ಕೆಲವರು ನಿಸ್ವಾರ್ಥ ರೀತಿಯಿಂದ ಎಷ್ಟೋ ವರ್ಷ ದುಡಿದರೂ ಇದ್ದಲ್ಲೇ ಇರುತ್ತಾರೆ. ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಕೆಲವರು ದಿಡೀರನೆ ಖ್ಯಾತಿ ಪಡೆಯುತ್ತಾರೆ. ಇದರಲ್ಲಿ ಅವರವರ ಜನ್ಮರಾಶಿಯ ಪಾತ್ರವೆಷ್ಟು ಅಂತ ಈಗ ತಿಳಿಯೋಣ. ಅಂದಹಾಗೆ, ದಿಡೀರನೆ ಮೋಸ ಮಾಡಿಯೋ, ಅಪರಾಧ ಮಾಡಿಯೋ ಕುಖ್ಯಾತಿ ಪಡೆಯುವವರು ಉಂಟು. ಇವರು ಖ್ಯಾತಿಲಕ್ಷ್ಮಿಯ ಕೃಪೆ ಪಡೆದಿದ್ದಾರೆ ಅಂತೇನೂ ಅರ್ಥವಲ್ಲ. ಕುಖ್ಯಾತಿ ಎಂಬುದು ಖ್ಯಾತಿಲಕ್ಷ್ಮಿಯ ಅವಕೃಪೆ ಅಥವಾ ಕೋಪ ಎಂದೇ ತಿಳಿಯಬೇಕು. ಅದರಿಂದ ದುಷ್ಫಲಗಳಾಗುತ್ತವೆ.

ಕನ್ಯಾ, ಮೀನ ರಾಶಿ
ಕನ್ಯಾ ಹಾಗು ಮೀನ ರಾಶಿಯ ವ್ಯಕ್ತಿಗಳು ಕ್ರಿಯೇಟಿವ್‌ ಆಗಿರುತ್ತಾರೆ. ಕಸದಿಂದ ರಸ ಸೃಷ್ಟಿಸುವ ಕಲೆ ಇವರಿಗೆ ಕರಗತ. ಗ್ರಹಗಳು ವಕ್ರವಾಗಿ ಸಂಚರಿಸುತ್ತಿದ್ದಾಗಲೂ, ಕಷ್ಟವನ್ನೂ ಕಲೆ ಮಾಡುವ ಕೌಶಲ್ಯ ಅದು ಹೇಗೋ ಇವರಿಗೆ ಬಂದಿರುತ್ತದೆ. ಇಂಥವರು ಜೀವನದಲ್ಲಿ ಸಿಗುವ ಯಾವುದೇ ಅವಕಾಶವನ್ನೂ ತಮ್ಮ ಪರವಾಗಿ ಮಾರ್ಪಡಿಸಿಕೊಳ್ಳಬಲ್ಲ ಚತುರರು. ಇವರಿಗೆ ಖ್ಯಾತಿಲಕ್ಷ್ಮೀ ಬಲು ಬೇಗ ಒಲಿಯುತ್ತಾಳೆ. ಜೀವನದ ಹರೆಯದ ಹಂತದಲ್ಲೇ ಇವರು ಜನಪ್ರಿಯರಾಗುತ್ತಾರೆ. ರಿಯಾಲಿಟಿ ಶೋಗಳ ಮಕ್ಕಳನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇವರಿಗೆ ಕೃಷಿ ಎಂದರೂ ತುಂಬ ಇಷ್ಟ. ಪ್ರಯೋಗಶೀಲ ಕೃಷಿ ಮಾಡಬಲ್ಲರು. ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸುವುದೂ ಇವರಿಂದ ಸಾಧ್ಯ.

ಧನ ವೃದ್ಧಿಗೆ ಯಾವ ರಾಶಿಯವರು ಯಾವ ಲಕ್ಷ್ಮಿ ಮಂತ್ರವನ್ನು ಪಠಿಸಬೇಕು? 

ಮಿಥುನ, ಧನು ರಾಶಿ
ಈ ಎರಡು ರಾಶಿಯವರು ಬುದ್ಧಿವಂತರು. ಯಾವುದೇ ವ್ಯಾಜ್ಯ ಇದ್ದಲ್ಲಿ ಹೋಗಿ ಎರಡೂ ಬಣಗಳಿಗೆ ಮೆಚ್ಚುಗೆಯಾಗುವಂತೆ ಇತ್ಯರ್ಥ ಮಾಡಬಲ್ಲವರು. ಇವರು ಕೋರ್ಟ್, ಕಾನೂನು ಮುಂತಾಧ ವಿಚಾರಗಳಲ್ಲಿ ಹೆಚ್ಚು ಪರಿಶ್ರಮ, ಶ್ರದ್ಧೆಯ ಮೂಲಕ ಆ ವಲಯದಲ್ಲಿ ಬಹು ಜನಪ್ರಿಯತೆ ಪಡೆಯಬಲ್ಲರು. ಆದರೆ ಅಪರಾಧಿಗಳು ಮತ್ತು ದೌರ್ಜನ್ಯ ಮಾಡುವವರ ಪರ ವಹಿಸಲು ಹೋದರೆ ಖ್ಯಾತಿಲಕ್ಷ್ಮಿಯ ಅವಕೃಪೆಗೂ ಮುಂದಣ ದಿನಗಳಲ್ಲಿ ಪಾತ್ರರಾಗಬೇಕಾದೀತು. ಹಾಗೆಯೇ ಇವರು ಪತ್ರಕರ್ತರಾಗಿಯೂ ಖ್ಯಾತಿ ಪಡೆಯಬಲ್ಲರು. ಯಾವುದೇ ಅಪರಾಧದ ಬೆನ್ನು ಹತ್ತುವಲ್ಲಿ ಇವರು ಪರಿಣತರು. ಹಾಗೆಯೇ ಪೊಲೀಸ್‌ ಇಲಾಖೆಯನ್ನು ಸೇರಿಕೊಂಡರೂ ಇವರು ಯಾವುದೇ ಅಡೆತಡೆ ಇಲ್ಲದೆ ಸಾಧನೆಗಳನ್ನು ಮಾಡಬಲ್ಲರು. ಅದರಲ್ಲಿ ಹೈ ಪೊಸಿಷನ್‌ಗೆ ಹೋಗಬಲ್ಲರು.

ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ! 

ಸಿಂಹ, ಕಟಕ ರಾಶಿ
ಗಣಿತ, ಉದ್ಯಮ ಮುಂತಾದ ವಿಚಾರಗಳಲ್ಲಿ ಇವರಿಗೆ ಹೆಚ್ಚು ಆಸಕ್ತಿ. ಹೊಸ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಕೆಲಸ ಕೊಡುವ ಸಾಮರ್ಥ್ಯ ಇವರಿಗಿದೆ. ಸಮಾಜದಲ್ಲಿ ತುಂಬಾ ಮಂದಿಗೆ ಬೆನ್ನೆಲುಬಾಗಿ ಇವರು ನಿಲ್ಲುವುದರಿಂದ ಇವರ ಬಗ್ಗೆ ಒಂದು ಪ್ರೀತಿ ಸಮಾಜದಲ್ಲಿ ಉಂಟಾಗುತ್ತದೆ. ಧನಸಹಾಯ ಬೇಕಾದವರು, ಸಾಮಾಜಿಕ ಸಹಾಯ ಬೇಕಾದವರು ಮೊದಲಿಗೆ ಸಂಪರ್ಕಿಸುವುದೇ ಇವರನ್ನು. ಇವರು ತಮ್ಮ ಪ್ರಭಾವವನ್ನು ಹೈ ಲೆವೆಲ್‌ನಲ್ಲಿ ಬಳಸಬಲ್ಲವರು. ಹಾಗೇ ರಾಜಕಾರಣದಲ್ಲಿ ಇವರು ಮಿಂಚಬಲ್ಲರು. ಎಲ್ಲರನ್ನೂ ನೆನಪಿಟ್ಟುಕೊಳ್ಳಬಲ್ಲರು. ಹೀಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲರನ್ನೂ ಹೆಸರಿಟ್ಟು ಕರೆಯಬಲ್ಲರು. ಇದು ಸೋಜಿಗವಾಗಿ ಉಳಿದವರಿಗೆ ಕಾಣುತ್ತದೆ. ಆದರೆ ಇವರ ಪ್ರಭಾವ ಜನಪ್ರಿಯತೆಗಳ ಬಂಡವಾಳವೇ ಇದು ಆಗಿರುತ್ತದೆ. 

ಬೇಗ ಶ್ರೀಮಂತರಾಗಬೇಕೆ? ಹಾಗಿದ್ದರೆ ಶ್ರೀಚಕ್ರ ಪೂಜೆ ಮಾಡಿ! 

ವೃಶ್ಚಿಕ, ಕುಂಭ ರಾಶಿ
ಈ ಎರಡು ರಾಶಿಗಳವರಿಗೆ ಲಲಿತಕಲೆ ಹಾಗೂ ಸಾಹಿತ್ಯ ಎಂದರೆ ತುಂಬ ಆಸಕ್ತಿ, ಶ್ರದ್ಧೆ ಹಾಗೂ ಅವುಗಳನ್ನು ಒಲಿಸಿಕೊಳ್ಳಬಲ್ಲರು. ಸಾಹಿತ್ಯ ಸರಸ್ವತಿ ಇವರು ನುಡಿಸಿದಂತೆ ನುಡಿಯುತ್ತಾಳೆ. ಅಕ್ಷರಗಳು ಇವರ ಆಣತಿಗೆ ತಕ್ಕಂತೆ ಕರಗುತ್ತವೆ. ಇವರು ಬರೆಯುವಿಕೆ ಭಾವನೆಗಳನ್ನು ಮೀಟಿದಂತಿರುತ್ತದೆ. ಹೀಗಾಗಿ ಸಾಹಿತ್ಯದಲ್ಲಿ, ಟಿವಿ ಬರವಣಿಗೆಯಲ್ಲಿ, ಇವರು ಮಿಂಚಲು ಸಾದ್ಯವಿದೆ. ಟಿವಿ ಆಂಕರ್‌ಗಳಾಗಿಯೂ ಇವರು ಮಿಂಚಬಹುದು. ಹಾಗೆಯೇ ಇವರು ಸಿನಿಮಾ ಮತ್ತು ಟಿವಿ ಸೀರಿಯಲ್‌ಗಳಲ್ಲಿ ಮಿಂಚಬಲ್ಲರು. ಅಭೀನಯ ಪ್ರತಿಭೆ ಇವರಿಗೆ ಕರಗತವಾಗಿರುತ್ತದೆ. ಸೋಶಿಯಲ್‌ ತಾಣಗಳಲ್ಲಿ ಇವರನ್ನು ಬಿಟ್ಟರೆ ಬೇರೆ ಯಾರೂ ಮಿಂಚುವುದಿಲ್ಲ. ಒಂದು ಗುಂಪು ಸೇರಿದಾಗ ಅಲ್ಲಿದ್ದ ಎಲ್ಲರನ್ನೂ ತಮ್ಮೆಡೆಗೆ ಸೆಳೆಯುವಂತೆ ಮಾಡುವ ಕಲೆಯಲ್ಲಿ ಇವರು ನಿಷ್ಣಾತರು.