Haunted House: 11 ಕೋಟಿ ಕೊಟ್ಟು ಬಂಗ್ಲೆ ಖರೀದಿ ಮಾಡಿದ್ರೂ ವಾಸ ಮಾಡಲ್ಲ..!

ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್ ಹೀಗೆ ಎಲ್ಲ ಭಾಷೆಗಳಲ್ಲು ಸಾಕಷ್ಟು ಹಾರರ್ ಚಿತ್ರಗಳು ಬಂದಿದೆ. 2013ರಲ್ಲಿಯೇ ಒಂದು ಭೂತದ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಭೂತದ ಬಂಗಲೆ ಎಂದೇ ಪ್ರಸಿದ್ಧಿ ಪಡೆದಿರುವ ಆ ಮನೆ ಈಗ ಮಾರಾಟವಾಗಿದೆ.
 

Haunted House Sold In 11 Crores on US road island nobody residing

ಅದು ದೆವ್ವ (Devil) ದ ಮನೆ (Home) ಅಂತಾ ಗೊತ್ತಾದ್ರೆ ಅದ್ರ ಮುಂದೆ ಹಾದು ಹೋಗೋಕೂ ನಾವು ಹೆದರುತ್ತೇವೆ. ಅದ್ರ ಹೆಸರು ಕೇಳಿದ್ರೆ ನಿದ್ರೆ ಬಿಡುವವರಿದ್ದಾರೆ. ಇನ್ನು ಈ ದೆವ್ವದ ಮನೆಯನ್ನು ಖರೀದಿಸುವ ಕೆಲಸವನ್ನು ಯಾರು ಮಾಡಿಯಾರು ಹೇಳಿ ? ಇನ್ನೂ ವಿಶೇಷವೆಂದ್ರೆ ಕೋಟ್ಯಾಂತರ ರೂಪಾಯಿ ಕೊಟ್ಟು ಮನೆ ಖರೀದಿ ಮಾಡೋದು ಅಂದ್ರೆ ಸುಮ್ಮನೇನಾ? ಜಗತ್ತಿನಾದ್ಯಂತ ದೆವ್ವದ ಮನೆ ಎಂದೇ ಪ್ರಸಿದ್ಧಿಯಾಗಿರುವ ಮನೆಯನ್ನು ಒಬ್ಬರು ಖರೀದಿ ಮಾಡಿದ್ದಾರೆ. ಯಸ್. ಅಚ್ಚರಿಯಾದ್ರೂ ಇದು ಸತ್ಯ. ಕೋಟ್ಯಾಂತರ ರೂಪಾಯಿ ನೀಡಿ ಮನೆ ಖರೀದಿ (Purchase) ಮಾಡಿದ ವ್ಯಕ್ತಿ ಆ ಮನೆಯಲ್ಲಿ ಇರೋದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ಆ ಮನೆ ಬಗ್ಗೆ ನಾವು ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.

ಆ ಮನೆಯ ಬಗ್ಗೆ ನಿರ್ಮಾಣವಾಗಿತ್ತು ಸಿನಿಮಾ : 2013ರಲ್ಲಿ ಒಂದು ಸಿನಿಮಾ ಬಂದಿತ್ತು. ಅದು ಹಾರರ್ ಚಿತ್ರ. ಸಾಕಷ್ಟು ಮಂದಿ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಆ ಸಿನಿಮಾದ ಹೆಸರು  ದಿ ಕಂಜ್ಯೂರಿಂಗ್. ಚಿತ್ರ ಸಾಕಷ್ಟು ಗಳಿಕೆ ಕೂಡ ಕಂಡಿತ್ತು. ಈ ಚಿತ್ರದ ಬಗ್ಗೆ ಅನೇಕರು ಸವಾಲು ಕೂಡ ಹಾಕಿದ್ದರು. ಚಿತ್ರವನ್ನು ಸಿನಿಮಾ ಹಾಲ್ ನಲ್ಲಿ ಒಬ್ಬರೇ ಕುಳಿತು ನೋಡಿದ್ರೆ ಬಹುಮಾನ ನೀಡಲಾಗುತ್ತದೆ ಎಂಬ ಷರತ್ತು ಕೂಡ ಇತ್ತು. 

ಈ ಹಾರರ್ ಚಿತ್ರದಲ್ಲಿ ತೋರಿಸಿರುವ ಮನೆ 286 ವರ್ಷ ಹಳೆಯದಾದ ಫಾರ್ಮ್ ಹೌಸ್. ಈಗ ಆ ಮನೆಯನ್ನು ಮಾರಾಟ ಮಾಡಲಾಗಿದೆ. ಹೌದು, ಇಷ್ಟೇ ಅಲ್ಲ, ಅದೇ ಬೆಲೆಗೆ ಮಾಡಿದ್ದಕ್ಕಿಂತ ಶೇಕಡಾ 27ರಷ್ಟು ಹೆಚ್ಚು ಬೆಲೆಗೆ ಈ ಮನೆ ಮಾರಾಟವಾಗಿದೆ.

ದಣಿವಾದಾಗ ತಪ್ಪಿಯೂ ಈ ಆಹಾರ ಸೇವಿಸಬೇಡಿ....

ಈ ಮನೆಯಲ್ಲಿ ವಾಸವಿದ್ರು ಜನರು : ಅಮೇರಿಕಾದ ರೋಡ್ ಐಲ್ಯಾಂಡ್‌ನಲ್ಲಿರುವ ಈ ಫಾರ್ಮ್ ಹೌಸ್ ಅನ್ನು ಪೀಪಲ್ ಹಾಂಟೆಡ್ ಸೈಟ್ ಎಂದೂ ಕರೆಯುತ್ತಾರೆ. ಈ ಮನೆಯನ್ನು 1736 ರಲ್ಲಿ ನಿರ್ಮಿಸಲಾಗಿದೆ. 1971 ರಲ್ಲಿ ಈ ಮನೆಯಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬಸ್ಥರು ಒಂದು ಕಥೆಯನ್ನು ಹೇಳಿದ್ದರು. ಅದನ್ನು ಆಧರಿಸಿಯೇ ದಿ ಕಾಂಜ್ಯೂರಿಂಗ್ ಸಿನಿಮಾ ಸಿದ್ಧವಾಗಿತ್ತು.

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ಈ ಮನೆ ಮಾರಾಟವಾದ ಬೆಲೆ ಎಷ್ಟು ಗೊತ್ತಾ? : ಈ ಫಾರ್ಮ್ ಹೌಸ್ ಒಂದೋ ಎರಡೋ ಕೋಟಿಗೆ ಅಲ್ಲ ಬರೋಬ್ಬರಿ 11 ಕೋಟಿಗೆ ಮಾರಾಟವಾಗಿದೆ. ಪ್ಯಾರಾನಾರ್ಮಲ್ ಆಕ್ಟಿವೇಟರ್‌ಗಳಾದ ಜೇನ್ ಮತ್ತು ಕೋರೆ ಹೈನ್ಜೆನ್ ಇದನ್ನು 2009 ರಲ್ಲಿ  4,39,000 ಡಾಲರ್ ಗೆ ಖರೀದಿಸಿದ್ದರು. ಈಗ ಅದನ್ನು ಮಾರಾಟ ಮಾಡಿದ್ದಾರೆ. ಅವರು ಮನೆಯ ಮೂಲ ಬೆಲೆಯನ್ನು 1.2 ಮಿಲಿಯನ್ ಡಾಲರ್ ಎಂದು ನಿಗದಿ ಮಾಡಿದ್ದರು. ಆದರೆ ಈ ಮನೆ 1.5 ಮಿಲಿಯನ್ ಡಾಲರ್ ಗೆ ಮಾರಾಟವಾಗೆ. ಅಂದರೆ ಸುಮಾರು 11 ಕೋಟಿ ರೂಪಾಯಿಗೆ ಮನೆ ಮಾರಾಟವಾಗಿದೆ. ಈ ಫಾರ್ಮ್ ಹೌಸ್ ಅನ್ನು ಬೋಸ್ಟನ್ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಜಾಕ್ವೆಲಿನ್ ನುನೆಜ್ ಖರೀದಿಸಿದ್ದಾರೆ.

ಇಲ್ಲಿ ಉಳಿಯಲು ತುಂಬಾ ಭಯವಾಗಿತ್ತು : 1971 ರಿಂದ 1980 ರವರೆಗೆ ಈ ರೋಡ್ ಐಲೆಂಡ್ ಮನೆಯಲ್ಲಿ  ಆಂಡ್ರಿಯಾ ಪೆರಾನ್ ವಾಸವಾಗಿದ್ದರು. ಈ ಮನೆ ಬಗ್ಗೆ ಅಮೆರಿಕದ ಪತ್ರಿಕೆ ದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ಪೆರಾನ್ ಸಂದರ್ಶನಗಳನ್ನು ನೀಡಿದ್ದರು. ಆ ಮನೆಯಲ್ಲಿ ಆದ  ಅನುಭವವನ್ನು ಅವರು ಹಂಚಿಕೊಂಡಿದ್ದರು. ಆ ಮನೆಯಲ್ಲಿ ತುಂಬಾ ಭಯಾನಕ ಮತ್ತು ಕೆಟ್ಟ ಅನುಭವವಾಗಿತ್ತು ಎಂದು ಅವರು ಹೇಳಿದ್ದರು. ಮಾಹಿತಿ ಪ್ರಕಾರ, ಮನೆ ಖರೀದಿ ಮಾಡಿರುವ ಜಾಕ್ವೆಲಿನ್ ಆ ಮನೆಯಲ್ಲಿ ವಾಸಿಸುತ್ತಿಲ್ಲ.  

Latest Videos
Follow Us:
Download App:
  • android
  • ios