Asianet Suvarna News Asianet Suvarna News

ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!

ಮನೆಯಲ್ಲಿ ಎಲ್ಲರಿಗೂ ಕೈಹಿಡಿದ ಎಲ್ಲ ಕೆಲಸಗಳಲ್ಲೂ ಒಂದು ಬಗೆಯ ಕಷ್ಟ ಹಾಗೂ ನಷ್ಟ ಕಂಡುಬರುತ್ತಾ ಇದ್ದರೆ ಅಲ್ಲಿ ದರಿದ್ರ ಲಕ್ಷ್ಮೀ ಇರುವ ಸೂಚನೆ ಇದೆ. ಅಂಥ ದರಿದ್ರ ಲಕ್ಷ್ಮಿಯನ್ನು ಮನೆಯಿಂದ ತೊಲಗಿಸುವ ಬಗೆ ಹೇಗೆ?

 

How daridra lakshmi enters to your life
Author
Bengaluru, First Published Jul 30, 2020, 7:24 PM IST

ಕೆಲವರು ಹೇಳುವುದನ್ನು ಕೇಳುತ್ತಿರುತ್ತೇವೆ- ಮನೆಯಲ್ಲಿ ದರಿದ್ರ ಲಕ್ಷ್ಮಿ ಮಾರಾಯ. ಏನು ಮಾಡಿದರೂ ಲಾಭವಿಲ್ಲ. ಎಲ್ಲದರಲ್ಲೂ ನಷ್ಟ ಅಂತ. ಇದು ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದಕ್ಕೆ ಸೂಚನೆ ಹೌದು. ಇನ್ನೂ ಹಲವು ಸೂಚನೆಗಳಿವೆ. ಅವುಗಳಿಂದಲೂ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆಯೇ ಎಂಬುದನ್ನು ತಿಳಿದುಕೊಳ್ಳಬಹುದು.
- ಯಾವ ಕೆಲಸ ಮಾಡಲೂ ಉತ್ಸಾಹವಿಲ್ಲ. ಸದಾ ಮಲಿನವಾದ, ಕೊಳೆಯಾದ, ಹಳೆ ಬಟ್ಟೆಗಳನ್ನು ಧರಿಸುತ್ತಾ ಇರುತ್ತೀರಿ. ಹೊಸ ಬಟ್ಟೆ ಧರಿಸಲು ಮನಸ್ಸೇ ಬರುವುದಿಲ್ಲ.
- ಹೊರಗಿನಿಂದ ಬಂದಾಗ ಕೈಕಾಲು ಮುಖ ಸರಿಯಾಗಿ ತೊಳೆಯುವುದಿಲ್ಲ. ಕಾಲುಗಳ ಹಿಮ್ಮಡಿಯನ್ನ ಸರಿಯಾಗಿ ಒದ್ದೆ ಮಾಡುವುದಿಲ್ಲ. ಪಾದಗು ಸದಾ ಶುಭ್ರವಾಗಿ ಇರುವುದಿಲ್ಲ.

ಸಂಪತ್ತು ಸಮೃದ್ಧಿಗೆ ಹೀಗ್ ಮಾಡಿ

- ಮನೆಯ ಯಜಮಾನ ಯಾವಾಗಲೂ ಹಣೆಗೆ ಒಂದು ಗಂಧದ ಬೊಟ್ಟು, ಭಸ್ಮದ ಲೇಪನ ಅಥವಾ ಕುಂಕುಮದ ತಿಲಕ ಇಡಬೇಕು. ದಿನಕ್ಕೊಮ್ಮೆಯಾದರೂ ಮನೆಯ ದೇವರ ಪಟಕ್ಕೆ ನಮಸ್ಕರಿಸಬೇಕು. ಮನೆಯ ಯಜಮಾನಿ ತಲೆಕೂದಲು ಬಾಚಿ, ಹಣೆಗೆ ಕುಂಕುಮದ ಬೊಟ್ಟು ಇಟ್ಟು, ಮುಡಿಗೊಂದು ಹೂವನ್ನು ಮುಡಿದಿರಬೇಕು. ಇಂಥ ಪಾವಿತ್ರಿಕ ಕೆಲಸಗಳಲ್ಲಿ ಕೊಂಚವೂ ಶ್ರದ್ಧೆ ತೋರಿಸದೆ ಇದ್ದರೆ ಅಲ್ಲಿ ದರಿದ್ರ ಲಕ್ಷ್ಮಿ ಇರಬಹುದು.
- ಮನೆಯ ಮುಂದೆ ಒಂದು ತುಳಸಿ ವನ ಇರಬೇಕು. ಅದು ಮನೆಯ ಮೆಟ್ಟಿಲಿಗಿಂತ ಎತ್ತರದಲ್ಲಿರಬೇಕು. ತುಳಸಿ ವನವು ಸೌಭಾಗ್ಯಲಕ್ಷ್ಮಿಯ ಮನೆಯೆಂದೇ ಖ್ಯಾತ. ಇಲ್ಲವಾದರೆ ಅಲ್ಲಿ ದಾರಿದ್ರ್ಯ ನೆಲೆಸಬಹುದು.
- ಮನೆಯ ತುಂಬ ಕಸ ತುಂಬಿಕೊಂಡಿದ್ದರೆ ಅನುಪಯುಕ್ತ ವಸ್ತುಗಳು ರಾಶಿ ಬಿದ್ದಿದ್ದರೆ, ಧೂಳು ತುಂಬಿಕೊಂಡಿದ್ದರೆ ಅಂಥ ಮನೆಯಲ್ಲಿ ದಾರಿದ್ರ್ಯವಿರುತ್ತದೆ.

How daridra lakshmi enters to your life
- ಮನೆಯ ಹಿರಿಯರು ಹರಿದ ಬಟ್ಟೆಗಳನ್ನು ಧರಿಸಿ ಓಡಾಡಿಕೊಂಡಿದ್ದರೂ ಅದೂ ಒಂದು ಲಕ್ಷಣವೇ.
- ಮನೆಯಲ್ಲಿ ಒಂದು ಹೊತ್ತಾದರೂ ಒಲೆಯ ಬೆಂಕಿ ಉರಿಸದೆ, ಸದಾ ತಂಗೂಳು ತಿನ್ನುತ್ತಿದ್ದರೆ ಅದು ದಾರಿದ್ರ್ಯದ ಲಕ್ಷಣ.
- ಮನೆಯಲ್ಲಿ ಲಕ್ಷ್ಮಿ ಆಗಮಿಸುವ ಹೊತ್ತಿನಲ್ಲಿ ಬೈಗುಳಗಳ ವಿನಿಮಯ ಆಗುತ್ತಾ ಇದ್ದರೆ ಬಂದ ಲಕ್ಷ್ಮಿ ಹಾಗೇ ಹಿಂದೆ ಹೋಗುತ್ತಾಳೆ.

ದಾರಿದ್ರ್ಯ ಲಕ್ಷ್ಮಿ ನಮ್ಮಲ್ಲಿಂದ ತೊಲಗಿ ಸೌಭಾಗ್ಯ ಲಕ್ಷ್ಮಿ ನೆಲೆಸಬೇಕಾದರೆ ಏನು ಮಾಡಬೇಕು?
- ಮನೆಯಲ್ಲಿ ಮುಂಜಾನೆ ಮತ್ತು ಸಂಜೆ ಶುಭ ಸದ್ದುಗಳಾದ ಶಂಖ, ಜಾಗಟೆ, ತಾಳದ ಸದ್ದುಗಳನ್ನು ಮಾಡಬೇಕು. ಓಂಕಾರದ ಸದ್ದು ಸದಾ ಕೇಳಿಸುತ್ತಿದ್ದರೆ ಶ್ರೇಷ್ಠ. 
- ಮನೆಯಲ್ಲಿ ಪ್ರತಿನಿತ್ಯ ಧೂಪವನ್ನು ಉರಿಸಬೇಕು. ದೇವರ ಮನೆಯಲ್ಲಿ ಮುಂಜಾನೆ ಹಾಗೂ ಸಂಜೆ ನಂದಾದೀಪವನ್ನು ಉರಿಸಬೇಕು. ತುಳಸಿಗೆ ಮುಂಜಾನೆ ಕೈಮುಗಿಯಬೇಕು.
- ಮನೆಯನ್ನು ಸದಾ ಶುಚಿಯಾಗಿ, ಒಪ್ಪ ಓರಣವಾಗಿ ಇಟ್ಟುಕೊಳ್ಳಬೇಕು. ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಹೊರಹಾಕಿ, ಶುಚಿಯಾದ ಬಟ್ಟೆಗಳನ್ನು ಧರಿಸಬೇಕು. ದಿನಕ್ಕೊಮ್ಮೆಯಾದರೂ ದೇವರ ನಾಮಸ್ಮರಣೆ ಮಾಡಬೇಕು.
- ಮನೆಯಲ್ಲಿ ಮಾಡಿದ ಅಡುಗೆಯ ಒಂದು ಭಾಗವನ್ನು ನೈವೇದ್ಯ ಎಂದು ದೇವರಿಗೆ ಅರ್ಪಿಸಿ ನಂತರ ಸೇವಿಸುವ ರೂಢಿ ಮಾಡಿಕೊಳ್ಳುವುದು ದೇವತಾ ಪ್ರೀತಿ ಗಳಿಸಲು ಒಳ್ಳೆಯದು. 

How daridra lakshmi enters to your life

ದಿನಕ್ಕೆ ನೂರೆಂಟು ಬಾರಿ ಈ ಮಂತ್ರ ಪಠಿಸಿದರೆ ದಾರಿದ್ರ್ಯ ಲಕ್ಷ್ಮಿಯು ನಿಮ್ಮಲ್ಲಿಂದ ತೆರಳಿ, ಸೌಭಾಗ್ಯ ಲಕ್ಷ್ಮಿಯು ನಿಮ್ಮಲ್ಲಿಗೆ ಬಂದು ನೆಲೆಸುವಳು
"ಶ್ರೀಂ ಹೀಂ ಕ್ಲೀಂ ತ್ರಿಭುವನ ಮಹಾಲಕ್ಷ್ಮೀ ಅಸ್ಮಾಕಂ ದಾರಿದ್ರ್ಯ ನಾಶಯೇ 
ಪ್ರಚುರ ಧನ ದೇಹಿ ದೇಹಿ ಕ್ಲೀಂ ಹ್ರೀಂ ಶ್ರೀಂ''

Follow Us:
Download App:
  • android
  • ios