Asianet Suvarna News Asianet Suvarna News

Thursday Remedies: ಗುರು ದೋಷ ತೊಡೆದು ಹಾಕಲು ಹೀಗೆ ಮಾಡಿದ್ರೆ ವಿವಾಹಕ್ಕಿಲ್ಲ ಅಡೆತಡೆ

ಗುರುವಾರ ಮಾಡಬೇಕಾದ ಹಾಗೂ ಮಾಡಬಾರದ ಈ ಕೆಲಸಗಳನ್ನು ಮನಸ್ಸಲ್ಲಿಟ್ಟುಕೊಂಡು ಮುಂದುವರೆದರೆ, ಜಾತಕದಲ್ಲಿನ ಗುರು ದೋಷ ತೊಲಗಿ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಇದರಿಂದ ಸಂತೋಷದ ವೈವಾಹಿಕ ಜೀವನ ಸಿಗುತ್ತದೆ ಹಾಗೆಯೇ ಅವಿವಾಹಿತರಿಗೆ ಶೀಘ್ರ  ಸಂಬಂಧ ಕೂಡಿಬರುತ್ತದೆ. 

Thursday Remedies to remove guru dosh and get the blessings of Bhagwan Vishnu skr
Author
First Published Apr 27, 2023, 10:43 AM IST

ಗುರುವಾರ ದೇವಗುರು ಬೃಹಸ್ಪತಿಯ ದಿನ. ಈ ದಿನ, ಭಗವಾನ್ ವಿಷ್ಣುವನ್ನು ಮೆಚ್ಚಿಸಲು, ಅವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಪಂಚದ ರಕ್ಷಕ ವಿಷ್ಣುವಿನ ಆಶೀರ್ವಾದವಿದ್ದರೆ ಸದಾ ಆತನ ರಕ್ಷೆಯಲ್ಲಿ ಸಂತೋಷವಾಗಿರಬಹುದು. 

ಇನ್ನು ಗುರುವಾರವೆಂದರೆ ಗುರು ಗ್ರಹದ ದಿನವೂ ಹೌದು. ಗುರುವನ್ನು ವ್ಯಕ್ತಿಯ ವೈವಾಹಿಕ ಸ್ಥಿತಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ಸೂಚಕ ಎಂದು ಭಾವಿಸಲಾಗಿದೆ. ಅದೇ ಜಾತಕದಲ್ಲಿ ಗುರುದೋಷವಿದ್ದರೆ ವೈವಾಹಿಕ ಜೀವನದಲ್ಲಿ ಅಡೆತಡೆ ಬರುವ ಜೊತೆಗೆ ಅವಿವಾಹಿತರ ಮದುವೆ ವಿಳಂಬವಾಗುವುದು. ನಿಮ್ಮ ಕುಂಡಲಿಯಿಂದ ಗುರು ದೋಷವನ್ನು ತೊಡೆದು ಹಾಕಲು ಮತ್ತು ವಿಷ್ಣುವಿನ ಕೃಪೆಗಾಗಿ ಗುರುವಾರದ ಉಪವಾಸ ಮತ್ತು ಗುರುವಾರ ಅದೃಷ್ಟಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಜೀವನದ ಕಷ್ಟಗಳಿಂದ ಮುಕ್ತರಾಗಬಹುದು. ಈಗ ಗುರುವಾರ ವ್ರತ ವಿಧಿ ಮತ್ತು ಈ ದಿನದಂದು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಬಗ್ಗೆ ತಿಳಿಯೋಣ.

ಗುರುವಾರ ಪರಿಹಾರಗಳು
ಗುರುವಾರದ ಪರಿಹಾರಗಳನ್ನು ಪ್ರಯತ್ನಿಸುವುದರಿಂದ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಈ ದಿನದಂದು ತೆಗೆದುಕೊಂಡ ಕ್ರಮಗಳನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಈ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

Astrology Tips : ಸಂಬಳ ಬಂದ ತಕ್ಷಣ ಈ ಕೆಲಸ ಮಾಡಿದ್ರೆ ಯಶಸ್ಸು ಗ್ಯಾರಂಟಿ

ಗುರುವಾರದಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

  • ಈ ದಿನ ಭಗವಾನ್ ಬೃಹಸ್ಪತಿಯನ್ನೂ ಪೂಜಿಸಲಾಗುತ್ತದೆ. ಆತನನ್ನು ಪೂಜಿಸುವುದರಿಂದ ಮಾತ್ರ ಗುರುವು ಮನೆಯಲ್ಲಿ ನೆಲೆಸುತ್ತಾನೆ. ಈ ದಿನದಂದು ಮನಸ್ಸಿನಲ್ಲಿರುವ ಎಲ್ಲ ಕೆಟ್ಟ ಆಲೋಚನೆಗಳನ್ನು ಬಿಟ್ಟು ದೇವರ ಪಾದಕ್ಕೆ ಅರ್ಪಿಸಬೇಕು. 
  • ಈ ದಿನ ಮನೆಯನ್ನು ಒರೆಸಬಾರದು. 
  • ಬಟ್ಟೆ ಒಗೆಯಬಾರದು. ಜ್ಯೋತಿಷ್ಯದಲ್ಲಿ, ಈ ದಿನ ಸೋಪ್ ಅನ್ನು ಬಳಸುವುದು ಒಳ್ಳೆಯದಲ್ಲ. ಗುರುವಾರದಂದು ಸಾಬೂನು ಬಳಸುವುದರಿಂದ ಜಾತಕದಲ್ಲಿ ಗುರುವಿನ ಸ್ಥಾನವು ಹದಗೆಡುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿ ಮನೆಯಿಂದ ಹೊರಹೋಗುತ್ತದೆ ಎಂದು ಹೇಳಲಾಗುತ್ತದೆ.
  • ಗುರುವಾರ ಹಣದ ವ್ಯವಹಾರಗಳನ್ನು ತಪ್ಪಿಸಬೇಕು. ಗುರುವಾರ ಕೊಟ್ಟ ಸಾಲ ವಾಪಸ್ ಬರುವುದಿಲ್ಲ ಎಂಬ ನಂಬಿಕೆ ಇದೆ. ಮತ್ತೊಂದೆಡೆ, ನೀವು ಗುರುವಾರ ಯಾರೊಬ್ಬರಿಂದ ಸಾಲ ಪಡೆದರೆ, ನಿಮ್ಮ ಸಾಲವು ಹೆಚ್ಚಾಗಬಹುದು.
  • ಈ ದಿನ ದಕ್ಷಿಣ ದಿಕ್ಕಿಗೆ ಪ್ರಯಾಣಿಸಬಾರದು. ಇದರಿಂದ ದಿಗ್ಭ್ರಮೆ ಉಂಟಾಗುತ್ತದೆ. 
  • ಗುರುವಾರ ಉಗುರುಗಳನ್ನು ಕತ್ತರಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಹಣದ ನಷ್ಟವಾಗುತ್ತದೆ. 
  • ಈ ದಿನದಂದು ಮಹಿಳೆಯರು ತಮ್ಮ ಕೂದಲನ್ನು ತೊಳೆಯಬಾರದು. ಇದರಿಂದ ಜಾತಕದಲ್ಲಿ ಗುರು ಬಲಹೀನನಾಗುತ್ತಾನೆ.

    ನೀಮ್ ಕರೋಲಿ ಬಾಬಾಗೆ ಡ್ರಗ್ಸ್ ತಿನ್ನಿಸಿದ ಹಾರ್ವರ್ಡ್ ಪ್ರೊಫೆಸರ್! ಆಮೇಲೇನಾಯಿತು?

ಗುರುವಾರ ಮಾಡಬೇಕಾದ ಕೆಲಸಗಳು

  • ವಿದ್ವಾಂಸರು ಬರೆದ ಒಳನೋಟವುಳ್ಳ ಪುಸ್ತಕಗಳನ್ನು ದಾನ ಮಾಡುವ ಮೂಲಕ ಗುರುವಾರ ಗುರುವಿನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು.
  • ಗುರುದೋಷವನ್ನು ಹೋಗಲಾಡಿಸಲು, ನಿಮ್ಮ ಸ್ನಾನದ ನೀರಿಗೆ ಚಿಟಿಕೆ ಅರಿಶಿನವನ್ನು ಹಾಕಿ. ಜೊತೆಗೆ ಸ್ನಾನ ಮಾಡುವಾಗ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸಿ ಮತ್ತು ಹಣೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿ.
  • ಗುರುವಾರ ವ್ರತವನ್ನು ಹಿಡಿದುಕೊಳ್ಳಿ ಮತ್ತು ಸಾಧ್ಯವಾದರೆ, ಬಾಳೆ ಗಿಡವನ್ನು ಪೂಜಿಸಿ. ಇದು ಮದುವೆಯಲ್ಲಿನ ಅಡೆತಡೆಗಳನ್ನು ಕೊನೆಗೊಳಿಸುತ್ತದೆ.
  • ಗುರುವಾರದಂದು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿ, ವಿಶೇಷವಾಗಿ ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿದ ನಂತರ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಿ.
  • ನೀವು ಗುರುವಾರ ಉಪವಾಸ ಮಾಡಿದರೆ, ಸತ್ಯನಾರಾಯಣ ವ್ರತ ಕಥಾವನ್ನು ಕೇಳಬೇಕು.
  • ಬೃಹಸ್ಪತಿ ದೇವನ ವಿಶೇಷ ಆಶೀರ್ವಾದ ಪಡೆಯಲು, ಈ ದಿನದಂದು ಸರಿಯಾದ ಆಚರಣೆಗಳೊಂದಿಗೆ ಹಳದಿ ಬಟ್ಟೆಯ ಮೇಲೆ ವಿಷ್ಣುವಿನ ವಿಗ್ರಹವಿರಿಸಿ ಮತ್ತು ಶ್ರೀಗಂಧ ಮತ್ತು ಹಳದಿ ಹೂವುಗಳಿಂದ ಪೂಜಿಸಿ. ಪ್ರಸಾದದಲ್ಲಿ, ಬೇಳೆ ಮತ್ತು ಬೆಲ್ಲವನ್ನು ಸೇರಿಸಿ.
Follow Us:
Download App:
  • android
  • ios