Asianet Suvarna News Asianet Suvarna News

Vaastu Tips: ನವರಾತ್ರಿಗೆ ವಾಸ್ತು ಟಿಪ್ಸ್‌, ಶಾಂತಿ, ಸಮೃದ್ಧಿ ನೆಲೆಸೋದು ಗ್ಯಾರಂಟಿ ನೋಡಿ

ಜೀವನದಲ್ಲಿ ಯಶಸ್ಸು ಗಳಿಸಬೇಕು, ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ನವರಾತ್ರಿಯ ಈ ಸುಸಮಯದಲ್ಲಿ ವಾಸ್ತು ಶಾಸ್ತ್ರದ ಸಲಹೆ ಮೂಲಕ ಇದಕ್ಕೆ ಶ್ರೀಕಾರ ಹಾಕಿ. ನವರಾತ್ರಿ ಹಾಗೂ ಮನೆಯಲ್ಲಿ ಎಂದಿಗೂ ಸಿರಿ, ಸಂಪತ್ತು, ಶಾಂತಿ-ನೆಮ್ಮದಿ ನೆಲೆಸಲು ಈ ಟಿಪ್ಸ್‌ ಅನುಸರಿಸಿ.
 

Follow these vaastu tips in Navaratri to gain peace and prosperity
Author
First Published Oct 2, 2022, 5:10 PM IST

ಜೀವನದಲ್ಲಿ ನೆಮ್ಮದಿ ಕಳಕೊಳ್ಳದೆಯೇ ಯಶಸ್ಸು ಸಾಧಿಸಬೇಕು, ಅದೃಷ್ಟವೇ ಒಲಿದು ಮನೆ ಬಾಗಿಲಿಗೆ ಬರಬೇಕು, ಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆ ನಿಲ್ಲುವಂತಾಗಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಬಯಕೆ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತೇವೆ. ಅದೃಷ್ಟದ ಸಿರಿಲಕ್ಷ್ಮೀಯನ್ನು ಒಲಿಸಿಕೊಳ್ಳುವುದಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ. ಕೆಲವೊಮ್ಮೆ ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಧನಲಕ್ಷ್ಮೀ ಒಲಿಯದೆ ಸತಾಯಿಸುತ್ತಾಳೆ. ಅಂತಹ ಸಮಯದಲ್ಲಿ “ಅದೃಷ್ಟವಿಲ್ಲʼ ಎಂದು ಬೇಸರಿಸಿಕೊಳ್ಳುತ್ತೇವೆ. ಕೆಲವು ಮಾರ್ಗಗಳನ್ನು ಅನುಸರಿಸುವುದರಿಂದ ಮನೆಗೆ ಹಾಗೂ ಬದುಕಿಗೆ ಅದೃಷ್ಟ ಒಲಿದುಬರುತ್ತದೆ. ಇದಂತೂ ನವರಾತ್ರಿ. ಮಾತೆ ದುರ್ಗಾದೇವಿಯ ಒಂಭತ್ತು ಅವತಾರಗಳನ್ನು ಆರಾಧಿಸುವ ವಿಶಿಷ್ಟ ಸಮಯ. ಮನೆಯಲ್ಲಿ ಶಾಂತಿ ಮತ್ತು ಪ್ರಗತಿ ನೆಲೆಸಲು ಮಾಡುವ ಪ್ರಯತ್ನಕ್ಕೆ ಫಲವಿದ್ದೇ ಇದೆ. ಕೆಲವು ವಾಸ್ತು ದೋಷದಿಂದ ಮನೆಯಲ್ಲಿ ಪ್ರಗತಿ ಮತ್ತು ಶಾಂತಿ ದೂರವಾಗಿರುತ್ತದೆ. ಅಂತಹ ದೋಷಗಳನ್ನು ನವರಾತ್ರಿಯ ಈ ಸಮಯದಲ್ಲಿ ನಿವಾರಿಸಿಕೊಳ್ಳಲು ಈ ಕೆಲವು ಮಾರ್ಗಗಳನ್ನು ಅನುಸರಿಸಬಹುದು. ನವರಾತ್ರಿಯ ಆಚರಣೆಗೆ ವಾಸ್ತು ಸಲಹೆಗಳನ್ನೂ ಪಾಲಿಸುವ ಮೂಲಕ ದುರ್ಗಾ ಮಾತೆಯ ಆಶೀರ್ವಾದಕ್ಕೆ ಪಾತ್ರರಾಗುವ ಜತೆಗೆ ಲಕ್ಷ್ಮೀದೇವಿಯ ಕೃಪೆಯೂ ಲಭಿಸುತ್ತದೆ. ಜೀವನದಲ್ಲಿ ಹಂತಹಂತವಾಗಿ ಪ್ರಗತಿಯಾಗುತ್ತದೆ. 

•    ಮನೆಯಲ್ಲಿ ಯಾವತ್ತೂ ನೀರಿನ (Water) ಕೊಡ (Pot) ಅಥವಾ ಪಾತ್ರೆಯನ್ನು ಇರಿಸಿ.
ಹಿಂದೆಲ್ಲ ಮನೆಗಳಲ್ಲಿ ನೀರಿನ ಒಂದು ದೊಡ್ಡ ಪಾತ್ರೆ (Vessel) ಅಥವಾ ಕೊಡ ಇರುತ್ತಿತ್ತು. ಅದನ್ನು ಕುಡಿಯಲು ಉಪಯೋಗಿಸುತ್ತಿರಲಿಲ್ಲ. ಅದು ಯಾವತ್ತೂ ತುಂಬಿಕೊಂಡೇ ಇರಬೇಕು ಎನ್ನುವ ಪದ್ಧತಿಯನ್ನು ತಪ್ಪದೆ ಪಾಲಿಸಲಾಗುತ್ತಿತ್ತು. ಅದನ್ನು ನೀವೂ ಅನುಸರಿಸಿ ನೋಡಿ. ವಾಸ್ತುಶಾಸ್ತ್ರದ (Vaastu Shastra) ಪ್ರಕಾರ, ಮನೆಯಲ್ಲಿ ನೀರು ತುಂಬಿದ ಕೊಡವನ್ನು ಇರಿಸಿಕೊಳ್ಳುವುದರಿಂದ ಸಂಪತ್ತಿನ (Wealth) ಕೊರತೆ ಉಂಟಾಗುವುದಿಲ್ಲ. ಎಲ್ಲ ರೀತಿಯ ಹಣಕಾಸು (Financial) ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಶುದ್ಧ ಜಲವು ಸಾತ್ವಿಕತೆ ಪ್ರಶಾಂತತೆ (Serenity) ಹಾಗೂ ಶಾಂತಿಯ ತತ್ತ್ವವನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ನೀರು ಮನೆಯಲ್ಲಿರುವ ಅಶಾಂತಿಯನ್ನು ದೂರ ಮಾಡುತ್ತದೆ. ಮನೆಯಲ್ಲಿ ಸಾಮರಸ್ಯ (Harmony) ಹೆಚ್ಚಿಸಿ, ಸಮೃದ್ಧಿ ಉಂಟುಮಾಡುತ್ತದೆ. ತನ್ಮೂಲಕ ಸಂತಸವನ್ನು ಹೆಚ್ಚಿಸುತ್ತದೆ.

ಕೊಟ್ಟ ಸಾಲ ಮರಳಲು, ಸಾಲ ತೀರಿಸಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

•    ಮನೆಗೆ ತುಳಸಿ ಗಿಡ (Tulsi Plant) ತಂದಿರಿಸಿ
ಮನೆಯಲ್ಲಿ ಅಥವಾ ಮನೆಯ ಎದುರು ಸಾಮಾನ್ಯವಾಗಿ ತುಳಸಿ ಗಿಡವನ್ನು ಇರಿಸಿಕೊಳ್ಳುವುದು ಎಲ್ಲೆಡೆ ಕಂಡುಬರುತ್ತದೆ. ಆದರೆ, ಅನೇಕರು ಅದನ್ನು ಹಳೆಯ ಪರಂಪರೆಯೆಂದು ಬಿಟ್ಟುಬಿಟ್ಟಿದ್ದಾರೆ. ತುಳಸಿ ಅತ್ಯುತ್ತಮ ಔಷಧೀಯ (Medicinal) ಗಿಡವಷ್ಟೇ ಅಲ್ಲ, ಅದು ಅತಿ ಪವಿತ್ರ ಸಸ್ಯವೂ ಹೌದು. ತುಳಸಿ ಸಸ್ಯ ವಿಷ್ಣು ದೇವರ ಅತ್ಯಂತ ಪ್ರೀತಿಪಾತ್ರ ಸಸ್ಯ. ನವರಾತ್ರಿ ಸಮಯದಲ್ಲಿ ತುಳಸಿ ಗಿಡವನ್ನು ಮನೆಗೆ ತರುವುದು ಸಹ ಅತ್ಯಂತ ಪವಿತ್ರವಾದದ್ದು. ಇದು ಅದೃಷ್ಟವನ್ನು ಖಂಡಿತವಾಗಿ ತರುತ್ತದೆ. ತುಳಸಿ ಗಿಡದ ಆರಾಧನೆಯಿಂದ ಲಕ್ಷ್ಮೀ (Lakshmi) ಪ್ರಸನ್ನಳಾಗುತ್ತಾಳೆ. ಮನೆಗೂ ಪಾವಿತ್ರ್ಯದ ನೋಟ ಸಿಗುತ್ತದೆ.

•    ನಿರಂತರವಾಗಿ ಜ್ಯೋತಿ (Lit Continuously) ಉರಿಯಲಿ
ಬೆಳಗ್ಗೆ, ಸಂಜೆ ದೇವರಿಗೆ ದೀಪ ಹಚ್ಚುವ ಪದ್ಧತಿ ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಇದೆ. ಬೆಳಗ್ಗಿನ (Morning) ಸಮಯ ಮತ್ತು ಸಂಜೆಯ (Evening) ಹೊತ್ತಿನಲ್ಲಿ ಮಾತ್ರವಲ್ಲ, ದಿನವಿಡೀ ದೇವರೆದುರು ಅಖಂಡವಾಗಿ ಜ್ಯೋತಿ ಬೆಳಗಿಸಿ. ಶರನ್ನವರಾತ್ರಿಯ ಈ ಸಮಯದಲ್ಲಿ ದೇವರ ಮುಂದಿನ ದೀಪ ಆರಬಾರದು. ಇದರಿಂದಾಗಿ ದುರ್ಗಾ ಮಾತೆ (Durga Ma) ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ. ಮನೆಯಲ್ಲಿನ ಋಣಾತ್ಮಕ (Negative) ಪ್ರಭಾವಗಳನ್ನು ಈ ಜ್ಯೋತಿ ದೂರವಿರುತ್ತದೆ. 

Navratri: ನವರಾತ್ರಿ ಸಂದರ್ಭದಲ್ಲಿ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

•    ಮನೆಯ ದ್ವಾರಕ್ಕೆ ಮಾವಿನ ಎಲೆಗಳ (Mango Leaves) ತೋರಣ
ಮನೆಯ ಮುಖ್ಯದ್ವಾರಕ್ಕೆ (Main Door) ಮಾವಿನ ಎಲೆಗಳ ತೋರಣ ಕಟ್ಟಿದರೆ ಋಣಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ನವರಾತ್ರಿಯಲ್ಲೂ (Navaratri) ಇದನ್ನು ಅನುಸರಿಸಬೇಕು. ಮಾವಿನ ಎಲೆಗಳನ್ನು ಕೆಂಪು ದಾರದಿಂದ ಕಟ್ಟಿ ತೋರಣ ಮಾಡಬೇಕು. 
 

Follow Us:
Download App:
  • android
  • ios