ಸಪ್ನಗಳು ಬೀಳೋದು ಸಹಜ. ನನಗೆ ಇಂದು ಆ ಕನಸು ಬಿತ್ತು, ಈ ಕನಸು ಬಿತ್ತು ಅಂತಾ ನಾವು ಮಾತನಾಡ್ಕೊಳ್ತಿವಿ. ಆದ್ರೆ ಬಿದ್ದ ಕನಸಿಗೆ ಏನು ಅರ್ಥ ಅನ್ನೋದು ಗೊತ್ತಿರೋದಿಲ್ಲ. ಇಂದು ಕನಸಿನಲ್ಲಿ ಮಾಂಸ ಕಂಡ್ರೆ ಏನು ಸೂಚನೆ ಅಂತಾ ಹೇಳ್ತೇವೆ ಓದಿ.
ರಾತ್ರಿ (Night) ಮಾತ್ರವಲ್ಲ ಹಗಲಿನಲ್ಲಿ ಮಲಗಿದ್ದಾಗಲೂ ಕನಸು (Dream) ಗಳು ಕಾಣುವುದು ಸಾಮಾನ್ಯ. ಕನಸಿನಲ್ಲಿ ಅನೇಕ ವಿಷ್ಯಗಳು ಬಂದು ಹೋಗಿರುತ್ತವೆ. ನಾವು ನೆನಪು (Memory) ಮಾಡಿಕೊಳ್ಳದ ವ್ಯಕ್ತಿ ಕೂಡ ಕನಸಿನಲ್ಲಿ ಬಂದಿರ್ತಾನೆ. ಭಯಾನಕ ಕನಸುಗಳು ಬೀಳೋದಿದೆ. ಸುಂದರ ಸಪ್ನಗಳನ್ನು ಕೂಡ ನಾವು ಕಾಣ್ತೇವೆ. ಕನಸಿನಲ್ಲಿ ನಾನ್ ವೆಜ್ (Non Veg) ಕೂಡ ಕಾಣ್ತಿರುತ್ತದೆ. ಅನೇಕರಿಗೆ ನಾನ್ ವೆಜ್ ತಿಂದ ಕನಸು ಕಾಣುತ್ತದೆ. ನಾನ್ ವೆಜ್ ತಿನ್ನದೆ ತುಂಬಾ ದಿನವಾಯ್ತು, ಕನಸಿನಲ್ಲಿ ಕೂಡ ಬಂದಿದೆ ಅಂತಾ ಹೋಟೆಲ್ (Hotels) ಗೆ ಹೋಗೋರಿದ್ದಾರೆ. ಇನ್ನು ಕೆಲವರಿಗೆ ಹಾವು (Snake) ಕಚ್ಚಿದಂತೆ, ಅನಾರೋಗ್ಯಕ್ಕೆ ಒಳಗಾದಂತೆ, ಸಾವು ಸಂಭವಿಸಿದಂತೆ ಹೀಗೆ ಅನೇಕಾನೇಕ ಕನಸುಗಳು ಬೀಳ್ತಿರುತ್ತವೆ. ರಾತ್ರಿ ಕಂಡ ಕನಸು ಅನೇಕರನ್ನು ಬೆಳಿಗ್ಗೆ ಕೂಡ ಕಾಡುತ್ತದೆ. ಆದ್ರೆ ಈ ಕನಸು ನಮ್ಮ ಜೀವನದ ಜೊತೆ ಸಂಬಂಧ ಹೊಂದಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅದೇ ಕಾರಣಕ್ಕೆ ರಾತ್ರಿ ಬಿದ್ದ ಸಪ್ನದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಸಪ್ನ ಶಾಸ್ತ್ರ (Swapna Shastra) ದಲ್ಲಿ ಕನಸಿನ ಬಗ್ಗೆ ವಿವರವಾಗಿ ಹೇಳಲಾಗಿದೆ. ರಾತ್ರಿ ಕಾಣುವ ಕನಸುಗಳ ಅರ್ಥ, ಅಂದರೆ ಅವುಗಳಿಂದ ಬರುವ ಸಂಕೇತಗಳನ್ನು ಹೇಳಲಾಗಿದೆ. ಕನಸು ಸುಂದರವಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದರ ಅರ್ಥಗಳು ಬೇರೆ ಬೇರೆಯಾಗಿರುತ್ತವೆ. ಇಂದು ನಾವು ಕನಸಿನಲ್ಲಿ ನಾನ್ ವೆಜ್ ಕಂಡ್ರೆ ಏನು ಅರ್ಥ ಎಂಬುದನ್ನು ಹೇಳ್ತೇವೆ.
ಕನಸಿನಲ್ಲಿ ಮಾಂಸ (Meat) ಕಾಣಿಸಿಕೊಳ್ಳುವುದು ಸಾಮಾನ್ಯ ವಿಷ್ಯವಲ್ಲ. ಕನಸಿನಲ್ಲಿ ಮಾಂಸ ತಿಂದಂತೆ ಅಥವಾ ಮುಟ್ಟಿದಂತೆ ಕಂಡರೆ ಅದು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಮಾಂಸ ಕಾಣುವುದು ನಿಮ್ಮ ಅದೃಷ್ಟ ಅಥವಾ ದುರಾದೃಷ್ಟ (Bad Luck) ಎರಡಕ್ಕೂ ಕಾರಣವಾಗಬಹುದು.
ಕನಸಿನಲ್ಲಿ ಬೇಯಿಸಿದ ಮಾಂಸ ಕಂಡ್ರೆ ಏನರ್ಥ : ನಿಮ್ಮ ಕನಸಿನಲ್ಲಿ ಬೇಯಿಸಿದ ಮಾಂಸ ಅಥವಾ ಮಾಂಸಾಹಾರಿ ಆಹಾರ ಕಾಣಿಸಿದ್ರೆ ಖುಷಿಪಡಿ. ಯಾಕೆಂದ್ರೆ ನಿಮ್ಮ ಅದೃಷ್ಟ ಶೀಘ್ರವೇ ಬದಲಾಗಲಿದೆ ಎಂದರ್ಥ. ನೀವು ಕೆಲಸದಲ್ಲಿ ಶೀಘ್ರದಲ್ಲೇ ಬಡ್ತಿ ಪಡೆಯಲಿದ್ದೀರಿ ಎನ್ನುವ ಸೂಚನೆ ಇದಾಗಿದೆ. ಇದು ಆದಾಯ ಹೆಚ್ಚಾಗುವ ಸಂಕೇತವೂ ಹೌದು.
HAUNTED HOUSE: 11 ಕೋಟಿ ಕೊಟ್ಟು ಬಂಗ್ಲೆ ಖರೀದಿ ಮಾಡಿದ್ರೂ ವಾಸ ಮಾಡಲ್ಲ..!
ಕನಸಿನಲ್ಲಿ ಹಸಿ ಮಾಂಸ (Raw Meat ) ಕಂಡರೆ ಏನರ್ಥ : ಕನಸಿನಲ್ಲಿ ಹಸಿ ಮಾಂಸ ಕಾಣಿಸಿದ್ರೆ ಒಳ್ಳೆಯದಲ್ಲ ಎಂದು ಸಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹ ಕನಸು ಬಿದ್ದರೆ ಜೀವನದಲ್ಲಿ ಕೆಲವು ಅನಗತ್ಯ ಘಟನೆಗಳು ಸಂಭವಿಸುತ್ತವೆ ಎಂಬ ಸೂಚನೆಯಾಗಿದೆ. ಹಸಿ ಮಾಂಸ ಕನಸಿನಲ್ಲಿ ಕಂಡ್ರೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿ.
ಕನಸಿನಲ್ಲಿ ಚಿಕನ್ (Chicken) ತಿಂದಂತೆ ಕಂಡ್ರೆ ಏನು ಅರ್ಥ? : ಸಾಮಾನ್ಯವಾಗಿ ಕನಸಿನಲ್ಲಿ ಚಿಕನ್ ತಿಂದಂತೆ ಕಾಣುವುದು ಬಹಳ ಅಪರೂಪ. ಇಂಥ ಕನಸು ಅತಿ ಕಡಿಮೆ ಜನರಿಗೆ ಬೀಳುತ್ತದೆ ಎಂದ್ರೆ ತಪ್ಪಾಗುವುದಿಲ್ಲ. ಒಂದ್ವೇಳೆ ಕನಸಿನಲ್ಲಿ ಚಿಕನ್ ತಿಂದಂತೆ ಕಂಡ್ರೆ ಅದೃಷ್ಟ ಹೊಳೆಯುತ್ತದೆ. ಅಂತಹ ಕನಸು ಬಿದ್ರೆ ಮುಂದಿನ ದಿನಗಳಲ್ಲಿ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ದೊಡ್ಡ ಸಾಧನೆ ಮಾಡ್ತೀರಿ ಎಂಬುದರ ಸೂಚನೆಯಾಗಿದೆ.
Shani Vakri: 141 ದಿನಗಳ ಕಾಲ ಈ ಮೂರು ರಾಶಿಗಳಿಗೆ ಅದೃಷ್ಟದ ಮಳೆ ಸುರಿಸಲಿದ್ದಾನೆ ಶನಿ
ನಿಮ್ಮ ಕನಸಿನಲ್ಲಿ ಹಳಸಿದ ಮಾಂಸ ಕಂಡ್ರೆ ಏನು ಅರ್ಥ ಗೊತ್ತಾ? : ನಿಮ್ಮ ಕನಸಿನಲ್ಲಿ ಹಳಸಿದ ಮಾಂಸ ತಿನ್ನುವಂತೆ ಕಂಡರೆ ಒಳ್ಳೆಯದಲ್ಲ. ನೀವು ಕೆಲವು ಕೆಟ್ಟ ಕಾರ್ಯಗಳಿಂದ ಶಿಕ್ಷೆಗೆ ಗುರಿಯಾಗುತ್ತೀರಿ ಅಥವಾ ಕೆಲವು ಕೆಟ್ಟ ನೆನಪುಗಳು ನಿಮ್ಮನ್ನು ಮತ್ತೆ ಕಾಡುತ್ತವೆ ಎಂಬ ಸೂಚನೆಯಾಗಿದೆ.

