Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!
ಪ್ರತಿ ರಾಶಿಗಳ ವ್ಯಕ್ತಿಗಳ ಸ್ವಭಾವಗಳೂ ಸಹ ಭಿನ್ನವಾಗಿರುತ್ತವೆ. ಕೆಲವರಿಗೆ ಮೂಗಿನ ತುದಿಯಲ್ಲೇ ಸಿಟ್ಟು ಇರುವುದರಿಂದ ತಾನು ಯಾರ ಬಳಿ ಜಗಳವಾಡಲೆಂದೇ ಕಾಯುತ್ತಿರುವಂತೆ ಅವರ ಸ್ವಭಾವ ಇರುತ್ತದೆ. ಹೀಗಾಗಿ ಇಂಥವರಿಂದ ಬಹುತೇಕ ಜನರು ದೂರ ಇರಲು ಇಷ್ಟಪಡುತ್ತಾರೆ. ಹಾಗಾದರೆ ಈ ನಾಲ್ಕು ರಾಶಿಯವರು ಯಾರು ಎಂಬುದರ ಬಗ್ಗೆ ನೋಡೋಣ.
ಮನುಷ್ಯ ಎಂದ ಮೇಲೆ ಎಲ್ಲ ತರದ ಭಾವನೆಗಳೂ (Emotion) ಇರುತ್ತವೆ. ಕೆಲವರ ಸ್ವಭಾವಗಳು (Nature) ತುಂಬಾ ಸೌಮ್ಯವಾಗಿರುತ್ತದೆ. ಎಲ್ಲರೊಂದಿಗೂ ಖುಷಿಯಿಂದ ಇರುವ ವ್ಯಕ್ತಿತ್ವವನ್ನು (Personality) ಹೊಂದಿರುತ್ತವೆ. ಆದರೆ ಮತ್ತೆ ಕೆಲವರು ತುಂಬಾ ಸಿಡುಕರು. ಪ್ರತಿ ವಿಷಯಕ್ಕೂ ಸಿಟ್ಟು (Angry) ಮಾಡಿಕೊಳ್ಳುತ್ತಾರೆ. ಅಲ್ಲದೆ ಜಗಳಗಂಟರೂ ಆಗಿರುತ್ತಾರೆ.
ವ್ಯಕ್ತಿಗಳ ಸ್ವಭಾವಗಳು, ಗುಣಗಳು ಜನ್ಮತಃ ಬಂದಿರುವಂತದ್ದು. ಇದು ಅವರ ಹುಟ್ಟಿದ ಘಳಿಗೆ (Time), ತಾರೀಖು (Date), ರಾಶಿ (Zodiac), ಗ್ರಹ (Planet), ನಕ್ಷತ್ರಗಳಿಗೆ (Star) ಅನುಸಾರವಾಗಿ ನಿರ್ಧರಿತವಾಗುತ್ತವೆ. ಗ್ರಹಗಳ ಪ್ರಭಾವ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ವೃಷಭ (Taurus), ಮಿಥುನ (Gemini), ಸಿಂಹ (Leo), ಕನ್ಯಾ (Virgo) ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು (Birth People) ಬಹಳ ಸಿಟ್ಟಿನ ಸ್ವಭಾವದವರಾಗಿದ್ದು, ಅವರ ವ್ಯಕ್ತಿತ್ವವು ಒಮ್ಮೆ ಅವರಿಗೇ ಮುಳುವಾಗುತ್ತದೆ. ಇವರಿಗೆ ಸಿಟ್ಟು ಬಂದಾಗ ಯೋಚಿಸುವ ಶಕ್ತಿಯನ್ನು ಕಳೆದುಕೊಂಡು ತಮ್ಮ ಮೇಲೆ ತಮಗೆ ಹಿಡಿತವಿಲ್ಲದಂತೆ ಇರುತ್ತಾರೆ. ಇಂಥ ರಾಶಿಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ವೃಷಭ ರಾಶಿ (Taurus)
ವೃಷಭ ರಾಶಿಯ ವ್ಯಕ್ತಿಗಳಿಗೆ ಬಹು ಬೇಗ ಸಿಟ್ಟು ಬರುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ಮೂಗಿನ ತುದಿಯಲ್ಲೇ ಸಿಟ್ಟು ಇವರಿಗಿರುತ್ತದೆ. ಯಾವುದೇ ವಿಷಯಕ್ಕೂ ಬಹು ಬೇಗ ಬೇಸರ ಮಾಡಿಕೊಳ್ಳುವ ಇವರು, ಆ ಕಾರಣಕ್ಕಾಗಿ ಸಿಟ್ಟನ್ನು ಮಾಡಿಕೊಳ್ಳುತ್ತಾರೆ. ಹೀಗಾಗಿ ಇವರ ಮೇಲೆ ಇವರಿಗೆ ನಿಯಂತ್ರಣ (Contorl) ಇರುವುದಿಲ್ಲ. ಎಷ್ಟೇ ನಿಯಂತ್ರಣ ಮಾಡಿಕೊಳ್ಳಬೇಕೆಂದು ಅಂದುಕೊಂಡರೂ ಕೂಡ ಇವರಿಗೆ ನಿಯಂತ್ರಣ ತಪ್ಪುತ್ತದೆ. ಇವರು ಕೆಲವೊಂದು ನಿರ್ಧಾರಗಳನ್ನು ಸಿಟ್ಟಿನಲ್ಲೇ ತೆಗೆದುಕೊಳ್ಳುವುದರಿಂದ ಬಳಿಕ ಅದರ ಬಗ್ಗೆ ಪಶ್ಚಾತ್ತಾಪ (Repentance) ಪಡುತ್ತಾರೆ. ಇನ್ನು, ತಮ್ಮ ತಪ್ಪಿದ್ದರೂ ಸಹ ಅದನ್ನೇ ಸಾಧಿಸುವ ಇವರು ಆ ತಪ್ಪನ್ನು ಒಪ್ಪಿಕೊಳ್ಳಲು (Agree) ಸಹ ಹಿಂದೇಟು ಹಾಕುತ್ತಾರೆ.
ಇದನ್ನು ಓದಿ: Vastu Tips: ಈ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಕುಲಾಯಿಸಲಿದೆ..
ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳು ಸಿಟ್ಟಿನ ಸ್ವಭಾವವನ್ನು ಹೊಂದಿರುತ್ತಾರೆ. ಜತೆಗೆ ಜಗಳಗಂಟರಾಗಿರುತ್ತಾರೆ. ಪ್ರತಿ ವಿಷಯಕ್ಕೂ ಜಗಳಕ್ಕೆ ಮುಂದಾಗುತ್ತಾರೆ. ಈ ವ್ಯಕ್ತಿಗಳು ಸ್ವಲ್ಪ ಭಿನ್ನ (Different). ಇವರಿಗೆ ಯಾವ ವಿಷಯಕ್ಕೆ, ಯಾವ ಸಮಯಕ್ಕೆ ಬೇಜಾರಾಗುತ್ತದೆ ಎಂಬುದನ್ನು ಹೇಳಲಾಗದು. ಇವರ ಸಂಗಾತಿ (Partner) ಮತ್ತು ಸ್ನೇಹಿತರಿಗೆ (Friends) ಇವರ ಈ ಸ್ವಭಾವವನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ. ಸಣ್ಣ ವಿಷಯ ಇದ್ದರೂ ಸಹ ಅದನ್ನು ದೊಡ್ಡದು ಮಾಡಿ ರಂಪ ಮಾಡುವ ಗುಣ ಇವರದಾಗಿರುತ್ತದೆ.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಎಲ್ಲರಿಗಿಂತ ಹೆಚ್ಚು ಸಿಟ್ಟು ಬರುತ್ತದೆ. ಇವರ ಸಿಟ್ಟು ಹೇಗೆ ಅಂದರೆ ಅದಕ್ಕೆ ಲಿಮಿಟ್ (No Limit) ಎಂಬುದೇ ಇಲ್ಲ. ಒಮ್ಮೆ ಇವರಿಗೆ ಸಿಟ್ಟು ಬಂತೆಂದರೆ ಅದನ್ನು ನಿಯಂತ್ರಿಸುವುದು ಬಹಳವೇ ಕಷ್ಟ. ಯಾರ ಮೇಲಾದರೂ ರೇಗಾಡುವ ಸ್ವಭಾವ ಇವರದ್ದು. ತಮ್ಮ ತಪ್ಪನ್ನು ಹೇಳಿದರೆ ಅದಕ್ಕೂ ಸಿಟ್ಟು ಮಾಡುವ ಇವರು, ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತಾವು ಮಾಡಿದ್ದೇ ಸರಿ ಎಂದು ವಾದಿಸುವ ಗುಣ ಇವರದ್ದು. ಹಾಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಸಿಟ್ಟು ಬಂದಾಗ ಉಳಿದವರು ಇವರಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ ಸುಖಾಸುಮ್ಮನೆ ಸಂಬಂಧ (Relationship) ಹಾಳಾಗುತ್ತದೆ.
ಇದನ್ನು ಓದಿ: Numerology: ಪಾದಾಂಕ 2ರಲ್ಲಿ ಜನಿಸಿದ ವ್ಯಕ್ತಿಗಳ ವರ್ಷ ಭವಿಷ್ಯ ತಿಳಿಯಿರಿ
ಕನ್ಯಾ ರಾಶಿ (Virgo)
ಈ ರಾಶಿಯವರಿಗೆ ಸಿಟ್ಟು ಬಹು ಬೇಗ ಬರುತ್ತದೆ. ಇವರು ಸಿಟ್ಟಿನಲ್ಲೇ ಅನೇಕ ನಿರ್ಧಾರಗಳನ್ನು ಕೈಗೊಳ್ಳುವುದರಿಂದ ಮುಂದೆ ಪಶ್ಚಾತ್ತಾಪ ಪಡುವ ಸ್ಥಿತಿ ಸದಾ ಎದುರಾಗುತ್ತಿರುತ್ತದೆ. ಇವರಿಗೆ ಸಿಟ್ಟು ಬರೋದು ಬಹಳ ಬೇಗವಾದ್ದರಿಂದ ಇದು ಕೆಟ್ಟ ನಿರ್ಧಾರಕ್ಕೆ (Decision) ನಾಂದಿ ಹಾಡುತ್ತದೆ. ಹೀಗಾಗಿ ತಾವು ಯಾರ ಬಳಿ ಮಾತನಾಡುತ್ತಿದ್ದೇವೆ ಎಂಬ ಅರಿವು ಇವರಿಗೆ ಸದಾ ಇರಬೇಕಾಗುತ್ತದೆ. ವೃತ್ತಿ ಬದುಕಿನಲ್ಲೂ (Career) ಇಂಥ ಇವರ ಕೆಲವು ಸಿಟ್ಟಿನ ಸ್ವಭಾವಗಳು, ನೇರನುಡಿಗಳು ತೊಂದರೆಗಳನ್ನು ಉಂಟುಮಾಡುತ್ತದೆ.