ಬೇಗ ಶ್ರೀಮಂತರಾಗಬೇಕೆ? ಹಾಗಿದ್ದರೆ ಶ್ರೀಚಕ್ರ ಪೂಜೆ ಮಾಡಿ!
ಶ್ರೀಚಕ್ರ, ಶ್ರೀ ದೇವಿಗೆ ಸಂಬಂಧಿಸಿದ ಒಂದು ಮಂತ್ರಚಕ್ರ. ಒಳಿತನ್ನು ಬಯಸಿ ಇದನ್ನು ಪೂಜಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿ ಖಂಡಿತ ಈಡೇರುವುದು.
ಇತ್ತೀಚೆಗೆ ಶ್ರೀಚಕ್ರವನ್ನು ಮನೆಗಳಲ್ಲಿ ಸ್ಥಾಪಿಸಿ ಪೂಜಿಸುವುದು ಹೆಚ್ಚಾಗುತ್ತಿದೆ. ಆದರೆ ಅದರ ನಿಜವಾದ ಶಕ್ತಿ ಏನು, ಅದನ್ನು ಪೂಜಿಸುವುದು ಹೇಗೆ ಎಂಬ ವಿಧಾನ ಹೆಚ್ಚಿನವರಿಗೆ ಗೊತ್ತಿಲ್ಲ. ಬನ್ನಿ ತಿಳಿಯೋಣ.
ಶ್ರೀಚಕ್ರ ಯಂತ್ರಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದು. ಶುಕ್ರವಾರ ,ರವಿವಾರ ಮತ್ತು ಹುಣ್ಣಿಮೆ ದಿನ ಶ್ರೀಚಕ್ರ ಪೂಜೆ ಅತ್ಯಂತ ಫಲದಾಯಕ. ಯಾರ ಮನೆಯಲ್ಲಿ ನಿತ್ಯ ಶ್ರೀಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿ ದೇವಿ ವಾಸವಿರುತ್ತಾಳೆ. ಅವರಿಗೆ ದಾರಿದ್ರ್ಯ ಬರುವದಿಲ್ಲ. ಅಲ್ಲಿ ಶಾಂತಿ ನೆಲೆಸಿರುತ್ತದೆ. ಯಾಕೆಂದರೆ ದೇವಿ ಶಾಂತಿ ಸ್ವರೂಪಿಣಿಯಾಗಿ ಶ್ರೀಚಕ್ರದಲ್ಲಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಶ್ರೀಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವದಿಲ್ಲ. ಪ್ರತಿ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಇಷ್ಟಾರ್ಥವೆಲ್ಲ ಸಿದ್ಧಿಸುತ್ತದೆ. ನೀವು ಬೇಗನೆ ಶ್ರೀಮಂತರಾದವರ ದೇವರ ಕೋಣೆ ಹೊಕ್ಕು ನೋಡಿ ಬೇಕಿದ್ದರೆ, ಅಲ್ಲಿ ಶ್ರೀಚಕ್ರವನ್ನು ಪೂಜಿಸಿಯೇ ಇರುತ್ತಾರೆ. ಆದರೆ ನ್ಯಾಯ ನಿಷ್ಠೆ ಧರ್ಮ ಇಲ್ಲದೆ ಗಳಿಕೆ ಮಾಡುವವರನ್ನು ಶ್ರೀಚಕ್ರ ರಕ್ಷಿಸುವುದಿಲ್ಲ.
ಶ್ರೀಚಕ್ರದ ಆರಾಧನೆ ಮಾಡುವವರನ್ನು ಯಾವದೇ ತರಹದ ಮಾಟ ಮಂತ್ರ ದುಷ್ಟ ಶಕ್ತಿಗಳು ಕಾಡುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ ಶ್ರೀಚಕ್ರ ಪೂಜೆ ಬಹಳ ಒಳ್ಳೆಯದು. ಶ್ರೀಚಕ್ರವನ್ನು ಖರೀದಿಸುವಾಗ ಶಾಸ್ತ್ರಜ್ಞರ ಮೂಲಕ ಅದನ್ನು ಪರಿಶೀಲಿಸಿ, ಮಂಡಲ ಹಾಗೂ ಮೂಲೆಗಳು ಸ್ಪಷ್ಟತೆಯಿಂದ ಕೂಡಿವೆ ಎಂದು ಖಚಿತಪಡಿಸಿಕೊಳ್ಳಬೇಕು. ಗೆರೆಗಳು ಅಂಕಡೊಂಕಾಗಿರಬಾರದು. ಶ್ರೀಚಕ್ರದ ಸುತ್ತಲೂ ಎಂಟು ದಳದ ಕಮಲ ಇರಬೇಕು. ಹೊರಗಡೆ ಹದಿನಾರು ದಳದ ಕಮಲವಿರಬೇಕು. ಹೊಸದಾಗಿ ತಂದ ಶ್ರೀಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಿಸಿ ನಂತರ ಮನೆಯಲ್ಲಿ ಇಟ್ಟು ಪೂಜಿಸಬೇಕು.
ಶ್ರೀಚಕ್ರದಲ್ಲಿ ಮಂಡಲದ ನಡುವೆ ಶ್ರೀ ಎಂದು ಬರೆದಿರುತ್ತದೆ. ಶ್ರೀ ಅಂದರೆ ಸಾಕ್ಷಾತ್ ಶ್ರೀದುರ್ಗಾ ಪರಮೇಶ್ವರಿ. ಒಂಬತ್ತು ತ್ರಿಕೋಣದ ಮದ್ಯೆ ಬಿಂದು ಇರುತ್ತದೆ. ನವಶಕ್ತಿ ಸ್ವರೂಪಳಾದ ದೇವಿ ಅದರ ಮಧ್ಯದಲ್ಲಿ ವಾಸಿಸುತ್ತಾಳೆ. ಅದಕ್ಕೆ ದೇವಿಯನ್ನು ಶ್ರೀಚಕ್ರಾಂತರ ವಾಸಿನಿ ಅಂತ ವರ್ಣಿಸುತ್ತಾರೆ. ಈ ಯಂತ್ರದ ಮೇಲ್ಮುಖ ಅಗ್ನಿ ತತ್ವವನ್ನು ಹೊಂದಿದ್ದರೆ, ಅದರ ಸುತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದೆ. ಮಧ್ಯದ ಬಿಂದು ಜಲತತ್ವ ಮತ್ತು ಅದರ ತಳ ಭೂತತ್ವವನ್ನು ಹೊಂದಿದೆ. ಸ್ಪಟಿಕದ ಶ್ರೀಚಕ್ರ ಯಂತ್ರ ಶ್ರೇಷ್ಠ, ನಂತರ ಸ್ಥಾನ ಚಿನ್ನ, ಬೆಳ್ಳಿ, ತಾಮ್ರಕ್ಕೆ.
ಶ್ರೀ ಶಂಕರಾಚಾರ್ಯರು ಮೊದಲು ಶ್ರೀಚಕ್ರ ಆರಾಧನೆ ಮಾಡಿದವರು. ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀಚಕ್ರವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ. ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರಗಳಿಂದ ಸಂತುಷ್ಟಗೊಳಿಸಿ, ಮಾತೃ ಸ್ವರೂಪದಲ್ಲಿ ಶ್ರೀಚಕ್ರದಲ್ಲಿ ಆವಾಹಿಸಿದರು. ನಂತರ ಎಲ್ಲೆಲ್ಲಿ ಶಕ್ತಿ ಕ್ಷೇತ್ರಗಳಿವೆಯೋ ಅಲ್ಲಲ್ಲಿ ಶಂಕರಾಚಾರ್ಯರು ಶ್ರೀಚಕ್ರವನ್ನು ಸ್ಥಾಪನೆ ಮಾಡಿದರು. ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಕೂಡ ಶ್ರೀಚಕ್ರವನ್ನು ಆರಾಧಿಸಿದ್ದಾರೆ ಎನ್ನಲಾಗುತ್ತದೆ.
ನಾಗದೋಷ ಅಂದ್ರೆ ಎಲ್ಲರೂ ಭಯಪಡೋದ್ಯಾಕೆ?
ಶ್ರೀಚಕ್ರವು ಇರುವ ಮನೆಯಲ್ಲಿ ಸದಾ ಹಿತಕರವಾದ ಮಾತುಗಳು ಕೆಳಿಸುತ್ತಿರುತ್ತವೆ. ಮನೆಯ ಸದಸ್ಯರು ಮಧುರವಾದ ಮಾತುಗಳನ್ನು ಆಡುತ್ತಿರುತ್ತಾರೆ. ಅಲ್ಲಿ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಮನೆಯ ಯಜಮಾನ ಹಾಗೂ ಯಜಮಾನಿ ಉನ್ನತವಾದ ಆರೋಗ್ಯದಿಂಧ ಕೂಡಿದ್ದು, ಬಂದ ಅತಿಥಿಗಳಿಗೆ ಹಿತಕರವಾದ ಆತಿಥ್ಯವನ್ನು ನೀಡುತ್ತಿರುತ್ತಾಳೆ. ಅಧಿಕಾರ, ಆರೋಗ್ಯ, ಶಾಂತಿ, ಖ್ಯಾತಿಗಳು ಆ ಮನೆಯನ್ನು ಹುಡುಕಿಕೊಂಡು ಬರುತ್ತವೆ ಎನ್ನುತ್ತಾರೆ ಶಾಸ್ತ್ರವನ್ನು ಅರಿತವರು.
ಕಾಳ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಇಂದು ಮಾರುಕಟ್ಟೆಯಲ್ಲಿ ಬಗೆಬಗೆಯ ಸೈಜಿನ ಶ್ರೀಚಕ್ರಗಳು ಲಭ್ಯವಿವೆ. ಆದರೆ ಆರಾಧನೆಗೆ ಯಾರಾದರೂ ಜ್ಯೋತಿಷ್ಯರು, ಶಾಸ್ತ್ರಜ್ಞರು, ವೇದಜ್ಞರಿಂದಲೇ ಮಾಡಿಸಿಕೊಂಡು ಶ್ರೀಚಕ್ರವನ್ನು ಪಡೆಯುವುದು ಶ್ರೇಯಸ್ಕರ. ಹೇಗೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ರುದ್ರಾಕ್ಷಿಯೂ ನಿಜವಾದ ರುದ್ರಾಕ್ಷಿ ಅಲ್ಲ, ಹಾಗೇ ಎಲ್ಲ ಶ್ರೀಚಕ್ರಗಳೂ ನಿಜವಲ್ಲ.
ಯಾವ ರಾಶಿಗೆ ಯಾವಾಗ ಆರೋಗ್ಯ ಸಮಸ್ಯೆ ಬರುತ್ತೆ?