Asianet Suvarna News Asianet Suvarna News

Navratri 2022 Day 7: ಹೊರನಾಡಿನ ಅನ್ನಪೂರ್ಣೇಶ್ವರಿಗೆ ಅಶ್ವರೂಢಾ ಗೌರೀ ಅಲಂಕಾರ

ನವರಾತ್ರಿಯ ಏಳನೇ ದಿನವಾದ ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀಮಠದಲ್ಲಿ ಸರಸ್ವತ್ಯಾವಾಹನೆ ನಡೆಯಿತು. ಜಗನ್ಮಾತೆ ವೀಣಾಶಾರದಾ ಅಲಂಕಾರದಲ್ಲಿ ಕಂಗೊಳಿಸಿದಳು.

Navratri 2022 Day 7 Ashwarudha Gauri decoration for horanadu Annapoorneshwari gow
Author
First Published Oct 2, 2022, 8:52 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಅ.2): ನವರಾತ್ರಿಯ ಏಳನೇ ದಿನವಾದ ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀಮಠದಲ್ಲಿ ಸರಸ್ವತ್ಯಾವಾಹನೆ ನಡೆಯಿತು. ಜಗನ್ಮಾತೆ ವೀಣಾಶಾರದಾ ಅಲಂಕಾರದಲ್ಲಿ ಕಂಗೊಳಿಸಿದಳು. ಶ್ರೀ ಶಾರದೆ ಕರದಲ್ಲಿ ಪುಸ್ತಕ,ಜ್ಞಾನಮುದ್ರೆ, ಅಮೃತಕಲಶ, ಕೈಯಲ್ಲಿ ವೀಣೆಯನ್ನು ಹಿಡಿದು, ಶುಭ್ರಶ್ವೇತವಸ್ತ್ರ ಧಾರಿಣಿಯಾಗಿ ಶ್ರೀಪೀಠದಲ್ಲಿ ವಿರಾಜಮಾನಳಾದಳು. ಯತಿವರ್ಯರಿಂದ ಜಗನ್ನಾತೆಗೆ ವಿಶೇಷಪೂಜೆ, ಸಂಜೆ ಶಾರದಾಂಬಾ ಮಹಾದೀಪೋತ್ಸವ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ವಿದುಷಿ ರೇಖಾ ಸುಬ್ರಮಣ್ಯ ಮತ್ತು ವೃಂದದವರಿಂದ ವೀಣಾವಾದನ ನೆರವೇರಿತು. ಬೀದಿ ಉತ್ಸವದಲ್ಲಿ ಬೇಗಾರು ಗ್ರಾ.ಪಂನ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ಶ್ರೀರಾಮ ದೇವಾಲಯ, ಕುಪ್ಪನಮಕ್ಕಿ ಶ್ರೀ ಗಣಪತಿ ದೇವಾಲಯ ಸಮಿತಿಯ ಪದಾಧಿಕಾರಿಗಳು, ರಾಜ್ಯಸರಕಾರ ನೌಕರ ಸಂಘ,ನಿವೃತ್ತ ನೌಕರ ಸಂಘ. ವಿವಿಧ ಸಂಘ-ಸಂಸ್ಥೆಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಳೆ ರಾಜರಾಜೇಶ್ವರೀ ಅಲಂಕಾರದಲ್ಲಿ ಶ್ರೀ ಶಾರದೆ ಭಕ್ತಸಮೂಹವನ್ನು ಅನುಗ್ರಹಿಸುತ್ತಾಳೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ವೃಂದಾ ಆಚಾರ್ಯ ಮತ್ತು ಬಳಗದವರಿಂದ ಹಾಡುಗಾರಿಕೆ ನೆರವೇರಲಿದೆ. ಬೀದಿ ಉತ್ಸವದಲ್ಲಿ ನೆಮ್ಮಾರ್ ಗ್ರಾ.ಪಂನ ಹರೂರು ಮತ್ತು ಬುಕಡಿಬೈಲು ಗ್ರಾಮದ ದೇವಸ್ಥಾನದ ಸಮಿತಿ, ಶ್ರೀವಿದ್ಯಾವಿನಾಯಕ ಗೆಳೆಯರ ಬಳಗ, ಶ್ರೀ ರಾಮಸೇವಾಸಮಿತಿ ,ಶ್ರೀಪ್ರಬೋಧಿನಿ ಭಜನಮಂಡಳಿ, ಶೃಂಗೇರಿ ಪತಂಜಲಿ ಯೋಗಶಿಕ್ಷಣ ಸಂಸ್ಥೆ, ಬಜರಂಗದಳ, ವಿಶ್ವಹಿಂದೂ ಪರಿಷತ್ತು ಇತ್ಯಾದಿ ಸಂಸ್ಥೆಗಳು ಭಾಗವಹಿಸಲಿದ್ದಾರೆ.

ಆರೋಗ್ಯಕರ ಜೀವನಶೈಲಿ ಫಾಲೋ ಮಾಡೋ ನಾಲ್ಕು ರಾಶಿಗಳಿವು.. ನೋಡಿ ಅನುಸರಿಸಿ

ಅನ್ನಪೂರ್ಣೇಶ್ವರಿಗೆ ಅಶ್ವರೂಢಾ ಗೌರೀ ಅಲಂಕಾರ: ಶರನ್ನವರಾತ್ರಿ  ಮಹೋತ್ಸವದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ  ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಇಂದು ಅಶ್ವರೂಢಾ ಗೌರೀಯಾಗಿ ಕಂಗೊಳಿಸಿದಳು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ  ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು  ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶ್ರೀ ಶಾರದಾ ಪೂಜೆ  ನೆರವೇರಿತು. ಬೆಳಿಗ್ಗೆ 8.30ಗೆ ನಡೆದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು.

VAASTU TIPS: ನವರಾತ್ರಿಗೆ ವಾಸ್ತು ಟಿಪ್ಸ್‌, ಶಾಂತಿ, ಸಮೃದ್ಧಿ ನೆಲೆಸೋದು ಗ್ಯಾರಂಟಿ ನೋಡಿ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಂ. ನಿಶಾಂತ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ಶ್ರೀ ಮಹಾಗಣಪತಿ ಆರ್ಟ್ ಮತ್ತು ಕಲ್ಚರಲ್ ಪೌಂಡೇಷನ್ ಶ್ರೀ ಕ್ಷೇತ್ರ ಬೆಳಗುಂಡಿ ಮಠ ಉಡುಪಿ ಇವರಿಂದ ಯಕ್ಷಗಾನ ನಡೆಯಿತು.ನಾಳೆ ಅನ್ನಪೂರ್ಣೇಶ್ವರಿಗೆ ವೃಷಭಾರೂಢಾ ತ್ರಿಮೂರ್ತಿ ಅಲಂಕಾರ ಪೂಜೆ  ಮತ್ತು ಶ್ರೀ ದುರ್ಗಾ ಮೂಲಮಂತ್ರ ಹೋಮ ನಡೆಯಲಿದೆ.

Follow Us:
Download App:
  • android
  • ios