Asianet Suvarna News Asianet Suvarna News

Chandra Grahan 2023: ಈ ರಾಶಿಗಳಿಗೆ ಕವಿಯಲಿದೆ ಗ್ರಹಣದ ಕರಿನೆರಳು

ಮೇ 5 ರಂದು, ಈ ವರ್ಷದ ಮೊದಲ ಚಂದ್ರಗ್ರಹಣವು ಸಂಭವಿಸಲಿದೆ. ಯಾವ ರಾಶಿಚಕ್ರದ ಚಿಹ್ನೆಗಳ ಮೇಲೆ ಚಂದ್ರಗ್ರಹಣದ ಅಶುಭ ಪರಿಣಾಮವನ್ನು ಬೀರಬಹುದು?

Chandra Grahan 2023 will bring bad luck to these zodiac signs skr
Author
First Published Apr 25, 2023, 4:40 PM IST

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈಗಾಗಲೇ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದೆ. ಇದೀಗ ಈ ವರ್ಷದ ಚಂದ್ರಗ್ರಹಣ ಹತ್ತಿರದಲ್ಲಿದೆ. ಹಿಂದೂ ಧರ್ಮದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಮೇ 5, 2023 ರಂದು, ಈ ವರ್ಷದ ಮೊದಲ ಚಂದ್ರಗ್ರಹಣವಾಗಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ . ಈ ಕಾರಣದಿಂದಾಗಿ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಆದರೆ ಚಂದ್ರಗ್ರಹಣದ ಪರಿಣಾಮವು ಎಲ್ಲ ರಾಶಿಗಳ ಮೇಲೆ ಬೀರುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಯಾವ ರಾಶಿಯವರು ಎಚ್ಚರದಿಂದ ಇರಬೇಕು ಎಂಬುದನ್ನು ಇಲ್ಲಿ ಕೊಡಲಾಗಿದೆ. 

ಮೇಷ ರಾಶಿ(Aries)
ಚಂದ್ರಗ್ರಹಣದ ಸಮಯದಲ್ಲಿ ಮೇಷ ರಾಶಿಯ ಜನರು ಹೆಚ್ಚು ಜಾಗೃತರಾಗಿರಬೇಕು. ಈ ಅವಧಿಯಲ್ಲಿ, ಅವರು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಅದು ಅವರ ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರಬಹುದು. ಮನಸ್ಸು ಚಂಚಲವಾಗಿರುತ್ತದೆ ಮತ್ತು ಕಾನೂನು ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ವೃಷಭ ರಾಶಿ(Taurus)
ವೃಷಭ ರಾಶಿಯವರು ಕೂಡ ಚಂದ್ರಗ್ರಹಣದ ಸಮಯದಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ಜನರೊಂದಿಗೆ ವಾಗ್ವಾದಗಳು ಉಂಟಾಗಬಹುದು, ಜೊತೆಗೆ ಕುಟುಂಬದಲ್ಲಿ ದೂರವಾಗುವ ಪರಿಸ್ಥಿತಿ ಉದ್ಭವಿಸಬಹುದು. ಇತರ ಕಳವಳಗಳಿಂದ ಮನಸ್ಸು ವಿಚಲಿತವಾಗಬಹುದು.

ಸೂರ್ಯ ಗ್ರಹಣ ಮುಗಿದ 15 ದಿನದೊಳಗೆ ಬರುತ್ತಿದೆ Chandra Grahan

ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರ ಮೇಲೂ ಚಂದ್ರಗ್ರಹಣವು ಅಶುಭ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ ಉದ್ಯೋಗ ಕ್ಷೇತ್ರದಲ್ಲಿಯೂ ಅಡೆತಡೆಗಳು ಎದುರಾಗಬಹುದು. ಗ್ರಹಣ ಕಾಲದಲ್ಲಿ ಶಿವನ ಆರಾಧನೆ ಮಾಡಬೇಕು.

Love Astrology: ಈ ರಾಶಿಗಳ ಪ್ರೀತಿ ಹೆಚ್ಚು ಕಾಲ ಬಾಳೋದಿಲ್ಲ, ಬೇಗ ಬ್ರೇಕಪ್ ಅನುಭವಿಸುವ ರಾಶಿಗಳಿವು..

ಸಿಂಹ ರಾಶಿ(Leo)
ಸಿಂಹ ರಾಶಿಯವರಿಗೆ ಚಂದ್ರಗ್ರಹಣವು ಅಶುಭವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ, ಸ್ಥಳೀಯರು ಕೆಲವು ಕೆಟ್ಟ ಮಾಹಿತಿಯನ್ನು ಪಡೆಯಬಹುದು. ಇದರೊಂದಿಗೆ ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹಲವಾರು ಬಾರಿ ಯೋಚಿಸಲು ಮರೆಯದಿರಿ, ಇಲ್ಲದಿದ್ದರೆ ನಷ್ಟವನ್ನು ಎದುರಿಸಬೇಕಾಗಬಹುದು.

Follow Us:
Download App:
  • android
  • ios