Surya Grahan 2022: ಅನೇಕ ವಿಕೋಪಗಳನ್ನು ಸೃಷ್ಟಿ ಮಾಡುತ್ತೆ: ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀ ಭವಿಷ್ಯ

ಕೇತು ಗ್ರಸ್ಥ ಸೂರ್ಯಗ್ರಹಣ ಅತ್ಯಂತ ವಿಕೋಪಗಳನ್ನು ಉಂಟು ಮಾಡಲಿದ್ದು, ಜಾಗತಿಕ ಉನ್ನತ ನಾಯಕರು ಕಣ್ಮರೆಯಾಗುತ್ತಾರೆ. ಅಲ್ಲದೆ, ನಾಡಿನಲ್ಲಿ ಅತ್ಯಂತ ಗಣ್ಯಮಾನ್ಯರು ಕಣ್ಮರೆಯಾಗುವ ಸಂಭವ ಇದೆ ಎಂದು ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

october 2022 suryagrahan prediction shivalinga shivacharya shree prediction ash

ದಾವಣಗೆರೆ (ಅಕ್ಟೋಬರ್ 24, 2022): ನಾಳೆ ಅಂದರೆ ಮಂಗಳವಾರ, ಅಕ್ಟೋಬರ್ 24, 2022 ರಂದು ದೀಪಾವಳಿ ಅಮಾವಾಸ್ಯೆ. ಜತೆಗೆ, ಸೂರ್ಯಗ್ರಹಣವೂ ಇದೆ. ಇನ್ನು, ಈ ಸೂರ್ಯಗ್ರಹಣದ ಬಗ್ಗೆ ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಸೂರ್ಯಗ್ರಹಣ ಈ ಬಾರಿ ಅನೇಕ ವಿಕೋಪಗಳನ್ನು ಸೃಷ್ಟಿ ಮಾಡುತ್ತೆ ಎಂದು ಕಾಲಜ್ಞಾನಿಗಳು ಹೇಳಿದ್ದಾರೆ. 

ಕೇತು ಗ್ರಸ್ಥ ಸೂರ್ಯಗ್ರಹಣ ಅತ್ಯಂತ ವಿಕೋಪಗಳನ್ನು ಉಂಟು ಮಾಡಲಿದ್ದು, ಜಾಗತಿಕ ಉನ್ನತ ನಾಯಕರು ಕಣ್ಮರೆಯಾಗುತ್ತಾರೆ. ಅಲ್ಲದೆ, ನಾಡಿನಲ್ಲಿ ಅತ್ಯಂತ ಗಣ್ಯಮಾನ್ಯರು ಕಣ್ಮರೆಯಾಗುವ ಸಂಭವ ಇದೆ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ. 

ಇದನ್ನು ಓದಿ: ಹಬ್ಬದ ದಿನವೇ ಖಂಡಗ್ರಾಸ ಸೂರ್ಯಗ್ರಹಣ: 27 ವರ್ಷಗಳ ಬಳಿಕ ಇದೆಂಥಾ ವಿಚಿತ್ರ?!

ಇಡೀ ಜಗತ್ತನ್ನು ತಮ್ಮತ್ತ ಸೆಳೆದವರು ಕಣ್ಮರೆಯಾಗುತ್ತಾರೆ, ಕರ್ನಾಟಕದಲ್ಲಿ ರಾಜಕೀಯ ನಾಟಕಗಳು ಪ್ರಾರಂಭವಾಗುತ್ತವೆ ಎಂದೂ ಶಿವಲಿಂಗ ಶಿವಾಚಾರ್ಯ ಶ್ರೀಗಳು ನುಡಿದಿದ್ದಾರೆ. 

ಇನ್ನೊಂದೆಡೆ, ಉತ್ತರ ಪ್ರದೇಶದಲ್ಲಿ ಈ ಗ್ರಹಣದಿಂದ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರಿಗೆ ಲಾಭ ಉಂಟಾಗುತ್ತೆ. ಉತ್ತರ ಭಾರತದಲ್ಲಿ ಅನೇಕ ಹಿಂಸಾಚಾರಗಳು ನಡೆಯುತ್ತವೆ. ಈ ಹಿನ್ನೆಲೆ ಆದಷ್ಟು ಎಚ್ಚರಿಕೆ‌ ವಹಿಸುವ ಅವಶ್ಯಕತೆ ಇದೆ ಎಂದೂ ಅವರು ಭವಿಷ್ಯ ಹೇಳಿದ್ದಾರೆ.

ಇದನ್ನೂ ಓದಿ: ಖಂಡಗ್ರಾಸ ಸೂರ್ಯಗ್ರಹಣ; ನಿಮ್ಮ ರಾಶಿಗೆ ಏನು ಫಲ?

ಅಲ್ಲದೆ, ತ್ರಿಪುರಾ, ಅಸ್ಸಾಂ, ಮೇಘಾಲಯದಲ್ಲಿ ಕಮಲಕ್ಕೆ ಹಿನ್ನೆಡೆಯಾಗುವ ಸಂಭವ ಇದೆ. ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್  ಅವರು ಗ್ರಹಣದಿಂದ ಅನೇಕ ಏರುಪೇರುಗಳನ್ನು ಕಾಣುತ್ತಾರೆ. ರಾಜಸ್ಥಾನ, ಮಹಾರಾಷ್ಟ್ರದಲ್ಲಿ ರಾಜಕೀಯ ಏಳುಬೀಳುಗಳು ಆಗಲಿವೆ ಹಾಗೂ, ಆಂಧ್ರ ಪ್ರದೇಶದಲ್ಲಿ ರಾಜಕೀಯ ಪರಿಸ್ಥಿತಿ ಉದ್ವಿಗ್ನವಾಗುತ್ತೆ ಎಂದೂ ಕಾಲಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. 

ಜನಪ್ರತಿನಿಧಿಗಳು ಜನರ ಸೇವೆ ಮಾಡುವಂತೆಯೂ ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಯಾವ ರಾಶಿಗೆಲ್ಲ ಗ್ರಹಣದ ಬಾಧೆ ಹೆಚ್ಚು?

Latest Videos
Follow Us:
Download App:
  • android
  • ios