ಹಿಂದೂಗಳು ಅತ್ಯಂತ ಭಯ, ಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡ ಒಂದು. ಭಾರತದ ಬೇರೆ ಬೇರೆ ಭಾಗಗಳಲ್ಲಿ ಹಬ್ಬವನ್ನು ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ನಾಗ ದೇವರಿಗೆ ಹಾಲೆರೆಯುವುದು ಹಬ್ಬದ ವಿಶೇಷ.  

2022ನಾಗರ ಪಂಚಮಿ (Nagar Panchami) ನಾಡಿಗೆ ದೊಡ್ಡದು ಎನ್ನುವ ಮಾತಿದೆ. ಶ್ರಾವಣ (Sawan) ಮಾಸದಲ್ಲಿ ಈ ಹಬ್ಬ ಬರುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಮತ್ತು ಶಿವ (Shiva) ಆರಾಧನೆಗೆ ವಿಶೇಷ ಮಹತ್ವವಿದೆ. ಶಿವನ ಆರಾಧನೆಗೆ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ದಿನದಂದು ನಾಗದೇವತೆಯನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬ (Festival) ವು ಶಿವನಿಗೆ ಸಮರ್ಪಿತವಾಗಿದೆ. ಈ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಆಧ್ಯಾತ್ಮಿಕ ಶಕ್ತಿ (Spiritual power), ಅಪಾರ ಸಂಪತ್ತು (Wealth) ದೊರೆಯುತ್ತದೆ ಎಂದು ನಂಬಲಾಗಿದೆ. 
ನಾಗರ ಪಂಚಮಿ ದಿನಾಂಕ ಮತ್ತು ಶುಭ ಸಮಯ : ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವನ್ನು ಶುಕ್ಲ ಪಕ್ಷದ ಪಂಚಮಿ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 2 ರಂದು ಆಚರಿಸಲಾಗುತ್ತದೆ. ಆಗಸ್ಟ್ 2 ರಂದು ಬೆಳಿಗ್ಗೆ 5 ಗಂಟೆ 14 ನಿಮಿಷದಿಂದ ಪಂಚಮಿ ತಿಥಿ ಪ್ರಾರಂಭವಾಗುತ್ತಿದೆ. ಆಗಸ್ಟ್ 3 ರಂದು ಬೆಳಿಗ್ಗೆ 5 ಗಂಟೆ 42 ಕ್ಕೆ ಪಂಚಮಿ ತಿಥಿ ಮುಕ್ತಾಯವಾಗುತ್ತದೆ. ನಾಗರ ಪಂಚಮಿ ಮುಹೂರ್ತದ ಅವಧಿ 2 ಗಂಟೆ 41 ನಿಮಿಷವಿರುತ್ತದೆ. ಬೆಳಿಗ್ಗೆ 5 ಗಂಟೆ 42 ನಿಮಿಷದಿಂದ 8 ಗಂಟೆ 24 ನಿಮಿಷದವರೆಗೆ ಪೂಜೆ ಮಾಡಲು ಒಳ್ಳೆ ಮುಹೂರ್ತವಿದೆ.

ನಾಗರ ಪಂಚಮಿ ಪೂಜೆಯಿಂದಾಗುವ ಲಾಭ : 
ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಕಾಲ ಸರ್ಪ ದೋಷ (Kala Sarpa Dosha) ದಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಲ್ಲದೆ ನಾಗದೇವತೆಯ ಆರಾಧನೆಯು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ದಿನ ಭಕ್ತಿಯಿಂದ ಹಾವಿಗೆ ಹಾಲನ್ನು ಎರೆದ್ರೆ ಭಕ್ತರು ಬಯಸಿದ ಫಲಿತಾಂಶ ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಈ ದಿನದಂದು ನಿಜವಾದ ಹಾವು ಕಂಡರೆ ಅದು ಅತ್ಯಂತ ಮಂಗಳಕರವೆಂದು ನಂಬಲಾಗಿದೆ ಮತ್ತು ಹಾವು ಕಡಿತದ ಭಯವೂ ದೂರವಾಗುತ್ತದೆ. 

ಬೆಂಗಳೂರಿನ ಮುಕ್ತಿ ನಾಗನ ಮಹಿಳೆ ಕೇಳಿದ್ದೀರಾ?

ನಾಗರಪಂಚಮಿಯಂದು ಅಗತ್ಯವಾಗಿ ಮಾಡಿ ಈ ಕೆಲಸ : 
ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗರ ಪಂಚಮಿಯ ದಿನದಂದು ಬೆಳ್ಳಿಯಿಂದ ಮಾಡಿದ ನಾಗ-ನಾಗಿಣಿ ಜೋಡಿಗೆ ಪೂಜೆಯನ್ನು ಮಾಡಿ ನಂತ್ರ ಅದನ್ನು ಹರಿಯುವ ಶುದ್ಧ ನೀರಿನಲ್ಲಿ ತೇಲಿ ಬಿಡಬೇಕು. ಸಾಧ್ಯವಾದ್ರೆ ಶಿವನ ವಿಗ್ರಹದ ಮೇಲೆ ನಾಗನಿಲ್ಲದ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಾಗರ ಸ್ಥಾಪನೆ ಮಾಡಿ. ಇದ್ರಿಂದ ನಾಗ ದೇವರ ಆಶೀರ್ವಾದ ನಿಮಗೆ ಲಭಿಸುತ್ತದೆ. ನಾಗದೇವತೆಯೊಂದಿಗೆ ಶಿವನ ಆಶೀರ್ವಾದವನ್ನು ಪಡೆಯಲು ನಾಗರ ಪಂಚಮಿಯ ದಿನದಂದು ಶಿವನ ದೇವಾಲಯಕ್ಕೆ ಶ್ರೀಗಂಧದಿಂದ ಮಾಡಿದ 7 ಮೌಳಿಗಳನ್ನು ಅರ್ಪಿಸಿ. ಅಲ್ಲದೆ, ಈ ದಿನ ಶಿವನಿಗೆ ಶ್ರೀಗಂಧ ಅಥವಾ ಸುಗಂಧವನ್ನು ಅರ್ಪಿಸಿ. 

ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ನಾಗರ ಪಂಚಮಿಯಂದು ಶಿವನ ದೇವಸ್ಥಾನದಲ್ಲಿ ಅರ್ಚನೆಯನ್ನು ಮಾಡಿ. ಶಿವನಿಗೆ ಇಷ್ಟವಾದ ಹೂಗಳನ್ನು ಅರ್ಪಿಸಿ, ಹಾಲಿನ ರುದ್ರಾಭಿಷೇಕವನ್ನು ಮಾಡಿ. ನಂತ್ರ ಶಿವನ ಆಶೀರ್ವಾದವನ್ನು ಪಡೆಯಿರಿ. ನಾಗಪಂಚಮಿಯ ದಿನದಂದು ಯಾವುದೇ ಶಿವನ ದೇವಸ್ಥಾನಕ್ಕೆ ಹೋಗಿ ಸ್ವಚ್ಛತೆ ಕೆಲಸ ಮಾಡಿ. ಸಾಧ್ಯವಾದರೆ ಶಿವ ದೇವಾಲಯದಲ್ಲಿ ಕೆಲವು ರೀತಿಯ ಜೀರ್ಣೋದ್ಧಾರ ಕೆಲಸವನ್ನು ಮಾಡಬಹುದು ಅಥವಾ ದೇವಾಲಯದ ದುರಸ್ತಿ ಅಥವಾ ಬಣ್ಣ ಬಳಿಯುವ ಕೆಲಸವನ್ನು ಸಹ ನೀವು ಮಾಡಬಹುದು.

ನಾಗರ ಪಂಚಮಿಯಂದು ದಾನಕ್ಕೆ ಮಹತ್ವದ ಸ್ಥಾನವಿದೆ. ಬಡವರು, ನಿರ್ಗತಿಕರಿಗೆ ಈ ದಿನ ದಾನ ಮಾಡ್ಬೇಕು.