Palmistry: ಸಂಗಾತಿಯ ಅಂಗೈಲಿ ಈ ರೇಖೆ ಇದ್ದರೆ ಬ್ರೇಕಪ್ ಗ್ಯಾರಂಟಿ!

ಸಂಬಂಧದಲ್ಲಿ ಎಲ್ಲವೂ ಚೆನ್ನಾಗಿರುವಾಗ ಅದು ಮುಂದೊಂದು ದಿನ ಬ್ರೇಕಪ್ ಆಗಬಹುದು ಎಂದು ಯಾರೂ ಯೋಚಿಸುವುದಿಲ್ಲ.. ಆದರೆ, ಎಂಥ ಸಂಬಂಧದಲ್ಲೂ ಬಿರುಕು ಮೂಡಬಹುದು. ಸಂಗಾತಿಯ ಕೈಲಿ ಈ ರೀತಿಯ ರೇಖೆಗಳಿದ್ರೆ ಬ್ರೇಕಪ್ ಆಗೋ ಸಂಭವ ಹೆಚ್ಚು ಅನ್ನುತ್ತೆ ಹಸ್ತ ಸಾಮುದ್ರಿಕಾ ಶಾಸ್ತ್ರ. 

Palmistry Are these break up lines in your partners palm skr

ಯಾವುದೇ ಸಂಬಂಧದ ಅಡಿಪಾಯ ನಂಬಿಕೆಯ ಮೇಲೆ ನಿಂತಿದೆ. ಅದರಲ್ಲೂ ಪ್ರೀತಿಯ ಸಂಬಂಧ ಬಹಳ ಅಮೂಲ್ಯವಾದುದು. ಈ ಸಂಬಂಧದಲ್ಲಿ ನಂಬಿಕೆ ಅತ್ಯಗತ್ಯ. ನಿರ್ಲಕ್ಷ್ಯ ಅಥವಾ ಮೋಸವು ಬ್ರೇಕಪ್‌ಗೆ ಕಾರಣವಾಗುತ್ತದೆ. 
ಹಸ್ತಸಾಮುದ್ರಿಕ ತಜ್ಞರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಪ್ರೀತಿಯು ಕೆಲವು ದಿನಗಳ ನಂತರ ಸಂಬಂಧವಾಗಿ ಬದಲಾಗುತ್ತದೆಯೇ ಅಥವಾ ಮುರಿದು ಹೋಗುತ್ತದೆಯೇ ಎಂದು ಅಂಗೈ ಗೆರೆಗಳನ್ನು ನೋಡಿ ತಿಳಿದುಕೊಳ್ಳಬಹುದು. ನೀವು ಸಹ ಪ್ರೇಮ ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯ ಅಂಗೈ ಮೇಲಿನ ಗೆರೆಗಳನ್ನು ನೋಡುವ ಮೂಲಕ, ನೀವಿಬ್ಬರೂ ಪರಸ್ಪರರಿಗಾಗಿಯೇ ಸೃಷ್ಟಿಸಲ್ಪಟ್ಟವರ ಅಥವಾ ಶೀಘ್ರದಲ್ಲೇ ಬೇರ್ಪಡಲಿರುವಿರೋ ಎಂದು ತಿಳಿಯಬಹುದು. ಬನ್ನಿ, ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ..

ಭವಿಷ್ಯ ಕೈ ರೇಖೆಗಳು
ನಮ್ಮ ಕೈಗಳ ಮೇಲಿನ ಗೆರೆಗಳು ಆಗಾಗ ಬದಲಾಗುತ್ತಿರುತ್ತವೆ. ಆದ್ದರಿಂದ ಯಾವುದೇ ಫಲಿತಾಂಶವನ್ನು ನಿಖರವಾಗಿ ಊಹಿಸಲು ಪ್ರಯತ್ನಿಸುವುದು ಜಾಣತನವಲ್ಲ. ನೀವು ಈ ಕೆಲವು ಗುರುತುಗಳನ್ನು ಹೊಂದಿದ್ದರೆ, ಅವು ಎಚ್ಚರಿಕೆಗಳೇ ಹೊರತು ಖಾತರಿಯ ಫಲಿತಾಂಶಗಳಲ್ಲ. ನಿಮ್ಮ ಹಣೆಬರಹವನ್ನು ನೀವು ನಿಯಂತ್ರಿಸುತ್ತೀರಿ ಮತ್ತು ನಿಮ್ಮ ಕ್ರಿಯೆಗಳ ಆಧಾರದ ಮೇಲೆ ಗುರುತುಗಳು ರೂಪುಗೊಳ್ಳುತ್ತವೆ. ನಿಮ್ಮ ಭವಿಷ್ಯದ ಕ್ರಿಯೆಗಳು ನಿಮ್ಮ ಅಂಗೈಗಳ ಮೇಲಿನ ಗೆರೆಗಳನ್ನು ಬದಲಾಯಿಸಬಹುದು.

Thursday Remedies: ಗುರು ದೋಷ ತೊಡೆದು ಹಾಕಲು ಹೀಗೆ ಮಾಡಿದ್ರೆ ವಿವಾಹಕ್ಕಿಲ್ಲ ಅಡೆತಡೆ

ಹಸ್ತ ಸಾಮುದ್ರಿಕ ಶಾಸ್ತ್ರ 
ನಿಮ್ಮ ಸಂಗಾತಿಯ ಅಂಗೈಯಲ್ಲಿರುವ ರೇಖೆಯು ಶುಕ್ರ ಪರ್ವತದಿಂದ ಶನಿಯ ಪರ್ವತಕ್ಕೆ ಹಾದು ಹೋದರೆ ಮತ್ತು ಶನಿಗ್ರಹದ ಮೇಲೆ ಮುಳ್ಳಿನ ಗುರುತು ಮಾಡಿದರೆ, ಅದು ನಿಮ್ಮ ವಿಘಟನೆಯ ಸಂಕೇತವಾಗಿದೆ. ಅಂಥವರ ಜೀವನದಲ್ಲಿ ಪ್ರೀತಿ ಇರುವುದಿಲ್ಲ. ಅದೇ ಸಮಯದಲ್ಲಿ, ಮೂರನೇ ವ್ಯಕ್ತಿಯ ಕಾರಣದಿಂದಾಗಿ ವಿವಾದವಿರುತ್ತದೆ. ಇದರ ಹೊರತಾಗಿ, ಶುಕ್ರ ಪರ್ವತದ ಮೇಲೆ ಒಂದು ರೇಖೆಯು ನಕ್ಷತ್ರವನ್ನು ಗುರುತಿಸಿದರೆ, ಅಂತಹ ಜನರು ತಡವಾಗಿಯಾದರೂ ಬ್ರೇಕಪ್ ಮಾಡಿಕೊಳ್ಳುತ್ತಾರೆ.

ನಿಮ್ಮ ಸಂಗಾತಿಯ ಅಂಗೈಯಲ್ಲಿ ಬುಧದ ಪರ್ವತದಿಂದ ಪ್ರಾರಂಭವಾಗಿ ಗುರು ಪರ್ವತದ ಮೂಲಕ ಹಾದು ಹೋಗುತ್ತಾ, ಮಂಗಳದ ಪರ್ವತದವರೆಗೆ ರೇಖೆಯಿದ್ದರೆ, ನಿಮ್ಮ ವಿಘಟನೆ ಸಂಭವಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ನಿಮ್ಮ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಅದೇ ಸಮಯದಲ್ಲಿ, ಹೆಬ್ಬೆರಳಿನ ಮೇಲೆ ಕಪ್ಪು ಮಚ್ಚೆ ಇದ್ದರೆ ಸಹ ವಿಭಜನೆಯನ್ನು ಸೂಚಿಸುತ್ತದೆ. ಅಂಥವರ ದಾಂಪತ್ಯ ಜೀವನವೂ ಕಷ್ಟಸಾಧ್ಯ. ಇಂತಹವರ ಸಂಬಂಧದ ಮಾತು ಹೆಚ್ಚಾದರೆ, ಒಂದಲ್ಲ ಒಂದು ಅಹಿತಕರ ಘಟನೆ ಖಂಡಿತಾ ನಡೆಯುತ್ತದೆ ಎನ್ನುತ್ತಾರೆ ಅನೇಕ ಜ್ಯೋತಿಷಿಗಳು. ಅಂತಹ ಜನರು ತಮ್ಮ ಸಂಬಂಧವನ್ನು ದೀರ್ಘ ಕಾಲ ನಿಭಾಯಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಸಂಗಾತಿ ಅಥವಾ ನಿಮ್ಮ ಅಂಗೈಯಲ್ಲಿ ಮದುವೆ ರೇಖೆಯ ಬಳಿ ದ್ವೀಪವಿದ್ದರೆ, ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುವುದಿಲ್ಲ. ಮತ್ತೊಂದೆಡೆ, ಒಂದು ರೇಖೆಯು ಮಂಗಳದ ಪರ್ವತದಿಂದ ಪ್ರಾರಂಭವಾಗಿ ಬುಧದ ಪರ್ವತಕ್ಕೆ ಹೋದರೆ, ನಿಮ್ಮ ವಿಘಟನೆಯು ಸಂಭವಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ಅಂತಹ ಜನರ ಸಂಬಂಧವು ಮೂರನೇ ವ್ಯಕ್ತಿಯ ಕಾರಣದಿಂದಾಗಿ ಕೊನೆಗೊಳ್ಳುತ್ತದೆ. ಅಂತಹ ಜನರು ವಂಚನೆಗೆ ಬಲಿಯಾಗುತ್ತಾರೆ.

Chandra Grahan 2023: ಈ ರಾಶಿಗಳಿಗೆ ಕವಿಯಲಿದೆ ಗ್ರಹಣದ ಕರಿನೆರಳು

ಮದುವೆಯ ರೇಖೆಯು ಕೆಳಮುಖವಾಗಿ ಬಾಗಿದ್ದರೆ, ಅದು ವಿವಾಹದಲ್ಲಿ ಅತೃಪ್ತಿಯನ್ನು ಸೂಚಿಸುತ್ತದೆ. ಹೆಬ್ಬೆರಳಿನಿಂದ ಚಿಂತೆ ರೇಖೆಯು ಮದುವೆ ರೇಖೆಯನ್ನು ತಲುಪಿದರೆ, ಚಿಂತೆಯು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios