ ಬೇರೆ ಬೇರೆ ಮಂತ್ರವಿದೆ. ಇದ್ರ ಬಗ್ಗೆ ವಿವರ ಇಲ್ಲಿದೆ.
 

Powerful Mantras To Good Health
Author
First Published Oct 10, 2022, 4:58 PM IST | Last Updated Oct 10, 2022, 4:58 PM IST

ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತಾ ಎನ್ನುವ ಮಾತೊಂದಿದೆ. ಮಂತ್ರದಿಂದ ಮಾವಿನ ಕಾಯಿ ಉದುರದೆ ಇರಬಹುದು ಆದ್ರೆ ಮಂತ್ರಕ್ಕೆ ಆರೋಗ್ಯ ಕಾಪಾಡುವ ಶಕ್ತಿಯಿದೆ. ಇಡೀ ಜಗತ್ತು ಮಂತ್ರ ಶಕ್ತಿಯನ್ನು ಒಪ್ಪಿಕೊಂಡಿದೆ. ಪ್ರತಿಯೊಂದು ಮಂತ್ರ ಪಠಣಕ್ಕೂ ಅದರದೇ ಆದ ಮಹತ್ವವಿದೆ. ಓಂ ಎಂಬ ಪದದಲ್ಲಿ ಅಪಾರ ಶಕ್ತಿಯಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾಳೆ. ಮೂರು ಅಕ್ಷರಗಳ ಈ ಓಂ ಮಂತ್ರವನ್ನು ಸರಿಯಾಗಿ ಉಚ್ಛಾರ ಮಾಡಿದ್ರೆ ಅನೇಕ ರೋಗಗಳಿಂದ ನಮ್ಮ ದೇಹವನ್ನು ದೂರವಿಡಬಹುದು. ಹೊಟ್ಟೆ ಸಮಸ್ಯೆಯಿಂದ ಹಿಡಿದು ಉಸಿರಾಟ ಸಮಸ್ಯೆ ಹೋಗಲಾಡಿಸುವ ಜೊತೆಗೆ  ಮನಸ್ಸಿನ ಆರೋಗ್ಯ ಕಾಪಾಡುವ ಶಕ್ತಿ ಓಂಗಿದೆ. ಬರೀ ಓಂ ಮಂತ್ರ ಮಾತ್ರವಲ್ಲ, ಅನೇಕ ಮಂತ್ರಗಳಿವೆ. ಅವುಗಳನ್ನು ಜಪಿಸಿದಾಗ ಅನೇಕ ರೋಗಗಳು ಗುಣಮುಖವಾಗುತ್ತವೆ. ಹಾಗಂತ ರೋಗ ಬಂದಾಗೆಲ್ಲ ಮಂತ್ರ ಪಠಣ ಮಾಡಿದ್ರೆ ಸಾಲುವುದಿಲ್ಲ. ವೈದ್ಯರ ಸಲಹೆ ಮೇರೆಗೆ ಔಷಧಿ, ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಮಂತ್ರದಲ್ಲಿರುವ  ಶಕ್ತಿಯನ್ನು ಔಷಧಿಗಳ ಜೊತೆ ಬೆರೆಸಿದ್ರೆ ಶೀಘ್ರ ರೋಗದಿಂದ ಮುಕ್ತಿ ಪಡೆಯಬಹುದು. ಯಾವ ಮಂತ್ರವು ಯಾವ ರೋಗವನ್ನು ಗುಣಪಡಿಸುವ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ. 

ರಕ್ತದೊತ್ತಡ (Blood Pressure) ನಿಯಂತ್ರಣ ಮತ್ತು ಉತ್ತಮ ಆರೋಗ್ಯಕ್ಕಾಗಿ ಹೇಳಿ ಈ ಸಣ್ಣ ಮಂತ್ರ (Mantra) : ರಕ್ತದೊತ್ತಡವನ್ನು ನಿಯಂತ್ರಿಸಲು ಬಯಸಿದರೆ, ಪ್ರತಿದಿನ ಸಣ್ಣ ಮಂತ್ರವನ್ನು ಪಠಿಸಿ. ಪ್ರತಿದಿನ ನೀವು ಹ್ರೀಂ ಜಪ ಮಾಡಬೇಕು. ಓಂ ಭವಾನಿ ಪಾಂಡುರಂಗ ಈ ಮಂತ್ರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕನಿಷ್ಠ 21 ಬಾರಿ ಜಪಿಸಬೇಕು. ಇದ್ರಿಂದಲೂ ನೀವು ಬಿಪಿ ನಿಯಂತ್ರಣದಲ್ಲಿಡಬಹುದು.

ಮಧುಮೇಹ (Diabetes ) ರೋಗಿಗಳು ಹೇಳಿ ಈ ಮಂತ್ರ : ಮಧುಮೇಹ ರೋಗಿಗಳೂ ಬಿಪಿ ರೋಗಿಗಳು ಹೇಳುವಂತೆ ಹ್ರೀಂ ಮಂತ್ರವನ್ನು  ಜಪಿಸಬೇಕು. ಈ ಮಂತ್ರವನ್ನು ಪಠಿಸಲು ಸೂಕ್ತ ವಿಧಾನವಿದೆ. ಆ ವಿಧಾನದಲ್ಲೇ ನೀವು ಮಂತ್ರ ಹೇಳಬೇಕು. ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ನಂತ್ರ ನಾಭಿಯ ಮೇಲೆ ನಿಮ್ಮೆಲ್ಲ ಗಮನವಿರುವಂತೆ ನೋಡಿಕೊಳ್ಳಿ.  ನಂತ್ರ ಈ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ಗಟ್ಟಿಯಾಗಿ ಪಠಿಸುವುದರಿಂದ ಲಾಭ ಹೆಚ್ಚು ಸಿಗುತ್ತದೆ. ಮಂತ್ರವನ್ನು ಪಠಿಸುವಾಗ ಒತ್ತಡವು ಹೊಕ್ಕುಳಿನ ಮೇಲೆ ಬೀಳುತ್ತದೆ. ಇದು ದೇಹ ಸಮತೋಲನದಲ್ಲಿರಲು ನೆರವಾಗುತ್ತದೆ. ಹಾಗೆಯೇ ರೋಗ ದೂರವಾಗುತ್ತದೆ.

ಕೆಲಸದ ಒತ್ತಡದಲ್ಲಿರುವವರು ಹೇಳಿ ಈ ಮಂತ್ರ : ಇಡೀ ದಿನ ಕಚೇರಿ ಕೆಲಸ, ಒತ್ತಡ ಎನ್ನುವವರು ಮನಸ್ಸಿಗೆ ಶಾಂತಿ ಬೇಕೆಂದ್ರೆ ಮಂತ್ರ ಹೇಳಬಹುದು. ಇವರು ಲಂ ಎಂಬ ಮಂತ್ರವನ್ನು ಪಠಿಸಬೇಕು. ಐದು ಮಾಲೆ ಜಪವನ್ನು ನೀವು ಮಾಡಬೇಕಾಗುತ್ತದೆ. ಒಂದ್ವೇಳೆ ನಿಮಗೆ ಇಷ್ಟೊಂದು ಸಮಯವಿಲ್ಲವೆಂದಾದ್ರೆ ನೀವು ಅನೇಕ ಬಾರಿ ಲಂ ಎಂಬ ಮಂತ್ರವನ್ನು ಜಪಿಸಿದ್ರೂ ಸಾಕು. ಇದ್ರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.

ಎಂಜಾಯ್ ಮಾಡ್ಕೊಂಡು ವ್ಯಾಯಾಮ ಮಾಡಿ! 

ಅಜೀರ್ಣ, ಜ್ವರಕ್ಕೆ ಹೇಳಿ ಈ ಮಂತ್ರ : ಅಜೀರ್ಣ ಅಥವಾ ಜ್ವರದಿಂದ ನೀವು ಬಳಲುತ್ತಿದ್ದರೆ ನೀವು ಓಂ ಮಂತ್ರವನ್ನು ಜಪಿಸಬೇಕು. ವಜ್ರಾಸನ ಅಥವಾ ಸುಖಾಸನದಲ್ಲಿ ಕುಳಿತು ಮಂತ್ರ ಹೇಳಬೇಕು. ಓಂ ಮಂತ್ರದ ಹೊರತಾಗಿ ನೀವು ರಂ ಎಂಬುದನ್ನು ಕೂಡ ಹೇಳಬಹುದು. 
ಜ್ವರ ವಿಪರೀತವಾಗಿದ್ದು, ಔಷಧಿ ತೆಗೆದುಕೊಳ್ತಿದ್ದರೂ ಕಡಿಮೆಯಾಗಿಲ್ಲವೆಂದಾದ್ರೆ ನೀವು  ನಮೋ ಭಗವತೇ ರುದ್ರಾಯ ಮಂತ್ರವನ್ನು ಜಪಿಸಬೇಕು. ಮಂತ್ರ ಹೇಳ್ತಿದ್ದೇವೆ ಎನ್ನುವ ಕಾರಣಕ್ಕೆ ಔಷಧಿ ಬಿಡಬಾರದು. ಜ್ವರದಲ್ಲಿ ಮಂತ್ರ ಹೇಳುವುದು ಕಷ್ಟ ಎನ್ನುವವರ ಬಳಿ ಕುಟುಂಬಸ್ಥರು ಕುಳಿತು ಈ ಮಂತ್ರ ಪಠಿಸಬಹುದು.

ಮಾರಣಾಂತಿಕ ರೋಗದಿಂದ ಮುಕ್ತಿಗೆ ಈ ಮಂತ್ರ : ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ ಬೇಕು ಎನ್ನುವವರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.  ಓಂ ತ್ರ್ಯಂಬಕಂ ಯಜಾಮಹೇ, ಸುಗನ್ಧಿಂ ಪುಷ್ಟಿವರ್ಧನಮ್ ಮಂತ್ರ ಹೇಳಬೇಕು.

ಮೈಗ್ರೇನ್ ಕಡಿಮೆಯಾಗಲು ಈ ಮಂತ್ರ : ಮೈಗ್ರೇನ್ ನಿಂದ ಬಳಲುತ್ತಿದ್ದರೆ ನೀವು ಶಿವನ ಧ್ಯಾನ ಮಾಡಿ. ಓಂ ನಮಃ ಶಿವಾಯ ಮಂತ್ರ ಹೇಳಿ.

Morning Gastric: ಬೆಳಗ್ಗೆ ಹೊಟ್ಟೆ ಬಲೂನ್‌ ನಂತೆ ಉಬ್ಬುವುದೇ? ಪರಿಹಾರವೇನು?

ಹೃದಯಕ್ಕೆ ಈ ಮಂತ್ರ ಮದ್ದು : ಸುಖಾಸನದಲ್ಲಿ ಕುಳಿತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿದ್ರೆ ಹೃದಯ ಸಂಬಂಧಿ ಖಾಯಿಲೆಯಿಂದ ಮುಕ್ತಿ ಪಡೆಯಬಹುದು. ಇದ್ರಿಂದ ಹೃದಯಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ.
 

Latest Videos
Follow Us:
Download App:
  • android
  • ios