Asianet Suvarna News Asianet Suvarna News

ಎಂಜಾಯ್ ಮಾಡ್ಕೊಂಡು ವ್ಯಾಯಾಮ ಮಾಡಿ! 

ವ್ಯಾಯಾಮವನ್ನು ಕೆಲವರು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮಾಡಿದರೆ, ಇನ್ನು ಕೆಲವರು ಸಂತೋಷಕ್ಕಾಗಿ, ಒಂದು ಪ್ಯಾಷನ್ ಆಗಿ ಮಾಡುತ್ತಾರೆ. ಯಾವ ಉದ್ದೇಶದಿಂದಲೇ ಮಾಡಿದರೂ ಆರೋಗ್ಯಕ್ಕೆ ಅದು ಒಳ್ಳೆಯದೇ. ವ್ಯಾಯಾಮವನ್ನು ಆನಂದಿಸುವುದು ಒಂದು ಕಲೆ ಅದು ಹೇಗೆ ಇಲ್ಲಿದೆ ಮಾಹಿತಿ.

Joyful Workout have more effect on Physical & Mental Health!
Author
First Published Oct 9, 2022, 2:48 PM IST

ವ್ಯಾಯಾಮವನ್ನು ಕೆಲವರು ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮಾಡಿದರೆ, ಇನ್ನು ಕೆಲವರು ಸಂತೋಷಕ್ಕಾಗಿ, ಒಂದು ಪ್ಯಾಷನ್ ಆಗಿ ಮಾಡುತ್ತಾರೆ. ಯಾವ ಉದ್ದೇಶದಿಂದಲೇ ಮಾಡಿದರೂ ಆರೋಗ್ಯಕ್ಕೆ ಅದು ಒಳ್ಳೆಯದೇ. ವ್ಯಾಯಾಮವನ್ನು ಪ್ರೀತಿಸುವವರಿಗೆ ಇದೇನು ಕಷ್ಟವಲ್ಲ. ನಿಯಮಿತವಾಗಿ ಮಾಡಿದರೆ ಎಷ್ಟೋ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ವ್ಯಾಯಾಮ ಮಾಡುವಾಗ ಸಂತೋಷದಿAದ ಮಾಡಬೇಕು ಆಗ ಅದರ ಪ್ರಭಾವ ಹೆಚ್ಚಿರುತ್ತದೆ. ವ್ಯಾಯಾಮವನ್ನು ಆನಂದಿಸುವುದು ಒಂದು ಕಲೆ ಅದು ಹೇಗೆ ಇಲ್ಲಿದೆ ಮಾಹಿತಿ.

ನಿಯಮಿತ ವ್ಯಾಯಾಮ ಕಷ್ಟ ಎನ್ನುವವರು ಇದ್ದಾರೆ. ಆದರೆ ಅದನ್ನು ಪ್ರೀತಿಸುವವರಿಗೆ ಹಾಗೂ ಅದಕ್ಕೆ ಬದ್ಧರಾಗಿರುವವರಿಗೆ ಕಷ್ಟವಲ್ಲ. ಸಂತೋಷದಾಯಕ ಚಲನೆಯು ದೈಹಿಕ ಚಲನೆಯನ್ನು ಆನಂದಿಸಲು ಒತ್ತು ನೀಡುತ್ತದೆ.
ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಚೆನ್ನಾಗಿ ಗುರುತಿಸಿ ಮತ್ತು ಸಂತೋಷದ ಮೇಲೆ ಒತ್ತು ನೀಡುವ ಮೂಲಕ ದೇಹವನ್ನು ಆಗಾಗ್ಗೆ ಚಲಿಸುವ ಸಾಧ್ಯತೆ ಇದೆ.
ವ್ಯಾಯಾಮವನ್ನು ಆಗಾಗ್ಗೆ ಅಗತ್ಯವಿರುವಂತೆ ಕಂಡುಬರುತ್ತವೆ: ಆದರ್ಶ ಮೈಕಟ್ಟು ಸಾಧಿಸಲು, ಆಹಾರ ಕರಗಿಸಲು ಮತ್ತು ದೇಹವನ್ನು ಚೆನ್ನಾಗಿ ಟ್ರೆöÊನ್ ಮಾಡುವುದಕ್ಕೆ ಬೇಕಾಗುತ್ತದೆ. ವ್ಯಾಯಾಮ ಒಂದು ವಿಶ್ರಾಂತಿ ನೀಡುವುದರ ಜೊತೆಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅದರ ಮೇಲಿನ ಹಕ್ಕು ಮತ್ತು ಭಾಗವಹಿಸುವ ಅಥವಾ ಇಲ್ಲದಿರುವ ನಿಮ್ಮ ಸ್ವಾತಂತ್ರ‍್ಯ ಇವೆಲ್ಲವೂ ಸಂತೋಷದಾಯಕ ಚಲನೆಯಿಂದ ಅಂಗೀಕರಿಸಲ್ಪಟ್ಟಿದೆ. ಸಣ್ಣ ಪ್ರಮಾಣದ ವ್ಯಾಯಾಮವೂ ಸಹ ನಮ್ಮಲ್ಲಿನ ಮೂಡ್ ಬದಲಾವಣೆಗೆ ಕಾರಣವಾಗುತ್ತದೆ.

ಪ್ಲ್ಯಾಂಕ್ ವ್ಯಾಯಾಮ ಮಾಡಿ, ಐದು ಅಚ್ಚರಿ ಪ್ರಯೋಜನ ಪಡೆಯಿರಿ

ವರ್ಕ್ಔಟ್ ಮಾಡುವಾಗ ಸಂತೋಷವನ್ನು ಕಂಡುಕೊಳ್ಳುವ ಸಂಶಗಳು ಇಲ್ಲಿವೆ. 
ಸಂತೋಷದ ತಾಲೀಮು 

ಸತತ ಎಂಟುವರೆ ಗಂಟೆಗಳ ಕಾಲ ವರ್ಕೌಟ್ ಮಾಡಿದರೆ ಇದರ ಪರಿಣಾಮ ಸ್ವತಃ ನೀವೇ ಕಂಡುಕೊಳ್ಳಬಹುದು. ಗುರಿ ಮುಟ್ಟಲು, ತೇಲಾಡುವುದು, ಬೌನ್ಸ್, ಅಲುಗಾಡುವುದು, ಸಂತೋಷಕ್ಕೆ ಹಾರುವುದು ಮತ್ತು ಗಾಳಿಯಲ್ಲಿ ಹಾರಿಬಿಡುವುದು ಕಾಣಿಸುತ್ತದೆ.

ಹೊರಾಂಗಣ ವ್ಯಾಯಾಮ
ನಿಮ್ಮ ಹತ್ತಿರದಲ್ಲಿರುವ ಪಾರ್ಕ್ ಅಥವಾ ಪ್ರಕೃತಿಯ ಸೊಬಗಿನ ನಡುವೆ ನಡೆಯುವುದು, ಜಾಗಿಂಗ್ ಮಾಡುವುದರಿಂದ ಸಂತೋಷವನ್ನು ಇನ್ನಷ್ಟು ಹೆಚ್ಚುಗೊಳಿಸುತ್ತದೆ. ಉತ್ಸಾಹಭರಿತ ವಾತಾವರಣದಲ್ಲಿ ನಡೆಯುವುದು ನಿಮ್ಮ ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ. ಸುತ್ತಲೂ ಹಸಿರು ಇಲ್ಲದಿದ್ದರೂ, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯಲ್ಲಿ ಸಮಯ ಕಳೆಯುವುದರಿಂದ ಮನಸ್ಸು ಮತ್ತು ದೇಹವು ಉತ್ತಮವಾಗಲು ಸಹಾಯ ಮಾಡುತ್ತದೆ. ಅಲ್ಲದೆ ಹೊರಾಂಗಣದ ವ್ಯಾಯಾಮವು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾಗಿದೆ.

ಗುಂಪು ಚಟುವಟಿಕೆ 
ಫಿಟ್‌ನೆಸ್‌ಗೆ ಬಂದಾಗ, ಗುಂಪಿನಲ್ಲಿ ವರ್ಕೌಟ್ ಮಾಡುವುದರಿಂದ ಪ್ರೇರಣೆ ಹೆಚ್ಚಿಸುತ್ತದೆ. ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು ಮತ್ತು ಮೋಜಿನಿಂದ ವ್ಯಾಯಾಮವನ್ನು ಮಾಡಬಹುದು. ಇತರೆ ಜನರೊಂದಿಗೆ, ತರಗತಿಯಲ್ಲಿ ಅಥವಾ ತರಬೇತಿ ಗುಂಪಿನಲ್ಲಿ, ಅಥವಾ ಆಕಸ್ಮಿಕವಾಗಿ, ಸ್ನೇಹಿತರು ಅಥವಾ ಕುಟುಂಬದೊAದಿಗೆ ವ್ಯಾಯಾಮ ಮಾಡಬಹುದು. 

workout ಆದ್ಮೇಲೆ ಕೂಲ್ ಡೌನ್ ಆಗ್ತೀರಾ? ಇಲ್ಲಾಂದ್ರೆ ಇದನ್ನ ಮಾಡಿ

ಸಂಗೀತ ಆನಂದಿಸಿ 
ಜಾಗಿಂಗ್ ಅಥವಾ ಸೈಕ್ಲಿಂಗ್‌ನAತಹ ಸಾಂಪ್ರದಾಯಿಕ ವ್ಯಾಯಾಮಗಳ ಮೂಲಕ ಸಂಗೀತವನ್ನೂ ಇದರೊಟ್ಟಿಗೆ ಸೇರಿಸಿ. ಏರ್ ಗಿಟಾರ್, ಡ್ರಮ್ಮಿಂಗ್ ಅಥವಾ ಕೆರೋಕೆಯಂತಹ ಚಟುವಟಿಕೆಯೊಂದಿಗೆ ಸಂಗೀತ ಆಲೈಸುತ್ತಾ ವ್ಯಾಯಾಮ ಮಾಡುವುದು. ಇದರಿಂದ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಸಂತೋಷವನ್ನು ಅನುಭವಿಸಬಹುದು.

ಸಕ್ರಿಯ ಆಟಗಳು ಮತ್ತು ಕ್ರೀಡೆಗಳು 
ಯಾವುದೇ ಸಕ್ರಿಯ ಆಟ ಅಥವಾ ಕ್ರೀಡೆಯಲ್ಲಿ ಸ್ಪರ್ಧೆಯ ಮೂಲಕ ಮೋಜಿನ ವ್ಯಾಯಾಮ ಮಾಡಬಹುದು. ಇದು ವಿನೋದ ಮತ್ತು ಆರೋಗ್ಯಕರ ವ್ಯಾಯಾಮಕ್ಕಾಗಿ ಜಾಗವನ್ನು ಸೃಷ್ಟಿಸುತ್ತವೆ. ಕ್ರೀಡೆಯನ್ನು ಆಡುವುದು ಒಂದು ಮೋಜಿನ ಚಟುವಟಿಕೆಯಾಗಿದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸುತ್ತದೆ. ಇದು ಶಕ್ತಿ ಮತ್ತು ಒತ್ತಡವನ್ನು ಕಡಿಮೆ ಮಾಡುವಾಗ ಮನಸ್ಸು ಮತ್ತು ದೇಹವನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ.

Follow Us:
Download App:
  • android
  • ios